ಈ ತಿಂಗಳ ಆರಂಭದಲ್ಲಿ ಆಪಲ್ ಕಂಪನಿಯು ತನ್ನ ಹೊಸ ಐ ಪ್ಯಾಡ್ ಮಾದರಿಗಳಾದ ಐ ಪ್ಯಾಡ್ ಪ್ರೊ ಹಾಗೂ ಐ ಪ್ಯಾಡ್(9th Gen) ಅನ್ನು ಅನಾವರಣಗೊಳಿಸಿದೆ. ಹೊಸ ಮಾದರಿಗಳಾದ ಐಪ್ಯಾಡ್ ಪ್ರೊ(M2) ಹಾಗೂ ಐ ಪ್ಯಾಡ್(10th Gen) ಸುಧಾರಿತ ವಿಶೇಷಣೆಗಳೊಂದಿಗೆ ಅನೇಕ ಹೊಸ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಎರಡು ಮಾದರಿಗಳು ಇತ್ತೀಚಿನ ಐಪ್ಯಾಡ್ OS16 ಅನ್ನು ಹೋಲುವಂತಹ, ದೊಡ್ಡ ಪರದೆಯ ಟ್ಯಾಬ್ಲೆಟ್ ಅನುಭವವನ್ನು ಹೆಚ್ಚಿಸಲು ಉತ್ತಮ ವೈಶಿಷ್ಟ್ಯಗಳನ್ನು ಒದಗಿಸುತ್ತದೆ. ಭಾರತದಲ್ಲಿ ಈ ಎರಡು ಐಪ್ಯಾಡ್ ಗಳನ್ನು ಆನ್ಲೈನ್ ಹಾಗೂ ಆಫ್ಲೈನ್ ಗಳಲ್ಲಿ ಈಗ ಖರೀದಿಸಬಹುದಾಗಿದೆ.

ಇದರ ವೈಶಿಷ್ಟ್ಯತೆಗಳೆಂದರೆ ಆಪಲ್ ಐಪ್ಯಾಡ್ ಪ್ರೊ(M2) 11ಹಾಗೂ 12.9 ಇಂಚಿನಲ್ಲಿ ಲಭ್ಯವಿದೆ. ಇವೆರಡೂ 10- ಕೋರ್ GPU ಜೊತೆಗೆ 120 Hz ಪ್ರಮೋಷನ್ ಸಪೋರ್ಟ್ ನೊಂದಿಗೆ ಆಪಲ್M2 ಆಕ್ಟಾ- ಕೋರ್ ಚಿಪ್ ಸೆಟ್ ನಿಂದ ಚಾಲಿತವಾಗಿದ್ದು ಇದನ್ನು 512 GB RAM ಹಾಗೂ 16 GB RAM ವರೆಗೆ ಲಭ್ಯವಿದೆ.

ಆಪಲ್ ಐಪ್ಯಾಡ್ ನ ಬೆಲೆಯ ಬಗ್ಗೆ ಹೇಳುವುದಾದರೆ 11 ಇಂಚಿನ ಆಪಲ್ ಐ ಪ್ಯಾಡ್ ಪ್ರೊ (M2) 81,900 ರಿಂದ ಪ್ರಾರಂಭವಾಗುತ್ತದೆ. ಹಾಗೆಯೇ 12.9 ಇಂಚಿನ ಐ ಪ್ಯಾಡ್ ಪ್ರೊ(M2) ರೂ 1,12,900 ರಿಂದ ಪ್ರಾರಂಭವಾಗುತ್ತದೆ.
- ಐಪ್ಯಾಡ್ ಪ್ರೊ(M2) 11 ಇಂಚಿನ (ವೈಫೈ) 128 GBಯ ಬೆಲೆ 81,900 ರೂ.
- ಐಪ್ಯಾಡ್ ಪ್ರೊ(M2) 11 ಇಂಚಿನ (ಸೆಲ್ಯುಲರ್) 128 GB ಯ ಬೆಲೆ 96,900 ರೂ.
3.ಐಪ್ಯಾಡ್ ಪ್ರೊ(M2) 11 ಇಂಚಿನ (ವೈಫೈ) 256 GB ಯ ಬೆಲೆ 91,900 ರೂ.
4.ಐಪ್ಯಾಡ್ ಪ್ರೊ(M2) 11 ಇಂಚಿನ (ಸೆಲ್ಯುಲರ್) 128 ವೇರಿಯೆಂಟ್ ನ ಬೆಲೆ 1,06,900 ರೂ. 5. ಐ ಪ್ಯಾಡ್ ಪ್ರೊ 11 ಇಂಚಿನ (ವೈಫೈ) 512 GB ಯ ಬೆಲೆ 1,11,900 ರೂ. - ಐ ಪ್ಯಾಡ್ ಪ್ರೊ 11 ಇಂಚಿನ (ಸೆಲ್ಯುಲರ್) 512 GB ಯ ಬೆಲೆ 1,26,900 ರೂ.
- ಐ ಪ್ಯಾಡ್ ಪ್ರೊ (M2) 12.9 ಇಂಚಿನ (ವೈಫೈ) 128 GB ಯ ಬೆಲೆ 1,12,900 ರೂ.
- ಐ ಪ್ಯಾಡ್ ಪ್ರೊ (M2) 12.9 ಇಂಚಿನ (ಸೆಲ್ಯುಲರ್)128 GB ಯ ಬೆಲೆ 1,27,900 ರೂ.
- ಐ ಪ್ಯಾಡ್ ಪ್ರೊ (M2) 12.9 ಇಂಚಿನ (ವೈಫೈ) 256 GB ಯ ಬೆಲೆ 1,22,900 ರೂ.
- ಐ ಪ್ಯಾಡ್ ಪ್ರೊ (M2) 12.9 ಇಂಚಿನ (ಸೆಲ್ಯುಲರ್) 256 GB ಯ ಬೆಲೆ 1,37,900 ರೂ.
- ಐ ಪ್ಯಾಡ್ ಪ್ರೊ (M2) 12.9 ಇಂಚಿನ (ವೈಫೈ) 512 GB ಯ ಬೆಲೆ 1,42,900 ರೂ.
- ಐ ಪ್ಯಾಡ್ ಪ್ರೊ (M2) 12.9 ಇಂಚಿನ (ಸೆಲ್ಯುಲರ್) 512 GB ಯ ಬೆಲೆ 1,57,900 ರೂ.
ಪ್ರೊ 1 TB ಹಾಗೂ 2 TB ಸ್ಟೋರೇಜ್ ಆಯ್ಕೆಗಳಲ್ಲಿ 1,50,000 ಇಂಥ ಹೆಚ್ಚಿನ ಬೆಲೆಯಲ್ಲಿ ಸಿಗುತ್ತದೆ.
ಐಪ್ಯಾಡ್ (10th Gen) ನ ಬೆಲೆ- - ನ್ಯೂ ಐ ಪ್ಯಾಡ್ (ವೈಫೈ) 64 GB ಯ ಬೆಲೆ 44,900 ರೂ.
- ನ್ಯೂ ಐ ಪ್ಯಾಡ್ (ಸೆಲ್ಯುಲರ್) 64 GB ಯ ಬೆಲೆ 59,900 ರೂ.
- ನ್ಯೂ ಐ ಪ್ಯಾಡ್ (ವೈಫೈ) 256 GB ಯ ಬೆಲೆ 59,900 ರೂ.
- ನ್ಯೂ ಐ ಪ್ಯಾಡ್ (ಸೆಲ್ಯುಲರ್) 256 GB ಯ ಬೆಲೆ 74,900 ರೂ.
ಐ ಪ್ಯಾಡ್ ಪ್ರೊ(M2) ಹಾಗೂ ಐಪ್ಯಾಡ್(10th Gen) ಎರಡೂ ಆಪಲ್ ಇಂಡಿಯಾ ವೆಬ್ಸೈಟ್ ಅಮೆಜಾನ್ ಡಾಟ್ ಇನ್ ನಲ್ಲಿ ಲಭ್ಯವಿದೆ.
ಐ ಪ್ಯಾಡ್ ಪ್ರೊನಲ್ಲಿ 12 MP ಯ ಮೇನ್ ಲೆನ್ಸ್ ಹಾಗೂ 10 MP ಯ ಅಲ್ಟ್ರಾ ವೈಡ್ ಲೆನ್ಸ್ ಗಳಿವೆ. ಇದು LIDAR ಸಪೋರ್ಟನ್ನು ಸಹ ಹೊಂದಿದೆ. ಮುಂಭಾಗದಲ್ಲಿ ಸೆಲ್ಫಿ ಹಾಗೂ ವಿಡಿಯೋ ಚಾಟ್ ಗಳಿಗಾಗಿ 12 MP ಯ ಸೆನ್ಸಾರ್ ಅನ್ನು ಹೊಂದಿದೆ. ಹಾಗೂ ಇದು 5ಜಿ ಹಾಗೂ ವೈಫೈ 6E ಯನ್ನು ಸಪೋರ್ಟ್ ಮಾಡುತ್ತದೆ.
ಈ ಆಪಲ್ A14 ಬಯೋನಿಕ್ ಚಿಪ್ ಸೆಟ್ ನಿಂದ ಚಾಲಿತವಾಗಿದೆ. ಆಪಲ್ ಐಫೋನ್ 12 ಶ್ರೇಣಿಯ ಅದೇ ಚಿಪ್ ಸೆಟ್ ಆಗಿದೆ. ಹಿಂಭಾಗದಲ್ಲಿ ಒಂದು 12 MP ಕ್ಯಾಮರಾ ಹಾಗೂ ಮುಂಭಾಗ ದಲ್ಲಿ 12 MP ಸೆಲ್ಫಿ ಸ್ನ್ಯಾಪರ್ ಅನ್ನು ಹೊಂದಿದೆ.