ನಮ್ಮೆಲ್ಲರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಿರೂಪಣೆ ಮಾಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವು ಮತ್ತೆ ಶುರುವಾಗಲಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಪ್ಲಾನ್ ಮಾಡುತ್ತಿದೆ ಎಂದು ಮಾಹಿತಿ ಸಿಕ್ಕಿದೆ. ಕನ್ನಡದ ಕೋಟ್ಯಾಧಿಪತಿ ಎಂದ ತಕ್ಷಣ ನಮಗೆ ನೆನಪಾಗುವುದು, ನಮ್ಮೆಲ್ಲರ ಅಪ್ಪು. ಅವರು ನಿರೂಪಣೆ ಮಾಡುತ್ತಿದ್ದ ಶೈಲಿ, ಜನರ ಜೊತೆಗೆ ಅಷ್ಟು ಪ್ರೀತಿಯಿಂದ ಮಾತನಾಡುತ್ತಾ ಇದ್ದದ್ದನ್ನು ಇಂದಿಗೂ ಮರೆಯುವ ಹಾಗಿಲ್ಲ. ಇಂಥ ಅಪ್ಪು ಅವರ ಸ್ಥಾನಕ್ಕೆ ಈಗ ಬೇರೊಬ್ಬರು ಬರಬೇಕಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವು ಅಭಿಮಾನಿಗಳು ಅಪ್ಪು ಅವರ ಬದಲು ಇವರು ಬರಬೇಕು ಎನ್ನುತ್ತಿದ್ದಾರೆ..

ಕನ್ನಡದ ಕೋಟ್ಯಾಧಿಪತಿ ಮನರಂಜನೆ ನೀಡುವ ಕಾರ್ಯಕ್ರಮ ಮಾತ್ರ ಆಗಿರಲಿಲ್ಲ. ಈ ಕಾರ್ಯಕ್ರಮದ ಸಾಕಷ್ಟು ಜನರಿಗೆ ಸಹಾಯ ಕೂಡ ಆಗಿದೆ. ಸಾಮಾನ್ಯ ವರ್ಗದ ಜನರಿಗೆ ಲಕ್ಷಗಟ್ಟಲೆ ಹಣ, ಕೋಟಿಗಟ್ಟಲೆ ಹಣ ಇದೆಲ್ಲವನ್ನು ಊಹೆ ಮಾಡಿಕೊಳ್ಳುವುದು ಕೂಡ ಅಸಾಧ್ಯ. ಅಷ್ಟು ಹಣ ಅವರಿಗೆ ಸಿಕ್ಕರೆ, ಬದುಕಿಗೆ ನಿಧಿ ಸಿಕ್ಕ ಹಾಗೆ, ಅವರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಆಗುತ್ತದೆ. ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದ ಮೂಲಕ ಹಲವು ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಈ ಕಾರ್ಯಕ್ರಮ ಮತ್ತೆ ಶುರುವಾದರೆ ಇನ್ನಷ್ಟು ಜನರಿಗೆ ಸಹಾಯ ಆಗುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯ ಅಂತೂ ಇಲ್ಲ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಆಗ ಅಪ್ಪು ಅವರು ಈ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದರು. ಅವರಿಂದಲೇ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ಬಂದಿದ್ದು ಎಂದು ಹೇಳಬಹುದು. ಆದರೆ ಈಗ ಅಪ್ಪು ಅವರು ಇಲ್ಲ, ಅವರು ನಮ್ಮೆಲ್ಲರನ್ನು ಬಿಟ್ಟು ಹೋಗಿ 3 ವರ್ಷ ಕಳೆದು ಹೋಗಿದೆ. ಹೀಗಿರುವಾಗ ಅಪ್ಪು ಅವರ ಸ್ಥಾನಕ್ಕೆ ಯಾರು ಬರಬೇಕು ಎನ್ನುವ ವಿಚಾರ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. 2025ರಲ್ಲಿ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಮತ್ತೆ ಶುರು ಮಾಡಲು ಚಿಂತೆ ನಡೆಸಿದ್ದು, ಈಗಾಗಲೇ ಕಿಚ್ಚ ಸುದೀಪ್ ಅವರ ಜೊತೆಗೆ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಿರೂಪಣೆ ಮಾಡುವ ಬಗ್ಗೆ ಮಾತುಕತೆ ನಡೆಸಲಾಗಿದೆ ಎನ್ನುವ ಸುದ್ದಿ ಕೇಳಿಬಂದಿತ್ತು.

ಬಿಗ್ ಬಾಸ್ ಶೋ ಇನ್ನೇನು 50 ದಿನಗಳ ಒಳಗೆ ಮುಗಿಯಲಿರುವ ಕಾರಣ, ಬಿಗ್ ಬಾಸ್ ಮುಗಿದ ಬಳಿಕ ಕನ್ನಡದ ಕೋಟ್ಯಾಧಿಪತಿ ಶುರು ಮಾಡುವ ಬಗ್ಗೆ ಕಲರ್ಸ್ ಕನ್ನಡ ಚಿಂತನೆ ನಡೆಸಲಾಗಿದೆ ಎನ್ನಲಾಗಿತ್ತು. ಆದರೆ ಇದಕ್ಕೆ ಸುದೀಪ್ ಅವರು ಒಪ್ಪಿದ್ದಾರೋ ಇಲ್ಲವೋ ಎನ್ನುವ ಬಗ್ಗೆ ಇನ್ನೂ ಕೂಡ ಮಾಹಿತಿ ಸಿಕ್ಕಿಲ್ಲ. ಅಷ್ಟರ ಒಳಗೆ ಸೋಶಿಯಲ್ ಮೀಡಿಯಾದಲ್ಲಿ ಬೇರೆಯದೇ ಚರ್ಚೆ ಶುರುವಾಗಿದೆ. ಸುದೀಪ್ ಅವರಲ್ಲ ಮತ್ತೊಬ್ಬ ಸ್ಟಾರ್ ಹೀರೋ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಿರೂಪಣೆ ಮಾಡಬೇಕು ಎಂದು ಅಭಿಮಾನಿಗಳು ಕೇಳಿಕೊಂಡಿದ್ದಾರೆ. ಹಾಗಿದ್ದರೆ ಈ ಹೊಸ ಸುದ್ದಿ ಏನು ಗೊತ್ತಾ?

ತಮ್ಮ ಮೆಚ್ಚಿನ ಸ್ಟಾರ್ ಹೀರೊನೆ ಕಾರ್ಯಕ್ರಮ ನಿರೂಪಣೆ ಮಾಡಬೇಕು ಎಂದು ಹೇಳಿರೋದು ನಟ ದರ್ಶನ್ ಅವರ ಅಭಿಮಾನಿಗಳು. ಹೌದು, ಡಿಬಾಸ್ ದರ್ಶನ್ ಅವರು ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಿರೂಪಣೆ ಮಾಡಿದರೆ ಚೆನ್ನಾಗಿರುತ್ತದೆ ಎಂದು ಅವರ ಅಭಿಮಾನಿಗಳು ಭಾವಿಸುತ್ತಿದ್ದಾರೆ. ಆದರೆ ಇನ್ನೂ ಕೂಡ ದರ್ಶನ್ ಅವರ ಕೇಸ್ ಪೂರ್ತಿಯಾಗಿ ಸಾಲ್ವ್ ಆಗಿಲ್ಲ, ಅವರ ಸಿನಿಮಾ ಚಿತ್ರೀಕರಣ ಕೂಡ ಶುರುವಾಗಿಲ್ಲ. ಹಾಗಿರುವಾಗ, ದರ್ಶನ್ ಅವರು ಕಾರ್ಯಕ್ರಮ ನಿರೂಪಣೆ ಮಾಡುವುದಕ್ಕೆ ಹೇಗೆ ಸಾಧ್ಯ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಕಾರ್ಯಕ್ರಮ ಯಾವಾಗ ಶುರುವಾಗುತ್ತದೆ? ಯಾರು ನಿರೂಪಣೆ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.