ನಟಿ ರಮ್ಯಾ ಅವರು 2 ದಶಕದಿಂದ ಅದೇ ಕ್ರೇಜ್ ಉಳಿಸಿಕೊಂಡಿರುವ ನಟಿ. 2003ರಲ್ಲಿ ಅಪ್ಪು ಅವರ ಅಭಿ ಸಿನಿಮಾದಿಂದ ಎಂಟ್ರಿ ಕೊಟ್ಟ ಅವರು, ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ದೊಡ್ಡ ಹೆಸರು ಮಾಡಿದರು. ರಾಜಕೀಯ ರಂಗಕ್ಕೂ ಎಂಟ್ರಿಯಾದ ರಮ್ಯಾ, ಈಗNeither ನಟನೆಯಲ್ಲೂ ರಾಜಕಾರಣದಲ್ಲೂ ಸಕ್ರಿಯರಾಗಿಲ್ಲ. ಆದರೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ, ರಮ್ಯಾ ಎಂಗೇಜ್ಮೆಂಟ್ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಅವರ ಕೈಯಲ್ಲಿರುವ ರಿಂಗ್ ಬಗ್ಗೆ ಹಲವಾರು ಊಹಾಪೋಹಗಳು ನಡೆಯುತ್ತಿವೆ. ಅವರು ನಿಜವಾಗಿಯೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ? ಈ ವಿಷಯಕ್ಕೆ ಸ್ಪಷ್ಟತೆ ಬರಬೇಕಾಗಿದೆ.
ನಟಿ ರಮ್ಯಾ ಅವರು ಸಿನಿಮಾದಲ್ಲಿ ನಟಿಸಿ ಬಹಳ ವರ್ಷಗಳಾಗಿವೆ. ಶಿವಣ್ಣ ಅವರ ಜೊತೆಗೆ ಆರ್ಯನ್ ಹಾಗೂ ನಾಗರಹಾವು ಸಿನಿಮಾಗಳಲ್ಲಿ ಅಭಿನಯಿಸಿದ್ದೇ ಕೊನೆಯದು. ಬಳಿಕ, ಅವರು ಹೊಸ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ರಾಜಕೀಯದಲ್ಲೂ ಗುರುತಿಸಿಕೊಂಡಿದ್ದ ರಮ್ಯಾ ಎಂಗೇಜ್ಮೆಂಟ್ ಸುದ್ದಿ ಇತ್ತೀಚೆಗೆ ವೈರಲ್ ಆಗಿದ್ದು, ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಕನ್ನಡ ಚಿತ್ರರಂಗಕ್ಕೆ ರಮ್ಯಾ ಕಂಬ್ಯಾಕ್ ಮಾಡುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದರೂ, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗಿತ್ತು. ಆದರೆ, ಅದು ಕೇವಲ ಪ್ರೊಮೋಷನ್ ಮಾತ್ರವಿದ್ದು, ರಮ್ಯಾ ಸ್ವತಃ ಅದನ್ನು ಖಂಡಿಸಿ ಕೇಸೂ ಹಾಕಿದ್ದರು.

ಇನ್ನು ಸ್ವಾತಿ ಮುತ್ತಿನ ಮಳೆಹನಿಯೇ ಸಿನಿಮಾದಲ್ಲಿ ಕೂಡ ರಮ್ಯಾ ಅವರೇ ನಟಿಸಬೇಕಿತ್ತು, ಆದರೆ ಅದರಿಂದಲೂ ದೂರ ಉಳಿದರು, ನಿರ್ಮಾಣದ ಜವಾಬ್ದಾರಿಯನ್ನು ಮಾತ್ರ್ ತೆಗೆದುಕೊಂಡರು ರಮ್ಯಾ. ಇನ್ನು ಡಾಲಿ ಧನಂಜಯ್ ಅವರ ಜೊತೆಗೆ ಉತ್ತರಕಾಂಡ ಸಿನಿಮಾದಲ್ಲಿ ರಮ್ಯಾ ನಟಿಸುತ್ತಾರೆ ಎನ್ನಲಾಯಿತು, ಆದರೆ ಕಾರಣಾಂತರಗಳಿಂದ ಆ ಪ್ರಾಜೆಕ್ಟ್ ಇಂದಲೂ ರಂಹ ದೂರವೇ ಉಳಿದಿದ್ದಾರೆ. ಒಟ್ಟಿನಲ್ಲಿ ರಮ್ಯಾ ನಟನೆಗೆ ಕಂಬ್ಯಾಕ್ ಮಾಡುತ್ತಾರೆ ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ನಿರಾಶೆಯೇ ಆಗಿದೆ. ಸ್ವಲ್ಪ ಸಮಯ ಸಾರ್ವಜನಿಕ ಜೀವನದಿಂದ ಬ್ರೇಕ್ ತೆಗೆದುಕೊಂಡಿದ್ದ ರಮ್ಯಾ ಅವರು ಇದೀಗ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಮೊನ್ನೆ ನಡೆದ ನಟಿ ರಕ್ಷಿತಾ ಅವರ ತಮ್ಮನ ಮದುವೆ ರಿಸೆಪ್ಶನ್ ಗೆ ರಮ್ಯಾ ಅವರು ಬಂದಿದ್ದರು, ಬಹಳ ವರ್ಷಗಳ ನಂತರ ರಮ್ಯಾ ಮತ್ತು ರಕ್ಷಿತಾ ಇಬ್ಬರನ್ನು ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದರು.

ಆದರೆ ಅಲ್ಲಿ ಎಲ್ಲರ ಗಮನ ಸೆಳೆದಿದ್ದು ಮತ್ತೊಂದು ವಿಷಯ. ಅದು ರಮ್ಯಾ ಅವರ ಕೈಯಲ್ಲಿದ್ದ ಉಂಗುರ. ಹೌದು, ತಮ್ಮ ಕೈಯಲ್ಲಿರುವ ಉಂಗುರವನ್ನು ರಕ್ಷಿತಾ ಅವರಿಗೆ ರಮ್ಯಾ ಅವರು ತೋರಿಸಿದಾಗ ರಕ್ಷಿತಾ ಆಶ್ಚರ್ಯ ಪಟ್ಟರು, ಹಾಗೆಯೇ ಈ ಉಂಗುರ ರಮ್ಯಾ ಅವರ ಕೈಯಲ್ಲಿ ಎದ್ದು ಕಾಣುತ್ತಿತ್ತು, ಅದರಿಂದ ಎಲ್ಲರೂ ಸಹ ರಮ್ಯಾ ಅವರು ಸದ್ದಿಲ್ಲದೇ ಎಂಗೇಜ್ ಆಗಿದ್ದಾರಾ ಎಂದುಕೊಂಡರು. ಏನು ಈ ರಿಂಗ್ ರಹಸ್ಯ? ರಮ್ಯಾ ಅವರು ಯಾರಿಗೂ ಹೇಳದೆ ಎಂಗೇಜ್ ಆದ್ರ? ಎಂಗೇಜ್ ಆಗಿರುವ ವಿಷಯವನ್ನು ಯಾಕೆ ಮುಚ್ಚಿಡಬೇಕಿತ್ತು? ನಿಜಕ್ಕೂ ಎಂಗೇಜ್ ಆಗಿದ್ದಾರಾ ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿದೆ. ಇದಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಸರಿಯಾದ ಉತ್ತರ ಕೊಟ್ಟಿಲ್ಲ. ಮಾಧ್ಯಮದವರು ಕೇಳಿದಾಗ ಜಾರಿಕೊಂಡಿದ್ದಾರೆ..

ಮದುವೆ ಬಗ್ಗೆ ಕೇಳಿದ್ದಕ್ಕೆ ನಾಚಿಕೊಂಡಿರುವ ರಮ್ಯಾ ಅವರು, ಇನ್ನು ಅದರ ಬಗ್ಗೆ ಯೋಚನೆ ಮಾಡಿಲ್ಲ ಎಂದು ಹೇಳಿ, ಸಿಹಿ ಊಟ ಹಾಕಿಸೋಕೆ ಮದುವೆ ಆಗಲೇಬೇಕಾ? ಹಾಗೆ ಹಾಕಿಸಿದ್ರೆ ಅಗೋದಿಲ್ವಾ ಎಂದಿದ್ದಾರೆ. ನಂತರ ವೈಯಕ್ತಿಕ ವಿಷಯದ ಬಗ್ಗೆ ಪ್ರಶ್ನೆ ಕೇಳಬೇಡಿ ಎಂದು ಹೇಳಿ, ಹೊರಟು ಹೋಗಿದ್ದಾರೆ. ರಮ್ಯಾ ಅವರ ಸ್ವಭಾವ ನಮಗೆಲ್ಲಾ ಗೊತ್ತೇ ಇದೆ. ಅವರು ತಮ್ಮ ಮನಸ್ಸಿಗೆ ಬರೋದನ್ನ ಬಂದ ಹಾಗೆ ಹೇಳೋರು, ಯಾವುದರ ಬಗ್ಗೆಯೂ ಯಾರ ಬಗ್ಗೆಯೂ ತಲೆ ಕೆಡಿಸಿಕೊಂಡವರಲ್ಲ. ಈಗ ಮದುವೆ ವಿಷಯದ ಬಗ್ಗೆ ಇಷ್ಟು ನಾಚಿಕೆ ಪಡುತ್ತಿರುವುದು ಇದೆಲ್ಲವನ್ನು ನೋಡಿದರೆ, ಏನೋ ಒಂದು ವಿಷಯ ಸೀಕ್ರೆಟ್ ಆಗಿದೆ ಎಂದು ಗೊತ್ತಾಗುತ್ತಿದೆ. ರಮ್ಯಾ ಅವರು ನಿಜಕ್ಕೂ ಎಂಗೇಜ್ ಆಗಿದ್ದಾರಾ?ಈ ವಿಷಯವನ್ನು ತಿಳಿದುಕೊಳ್ಳಬೇಕಿದೆ..