ಚೀನಾ
ಚೀನಾದ ನಂಬಿಕೆಗನುಸಾರ ಕೂದಲುಗಳಿಂದ ಹಣೆಯನ್ನು ಮುಚ್ಚಿಕೊಂಡರೆ, ಆ ವ್ಯಕ್ತಿಯ ಸಂಪತ್ತಿನಲ್ಲಿ ಗಂಭೀರ ಅಡಚಣೆಗಳು ನಿರ್ಮಾಣವಾಗುತ್ತವೆ ಮತ್ತು ‘ಪುರುಷರ ಹಣೆಯ ಕಡೆಗೆ ಯಶಸ್ಸು ಆಕರ್ಷಿತವಾಗುತ್ತದೆ ಎಂಬ ನಂಬಿಕೆ ಚೀನಾದಲ್ಲಿದೆ.
ಫ್ರಾನ್ಸ್
ಪಾವ್ (ಬ್ರೆಡ್) ನ್ನು ಕೊಡುವಾಗ ಅಥವಾ ಟೇಬಲ್ ಮೇಲೆ ಇಡುವಾಗ ಅದರ ಮೇಲಿನ ಬದಿಯನ್ನು ಕೆಳಗೆ ಮಾಡಿಟ್ಟರೆ ಹಸಿವು ಚೆನ್ನಾಗಿ ಆಗುತ್ತದೆ ಎಂಬ ನಂಬಿಕೆ ಫ್ರಾನ್ಸ್ನಲ್ಲಿದೆ
ಜರ್ಮನಿ
ಜರ್ಮನಿಯಲ್ಲಿ ಮೃತ್ಯು ಬರುವಾಗ ಯಾರಿಗಾದರೂ ತೊಂದರೆ ಯಾಗುತ್ತಿದ್ದರೆ ಮೇಲ್ಛಾವಣಿಯ ಮೂರು ಹಂಚುಗಳನ್ನು ತೆಗೆದರೆ ಮರಣ ಸುಲಭವಾಗುತ್ತದೆ ಎಂಬ ನಂಬಿಕೆ ಇದೆ.
ಅರ್ಜೆಂಟಿನಾ
ಅ. ೨೦೦೧ ರಲ್ಲಿ ನಿರ್ಮಾಣವಾದ ಆರ್ಥಿಕ ಕುಸಿತಕ್ಕೆ ಕಾರಣ ರಾಗಿರುವ ಅರ್ಜೆಂಟಿನಾದ ಮಾಜಿ ಅಧ್ಯಕ್ಷ ಕಾರ್ಲೋಸ್ ಮೆನೆಮ್ ಅವರ ಹೆಸರನ್ನು ಅಲ್ಲಿಯ ಜನರು ಉಚ್ಚರಿಸುವುದಿಲ್ಲ, ಅಲ್ಲಿಯ ಜನರು ಅವರ ಹೆಸರನ್ನು ಉಚ್ಚರಿಸುವುದನ್ನು ತಡೆಗಟ್ಟುತ್ತಾರೆ. ಮೆನೆಮ್ ಎಂದರೆ ಜೀವಂತ ಶಾಪ ಎಂದು ಅವರಿಗೆ ಅನಿಸುತ್ತದೆ.
ಆ. ಮೆನೆಮ್ರ ಹೆಸರು ಕಿವಿಯ ಮೇಲೆ ಬಿದ್ದರೆ, ಕೂಡಲೇ ಸ್ತ್ರೀಯರು ತಮ್ಮ ಎಡ ಸ್ತನವನ್ನು ಸ್ಪರ್ಶಿಸುತ್ತಾರೆ ಮತ್ತು ಪುರುಷರು ಎಡ ವೃಷಣವನ್ನು (ಅಂಡಕೋಶವನ್ನು) ಸ್ಪರ್ಶಿಸುತ್ತಾರೆ.
ಐರ್ಲ್ಯಾಂಡ್
ಚಳಿಗಾಲದ ಕೊನೆಯಲ್ಲಿ ಬಾಗಿಲ ಎದುರಿಗೆ ಹಾಕುವ ಡೋರ್ ಮ್ಯಾಟ್ಅನ್ನು ಹೆಣೆದರೆ (ತಯಾರಿಸಿದರೆ), ‘ಚಳಿಗಾಲದ ಅವಧಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಐರ್ಲ್ಯಾಂಡ್ನಲ್ಲಿದೆ.
ಸ್ಪೇನ್
ಅ. ಹೊಸವರ್ಷದ ಹಿಂದಿನ ದಿನ ರಾತ್ರಿ ಗಡಿಯಾರದ ಎರಡೂ ಮುಳ್ಳುಗಳು ೧೨ ರ ಮೇಲೆ ಬಂದಾಗ (ರಾತ್ರಿ ೧೨ ಗಂಟೆಗೆ) ಸ್ಪೇನನ ನಂಬಿಕೆಯ ಜನರು ಶುಭೇಚ್ಛೆಗಳನ್ನು ನೀಡಲು ಹನ್ನೆರಡು ದ್ರಾಕ್ಷಿಗಳನ್ನು ತಿನ್ನುತ್ತಾರೆ.
ಆ. ಹೊಸ ವರ್ಷದಲ್ಲಿ ತಮ್ಮ ಮೇಲೆ ಗ್ರಹಗಳ ಕೃಪೆಯಾಗಬೇಕೆಂದು ಕೆಲವು ಸ್ಪ್ಯಾನಿಶ್ ಜನರು ಬಕೇಟ್ ತುಂಬ ನೀರನ್ನು ಕಿಟಕಿಯ ಹೊರಗೆ ಚೆಲ್ಲುತ್ತಾರೆ.
ತುರ್ಕಸ್ತಾನ್
‘ರಾತ್ರಿ ಹೊತ್ತಿನಲ್ಲಿ ‘ಚ್ಯುಯಿಂಗ್ ಗಮ್’ ತಿನ್ನುವುದೆಂದರೆ ಶವದ ಮಾಂಸ ತಿಂದಂತೆ’, ಎಂದು ತುರ್ಕಿ ಜನರಿಗೆ ಅನಿಸುತ್ತದೆ.
ಗ್ರೀಸ್
ಒಂದು ವೇಳೆ ಅವಿವಾಹಿತ ತರುಣಿ ಮಲಗುವಾಗ ತಲೆದಿಂಬಿನ ಹತ್ತಿರ ಪವಿತ್ರ ಬಾದಾಮಿಗಳ ಚಿಕ್ಕ ಚೀಲವನ್ನು ಇಟ್ಟುಕೊಂಡು ಮಲಗಿದರೆ ಅವಳಿಗೆ ತನ್ನ ಭಾವಿ ಜೊತೆಗಾರನ ಕನಸುಗಳು ಬೀಳುತ್ತವೆ ಎಂಬ ಪ್ರಾಚೀನ ವಿಶ್ವಾಸ ಗ್ರೀಸ್ ಜನರಲ್ಲಿದೆ.