ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡ ಚಿತ್ರರಂಗ ಕಂಡಂತ ಅದ್ಭುತ ಪ್ರತಿಭೆ. ಕೇವಲ ನಟನೆಯಲ್ಲದೆ ನಡೆ, ನುಡಿ, ಸಾಮಾಜಿಕ ಕಾರ್ಯಗಳಲ್ಲೂ ತನ್ನದೇಯಾದಂತ ಛಾಪು ಮೂಡಿಸಿರುವ ನಟ ಪುನೀತ್ ನಮ್ಮನ್ನ ಅಗಲಿ ಒಂದು ವರ್ಷವೇ ಕಳೆಯಿತು. ವರ್ಷ ಒಂದು ಕಳೆದರೂ ಅಪ್ಪು ನೆನಪು ಮಾತ್ರ ಜೀವಂತವಾಗಿ ಉಳಿದಿದೆ. ಒಂದು ವೇಳೆ ಅಪ್ಪು ನಮ್ಮನ್ನೊಡನೆ ಇಂದು ಇರುತ್ತಿದ್ದರೆ ಅವರ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್ ಗೆ ಅಮಿತಾಬ್ ಬಚ್ಚನ್ ಬರವವರಿದ್ದರಂತೆ, ಅಷ್ಟೇ ಅಲ್ಲದೆ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭ ಕಾರ್ಯಕ್ರಮಕ್ಕೂ ಆಹ್ವಾನಿಸಲಾಗಿದ್ದು, ಅನಿವಾರ್ಯ ಕಾರಣಕ್ಕೆ ಬಿಗ್ ಬಿ ಸಮಾರಂಭಕ್ಕೆ ಬರಲು ಸಾಧ್ಯವಾಗಲಿಲ್ಲ.

ಇದೆ ವಿಚಾರವಾಗಿ ಬಿಗ್ ಬಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಅಪ್ಪು ನಮ್ಮೊಂದಿಗೆ ಇಲ್ಲಾ ಎಂದು ನೆನಪಿಸಿಕೊಳ್ಳುವುದೇ ಕಷ್ಟ ಎಂದು ಭಾವುಕರಾಗಿ ಟ್ವಿಟ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಅನೇಕ ದಿನಗಳಿಂದ ಪುನೀತ್ ಬಗೆಗೆ ಬರೆಯುತ್ತಿದ್ದು, ಬಿಗ್ ಬಿ ಅಪ್ಪುವನ್ನ ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ನಾನು ಪುನೀತ್ ಅವರನ್ನ ಸಣ್ಣ ಮಗುವಾಗಿರುವಾಗಲೇ ಮೊದಲು ನೋಡಿದ್ದು, ಪುನೀತ್ ಸದಾ ನಗು ಮುಖದವರಾಗಿದ್ದು, ಅವರ ನಗು ನಮ್ಮನ್ನ ಸದಾ ಸೆಳೆಯುತ್ತಿತ್ತು.
ಅನೇಕ ಸಮಾರಂಭಗಳಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿದ್ದೇವು,ಸದಾ ಅವರು ನಗುತ್ತಾ ಮಾತನಾಡಿಸುವ ರೀತಿ ನನಗೆ ತುಂಬಾ ಸಂತೋಷ ನೀಡುತ್ತಿತ್ತು. ಅಪಾರ ಅಭಿಮಾನಿಗಳನ್ನು ಹೊಂದಿರುವ ಪುನೀತ್ ನಮ್ಮೊಂದಿಗೆ ಇಲ್ಲದಿರುವುದು ಸಾಕಷ್ಟು ಬೇಸರ ತಂದಿದೆ. ಪುನೀತ್ ತಮ್ಮ ಗಂಧದ ಗುಡಿ ಚಿತ್ರದಲ್ಲಿ ಪುನೀತ್ ನಿಜ ಜೀವನದಲ್ಲಿರುವ ರೀತಿ ಕಾಣಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ಗಂಧದ ಗುಡಿ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಕರ್ನಾಟಕ ರಾಜ್ಯದ ವನ್ಯ ಸಂಕುಲದ ವೈಭವವನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ.
ಈ ಚಿತ್ರವನ್ನು ಕಡ್ಡಾಯವಾಗಿ ಮಕ್ಕಳಿಗೆ ತೋರಿಸಿ ಎಂದು ಬರೆದಿದ್ದು, ಅಪ್ಪು ನೆನಪು ನಮ್ಮ ಜೊತೆ ಸದಾ ಇರುತ್ತದೆ ಎಂದು ಹೇಳಿಕೊಂಡಿದ್ದಾರೆ. ಈ ಕುರಿತ ಬಿಗ್ ಬಿ ಪೋಸ್ಟ್ ನ್ನು ಅಶ್ವಿನಿ ಪುನೀತ್ ರಾಜಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಧನ್ಯವಾದ ತಿಳಿಸಿದ್ದಾರೆ. ಪುನೀತ್ ರಾಜಕುಮಾರ್ ಹಾಗೂ ಬಿಗ್ ಬಿ ನಡುವೆ ಉತ್ತಮ ಸ್ನೇಹ ಸಂಬಂಧವಿತ್ತು, ರಾಜ್ ಕುಮಾರ್ ಕುಟುಂಬಕ್ಕೆ ಆಪ್ತರ ಪೈಕಿ ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಒಬ್ಬರಾಗಿದ್ದು, ಇದಕ್ಕೆ ಉತ್ತಮ ನಿದರ್ಶನ ಎಂಬಂತೆ ಅಮಿತಾಬ್ ಬಚ್ಚನ್ ನೆಡೆಸಿಕೊಡುತ್ತಿದ್ದ ಕೌನ್ ಬನೇಗಾ ಕರೋಡ್ ಪತಿ ಕನ್ನಡ ಅವತರಣಿಕೆ ಕನ್ನಡದ ಕೋಟ್ಯಧಿಪತಿಯನ್ನು ಪುನೀತ್ ರಾಜ್ ಕುಮಾರ್ ನಿರೂಪಣೆ ಮೂಲಕ ಸಾಗುತಿತ್ತು.
ಬಾಲಿವುಡ್ ಚಿತ್ರರಂಗ ಮಾತ್ರವಲ್ಲದೆ ಇಡೀ ದೇಶದ ಚಿತ್ರರಂಗ ಗಣ್ಯರು ಪುನೀತ್ ರಾಜ್ ಕುಮಾರ್ ಬಗ್ಗೆ ನೆನಪಿಸಿಕೊಳ್ಳುತ್ತಿದ್ದು, ಪುನೀತ್ ರಾಜಕುಮಾರ್ ನಮ್ಮೊಂದಿಗಿಲ್ಲ ಎನ್ನುವ ವಿಚಾರವನ್ನು ಇಂದಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಬಾಲಿವುಡ್ ಶ್ರೇಷ್ಠ ನಟ ಅಮಿತಾಬ್ ಬಚ್ಚನ್ ಅಪ್ಪು ಎಲ್ಲಿಗೂ ಹೋಗಿಲ್ಲ ನಮ್ಮೊಂದಿಗಿದ್ದಾರೆ, ಅವರ ಸಾಮಾಜಿಕ ಕೆಲಸಗಳೇ ನಮಗೆ ಪ್ರೇರಣೆ ಎನ್ನುವ ಮೂಲಕ ಭಾವುಕ ವಿಡಿಯೋ ಒಂದನ್ನ ಹಂಚಿಕೊಂಡಿದ್ದಾರೆ.