ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ದೊಡ್ಡ ಮಟ್ಟಿನ ಸದ್ದು ಮಾಡುತ್ತಿದೆ. ಈಗಾಗಲೇ ಅನೇಕ ಜನರ ಸಿಡಿ ಮಾಡಿಸಲಾಗಿದೆ ಅನ್ನೋದೆ ದೊಡ್ಡ ವಿಚಾರ. ರಾಷ್ಟ್ರ ರಾಜಕಾರಣದಲ್ಲೂ ಈ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಕೇವಲ ಪಿಸು ಪಿಸು ಅಂತಿದ್ದ ಈ ವಿಚಾರ ಏಕಾಏಕಿ ಸದನದಲ್ಲಿ ಚರ್ಚೆ ಆಗಿದ್ದಂತೂ ಒಂದು ರೀತಿ ಆಶ್ಚರ್ಯವೇ ಸರಿ. ಇತ್ತ ಈ ವಿಚಾರ ಏಕಾಏಕಿ ಸದನದಲ್ಲಿ ಚರ್ಚೆಗೆ ಗ್ರಾಸ ಆಗಿದ್ದು, ಹೈ ಕಮಾಂಡ್ ನಾಯಕರ ಕೆಂಗಣ್ಣಿಗೂ ಗುರಿಯಾಗಿದೆ ಎನ್ನಲಾಗಿದೆ.
ಹನಿಟ್ರ್ಯಾಪ್ ಪ್ರಕರಣ ದೆಹಲಿ ಅಂಗಳಕ್ಕೆ ತಲುಪಿದೆಯಂತೆ. ಈ ವಿಚಾರ ಸದನದಲ್ಲಿ ಪ್ರಸ್ತಾಪ ಆಗಿದ್ದೇ ಹೈ ಕಮಾಂಡ್ ಅಷ್ಟೆ ಅಲ್ಲ ಸರ್ಕಾರ ಹಾಗೂ ಪಕ್ಷಕ್ಕೆ ತೀವ್ರ ಡ್ಯಾಮೇಜ್ ಆಗಿದೆ. ಇತ್ತ ಡ್ಯಾಮೇಜ್ ಆಗ್ತಾ ಇದೆ ಅಂತಿದ್ದಂಗೆ ಎಐಸಿಸಿ ವರಿಷ್ಠರು ಎಂಟ್ರಿ ಕೊಟ್ಟಿದ್ದಾರೆ. ಸಿಎಂ, ಡಿಸಿಎಂಗೆ ಫೋನ್ ಮಾಡಿ ಹನಿಟ್ರ್ಯಾಪ್ ಪ್ರಕರಣದ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಅದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಖರ್ಗೆ ಬೆಂಗಳೂರಿನಲ್ಲಿ ಕ್ಲೋಸ್ ಡೋರ್ ಮೀಟಿಂಗ್ ನಡೆಸಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣ ಆಗಿದೆ.

ಹೌದು, ಹನಿಟ್ರ್ಯಾಪ್ ಪ್ರಕರಣದಿಂದ ಕಾಂಗ್ರೆಸ್ ಹೈಕಮಾಂಡ್ ಗೆ ತೀವ್ರ ಮುಜುಗರವಾಗಿದೆ. ಹನಿಟ್ರ್ಯಾಪ್ ಗದ್ದಲ ಹೆಚ್ಚಾಗುತ್ತಿದ್ದಂತೆ ದೆಹಲಿ ನಾಯಕರು ಮಧ್ಯಪ್ರವೇಶ ಮಾಡಿದ್ದಾರೆ. ಯಾವಾಗ ಈ ವಿಚಾರ ವಿಪಕ್ಷಗಳ ಟೀಕೆಗೆ ಕಾರಣವಾಯ್ತಾ ಆಗಲೇ ಇದರ ಬಗ್ಗೆ ಕ್ರಮ ವಹಿಸಲೇಬೇಕು ಅಂತ ಮುಂದಾಗಿದೆ ಎಐಸಿಸಿ. ಹೀಗಾಗಿ ದಿಢೀರ್ ಅಂತಾ ಸಿಎಂ ನಿವಾಸ ಕಾವೇರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಕೊಟ್ಟು ಅರ್ಧ ಗಂಟೆ ಕ್ಲೋಸ್ ಡೋರ್ ಮೀಟಿಂಗ್ ನಡೆಸಿದರು.
ಈ ಕ್ಲೋಸ್ ಡೋರ್ ಮೀಟಿಂಗ್ ನಲ್ಲಿ ಉಭಯ ನಾಯಕರು ಹನಿಟ್ರ್ಯಾಪ್ ಪ್ರಕರಣದ ಬಗ್ಗೆ ಗಂಭೀರ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ವಿಚಾರದ ಇಂಚಿಂಚೂ ಮಾಹಿತಿಯನ್ನ ಸಿಎಂ ಸಿದ್ದರಾಮಯ್ಯ ಕೊಟ್ಟಿದ್ದಾರಂತೆ ಎನ್ನಲಾಗಿದೆ. ಯಾವಾಗ ಈ ಘಟನೆ ನಡೆಯಿತು. ಸದನದಲ್ಲಿ ಈ ವಿಚಾರ ಚರ್ಚೆ ಆಗಿದ್ದೇಗೆ..? ಈ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಹೀಗೆ ಅನೇಕ ವಿಚಾರ ಮಾತಾಡಿದ್ದಾರೆ ಎನ್ನಲಾಗಿದೆ.
ಇತ್ತ ಇನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡದೇ ಸದನದಲ್ಲಿ ಹನಿಟ್ರ್ಯಾಪ್ ವಿಚಾರ ಮಾತಾಡಿದ್ದಕ್ಕೆ ಹೈಕಮಾಂಡ್ ಗರಂ ಆಗಿದೆಯಂತೆ. ಸಿಎಂ, ಡಿಸಿಎಂಗೂ ವರಿಷ್ಟರು ಫೋನ್ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ಈ ಬೆಳವಣಿಗೆಗಳ ಮಧ್ಯೆ ಕೆ.ಎನ್ ರಾಜಣ್ಣ ಹಾಗೂ ಪುತ್ರ ರಾಜೇಂದ್ರ ದೆಹಲಿಗೆ ಹೋಗಿ ವರಿಷ್ಟರಿಗೆ ದೂರು ಕೊಡಲು ತೀರ್ಮಾನಿಸಿದ್ದಾರೆ. ಇನ್ನು ಎರಡು ಮೂರು ದಿನಗಳಲ್ಲಿ ದೆಹಲಿಗೆ ಹೋಗಿ, ಹೈಕಮಾಂಡ್ ಗೆ ಹನಿಟ್ರ್ಯಾಪ್ ಸಾಕ್ಷ್ಯ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಕತಾಳಿಯೋ ಅಥವಾ ಉದ್ಧೆಶ ಪೂರ್ವಕವೋ ಗೊತ್ತಿಲ್ಲ. ಇವರು ದೆಹಲಿಗೆ ಹೋಗ್ತಾರೆ ಅನ್ನೋ ಮೊದಲೇ ಡಿ.ಕೆ ಶಿವಕುಮಾರ್ ಅವ್ರು ದೆಹಲಿಗೆ ಹೋಗಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆ ಹೋಗ್ತಿದ್ದೇನೆ ಅಂತಾ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಅದು ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ. ಆದರೆ ಪ್ರಕರಣ ಗಂಭೀರತೆ ಇರೋದ್ರಿಂದ ಹಾಗೂ ಸರ್ಕಾರದ ಪ್ರಭಾವಿಯೊಬ್ಬರು ಇದನ್ನ ಮಾಡಿದ್ದಾರೆ ಅಂತ ಹೇಳಲಾಗ್ತಿರೋದ್ರಿಂದ ಪ್ರಕರಣದ ಬಗ್ಗೆ ಹೈಕಮಾಂಡ್ ಗೆ ಒಂದಷ್ಟು ವಿವರಣೆ ಕೊಡಲಿದ್ದಾರೆ ಅಂತಾ ಹೇಳಲಾಗ್ತಿದೆ.
ಒಟ್ನಲ್ಲಿ ಹನಿಟ್ರ್ಯಾಪ್ ಪ್ರಕರಣ ದೆಹಲಿ ನಾಯಕರನ್ನೂ ಮುಜುಗರಕ್ಕೀಡು ಮಾಡಿದೆ. ಈಗಾಗಲೇ ಭಾರೀ ಡ್ಯಾಮೇಜ್ ತಂದೊಡ್ದಿದ್ದು, ಪ್ರಕರಣವನ್ನ ಯಾವ್ ರೀತಿ ಮುಗಿಸಬೇಕು ಅಂತಾ ಹೈಕಮಾಂಡ್ ತಲೆ ಕೆಡಿಸಿಕೊಂಡಿದೆ. ಖರ್ಗೆ ಕೂಡ ಸಿಎಂ ಅವ್ರನ್ನ ಭೇಟಿ ಮಾಡಿ, ಗಂಭೀರ ಚರ್ಚೆ ನಡೆಸಿದ್ದಾರೆ. ಆಶ್ಚರ್ಯ ಎಂಬಂತೆ ಸರ್ಕಾರದ ಕಾಣದ ಕೈಗಳೇ ಇದನ್ನ ಮಾಡಿರೋದು ಅನ್ನೋ ಚರ್ಚೆ ಎಐಸಿಸಿಯನ್ನ ಮತ್ತಷ್ಟು ಚಿಂತೆಗೆ ದೂಡಿದೆ.