ಕಿರುತೆರೆಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಚೈತ್ರಾ ವಾಸುದೇವನ್ ಅವರು ಇದೀಗ ಎರಡನೇ ಮದುವೆಗೆ ರೆಡಿ ಆಗಿದ್ದಾರೆ. ಪ್ಯಾರಿಸ್ ನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿ, ಆ ಫೋಟೋಸ್ ಶೇರ್ ಮಾಡಿ, ಮದುವೆ ಹಾಗೂ ಎಂಗೇಜ್ ಆಗಿರುವ ವಿಚಾರ ರಿವೀಲ್ ಮಾಡಿದ್ದರು ಚೈತ್ರಾ. ಈ ವಿಷಯ ಎಲ್ಲರಿಗೂ ಶಾಕ್ ತಂದಿತ್ತು, ಚೈತ್ರಾ ವಾಸುದೇವನ್ ಅವರು ಲವ್ ನಲ್ಲಿ ಇದ್ದಾರೆ ಎನ್ನುವ ಬಗ್ಗೆ ಒಂದು ಸಣ್ಣ ಸುಳಿವನ್ನು ಸಹ ಕೊಟ್ಟಿರಲಿಲ್ಲ. ಇವರಿಬ್ಬರ ನಡುವೆ ಲವ್ ಶುರುವಾಗಿದ್ದು ಹೇಗೆ? ಮದುವೆ ಯಾವಾಗ? ಪ್ಯಾರಿಸ್ ನಲ್ಲೇ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿದ್ದು ಯಾಕೆ? ಈ ಎಲ್ಲಾ ಪ್ರಶ್ನೆ ಜನರಲ್ಲಿತ್ತು, ಅದಕ್ಕೆಲ್ಲಾ ಈಗ ಚೈತ್ರಾ ವಾಸುದೇವನ್ ಅವರು ಉತ್ತರ ಕೊಟ್ಟಿದ್ದಾರೆ. ಸಂದರ್ಶನ ಒಂದರಲ್ಲಿ ರಿವೀಲ್ ಮಾಡಿದ್ದಾರೆ. ಫುಲ್ ಡೀಟೇಲ್ಸ್ ತಿಳಿಯೋಣ ಬನ್ನಿ..
ಚೈತ್ರಾ ವಾಸುದೇವನ್ ಅವರು ಗುರುತಿಸಿಕೊಂಡಿದ್ದು ನಿರೂಪಕಿಯಾಗಿ, ಅರಳು ಹುರಿದ ಹಾಗೆ ಮಾತನಾಡುವ ಚೈತ್ರಾ ಅವರು ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ. ಹಲವು ಶೋಗಳನ್ನು ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಜನಪ್ರಿಯತೆ ಗಳಿಸಿದ್ದ ಚೈತ್ರಾ ಅವರು ಈಗ ಮದುವೆಗೆ ತಯಾರಾಗಿದ್ದಾರೆ. ಜಗದೀಪ್ ಅವರ ಜೊತೆಗೆ ಹಸೆಮಣೆ ಏರೋದಕ್ಕೆ ಸಿದ್ಧವಾಗಿದ್ದಾರೆ. ಇತ್ತೀಚೆಗೆ ಪ್ಯಾರಿಸ್ ನಲ್ಲಿ ಕನಸಿನ ಹಾಗೆ ನಡೆದಿದೆ ಇವರ ಪ್ರೀ ವೆಡ್ಡಿಂಗ್ ಫೋಟೋಶೂಟ್. ಡ್ರೀಮ್ ನಿಜ ಆಗುತ್ತಿರುವ ಹಾಗೆ, ಪ್ರಿನ್ಸೆಸ್ ರೀತಿಯಲ್ಲೇ ಚೈತ್ರಾ ಅವರ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮೂಡಿಬಂದಿದೆ ಎಂದು ಹೇಳಿದರೆ ತಪ್ಪಲ್ಲ. ಇವರ ಮದುವೆ ಸುದ್ದಿ ಕೇಳಿ ಎಲ್ಲರೂ ಸಹ ಚೈತ್ರಾ ಅವರಿಗೆ ಒಳ್ಳೆದಾಗ್ಲಿ ಎಂದು ವಿಶ್ ಮಾಡಿದ್ದಾರೆ. ಇವರ ಲವ್ ಸ್ಟೋರಿ ಸಹ ಅಷ್ಟೇ ಸ್ಪೆಷಲ್ ಆಗಿದೆ.
ನ್ಯಾಷನಲ್ ಟಿವಿ ಚಾನೆಲ್ ಗೆ ನೀಡಿರುವ ಸಂದರ್ಶನದಲ್ಲಿ ಚೈತ್ರಾ ವಾಸುದೇವನ್ ಅವರು ಮಾತನಾಡಿದ್ದು, ತಮ್ಮ ಲವ್ ಸ್ಟೋರಿ ರಿವೀಲ್ ಮಾಡಿದ್ದಾರೆ. ನಿರೂಪಣೆಯ ಜೊತೆಗೆ ಚೈತ್ರಾ ಅವರು ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿ ನಡೆಸುತ್ತಿದ್ದಾರೆ, ಅಲ್ಲಿಗೆ ತಮ್ಮ ಫ್ರೆಂಡ್ ಮಗನ ಬರ್ತ್ ಡೇ ಸೆಲೆಬ್ರೇಷನ್ ಈವೆಂಟ್ ಮಾಡಿಸುವ ಕೆಲಸಕ್ಕಾಗಿ ಬಂದವರೆ ಜಗದೀಪ್. ಅವರ ಫ್ರೆಂಡ್ ಹಾಗೂ ಅವರ ಪತ್ನಿ ಮಗುವನ್ನು ನೋಡಿಕೊಳ್ಳಬೇಕಿದ್ದ ಕಾರಣ, ಬರ್ತ್ ಡೇ ಈವೆಂಟ್ ಜವಾಬ್ದಾರಿ ಜಗದೀಪ್ ಅವರಿಗೆ ಕೊಟ್ಟಿದ್ದರಂತೆ. ಈವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಗಾಗಿ ಬಹಳ ಹುಡುಕಿ ನಂತರ ಚೈತ್ರಾ ಅವರ ಕಂಪನಿಗೆ ಬಂದರಂತೆ ಜಗದೀಪ್. ಆ ಈವೆಂಟ್ ವಿಚಾರವಾಗಿ ಮಾತುಕತೆ ಶುರುವಾಗಿ, ಪರಿಚಯ ಮುಂದುವರೆದಿದೆ..
ಮುಂದಿನ ದಿನಗಳಲ್ಲಿ ಇಬ್ಬರು ಹೆಚ್ಚು ಮಾತಾನಾಡುವುದಕ್ಕೆ ಶುರು ಮಾಡಿ, ಒಂದೇ ಜಿಮ್, ಒಂದೇ ಕಾಲೇಜ್ ಎಂದು ಗೊತ್ತಾಗಿದೆ. ಇಬ್ಬರ ಅಭಿರುಚಿ ಕೂಡ ಒಂದೇ ಎಂದು ಅರ್ಥವಾಯಿತಂತೆ. ಬಳಿಕ ಜಗದೀಪ್ ಅವರು ನೇರವಾಗಿಯೇ ಮದುವೆ ಆಗುತ್ತೀಯಾ ಎಂದು ಪ್ರೊಪೋಸ್ ಮಾಡಿದರಂತೆ. ಆದರೆ ಚೈತ್ರಾ ಅವರು ತಕ್ಷಣವೇ ಒಪ್ಪಿಗೆ ಕೊಡದೇ, ಸ್ವಲ್ಪ ಟೈಮ್ ಬೇಕು ಎಂದು ಕೇಳಿದರಂತೆ. ನಂತರ ಜಗದೀಪ್ ಅವರು ಚೈತ್ರಾ ಅವರ ತಂದೆ ತಾಯಿಯನ್ನು ಭೇಟಿ ಮಾಡಿ, ನಿಮ್ಮ ಮಗಳನ್ನು ಮದುವೆ ಮಾಡಿಕೊಡಿ ಎಂದು ಕೇಳಿದರಂತೆ. ಚೈತ್ರಾ ಅವರ ತಂದೆ ತಾಯಿಗೆ ಜಗದೀಪ್ ಅವರ ನಡೆನುಡಿ ಇದೆಲ್ಲವೂ ತುಂಬಾ ಇಷ್ಟವಾಗಿ, ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟರಂತೆ. ಜಗದೀಪ್ ತುಂಬಾ ಒಳ್ಳೆ ಹುಡುಗ, ಕಷ್ಟಪಟ್ಟು ಬೆಳೆದು ಬಂದಿದ್ದಾರೆ ಎಂದು ಚೈತ್ರಾ ಅವರಿಗೆ ಸಹ ಇಷ್ಟವಾಯಿತಂತೆ.

ಚೈತ್ರಾ ಅವರು ಸಹ ಒಪ್ಪಿಗೆ ಕೊಟ್ಟು, ಮದುವೆ ಫಿಕ್ಸ್ ಆಗಿದೆ. ಮೊದಲೇ ಪ್ಯಾರಿಸ್ ಗೆ ಹೋಗೋದಕ್ಕೆ ಪ್ಲಾನ್ ಮಾಡಿದ್ದರಂತೆ ಚೈತ್ರಾ. ಅದೇ ವೇಳೆಗೆ ಮದುವೆ ಕೂಡ ಫಿಕ್ಸ್ ಆಗಿದ್ದಕ್ಕೆ, ಜಗದೀಪ್ ಅವರನ್ನು ಜೊತೆಗೆ ಕರೆದುಕೊಂಡು ಹೋಗಿ ಅಲ್ಲೇ ಇಬ್ಬರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ವಿಚಾರವನ್ನು ತಿಳಿಸಿದ್ದಾರೆ ಚೈತ್ರಾ. ಜೀವನದಲ್ಲಿ ಕಹಿ ಘಟನೆಗಳು ನಡೆದೇ ನಡೆಯುತ್ತದೆ. ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು, ಬದುಕಲ್ಲಿ ಒಳ್ಳೆಯ ವ್ಯಕ್ತಿ ಬಂದಾಗ, ಒಂದು ಅವಕಾಶ ಕೊಟ್ಟು ಲೈಫ್ ಅನ್ನು ಇನ್ನು ಸುಂದರವಾಗಿಸಿಕೊಳ್ಳಬೇಕು ಎನ್ನುವುದಂತೂ ಸುಳ್ಳಲ್ಲ. ಚೈತ್ರಾ ವಾಸುದೇವನ್ ಅವರ ಹೊಸ ಜೀವನಕ್ಕೆ ಒಳ್ಳೆಯದಾಗಲಿ ಎಂದು ಹಾರೈಸೋಣ. ಶೀಘ್ರದಲ್ಲೇ ಈ ಹೊಸ ಜೋಡಿಯ ಮದುವೆ ಅದ್ಧೂರಿಯಾಗಿ ನಡೆಯಲಿದೆ. ಇವರ ಮುಂದಿನ ಜೀವನ ಚೆನ್ನಾಗಿರಲಿ.