ನಟಿ ಮಾಳವಿಕಾ ಅವಿನಾಶ್ ಅವರ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆಯೇ ಇಲ್ಲ. ಕೆಜಿಎಫ್ ಸಿನಿಮಾದ ಪಾತ್ರದ ಬಳಿಕ ಇವರಿಗೆ ಇದ್ದ ಜನಪ್ರಿಯತೆ ದುಪ್ಪಟ್ಟು ಆಗಿದೆ ಎಂದರು ತಪ್ಪಲ್ಲ. ಮಾಳವಿಕಾ ಅವಿನಾಶ್ ಅವರು ಸಿನಿಮಾ ಅಥವಾ ಧಾರಾವಾಹಿ ವಿಷಯಕ್ಕೆ ಮಾತ್ರವಲ್ಲ, ಅವರು ನೀಡುವ ಹೇಳಿಕೆಗಳಿಂದ ಸಹ ವಿವಾದಕ್ಕೆ ಗುರಿಯಾಗುತ್ತಲೇ ಇರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಇವರ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಅದೇ ರೀತಿ ಇತ್ತೀಚೆಗೆ ಇವರು ನೀಡಿರುವ ಹೇಳಿಕೆ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. 25 ವರ್ಷಗಳಿಂದ ಒಬ್ಬನೇ ಗಂಡನ ಜೊತೆಗೆ ಇರೋದು ನಾನೊಬ್ಬಳೇ ಎಂದು ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ. ಈ ಮಾತು ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಫ್ರೆಂಡ್ಸ್ ಗೆ ಟಾಂಗ್ ಕೊಟ್ಟುಬಿಟ್ರ ಮಾಳವಿಕಾ ಎನ್ನುವ ವಿಚಾರ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಹೌದು, ಈ ಮದುವೆ ವಿಚ್ಛೇದನ ಈ ಎಲ್ಲಾ ವಿಚಾರಗಳನ್ನು ಮಾಳವಿಕಾ ಅವರು ಚರ್ಚೆ ಮಾಡಿರುವುದು ನಿಜ. ಇದು ಕಿರಿಕ್ ಕೀರ್ತಿ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ನಡೆದ ಪಾಡ್ ಕ್ಯಾಸ್ಟ್ ಸಂದರ್ಶನದಲ್ಲಿ ಹೇಳಿರುವ ಮಾತುಗಳು ಆಗಿದೆ. ಕಿರಿಕ್ ಕೀರ್ತಿ ಅವರು ಮಾಳವಿಕಾ ಅವಿನಾಶ್ ಅವರು ನಿರೂಪಣೆ ಮಾಡುತ್ತಿದ್ದ ಬದುಕು ಜಟಕಾ ಬಂಡಿ ಕಾರ್ಯಕ್ರಮದ ಬಗ್ಗೆ ಮಾತನಾಡಿ, ಅಲ್ಲಿಗೆ ಬರುತ್ತಿದ್ದವರ ವರ್ತನೆ ಬಗ್ಗೆ ಕೇಳುತ್ತಾರೆ. ಆಗ ಮಾಳವಿಕಾ ಅವರು, ಈ ಥರ ಕಾರ್ಯಕ್ರಮ ಎಂದಾಗ, ಒಬ್ಬರನ್ನು ಮಾತ್ರ ಕರೆಸಿ ಈ ರೀತಿ ಆಗಿದೆ ಎಂದು ಹೇಳೋಕೆ ಆಗಲ್ಲ, ಇಬ್ಬರೂ ಬರಬೇಕು ಎದುರು ಬದುರು ಕೂತು ಮಾತಾನಾಡಿ ಚರ್ಚೆ ಆಗಬೇಕು ಎಂದು ಹೇಳಿದ್ದರಂತೆ. ಅದೇ ರೀತಿ ಕಾರ್ಯಕ್ರಮ ಸಹ ನಡೆಯುತ್ತಿತ್ತು ಎನ್ನಲಾಗಿದೆ. ಈ ಕಾರ್ಯಕ್ರಮ ಮುಗಿದು ಇಷ್ಟು ವರ್ಷ ಆಗಿದ್ದರು ಈಗಲೂ ಮಾಳವಿಕಾ ಅವರಿಗೆ ಫೋನ್ ಬರುತ್ತಂತೆ.

ದಿನಕ್ಕೆ 4 ಜನ ಆದರೂ ಫೋನ್ ಮಾಡಿ, ಈ ರೀತಿ ಸಮಸ್ಯೆ ಆಗಿದೆ, ನೀವೇ ಬಗೆಹರಿಸಿಕೊಡಬೇಕು ಎಂದು ಮಾಳವಿಕಾ ಅವರನ್ನು ಕೇಳಿಕೊಳ್ಳುತ್ತಾರೆ ಎಂದು ಮಾಳವಿಕಾ ಅವರೇ ಹೇಳಿದ್ದಾರೆ. ಅದಕ್ಕೆ ಕಿರಿಕ್ ಕೀರ್ತಿ ಅವರು ಈಗಲೂ ಕೌನ್ಸೆಲಿಂಗ್ ಮಾಡ್ತೀರಾ ಮೇಡಂ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಮಾಳವಿಕಾ ಅವರು, ಈಗ ಜನಸಾಮಾನ್ಯರಿಗೆ ಮಾಡುತ್ತಿಲ್ಲ ಅಷ್ಟು ಸಮಯ ಕೂಡ ಸಿಗುತ್ತಿಲ್ಲ. ಆದರೆ ಚಿತ್ರರಂಗದವರು ದೊಡ್ಡ ದೊಡ್ಡ ವ್ಯಕ್ತಿಗಳು, ಕಲಾವಿದರು ಕೂಡ ಕೇಳ್ತಾರೆ. ಅವರು ಫೋನ್ ಮಾಡಿ, ಬರ್ತೀವಿ ಅಂದಾಗ ಬೇಡ ಅಂತ ಹೇಳೋದಕ್ಕೂ ಆಗೋದಿಲ್ಲ. ಅವರನ್ನು ಆಗ ಬರೋದಕ್ಕೆ ಹೇಳ್ತೀನಿ, ನಾನು ಏನು ಮಾತಾಡೋದಿಲ್ಲ. ಕೂತಿರ್ತೀನಿ ಅಷ್ಟೇ, ಅವರು ಮಾತನಾಡಿ, ಎರಡು ಕಡೆ ಏನಾಗಿದೆ ಅನ್ನೋದನ್ನ ಹೇಳ್ತಾರೆ. ಆ ವೇಳೆ ಕೆಲವರಿಗೆ ಪರಿಹಾರ ಸಿಗುತ್ತದೆ ಇನ್ನು ಕೆಲವರಿಗೆ ಸಿಗೋದಿಲ್ಲ ಎಂದಿದ್ದಾರೆ.
ಮುಂದುವರೆದು ವಿಚ್ಛೇದನದ ಬಗ್ಗೆ ಮಾತನಾಡಿ, ಅವಸರದಲ್ಲಿ ನಿರ್ಧಾರ ತೆಗೆದುಕೊಳ್ಳಬಾರದು, ಅದೇ ರೀತಿ ಬದುಕೋಕೆ ಸಾಧ್ಯವೇ ಇಲ್ಲ ಅನ್ನೋ ಹಾಗಿದ್ದಾಗ ಮಕ್ಕಳಿಗೋಸ್ಕರ ಅಂತ ಸಹಿಸಿಕೊಂಡು ಇರಬಾರದು. ಕೋರ್ಟ್ ನಲ್ಲಿ ಹಿಂದೂ ಮದುವೆಗೆ ಒಳ್ಳೆಯ ಕಾನೂನು ಇದೆ. ಕೇಸ್ ಫೈಲ್ ಮಾಡಿದರೆ, ಕೋರ್ಟ್ 6 ತಿಂಗಳ ಸಮಯ ಕೊಡುತ್ತದೆ. ಈ ಕಾಲಾವಕಾಶದಲ್ಲಿ ಅವರ ಮನಸ್ಸು ಬದಲಾಗಿ ಮತ್ತೆ ಒಂದಾಗಲಿ ಎನ್ನುವುದು ಕೋರ್ಟ್ ಗೆ ಇರುವ ಉದ್ದೇಶ ಆಗಿರುತ್ತದೆ. ಈ ಸಮಯದಲ್ಲಿ ಹಲವರ ಮನಸ್ಸು ಬದಲಾಗಬಹುದು ಇನ್ನು ಕೆಲವರಿಗೆ ಆಗದೆಯೂ ಇರಬಹುದು. ಡೈವೋರ್ಸ್ ಬೇಕೇ ಬೇಕು ಎಂದು ಅನ್ನಿಸಿದಾಗ ಇಬ್ಬರು ಒಬ್ಬೊಬ್ಬ ಲಾಯರ್ ಹತ್ತಿರ ಹೋಗದೇ, ಒಬ್ಬ ಲಾಯರ್ ಬಳಿ ಹೋದರೆ ಸಾಕು. ಲಾಯರ್ ಗಳು ಸಾವಿರಾರು ಕೇಸ್ ಗಳನ್ನ ನೋಡಿರಬಹುದು ಆದರೆ ನಿಮ್ಮ ಮದುವೆಯಲ್ಲಿ ಏನಾಗಿದೆ ಅನ್ನೋದು ನಿಮಗೆ ಮಾತ್ರ ಗೊತ್ತಿರುತ್ತದೆ.

ಹಾಗಾಗಿ ನೀವು ಇಬ್ಬರು ಒಬ್ಬರೇ ಲಾಯರ್ ಬಳಿ ಹೋದರೆ ಒಳ್ಳೆಯದು. ಆಗ ಹಾದಿ ರಂಪ, ಬೀದಿ ರಂಪ ಆಗೋದು ತಪ್ಪುತ್ತದೆ, ಒಬ್ಬರೇ ಲಾಯರ್ ಬಳಿ ಏನಾಗಿದೆ ಅನ್ನೋದನ್ನ ಯಾವುದೇ ಮುಚ್ಚು ಮರೆ ಇಲ್ಲದೇ ತಿಳಿಸಿದರೆ, ಎಲ್ಲವೂ ಸುಲಲಿತವಾಗಿ ನಡೆದು ಹೋಗುತ್ತದೆ ಎಂದು ವಿಚ್ಛೇದನದ ಬಗ್ಗೆ ಹೇಳಿರುವ ಮಾಳವಿಕಾ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಹ ಮಾತನಾಡಿದ್ದಾರೆ. ಈ ವೇಳೆ ನೀಡಿರುವ ಹೇಳಿಕೆಯೇ ಈಗ ಸಿಕ್ಕಾಪಟ್ಟೆ ವೈರಲ್ ಆಗಿರುವುದು. ಕನ್ನಡ ಕಲಾವಿದೆಯರಲ್ಲಿ ಕೆಲವರು ಎರಡು ಮದುವೆ ಹಾಗೂ ಮೂರು ಮದುವೆ ಆದವರು ಕೂಡ ಇದ್ದಾರೆ. ಮಾಳವಿಕಾ ಅವರ ಮಾತುಗಳು ಅವರೆಲ್ಲರಿಗೂ ಟಾಂಗ್ ಕೊಟ್ಟಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಇವರು ಆ ರೀತಿ ಹೇಳಿದ್ದಾದರು ಯಾಕೆ? ಪೂರ್ತಿಯಾಗಿ ಹೇಳಿದ್ದೇನು ಎಂದು ನೋಡುವುದಾದರೆ..
“ಒಂದ್ ಮಾತು ಹೇಳಬೇಕೋ, ಹೇಳಬಾರದೋ ಗೊತ್ತಿಲ್ಲ. ನನ್ನ ಅಮ್ಮನ ಜೊತೆ ಆಗಾಗ ಹೇಳ್ತಾ ಇರ್ತೀನಿ ನನ್ನ ಜೆನೆರೇಷನ್ ನಲ್ಲಿ 25 ವರ್ಷ ಒಬ್ಬನೇ ಗಂಡನ ಜೊತೆ ಬದುಕುತ್ತಿರೋಳು ನಾನೊಬ್ಬಳೇ ಅಮ್ಮ ಅಂತ. ಅದಕ್ಕೆ ಅವರು ಅದೇನು ದೊಡ್ಡ ಇದು ಅಂತ ಹೇಳ್ಕೋತೀಯ ಅಂತಾರೆ. ಆದರೆ ಅದೇ ಸತ್ಯ. ನನ್ನ ಕ್ಲಾಸ್ ಮೇಟ್ಸ್ ಗಳಿಗೆ ಎಷ್ಟೋ ಜನರಿಗೆ ಆಗಿದೆ. ಚಿತ್ರರಂಗದಲ್ಲೂ ನನ್ನ ಸಮಕಾಲೀನರು ಅಂತ ತಗೊಂಡ್ರೆ, ಎಷ್ಟು ಜನ ಜೊತೆಗೆ ಇದ್ದಾರೆ ಹೇಳಿ..” ಎಂದು ಹೇಳಿಕೆ ನೀಡಿದ್ದಾರೆ ನಟಿ ಮಾಳವಿಕಾ ಅವಿನಾಶ್. ಈ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆ ಜೋರಾಗಿಯೇ ನಡೀತಿದೆ. ಮಾಳವಿಕಾ ಅವರು ಈ ರೀತಿ ಯಾಕೆ ಹೇಳಬೇಕಿತ್ತು ಅಂತಿದ್ದಾರೆ ನೆಟ್ಟಿಗರು. ಇನ್ನು ಕೆಲವರು ಸರಿಯಾಗಿಯೇ ಹೇಳಿದ್ದಾರೆ ಅಂತಿದ್ದಾರೆ.

ನಟಿ ಮಾಳವಿಕಾ ಅವಿನಾಶ್ ಅವರು ನೀಡಿರುವ ಈ ಹೇಳಿಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸ್ಯಾಂಡಲ್ ವುಡ್ ನಟಿಯರಾದ ಶ್ರುತಿ, ಮಾಳವಿಕಾ, ಸುಧಾರಾಣಿ, ತಾರಾ ಇವರೆಲ್ಲರೂ ಸಹ ಜೊತೆಯಾಗಿಯೇ ಇರುತ್ತಾರೆ. ಎಲ್ಲಾ ಕಡೆ ಜೊತೆಯಾಗೆ ಕಾಣಿಸಿಕೊಳ್ಳುತ್ತಾರೆ. ಹಾಗಿರುವಾಗ ತಮ್ಮನ್ನು ತಾವು ಹೊಗಳಿಕೊಳ್ಳೋ ಭರದಲ್ಲಿ ಇನ್ನೊಬ್ಬರ ವೈಯಕ್ತಿಕ ಜೀವನದ ಬಗ್ಗೆ ಈ ರೀತಿ ಹೇಳುವುದು ಎಷ್ಟು ಸರಿ ಅಂತಿದ್ದಾರೆ ನೆಟ್ಟಿಗರು. ಇದೊಂದು ಸಣ್ಣ ವಿಚಾರವೇ ಆದರೂ, ಸೆಲೆಬ್ರಿಟಿಗಳು ಒಂದೊಂದು ಮಾತನ್ನಾಡುವಾಗಲು ಬಹಳ ಹುಷಾರಾಗಿ ಇರಬೇಕು ಎಂದು ಸಾರುತ್ತಿದೆ. ಇನ್ನುಮುಂದೆ ಆದರೂ ಮಾತನಾಡುವಾಗ ಎಲ್ಲರೂ ಹುಷಾರಾಗಿ ಇದ್ದರೆ ಒಳ್ಳೇದು..