ಜೈಲಿನ ವ್ಯವಸ್ಥೆ ಕುರಿತು ಸಾಕಷ್ಟು ಅಭಿಪ್ರಾಯಗಳು ಬೇರೆ ಬೇರೆ ರೀತಿಯಲ್ಲಿ ಇದೆ. ಅಲ್ಲಿ ಮಾದಕ ವಸ್ತುಗಳಿಂದ ಹಿಡಿದು ಎಲ್ಲವೂ ಲಭ್ಯ ಇದೆ ಅನ್ನೋದು ಅನೇಕರ ಅಭಿಪ್ರಾಯ. ಇದು ಕೇವಲ ಅಭಿಪ್ರಾಯ ಅಲ್ಲ ಕೆಲವೊಂದು ಜೈಲಿನಲ್ಲಿ ಸಾಕ್ಷಿಗಳು ಕೂಡ ಸಿಕ್ಕಿವೆ. ಇದೇ ಪರಪ್ಪನ ಅಗ್ರಹಾರದಲ್ಲಿ ಕೂಡ ಅನೇಕ ಬಾರಿ ಗಾಂಜಾ, ಸಿಗರೇಟ್ ಮೊಬೈಲ್ ಕೂಡ ಸಿಕ್ಕಿವೆ. ಇದಕ್ಕೆ ಗೃಹ ಸಚಿವರೂ ಕೂಡ ಸ್ಪಷ್ಟನೆ ನೀಡಿದ್ದರು.
ಈ ಮಧ್ಯರ ನಟ ದರ್ಶನ್ ಕೊಲೆ ಆರೋಪದಲ್ಲಿ ಜೈಲಿಗೆ ಹೋದ ಬಳಿಕ ಕೈಯಲ್ಲಿ ಸಿಗರೃಟ್ ಹಿಡಿದು ಟೀ ಕುಡಿತಿದ್ದ ಫೋಟೋ ವೈರಲ್ ಆಗಿತ್ತು. ಅಷ್ಟೆ ಅಲ್ಲ ಜೈಲನ್ನ ಮತ್ತೊಮ್ಮೆ ಪ್ರಶ್ನೆ ಮಾಡುವಂತೆ ಆಗಿತ್ತು. ಬಳಿಕ ಬದಲಾದ ಬೆಳವಣಿಗೆಗಳಲ್ಲಿ ನಟ ದರ್ಶನ್ ರನ್ನ ಜೈಲು ಬದಲಾಯಿಸಿದರು. ಬಳ್ಳಾರಿಗೆ ದರ್ಶನ್ ನ ಶಿಫ್ಟ್ ಮಾಡುವಂತಾಯ್ತು. ಇದಾದ ಬಳಿಕ ಜೈಲುಗಳನ್ನ ಮತ್ತಷ್ಟು ಬಿಗಿ ಮಾಡುವ ಕೆಲಸ ಸರ್ಕಾರ ಮಾಡಿದರೂ ಪ್ರಯೋಜನ ಆಗಿಲ್ಲ ಅನ್ನೋದು ಕೂಡ ಅನೇಕರ ಮಾತು.

ಈಗ ಇಂತಹದ್ದೇ ಮತ್ತೊಂದು ವಿಚಾರ ಚರ್ಚೆಗೆ ಬಂದಿದೆ. ಅದಕ್ಕೆ ಕಾರಣ ಲಾಯರ್ ಜಗದೀಶ್. ಇತ್ತೀಚೆಗೆ ನಡೆದ ಪ್ರಕರಣವೊಂದರಲ್ಲಿ ಮೂರು ತಿಂಗಳು ಜೈಲು ವಾಸ ಅನುಭವಿಸಿದ ಜಗದೀಶ್ ಈ ಜೈಲಿನ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ್ದಾರೆ. ಜೈಲು ಹೇಗಿದೆ. ಸಿಬ್ಬಂದಿಗಳ ವರ್ತನೆ, ಮಾದಕ ವಸ್ತುಗಳು ಸಿಗುವ ಕುರಿತಂತೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರೋ ಅವರು, ಜೈಲಿನಲ್ಲಿ ಮೂರು ಹೊತ್ತು ಊಟ ಸಿಗುತ್ತದೆ. ಜೈಲಿನಲ್ಲಿ ಇರುವವರಿಗೆ ವ್ಯವಸ್ಥೆ ಮಾಡುವುದಕ್ಕಿಂತ ಅಲ್ಲಿನ ಅಧಿಕಾರಿಗಳಿಗೆ ಸರಿಯಾದ ಸೌಲಭ್ಯ ನೀಡಬೇಕಿದೆ. ನಾನು ಹೋದ 15 ದಿನಗಳಲ್ಲಿ ಒಬ್ಬ ಜೈಲರ್ ಹೃದಯಾಘಾತದಿಂದ ತೀರಿಕೊಂಡರು. ಅದಕ್ಕೆ ಕಾರಣ ಮಾನಸಿಕ ಒತ್ತಡ ಅಂದ್ರು. ಅಲ್ಲಿ ಸರಿಯಾದ ಸಿಬ್ಬಂದಿಗಳಿಲ್ಲ. ಅವರಿಗೆ ಸರಿಯಾದ ಸೌಲಭ್ಯಗಳಿಲ್ಲ, ಸಮಯಕ್ಕೆ ಸರಿಯಾಗಿ ಸಂಬಳ ಇಲ್ಲ ಎಂದು ಸಿಬ್ಬಂದಿಗಳ ಸ್ಥಿತಿ ಬಗ್ಗೆ ಹೇಳಿದ್ದಾರೆ.

ಇನ್ನು ಸಿಗರೇಟು ಅಥವಾ ಮಾದಕ ವಸ್ತುಗಳು ಸಿಗುವ ವಿಚಾರವಾಗಿ ಮಾತನಾಡಿರೋ ಅವರು, ಅಲ್ಲಿ ನಾನು ಯಾವುದನ್ನು ಕೂಡ ನೋಡಲಿಲ್ಲ. ಅಲ್ಲಿ ಯಾರ ಜೊತೆಗೂ ಮಾತನಾಡುವ ಅವಕಾಶ ಇರುವುದಿಲ್ಲ. ಆದರೆ ದರ್ಶನ್ ಗೆ ಅದೆಲ್ಲ ಹೇಗೆ ಸಿಕ್ತು ಅಂತ ಗೊತ್ತಿಲ್ಲ. ಅದನ್ನ ದರ್ಶನ್ನೇ ಕೇಳಬೇಕು. ಒಬ್ಬ ಲಾಯರಾಗಿ ಅಲ್ಲಿ ಹೇಗಿರಬೇಕು ಅಲ್ಲಿಗೆ ಹಾಗೆ ಇದ್ದೆ. ರೂಲ್ಸ್ ಫಾಲೋ ಮಾಡದಿದ್ದರೆ ನಾನೂ ಬಳ್ಳಾರಿ ಜೈಲಿಗೆ ಹೋಗಬೇಕಿತ್ತೇನೋ. ನಾನು ಸರಿ ಇದ್ದಿದ್ದರಿಂದ ನನ್ನೇನು ಬಳ್ಳಾರಿ ಜೈಲಿಗೆ ಅವರು ಕಳುಹಿಸಲು ಆಗಲಿಲ್ಲ. ಬಾಯಿ ಸ್ವಲ್ಪ ದೊಡ್ಡದಿದೆ ಕೈ ಶುದ್ಧ ಇದೆ ಎಂದಿದ್ದಾರೆ.



