ಬಾಲಿವುಡ್ನ ಪ್ರಮುಖ ನಟಿಯರಲ್ಲಿ ಕರೀನಾ ಕಪೂರ್ ಕೂಡ ಒಬ್ಬರು. 2000ನೇ ಇಸವಿಯಂದ ಇವತ್ತಿನ ವರೆಗೂ ಕರೀನಾ ತನ್ನದೇ ಆದ ಅಭಿನಯ ಛಾಪನ್ನು ಉಳಿಸಿಕೊಂಡಿದ್ದಾರೆ. ಇದೀಗ ಕರೀನಾ ಕಪೂರ್ ವರ್ತನೆಯ ಬಗ್ಗೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಮಾತನಾಡಿದ್ದು, ಕರೀನಾ ಕಪೂರ್ ಅಹಂಕಾರಿ, ಆಕೆಗೆ ಈ ಗುಣ ಒಳ್ಳೆಯದಲ್ಲ ಎಂದಿದ್ದಾರೆ. ನಾರಾಯಣಮೂರ್ತಿ ಕರೀನಾ ಬಗ್ಗೆ ಈ ಹೇಳಿಕೆ ನೀಡಲು ಕಾರಣವೇನು ಎಂಬುದನ್ನ ಈ ವರದಿಯಲ್ಲಿ ನೋಡೋಣ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಾರಾಯಣಮೂರ್ತಿ ಒಮ್ಮೆ ಲಂಡನ್ ನಿಂದ ವಿಮಾನದ ಮೂಲಗ ಭಾರತಕ್ಕೆ ಬರುವಾಗ ಅದೇ ವಿಮಾನದಲ್ಲಿ ಕರೀನಾ ಕೂಡ ಇದ್ದರಂತೆ. ವಿಮಾನ ಲ್ಯಾಂಡ್ ಆದ ಬಳಿಕ ನೂರಾರು ಅಭಿಮಾನಿಗಳು ಕರೀನಾ ಕಪೂರ್ ಅವರ ಬಳಿ ಬಂದಾಗ ಆಕೆ ಕನಿಷ್ಠ ಅವರೊಂದಿಗೆ ಮಾತನ್ನೂ ಆಡದೆ ಮುಂದುವರೆದರಂತೆ. ಎಷ್ಟೇ ದೊಡ್ಡ ಸೆಲೆಬ್ರಿಟಿಗಳಾದರೂ ಇಂತಹ ವರ್ತನೆಗಳು ಸರಿಯಲ್ಲ. ನಾನು ಎಷ್ಟೇ ಬ್ಯುಸಿ ಇದ್ದರೂ ನನ್ನನ್ನು ಕಾಣಲು ಬಯಸುವವರಿಗೆ ಸಮಯ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ನಾರಾಯಣಮೂರ್ತಿ ಅವರನ್ನು ತಡೆಯಲು ಪ್ರಯತ್ನಿಸಿದ ಸುಧಾಮೂರ್ತಿಯವರು, ‘ನಾರಾಯಣಮೂರ್ತಿಗೆ ಹೆಚ್ಚೆಂದರೆ 10 ಸಾವಿರ ಅಭಿಮಾನಿಗಳು ಇರಬಹುದು. ಆದರೆ ಕರೀನಾ ಕಪೂರ್ ಸೆಲೆಬ್ರಿಟಿ ಆಕೆಗೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಎಲ್ಲರನ್ನೂ ಮಾತನಾಡಿಸುವುದು ಕಷ್ಟ’ ಎಂದರು. ಆದರೆ ಮಾತು ಮುಂದುವರೆಸಿದ ನಾರಾಯಣಮೂರ್ತಿ, ‘ಇಲ್ಲಿ ಜನಪ್ರಿಯತೆ ಮುಖ್ಯವಾಗುವುದಿಲ್ಲ. ಜನರ ಅಭಿಮಾನಕ್ಕೆ ಬೆಲೆ ನೀಡುವುದು ಮುಖ್ಯ’ ಎಂದರು. ಈ ಹೇಳಿಕರ ವೈರಲ್ ಆಗುತ್ತಿದ್ದಂತೆ ಕೆಲವರು ಇದನ್ನು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಕರೀನಾ ನಡೆಯನ್ನು ಸಮರ್ಥಿಸಿದ್ದಾರೆ.