“ಯಶ್” ಅವರ ದಿಕ್ಕು ಬದಲಾಯಿಸಿದ ಸಿನಿಮಾ ಎಂದರೆ ಅದು ‘ಕೆಜಿಎಫ್’.ಈ ಸಿನಿಮಾ ಎರಡು ಭಾಗಗಳಾಗಿ ಜನರ ಮುಂದೆ ಬಂತು.ಕೆಜಿಎಫ್ 1ರಲ್ಲಿ ಯಾರು ಕೊಡ ಊಹಿಸಲಾಗದಷ್ಟು ಯಶಸ್ಸು ಕಂಡರು.ಇದೊಂದು ಸಿನಿಮಾ ದಿಂದ ಜಗತ್ತಿನಾದ್ಯಂತ ಇದ್ದ ರೆಕಾರ್ಡ್ ಗಳನ್ನೆಲ್ಲಾ ಬ್ರೇಕ್ ಮಾಡಿ ನಂಬರ್ ಒನ್ ಸ್ಥಾನ ಪಡೆದುಕೊಂಡಿತ್ತು.ಇನ್ನು ಕೆಜಿಎಫ್ 1ರ ಹವಾ ಕಡಿಮೆಯಾಗಿದ್ದು ಅದರ ಮುಂದುವರೆದ ಭಾಗವಾದ ಚಪ್ಟರ್ 2 ಶೋಟಿಂಗ್ ಶುರುವಾದ ನಂತರ.ಈ ಸಿನಿಮಾ ಶೋಟಿಂಗ್ ಸಮಯದಿಂದಲು ಬಹಳ ಕುತೂಹಲ ಮೂಡಿಸಿತ್ತು ಇದಕ್ಕೆಲ್ಲಾ ಕಾರಣ ಚಾಪ್ಟರ್ 1 ನ ಯಶಸ್ಸು.

ಈ ಎರಡು ಚಪ್ಟರ್ ಸ್ಯಾಂಡಲ್ವುಡ್ ನ ಗತ್ತು ಬದಲಾಯಿಸುವಂತೆ ಮಾಡಿದೆ.ನಮ್ಮ ಕನ್ನಡಿಗರ ಸಿನಿಮಾ ಕೊಡ ಯಾವ ಸಿನಿಮಾಗಳಿಗಿಂತಲು ಕಡಿಮೆಯಿಲ್ಲ ಎಂಬ ಮಾತು ಒಪ್ಪುವಂತೆ ಮಾಡಿತು.ಈ ಚಿತ್ರ ಕನ್ನಡದಲ್ಲಿ ಮಾತ್ರವಲ್ಲದೆ ಪಂಚ ಭಾಷೆಗಳಲ್ಲಿ ಬಿಡುಗಡೆ ಪಡೆಯಿತು.ಆ ಎಲ್ಲಾ ಭಾಷೆಗಳಲ್ಲೂ ಕೊಡ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ದೊಡ್ಡ ಯಶಸ್ಸು ಪಡೆದುಕೊಂಡಿತು. ಈ ಸಿನಿಮಾ ಆದ ನಂತರ ಯಶ್ ಅವರಿಗೆ ಎಲ್ಲಾ ಭಾಷೆಗಳಲ್ಲೂ ಅಭಿಮಾನಿಗಳು ಹುಟ್ಟು ಹಾಕಿಕೊಂಡರು. ಇದೀಗ ಇವರ ಮುಂದಿನ ಚಿತ್ರದ ಬಗ್ಗೆ ಬಹಳ ನಿರೀಕ್ಷೆಯನ್ನು ಇಟ್ಟಿದ್ದಾರೆ.
ಇವರ ಸಿನಿಮಾ ಬಹಳ ಯಶಸ್ವಿಗೊಂಡು ದೊಡ್ಡ ಮಟ್ಟದ ಹೆಸರು ಸಂಪಾದನೆ ಮಾಡಿಕೊಟ್ಟಿತು ಹಾಗಾಗಿ ಈ ಹಿಂದೆ ಒಪ್ಪಿಕೊಂಡಿದ್ದ “ಕಿರಾತಕ” ಸಿನಿಮಾವನ್ನು ಅರ್ಧಕ್ಕೆ ಕೈ ಬಿಟ್ಟರು.ಏಕೆಂದರೆ ಅಭಿಮನಿಗಳಿಗೆ ಇವರ ಮೇಲೆ ಬಹಳ ನಿರೀಕ್ಷೆಯಿದೆ.ಬಹಳ ಕಷ್ಟು ಪಟ್ಟು ಈ ಹೆಸರು ಸಂಪಾದನೆ ಮಾಡಿದ್ದಾರೆ.ಕೇವಲ ಒಂದೇ ಚಿತ್ರದಿಂದ ಇವರ ಸ್ಥಾನಕ್ಕೆ ಕುತ್ತು ಬರಬಾರದೆಂದು ಬಹಳ ಸಮಯ ತೆಗೆದುಕೊಂಡು ಒಂದು ಒಳ್ಳೆಯ ಕತೆಯನ್ನು ಹುಡುಕುತ್ತಿದ್ದಾರೆ.ಯಶ್ ಅವರು ಒಂದು ವರ್ಷ ಕಳೆದರೂ ಅವರ ಹೊಸ ಸಿನಿಮಾ ಬಗ್ಗೆ ಯಾವ ಮಾಹಿತಿ ನೀಡುತ್ತಿಲ್ಲ. ಈ ವಿಚರವಾಗಿ ಅವರ ಅಭಿಮಾನಿಗಳಿಗೆ ಬಹಳ ಬೇಸರ ಇದೆ.
ಇನ್ನು ಇವರ ಮುಂದಿನ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇದೆ. ದಿನಕ್ಕೊಂದು ಗಾಳಿ ಸುದ್ದಿಗಳು ಗಾಂಧಿ ನಗರದಲ್ಲಿ ಓಡಾಡುತ್ತಲೇ ಇದೆ. ಈಗ ಯಶ್ ಅವರು “ನರ್ತನ್” ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬಂತು. ಅದಾದ ಬಳಿಕ ತಮಿಳಿನ “ಶಂಕರ್” ಜೊತೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನಲಾಯಿತು. ಆದರೆ ಅವೆರಡೂ ಸುಳ್ಳಾಗಿದೆ. ಇದೀಗ ಹಠಾತ್ತನೆ ನಟ ಯಶ್ ಹಾಲಿವುಡ್ ಕಡೆ ಪ್ರಯಾಣ ಬೆಳೆಸಿದ್ದು, ಅಲ್ಲಿ ಖ್ಯಾತ ಆಕ್ಷನ್ ನಿರ್ದೇಶಕ ಹಾಗೂ ಸಿನಿಮಾ ನಿರ್ದೇಶಕರೂ ಆಗಿರುವ “ಜೆಜೆ ಪೆರ್ರಿ”ಯನ್ನು ಭೇಟಿ ಮಾಡಿದ್ದಾರೆ.
ಹೀಗೆ ಸಾಕಷ್ಟು ಗೊಂದಲ ಗಳ ನಡೆ ಮಾಡುತ್ತಿರುವ ನಟ ಯಶ್ ಅವರು ಇದೀಗ ಮತೋಮ್ಮೆ ಎಲ್ಲರ ಉಬ್ಬೇರಿಸುವಂತೆ ಮಾಡಿದ್ದಾರೆ. ತಮ್ಮ ಸಿನಿಮಾ ಬಿಡುಗಡೆಯಾಗಿ 7 ತಿಂಗಳು ಕಳೆದಿದ್ದರೂ ತಮ್ಮ ಮುಂದಿನ ಸಿನಿಮಾ ಬಗ್ಗೆ ಯಾವ ಮಾತು ಕೂಡ ತಿಳಿಸಿಲ್ಲ.ಇದೀಗ ಆಂಧ್ರ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪುತ್ರ, ಮಾಜಿ ಸಚಿವ ನಾರಾ ಲೋಕೇಶ್ ಅವರನ್ನು ಭೇಟಿಯಾಗಿದ್ದಾರೆ. ಇದೀಗ ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಂದು ಹೈದರಾಬಾದ್ಗೆ ಭೇಟಿ ನೀಡಿದ್ದ ಯಶ್ ಹೋಟೆಲ್ವೊಂದರಲ್ಲಿ ಭೇಟಿಯಾಗಿ ಕೆಲ ಸಮಯ ಅವರೊಟ್ಟಿಗೆ ಕಾಲ ಕಳೆದಿದ್ದಾರೆ. ಆದರೆ ಯಶ್ ಹಾಗೂ ನಾರಾ ಲೋಕೇಶ್ ಭೇಟಿಗೆ ಕಾರಣ ಏನು ಎಂದು ತಿಳಿದುಬಂದಿಲ್ಲ. ಈ ವೇಳೆ ಇವರಿಬ್ಬರು ಯಾವ ವಿಚಾರವಾಗಿ ಮಾತನಾಡಿದರು ಎನ್ನುವ ಬಗ್ಗೆಯು ಕೂಡ ಯಾವ ಮಾಹಿತಿಯು ಸಿಕ್ಕಿಲ್ಲ. ಆದರೆ ಇವರಿಬ್ಬರ ಭೇಟಿ ಅತ್ತ ರಾಜಕೀಯರಂಗ ಹಾಗೂ ಇತ್ತ ಚಿತ್ರರಂಗದಲ್ಲಿ ಹಾಟ್ ಟಾಪಿಕ್ ಸೋಶಿಯಲ್ ಮಿಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.