ಮನೆಯಲ್ಲೇ ಸಿಗೋ ಪದಾರ್ಥದಿಂದ ಹೇಗೆ ಬಿಸಿಲಿನಿಂದ ಆಗೋ ಟ್ಯಾನ್ ಅನ್ನ ರಿಮೂವ್ ಮಾಡೋದು ಅಂತ ಇಲ್ಲಿದೆ ನೋಡಿ.. ಬೇಸಿಗೆ ಬಂತು ಅಂದ್ರೆ ಎಲ್ಲರಿಗೂ ಒಂದೇ ಪ್ರಾಬ್ಲಮ್ ಅದು ಸನ್ ಟ್ಯಾನ್ ಆಗತ್ತೆ ಚರ್ಮ ಕಪ್ಪಾಗಿ ನೋಡಲು ಚೆನ್ನಾಗಿ ಕಾಣೋದಿಲ್ಲ ಅಂತ.. ಎಷ್ಟೇ ಉದ್ದ ಬಟ್ಟೆ ಹಾಕಿದರೂ ಕತ್ತು ಕೈಗಳು ಟ್ಯಾನ್ ಆಗಿ ಕೈಗಳು ಎರೆಡೆರೆಡು ಬಣ್ಣ ಕಾಣ್ತಾ ಇರತ್ತೆ.. ಸನ್ ಟ್ಯಾನ್ ರಿಮೂವ್ ಮಾಡೋದೇಗೆ.. ಮನೆಯಲ್ಲೇ ಸಿಗೋ ರೆಮಿಡಿ ಇಂದ ಸನ್ ಟ್ಯಾನ್ ಅನ್ನ ಸುಲಭವಾಗಿ ರಿಮೂವ್ ಮಾಡಬಹುದು. ಕತ್ತು ಮುಖ ಕೈ ಕಾಲು ಎಲ್ಲಿ ಬೇಕಿದ್ರು ಈ ರೆಮಿಡಿಯನ್ನು ಹಚ್ಚಿದ್ರೆ ಸನ್ ಟ್ಯಾನ್ ರಿಮೂವ್ ಮಾಡಬಹುದು.

ಮೊದಲು ಸ್ಕ್ರಬ್ ಮಾಡೋ ವಿಧಾನ ತಿಳಿಸುತ್ತೇವೆ ನೋಡಿ.. ಇದಕ್ಕೆ ಮುಖ್ಯವಾಗಿ ಬೇಕಿರೋದು ಕಾಫಿ ಪೌಡರ್.. ಒಂದು ಬೌಲ್ ಗೆ ಒಂದು ಸ್ಪೂನ್ ಕಾಫಿ ಪೌಡರ್ ಒಂದು ಸ್ಪೂನ್ ಸಕ್ಕರೆ ಒಂಡೆರೆಡ್ಯ್ ಸ್ಪೂನ್ ಆಲಿವ್ ಆಯಿಲ್. ಆಲಿವ್ ಆಯಿಲ್ ಇಲ್ಲವೆಂದರೆ ಕೊಬ್ಬರಿ ಎಣ್ಣೆಯನ್ನು ಬಳಸಬಹುದು.. ಇಷ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ರೆ ಸ್ಕ್ರಬ್ ರೆಡಿ… ಇದನ್ನು ನಿಮ್ಮ ಮುಖ ಹಾಗೂ ಕೈ ಕಾಲು ಗಳಿಗೆ ಹಚ್ಚಿ ಸ್ಕ್ರಬ್ ಮಾಡಬಹುದು.
ಈಗ ಫೇಸ್ ಪ್ಯಾಕ್ ಮಾಡೋ ವಿಧಾನ ಇಲ್ಲಿದೆ ನೋಡಿ..
ಒಂದು ಬೌಲ್ ಗೆ ಸ್ವಲ್ಪ ಅಕ್ಕಿ ಹಿಟ್ಟು.ಮ್ ಸ್ವಲ್ಪ ಕಾಫಿ ಪೌಡರ್ ಸ್ವಲ್ಪ ಜೇನು ತುಪ್ಪ.. ಸ್ವಲ್ಪ ಮೊಸರನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.. ಫೇಸ್ ಪ್ಯಾಕ್ ರೆಡಿ.. ಇದನ್ನು ಚೆನ್ನಾಗಿ ಮುಖಕ್ಕೆ ಹಚ್ಚಿ ನಂತರ ಅರ್ಧ ಗಂಟೆ ಬಳಿಕ ಸ್ಬಾನ ಮಾಡಿ. ಚರ್ಮದಲ್ಲಿ ಆದ ಬದಲಾವಣೆಯನ್ನು ನೀವೆ ನೋಡಬಹುದು.. ಸ್ಕ್ರಬ್ ಹಾಗೂ ಫೇಸ್ ಪ್ಯಾಕ್ ಮಾಡೋ ಸಂಪೂರ್ಣ ವಿಧಾನ ಹಾಗೂ ಅದನ್ನು ಬಳಸುವ ವಿಧಾನ ಕೆಳಗಿನ ವೀಡಿಯೋದಲ್ಲಿ ಇದೆ ನೋಡಿ.