ಗ್ಲಾಮರ್ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ, ಮದುವೆ ಕೂಡ. ಚಿತ್ರರಂಗದಲ್ಲಿ ಮದುವೆ ಮತ್ತು ವಿಚ್ಛೇದನದ ಕಥೆಗಳು ಸಾಮಾನ್ಯ. ಜನರು ಮೇಡ್ ಫಾರ್ ಈಚ್ ಅದರ್ ಎಂದು ಬಣ್ಣಿಸುವ ದಂಪತಿಗಳೇ ಕೆಲವು ದಿನಗಳ ನಂತರ ವಿಚ್ಛೇದನ ಪಡೆದು ಬೇರೆಯಾಗುತ್ತಾರೆ. ಧನಶ್ರೀ ಮತ್ತು ಯುಜ್ವೇಂದ್ರ ಚಹಾಲ್ ಅವರ ಪ್ರೇಮಕಥೆಯಲ್ಲೂ ಇದೇ ರೀತಿಯದ್ದು ಕಂಡುಬಂದಿದೆ.
ಇತ್ತೀಚಿನ ದಿನಗಳಲ್ಲಂತೂ ಪ್ರೀತಿಯಲ್ಲಿ ಬೀಳುವುದು, ಮದುವೆಯಾಗುವುದು ಮತ್ತು ಕೆಲವು ವರ್ಷಗಳ ನಂತರ ಬೇರೆಯಾಗುವುದು ಗೊಂಬೆಗಳ ಆಟದಂತೆ ಆಗಿಹೋಗಿದೆ. ಸಂಬಂಧಗಳು ಮುರಿದು ಬೀಳುವುದು ಮತ್ತು ಪ್ಯಾಚ್-ಅಪ್ಗಳ ಈ ಯುಗದ ಮಧ್ಯೆ, ಮದುವೆ ಮತ್ತು ವಿಚ್ಛೇದನದ ಆಟವೂ ಪ್ರಾರಂಭವಾಗಿದೆ. ಇದೀಗ ಧನಶ್ರೀ ವರ್ಮಾ ಮತ್ತು ಯುಜ್ವೇಂದ್ರ ಚಾಹಲ್ ಅವರ ವಿಚ್ಛೇದನ ಪ್ರಕರಣದ ತೀರ್ಪು ಬಂದಿದೆ. ಅಧಿಕೃತವಾಗಿ ಈಗ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಗಂಡ ಹೆಂಡತಿಯಲ್ಲ. ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗಲು ನಿರ್ಧರಿಸಿದರು. ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಧನಶ್ರೀ ವರ್ಮಾ ಅವರಿಗೆ 4.75 ಕೋಟಿ ರೂ.ಗಳ ಶಾಶ್ವತ ಜೀವನಾಂಶವನ್ನು ನೀಡಲು ಯುಜ್ವೇಂದ್ರ ಚಾಹಲ್ ಒಪ್ಪಿಕೊಂಡಿದ್ದಾರೆ ಮತ್ತು ಅವರು ಈಗಾಗಲೇ ಅದರಲ್ಲಿ 2.37 ಕೋಟಿ ರೂ.ಗಳನ್ನು ಪಾವತಿಸಿದ್ದಾರೆ.

ಮದುವೆಯಾದ ಐದು ವರ್ಷಗಳಲ್ಲಿ ಅವರು ಬೇರೆಯಾದರು. ಅವರ ಮದುವೆಯ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಸದ್ದು ಮಾಡಿತ್ತು. ಅವರಿಬ್ಬರ ರೀಲ್ಗಳು ಪ್ರತಿದಿನ ವೈರಲ್ ಆಗುತ್ತಿದ್ದವು. ಅವರನ್ನು ನೋಡಿದಾಗ ಎಲ್ಲರೂ ಪ್ರೀತಿ ಇದ್ದರೆ ಹೀಗಿರಬೇಕು ಎಂದು ಹೇಳುತ್ತಿದ್ದರು. ಮದುವೆಯ ಸಮಯದಲ್ಲಿ ನಡೆದ ಟ್ರೋಲಿಂಗ್ ಅನ್ನು ಧಿಕ್ಕರಿಸಿ ಇಬ್ಬರೂ ವಿವಾಹವಾದರು, ಆದರೆ ಈಗ ಅವರು ವಿಚ್ಛೇದನ ಪಡೆದ ನಂತರ ಬೇರ್ಪಟ್ಟಿದ್ದಾರೆ. ಕಳೆದ ವರ್ಷವಷ್ಟೇ ಇಬ್ಬರೂ ಪ್ರತ್ಯೇಕವಾಗಿ ವಾಸಿಸುವ ಬಗ್ಗೆ ಚರ್ಚೆಗಳು ಪ್ರಾರಂಭವಾದವು. ಇಬ್ಬರೂ ಸುಮಾರು ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಏತನ್ಮಧ್ಯೆ, ಯುಜ್ವೇಂದ್ರ ಓರ್ವ ಹುಡುಗಿಯ ಜೊತೆ ಡೇಟಿಂಗ್ನಲ್ಲಿ ಕಾಣಿಸಿಕೊಂಡಿದ್ದು ಸುದ್ದಿಯಾಗಿತ್ತು. ಆ ಹುಡುಗಿ ಬೇರೆ ಯಾರೂ ಅಲ್ಲ, ಆರ್ ಜೆ ಮಹ್ವಿಶ್. ಚಾಂಪಿಯನ್ಸ್ ಟ್ರೋಫಿಯಲ್ಲಿ ಅವರನ್ನು ಒಟ್ಟಿಗೆ ನೋಡಿದವರು ಡೇಟಿಂಗ್ ಮಾಡುತ್ತಿದ್ದಾರೆಂದು ದೃಢಪಡಿಸಿದರು. ಅಂದಹಾಗೆ, ಇದೆಲ್ಲವೂ ಅಧಿಕೃತ ವಿಚ್ಛೇದನಕ್ಕೂ ಮುಂಚೆಯೇ ಪ್ರಾರಂಭವಾಯಿತು.

ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ಪ್ರೇಮಕಥೆಯು ಕೋವಿಡ್ 19 ಲಾಕ್ಡೌನ್ ಸಮಯದಲ್ಲಿ ಪ್ರಾರಂಭವಾಯಿತು. ವಾಸ್ತವವಾಗಿ, ಇಬ್ಬರೂ 2019 ರಲ್ಲಿ ಕಾಮನ್ ಫ್ರೆಂಡ್ಸ್ ಮೂಲಕ ಭೇಟಿಯಾದರು. ಧನಶ್ರೀ ವರ್ಮಾ ವೈದ್ಯೆಯಾಗಿದ್ದು, ನಂತರ ನೃತ್ಯ ಸಂಯೋಜಕಿಯಾದವರು. ನೃತ್ಯ ಸಂಯೋಜಕಿಯಾದ ನಂತರ, ಅವರು ತಮ್ಮ ನೃತ್ಯ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದರು ಮತ್ತು ಕೋವಿಡ್ ಅವಧಿಯಲ್ಲಿ ವೈರಲ್ ಗರ್ಲ್ ಆದರು. ಯುಜುವೇಂದ್ರ ಚಾಹಲ್ ಕೂಡ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಗಮನಿಸಿದರು. ಧನಶ್ರೀ ವರ್ಮಾಳ ಸೌಂದರ್ಯಕ್ಕೆ ಯುಜುವೇಂದ್ರ ಚಹಾಲ್ ಮನಸೋತರು. ನಂತರ ಏನಾಯಿತು ಎಂದರೆ ಧನಶ್ರೀ ವರ್ಮಾಗೆ ಹತ್ತಿರವಾಗಲು ನಿರ್ಧರಿಸಿದರು ಮತ್ತು ಆಕೆಯಿಂದ ನೃತ್ಯ ತರಬೇತಿ ಪಡೆಯಲು ನಿರ್ಧರಿಸಿದನು. ಯುಜುವೇಂದ್ರ ಧನಶ್ರೀ ಅವರಿಗೆ ಎರಡು ತಿಂಗಳು ನೃತ್ಯ ಕಲಿಸಲು ಮನವೊಲಿಸಿದರು. ಆಗ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಕೇವಲ ಶಿಕ್ಷಕ ಮತ್ತು ವಿದ್ಯಾರ್ಥಿಯಾಗಿ ಇದ್ದರು, ಆದರೆ ಆ ಸಂಬಂಧವು ಪ್ರೀತಿಯಾಗಿ ಬದಲಾಯಿತು.

ನೃತ್ಯ ತರಬೇತಿ ಮುಗಿದ ನಂತರ, ಯುಜುವೇಂದ್ರ ಚಹಾಲ್ ಧನಶ್ರೀ ವರ್ಮಾ ಅವರಿಗೆ ಪ್ರಪೋಸ್ ಮಾಡಿದರು ಮತ್ತು ಇಲ್ಲಿಂದ ಡೇಟಿಂಗ್ ಪ್ರಕ್ರಿಯೆ ಪ್ರಾರಂಭವಾಯಿತು. ಈ ಸಂಬಂಧಕ್ಕೆ ಕುಟುಂಬದ ಅನುಮೋದನೆಯೂ ಸಿಕ್ಕಿತು ಮತ್ತು ಡಿಸೆಂಬರ್ 11, 2020 ರಂದು ಇಬ್ಬರೂ ಗುರ್ಗಾಂವ್ನಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಮದುವೆಯ ನಂತರ ಇಬ್ಬರೂ ಸಂತೋಷದ ಜೀವನ ನಡೆಸುತ್ತಿದ್ದರು. ಆಟದ ಸಮಯದಲ್ಲಿ ಧನಶ್ರೀ ಯುಜ್ವೇಂದ್ರ ಅವರನ್ನು ಬೆಂಬಲಿಸುತ್ತಿದ್ದರು. ಧನಶ್ರೀ ಅವರನ್ನು ಬೆಂಬಲಿಸಲು ಚಾಹಲ್ ಕಳೆದ ವರ್ಷ ‘ಝಲಕ್ ದಿಖ್ಲಾ ಜಾ’ ಕಾರ್ಯಕ್ರಮಕ್ಕೂ ಬಂದಿದ್ದರು. ಪ್ರಸ್ತುತ, ಇಬ್ಬರ ನಡುವಿನ ಸಂಬಂಧ ಇಷ್ಟಕ್ಕೆ ಮಾತ್ರ ಸೀಮಿತವಾಗಿದೆ. ಈಗ ಅವರು ಬೇರ್ಪಟ್ಟಿದ್ದಾರೆ.