ಉಡುಪಿ ಹಾಗೂ ದಕ್ಷಿಣ ಕನ್ನಡದ ಕರಾವಳಿ ಭಾಗದಲ್ಲಿ ನೂರಾರು ವರ್ಷಗಳಿಂದಲೂ ದೈವಗಳ ಮೇಲೆ ಜನರಿಗೆ ಅಪಾರ ನಂಬಿಕೆ. ಅದಕ್ಕೆ ತಕ್ಕಂತೆ ಪದೇ ಪದೇ ದೈವ ಶಕ್ತಿಯ ಪವಾಡ ಇಲ್ಲಿ ಸಾಬೀತಾಗುತ್ತ ಇರುತ್ತದೆ. ಇಲ್ಲಿನ ಪ್ರದಾನ ದೈವ ಶಕ್ತಿ ಎಂದು ಕರೆಯಲ್ಪಡುವ ಸ್ವಾಮಿಕೊರಗಜ್ಜ ದೈವನ್ನು ರಾಜ್ಯದಾದ್ಯಂತ ಜನ ಆರಾಧಿಸುತ್ತಾರೆ. ಸದ್ಯ, ಕೊರಗಜ್ಜ ದೈವದ ಪವಾಡವೊಂದರ ಬಗ್ಗೆ ಇದೀಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಈ ಪವಾಡ ಏನು?, ನಡೆದದ್ದು ಎಲ್ಲಿ? ಎಂಬುದನ್ನು ನೋಡೊಣ.

ಹೌದು, ಪುಟ್ಟ ಬಾಲಕಿಯೊಬ್ಬಳು 3 ಕಿ.ಮೀ ದೂರದ ವರೆಗೆ ನಿದ್ರೆ ಕಣ್ಣಲ್ಲಿ ನಡೆದುಕೊಂಡು ಬಂದು ಕೊರಗಜ್ಜನ ದೇವಸ್ಥಾನದ ನಾಮಫಲಕದ ಮುಂದೆ ನಿಂತ ಘಟನೆ ಉಡುಪಿ ಜಿಲ್ಲೆಯ ಕೆದೂರು ಸಮೀಪದ ದಬ್ಬೆಕಟ್ಟೆಯಲ್ಲಿ ನಡೆದಿದೆ. ರಾತ್ರಿ 3 ಗಂಟೆಗೆ ಬಾಲಕಿ ನಡೆದು ಬಂದಿದ್ದು, ಈ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇನ್ನು ಇದೇ ಸಮಯಕ್ಕೆ ಕೆಲಸ ಮುಗಿಸಿ ಬರುತ್ತಿದ್ದ ವಿಶ್ವ ಎಂಬುವವರು ಪುಟ್ಟ ಬಾಲಕಿ ಕೊರಗಜ್ಜನ ದೇವಸ್ಥಾನದ ನಾಮಫಲಕ ಮುಂದೆ ನಿಂತಿರುವುದನ್ನು ಕಂಡು ಕಾರು ನಿಲ್ಲಿಸಿದ್ದಾರೆ. ಬಳಿಕ ಬಾಲಕಿಯನ್ನ ಮಾತಾಡಿಸಿದಾಗ ನಿದ್ದೆಗಣ್ಣಲ್ಲಿ ನಡೆದು ಬಂದ ವಿಷಯ ತಿಳಿದಿದೆ. ನಂತರ ವಿಶ್ವ ಬಾಲಕಿಯನ್ನ ಮನೆಗೆ ತಲುಪಿಸಿದ್ದಾರೆ. ಈ ಸಂಗತಿ ಎಲ್ಲಡೆ ಪ್ರಚಾರವಾಗುತ್ತಿದ್ದಂತೆ, ಇದು ಕೊರಗಜ್ಜ ದೈವದ ಪವಾಡ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದಾರೆ.