“ಡಿ ಬಾಸ್” ಈ ಹೆಸರಿಗೆ ಯಾವ ಪರಿಚಯ ಬೇಡ ಎಂದು ನಿಮಗೆ ತಿಳಿದಿದೆ.ಇನ್ನು ಈ ಹೆಸರಿಗೆ ನಮ್ಮ ಸ್ಯಾಂಡಲ್ವುಡ್ ನಲ್ಲಿ ಭಾರಿ ತೂಕವಿದೆ.ಇನ್ನು ಈ ನಟ ಸಾಕಷ್ಟು ಹಿಟ್ ಚಿತ್ರಗಳನ್ನು ನಮ್ಮ ಸ್ಯಾಂಡಲ್ವುಡ್ ಗೆ ನೀಡಿದ್ದಾರೆ.ಈ ನಟ ಬಣ್ಣದ ಲೋಕದಲ್ಲಿ ಪ್ರವೇಶ ಪಡೆದಿದ್ದು ‘ಲೈಟ್ ಬಾಯ್’ ಆಗಿ.ಇನ್ನು ಈ ನಟ ಒಬ್ಬ ಹೆಸರಾಂತ ಹಿರಿಯ ಕಲವಿಧಾನ ಮಗನಾಗಿದ್ದರು ಕೂಡ ಈತನ ಹಾದಿ ಅಷ್ಟು ಸುಲಭವಾಗಿರಲಿಲ್ಲ.ಸಾಕಷ್ಟು ಅಡೆತಡೆಗಳನ್ನು ಎದುರಿಸಿ ಇಂದು ಉನ್ನತ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಇನ್ನು ಈ ನಟನ ಸಿನಿಮಾ ನಮ್ಮ ಗಾಂಧಿ ನಗರದಲ್ಲಿ ತಲೆಯೆತ್ತುತಿದೆ ಎಂದರೆ ಎಲ್ಲರಲ್ಲೂ ಖಚಿತವಾಗಿತ್ತು ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸುತ್ತದೆ ಎಂದು.ಹಾಗಾಗಿ ಈ ನಟನನ್ನು ಬಾಕ್ಸ್ ಆಫೀಸ್ ಸುಲ್ತಾನ ಎಂದೇ ಕರೆಯಲ್ಪಡುತ್ತಾರೆ.
ನಮ್ಮ ‘ಚಾಲೆಂಜಿಂಗ್ ಸ್ಟಾರ್’ ಸಿನಿಮಾಗಳ ಮುಕಾಂತರ ಅಲ್ಲದೆ ಅವರ ನೇರ ನುಡಿ ಹಾಗೂ ಕಾರವಾದ ಮಾತಿನಿಂದ ಕೂಡ ಗಾಂಧಿ ನಗರದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿದ್ದಾರೆ.ಇವರ ಮಾತು ಹೇಗಿರುತ್ತದೆ ಎಂದರೆ ಎದುರಾಳಿ ಯಾರೇ ಆಗಿದ್ದರು ಕೂಡ ಎಷ್ಟೇ ಬಲಶಾಲಿ ಯಾಗಿದ್ದರು ಕೂಡ ತಮಗೆ ಅನ್ನಿಸಿದ್ದನ್ನು ಯಾವ ಪಿಲ್ಟರ್ ಇಲ್ಲದೆ ಹಾಗೆ ಹೇಳುವಂತವರು. ಇನ್ನು ಇದೇ ಕಾರಣಕ್ಕೇ ದರ್ಶನ್ ಅವವರನ್ನು ನ್ಯೂಸ್ ಚಾನಲ್ ಗಳಿಂದ ಬ್ಯಾನ್ ಮಾಡಲಾಗಿತ್ತು.ಹಾಗಾಗಿ ಅವರ ಮುಂದಿನ ಚಿತ್ರವಾದ ಕ್ರಾಂತಿ ಸಿನಿಮಾ ಗೆ ಯಾವ ಪ್ರಚಾರ ಸಿಗುತ್ತಿರಲಿಲ್ಲ.
ಆದರೆ ಯಾವ ಬೆಂಬಲ ಇಲ್ಲದೆ ಅವರ ಸಿನಿಮಾ ಇಷ್ಟು ಸದ್ದು ಮಾಡುತ್ತಿತ್ತುವುದು ನೋಡಿ ಎಲ್ಲರು ಇವರ ಸಿನಿಮಾ ಗಳನ್ನು ಪ್ರೋತ್ಸಾಹ ನೀಡಲು ಆರಂಭಿಸಿದ್ದಾರೆ.ಇದೀಗ ಎಲ್ಲೆಲ್ಲೂ “ಕ್ರಾಂತಿ” ಸಿನಿಮಾ ಸುದ್ದಿ ಹೆಚ್ಚಾಗಿದೆ.ದರ್ಶನ್ ಅವರು ಕೂಡ ಸಾಕಷ್ಟು ಇಂಟರ್ವ್ಯೂ ನಲ್ಲಿ ತೊಡಗಿಸಿಕೊಂಡಿದ್ದಾರೆ.ಇದೀಗ ಮತೊಮ್ಮೆ ವಿವಾದಗಳಿಗೆ ಸಿಲುಕಿದ್ದರು. ಕ್ರಾಂತಿ ಸಿನಿಮಾ ಪ್ರಚಾರಕ್ಕಾಗಿ ದರ್ಶನ್ ಸಂದರ್ಶನಗಳಿಗೆ ತೆರಳುತ್ತಿದ್ದಾರೆ.ಆ ವೇಳೆ ಗೆಲುವಿನ ದೇವತೆ ಬಗ್ಗೆ ಮಾತನಾಡಿದ ಆ ಮಾತುಗಳು ಎಲ್ಲರ ಕೋಪಕ್ಕೆ ಕಾರಣವಾಗಿತ್ತು.
ಈಗ ಅದ್ರ ಬೆನ್ನಲ್ಲೇ ಮತ್ತೊಂದು ಅಚಾತುರ್ಯದ ಘಟನೆ ನಡೆದಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ.ನಿನ್ನೆಯಷ್ಟೇ ದರ್ಶನ್ ಹಾಗೂ ರಚಿತಾ ರಾಮ್ ಅವರು ತಮ್ಮ ಸಿನಿಮಾ ಎರಡನೇ ಹಾಡನ್ನು ಬಿಡುಗಡೆ ಮಾಡಲು ಹೊಸಪೇಟೆ ಗೆ ತೆರಳಿದ್ದರು.ಆ ವೇಳೆ ದರ್ಶನ್ ಮಾತನಾಡಿದ ನಂತರ ಇನ್ನೇನು ರಚಿತಾ ಮಾತನಾಡಬೇಕು ಆ ವೇಳೆ ದರ್ಶನ್ ಮೇಲೇ ಯಾರೋ ಒಬ್ಬೊ ಕಿಡುಗೆಡಿ ಚಪ್ಪಲಿ ಹೊಡೆದಿದ್ದಾನೆ. ತಕ್ಷಣ ಎಲ್ಲರೂ ಕೂಡ ಆಕ್ರೋಶಕ್ಕೆ ಒಳಗಾದರು ಆದರೆ ದರ್ಶನ್ ಅವರು ಬಹಳ ಶಾಂತ ರೀತಿ ಯಿಂದ ಪರವಾಗಿಲ್ಲ ಬಿಡು ಚಿನ್ನ ಎಂದು ಹೇಳಿ ದೊಡ್ಡ ವ್ಯಕ್ತಿ ಯಾದರು.
ಆದರೆ ಇದೀಗ ದರ್ಶನ್ ಅವರು ಸುಮ್ಮನಾದರು ಅವರ ಅಭಿಮಾನಿಗಳು ಹಾಗೂ ಕನ್ನಡ ಹೋರಾಟಗಾರರ ಸಂಘ ದೊಡ್ಡ ಮಟ್ಟದ ಪ್ರತಿಭಟನೆಗಳನ್ನು ಮಾಡುತ್ತ ಬರುತ್ತಿದೆ.ಇನ್ನು ದರ್ಶನ್ ಅವರ ಪರವಾಗಿ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರೋ #WeStandWithDboss ಅಭಿಯಾನಕ್ಕೆ ಕೈ ಜೋಡಿಸುತ್ತಿದ್ದಾರೆ.ಇದೀಗ ಅದೆಲ್ಲಾದ್ರೂ ಜೊತೆಗೆ ಗೃಹ ಮಂತ್ರಿಗಳಿಗೆ ಪತ್ರ ಕೂಡ ಬರೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ ಮೇಲೆ ಚಪ್ಪಲಿ ಎಸೆದ ಪ್ರಕರಣವನ್ನು ಎಲ್ಲೆಡೆ ಖಂಡಿಸಲಾಗುತ್ತಿದೆ.
ಚಿತ್ರದುರ್ಗ ನಗರದಲ್ಲಿ ಕರುನಾಡ ವಿಜಯಸೇನೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸಿದೆ.’ಯಾವೊಬ್ಬ ಕನ್ನಡ ನಟನಿಗೂ ಇಂತಹ ಅವಮಾನವಾಗಬಾರದು. ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದೆ ಹೋದರೆ, ಚಿತ್ರದುರ್ಗ ನಗರದಲ್ಲಿರುವ ಎಲ್ಲಾ ಚಿತ್ರಮಂದಿರಗಳನ್ನು ಬಂದ್ ಮಾಡುವುದಾಗಿ’ ಕರುನಾಡ ವಿಜಯಸೇನೆ ಎಚ್ಚರಿಕೆ ನೀಡಿದೆ.ಇದೇ ರೀತಿ ಒಂದಲ್ಲ ಒಂದು ಪ್ರತಿಭಟನೆ ನಡೆಯುತ್ತಿದ್ದು ಈ ಪ್ರಕರಣ ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂದು ನಾವು ಕಾದು ನೋಡಬೇಕಿದೆ.