ಯಾವುದೇ ಸ್ಥಳವಾದರೂ ಜನರು ದಿನ ಆರಂಭಿಸುವುದೇ ಒಂದು ಕಪ್ ಚಹಾ ಹೀರುವುದರೊಂದಿಗೆ. ಇನ್ನು ಸಂಜೆಯಾಗುತ್ತಿದ್ದಂತೆ ಮತ್ತೆ ಒಂದು ಕಪ್ ಚಹಾ ಬೇಕೆ ಬೇಕು. ನಮ್ಮ ದೇಶದಲ್ಲಿ ಏನಾದರೂ ವಿಷಯಗಳನ್ನು ಚರ್ಚಿಸಬೇಕೆಂದರೆ ಅಥವಾ ಸಣ್ಣ ತಲೆನೋವು ಬಂತೆಂದರೆ ಚಹಾ ಕೇಳುತ್ತಾರೆ. ಅಲ್ಲಿಗೆ ಔಷಧಿಯಾಗಿಯೂ, ಚಿಕ್ಕ ಪುಟ್ಟ ಕೆಲಸ ಮಾಡಬೇಕೆಂದರೂ ಚಹಾ ಬೇಕು ಅಂತಾಯಿತಲ್ಲ. ಹೌದು, ಬಹುತೇಕ ಜನರು ತಲೆನೋವು ಬಂದಾಗ ಔಷಧಿ ತೆಗೆದುಕೊಳ್ಳುವುದಿಲ್ಲ. ಆದರೆ ಮೊದಲು ಚಹಾ ಕುಡಿಯಲು ಬಯಸುತ್ತಾರೆ. ನೀವು ಚಹಾ ಪ್ರಿಯರಾಗಿದ್ದರೆ ಮನೆಯ ಹೊರತಾಗಿ, ವಿವಿಧ ರೆಸ್ಟೋರೆಂಟ್ಗಳು ಮತ್ತು ಹೋಟೆಲ್ಗಳಲ್ಲಿ ಚಹಾವನ್ನು ಕುಡಿಯಲು ಇಷ್ಟಪಡುತ್ತೀರಿ. ನಾವು ಕುಡಿಯುವ ಟೀ ಕಡಿಮೆಯೆಂದರೆ 10 ರೂ.ಗೆ ಸಿಗುತ್ತದೆ..ಹೆಚ್ಚೆಂದರೆ ದುಬಾರಿ ಹೋಟೆಲ್ಗಳಲ್ಲಿ 100ರೂ.ಗೆ ಸಿಗುತ್ತದೆ. ಆದರೆ ನಿಮ್ಮ ಜೇಬನ್ನೇ ಖಾಲಿ ಮಾಡುವಂತಹ ಚಹಾವನ್ನು ನೀವು ಎಂದಾದರೂ ಕುಡಿದಿದ್ದೀರಾ..?.
ಎಲ್ಲಿ ದೊರೆಯಲಿದೆ ಈ ದುಬಾರಿ ಚಹಾ?
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಯುವತಿಯೊಬ್ಬಳು ಕೆಫೆಯಲ್ಲಿ ಕುಳಿತು ಚಹಾ ಸೇವಿಸುತ್ತಿರುವ ದೃಶ್ಯ ಕಂಡು ಬಂದಿದೆ. ಅವಳು ಕುಡಿಯುತ್ತಿರುವ ಚಹಾದ ಹೆಸರು ‘ಗೋಲ್ಡ್ ಕರಕ್’ ಮತ್ತು ಅದರ ಬೆಲೆ 5000 AED. ಭಾರತೀಯ ಕರೆನ್ಸಿಗೆ ಪರಿವರ್ತಿಸಿದಾಗ 1 ಲಕ್ಷದ 14 ಸಾವಿರದ 750 ರೂ. ಹೌದು, ಯುವತಿ ಚಹಾದ ಬಗ್ಗೆ ಮಾತನಾಡುತ್ತಿರುವ ಕೆಫೆಯ ಹೆಸರು ಬೋಹೊ ಕೆಫೆ. ಆ ಚಹಾವನ್ನು ಬೆಳ್ಳಿಯ ಲೋಟಗಳಲ್ಲಿ ಜನರಿಗೆ ನೀಡಲಾಗುತ್ತದೆ. ಚಹಾವು ತುಂಬಾ ವಿಭಿನ್ನವಾಗಿದೆ. ಏಕೆಂದರೆ ಚಹಾದ ಮೇಲ್ಭಾಗದಲ್ಲಿ 24 ಕ್ಯಾರೆಟ್ ಚಿನ್ನದ ಹಾಳೆಯಿದೆ. ಟೀ ಕುಡಿದ ನಂತರ ಬೆಳ್ಳಿಯ ಲೋಟ ತಟ್ಟೆಯನ್ನೂ ತೆಗೆದುಕೊಂಡು ಹೋಗಬಹುದು ಎಂದು ಯುವತಿ ಹೇಳಿದ್ದಾಳೆ.
ನೀವು ವೀಕ್ಷಿಸಿದ ವೀಡಿಯೊವನ್ನು gulfbuzz ಹೆಸರಿನ ಖಾತೆಯಿಂದ Instagram ನಲ್ಲಿ ಪೋಸ್ಟ್ ಮಾಡಲಾಗಿದೆ. ಸುದ್ದಿ ಬರೆಯುವ ತನಕ, ಅನೇಕ ಜನರು ವಿಡಿಯೋವನ್ನು ವೀಕ್ಷಿಸಿದ್ದಾರೆ. ವಿಡಿಯೋ ನೋಡಿ ಸುಮ್ಮನಿರುತ್ತಾರ..ತರಹೇವಾರಿ ಕಾಮೆಂಟ್ಗಳನ್ನು ಮಾಡಿದ್ದಾರೆ. ಚಹಾದ ಬಗ್ಗೆ ತಿಳಿದ ನಂತರ ಬಳಕೆದಾರರು “ನಾನು ಚಹಾ ಕುಡಿಯಲು EMI ತೆಗೆದುಕೊಳ್ಳಬೇಕಾಗುತ್ತದೆ” ಎಂದರೆ ಮತ್ತೋರ್ವ ಬಳಕೆದಾರರು “ಇದರಿಂದ ಹಣ ವ್ಯರ್ಥ” ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. ನಿಮಗೇನು ಅನಿಸಿತು ಎಂಬುದನ್ನು ನೀವಿಲ್ಲಿ ಶೇರ್ ಮಾಡಬಹುದು.