ಚಂದನವನದ ದೇವರು, ಚಂದನವನದ ದಂತಕಥೆ ಎಂದೇ ಹೆಸರುವಾಸಿ ಆಗಿರುವವರು ಡಾ. ರಾಜ್ ಕುಮಾರ್. ಇವರ ಬಗ್ಗೆ ಹೇಳುತ್ತಾ ಹೋದರೆ, ಪುಟಗಳೇ ಸಾಕಾಗೋದಿಲ್ಲ. ಡಾ. ರಾಜ್ ಕುಮಾರ್ ಅವರು ತಮ್ಮ ನಟನೆಯ ಮೂಲಕ ಮಾತ್ರ ಅಭಿಮಾನಿಗಳನ್ನು ಹೊಂದಿರಲಿಲ್ಲ, ಅವರಲ್ಲಿರುವ ಒಳ್ಳೇತನ, ಸರಳತೆ, ಅಭಿಮಾನಿಗಳನ್ನು ದೇವರು ಎಂದು ಭಾವಿಸಿದ ಅವರ ವ್ಯಕ್ತಿತ್ವ ಇದೆಲ್ಲವೂ ಸಹ ಅವರನ್ನು ಅಷ್ಟು ಎತ್ತರಕ್ಕೆ ಕೊಂಡೊಯ್ಯಿತು. ಆದರೆ ರಾಜ್ ಕುಮಾರ್ ಅವರು ಮಾತ್ರ ಸರಳತೆ ಇಂದಲೇ ಇದ್ದವರು. ಡಾ. ರಾಜ್ ಕುಮಾರ್ ಅವರಿಗೆ ಇರುವ ಅಭಿಮಾನಿ ಬಳಗ ಹೇಗಿತ್ತು ಎಂದು ಗೊತ್ತೇ ಇದೆ..
ಇಂದಿಗೂ ಕೋಟ್ಯಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿರುವವರು ಡಾ. ರಾಜ್ ಕುಮಾರ್. ಡಾ. ರಾಜ್ ಕುಮಾರ್ ಅವರ ಸಿನಿಮಾಗಳು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿತ್ತು, ಜನರಿಗೆ ಬದುಕಿನ ಪಾಠ ಕಲಿಸುತ್ತಿತ್ತು, ಈ ಕಾರಣಕ್ಕೆ ಅವರ ಸಿನಿಮಾಗಳು ಜನರ ಮೇಲೆ ಅಷ್ಟು ಪರಿಣಾಮ ಬೀರುತ್ತಿತ್ತು ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಡಾ. ರಾಜ್ ಕುಮಾರ್ ಅಂದರೆ ಅಭಿಮಾನಿಗಳಿಗೆ ಹುಚ್ಚು ಅಭಿಮಾನ, ರಾಜ್ ಅವರಿಗೂ ಅಷ್ಟೇ ಅಭಿಮಾನಿಗಳು ಅಂದ್ರೆ ಅಷ್ಟೇ ಪ್ರೀತಿ ಮತ್ತು ವಿಶ್ವಾಸ. ಅಭಿಮಾನಿಗಳಲ್ಲಿ ದೇವರನ್ನು ಕಂಡ ಮೊದಲ ಕಲಾವಿದ ಡಾ. ರಾಜ್ ಕುಮಾರ್ ಅವರು ಎಂದು ಹೇಳಿದರೂ ತಪ್ಪಲ್ಲ. ಅಭಿಮಾನಿಗಳನ್ನು ದೇವರು ಎಂದೇ ಕರೆಯುತ್ತಿದ್ದರು. ಎಲ್ಲರನ್ನು ಒಂದೇ ರೀತಿ ಕಾಣುತ್ತಿದ್ದರು.
ಡಾ. ರಾಜ್ ಕುಮಾರ್ ಅವರು ಕನ್ನಡ ಕಂಡ ಅಪ್ರತಿಮ ಕಲಾವಿದ. ಅವರ ಬಗ್ಗೆ ಹಲವು ವಿಶೇಷತೆಗಳು, ವೈಶಿಷ್ಟ್ಯತೆಗಳನ್ನು ಕೇಳುತ್ತಲೇ ಬಂದಿದ್ದೇವೆ.. ಅಣ್ಣಾವ್ರ ಹಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಅದಕ್ಕೆ ಸಂಬಂಧಿಸಿದ ಹಾಗೆ ಕಥೆಗಳು ಕೂಡ ಕೇಳಿಬರುತ್ತದೆ. ಒಂದೊಂದು ಫೋಟೋ ಹಿಂದೆ ಕೂಡ ಒಂದೊಂದು ಕಥೆ. ಇತ್ತೀಚೆಗೆ ಡಾ. ರಾಜ್ ಕುಮಾರ್ ಅವರು ಅಗಲಿ 19 ವರ್ಷ ತುಂಬಿದೆ. ಅಭಿಮಾನಿಗಳು, ಕುಟುಂಬದವರು ಎಲ್ಲರು ಸಹ ಅಣ್ಣಾವ್ರ ಸಮಾಧಿ ಬಳಿ ಹೋಗಿ, ಪೂಜೆ ಸಲ್ಲಿಸಿ ಬಂದರು. ಇದಾದ ನಂತರ ಅಣ್ಣಾವ್ರ ಮೊಮ್ಮಗ, ತಮ್ಮ ತಾತನ ಕುರಿತು ಒಂದು ವಿಶೇಷವಾದ ವಿಚಾರ ಹಂಚಿಕೊಂಡಿದ್ದಾರೆ. ಅದು ಅಣ್ಣಾವ್ರ ಅತ್ಯಂತ ಅಪರೂಪದ ಫೋಟೋಗಳಲ್ಲಿ ಒಂದು..
ನಮಗೆಲ್ಲ ಗೊತ್ತಿರುವ ಹಾಗೆ ಅಣ್ಣಾವ್ರು ವಿಧಿವಶರಾಗಿದ್ದು 2006ರಲ್ಲಿ, ಏಪ್ರಿಲ್ 12ರಂದು. ಅದೇ ವರ್ಷ ಅಣ್ಣಾವ್ರು ಇದ್ದಾಗ ತೆಗೆದ ಒಂದು ಅಪರೂಪದ ಫೋಟೋವನ್ನು ಅವರ ಮೊಮ್ಮಗ ಧೀರೆನ್ ರಾಮ್ ಕುಮಾರ್ ಶೇರ್ ಮಾಡಿದ್ದಾರೆ. ಆ ಫೋಟೋವನ್ನು ಕ್ಲಿಕ್ ಮಾಡಿರುವುದು ಖುದ್ದು ಧೀರೆನ್ ಅವರೇ ಆಗಿದ್ದು, ಪಾರ್ವತಮ್ಮ ರಾಜ್ ಕುಮಾರ್ ಅವರ ನೋಕಿಯಾ ಫೋನ್ ನಲ್ಲಿ ತೆಗೆದ ಫೋಟೋ ಅದಾಗಿತ್ತು. ಅಂದು ಪುನೀತ್ ರಾಜ್ ಕುಮಾರ್ ಅವರ ಅಜಯ್ ಸಿನಿಮಾದ ಕಾಸ್ಟ್ಯೂಮ್ ಟ್ರಯಲ್ ನಡೆಯುತ್ತಿದ್ದ ವೇಳೆ ಅಣ್ಣಾವ್ರು ಸಹ ಅಲ್ಲೇ ಇದ್ದರು. ಆ ವೇಳೆ ಅಜ್ಜಿಯ ನೋಕಿಯಾ ಫೋನ್ ನಲ್ಲಿ ತಾತನ ಫೋಟೋವನ್ನು ಧೀರೆನ್ ಕ್ಲಿಕ್ ಮಾಡಿದ್ದರು. ಈ ಫೋಟೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ..
ಧೀರೆನ್ ಅವರು ಶೇರ್ ಮಾಡಿರುವ ಫೋಟೋದಲ್ಲಿ ಅಣ್ಣಾವ್ರು ಬಹಳ ಹ್ಯಾಂಡ್ಸಮ್ ಆಗಿ ಕಾಣುತ್ತಿದ್ದಾರೆ, ಫೋಟೋ ಕ್ಲಾರಿಟಿ ಕಡಿಮೆ ಇದ್ದು, ಬ್ಲರ್ ಆಗಿದೆ, ಆದರೆ ಅಣ್ಣಾವ್ರ ಚಾರ್ಮ್ ಮಾತ್ರ ಅದೇ ರೀತಿ ಇದೆ. ಸ್ಟೈಲ್ ಆಗಿ ಗ್ಲಾಸ್ ಹಾಕಿಕೊಂಡು ನಗುತ್ತಿರುವ ಅಣ್ಣಾವ್ರ ಫೋಟೋ ಇದಾಗಿದ್ದು, ಬಹಳ ಸಂತೋಷದಿಂದ ಧೀರೆನ್ ಶೇರ್ ಮಾಡಿದ್ದಾರೆ. ಇನ್ನು ಈ ಫೋಟೋ ನೋಡಿದ ಫ್ಯಾನ್ಸ್, ಅಣ್ಣಾವ್ರಿಗೆ ಅಣ್ಣಾವ್ರೆ ಸಾಟಿ. ಅವರಷ್ಟು ಹ್ಯಾಂಡ್ಸಮ್ ಇನ್ಯಾರು ಇಲ್ಲ, ಇನ್ನಷ್ಟು ವರ್ಷಗಳ ಕಾಲ ಅವರು ನಮ್ಮ ಜೊತೆ ಇರಬೇಕಿತ್ತು ಎನ್ನುತ್ತಿದ್ದಾರೆ. ರಾಜ ಹೇಗಿದ್ರು ರಾಜನೆ ಅಲ್ವಾ ಅನ್ನೋದು ಅಭಿಮಾನಿಗಳ ಅಭಿಪ್ರಾಯ ಆಗಿದೆ. ಈ ಫೋಟೋ ಸಖತ್ ವೈರಲ್ ಆಗಿದ್ದು, ಎಲ್ಲಾ ಮೀಮ್ ಪೇಜ್ ಗಳು, ಟ್ರೋಲ್ ಪೇಜ್ ಗಳು, ಅಣ್ಣಾವ್ರ ಫೋಟೋ ಪೋಸ್ಟ್ ಮಾಡಿದ್ದಾರೆ.
ಆಗೆಲ್ಲಾ ಅಣ್ಣಾವ್ರು ಮತ್ತು ಅವರ ಸಿನಿಮಾಗಳು ಜನರಿಗೆ ಎಷ್ಟು ಇಷ್ಟ ಆಗ್ತಿತ್ತು ಎಂದು ನಮಗೆಲ್ಲ ಗೊತ್ತೇ ಇದೆ. ಸಿನಿಮಾ ಟಿಕೆಟ್ ಬೆಲೆ ಒಂದೂವರೆ ಇಂದ ಎರಡು ರೂಪಾಯಿ ಇದ್ದ ಕಾಲದಲ್ಲೇ, ಅಣ್ಣಾವ್ರ ಸಿನಿಮಾಗಳು ಕೋಟಿಗಟ್ಟಲೇ ಹಣಗಳಿಕೆ ಮಾಡಿದೆ. ಅಷ್ಟೆಲ್ಲಾ ರೆಕಾರ್ಡ್ ಗಳನ್ನು ಮಾಡಿರುವ ಹೆಗ್ಗಳಿಕೆ ಡಾ. ರಾಜ್ ಕುಮಾರ್ ಅವರದ್ದು. ಕೆರಿಯರ್ ನಲ್ಲಿ 203 ಸಿನಿಮಾಗಳಲ್ಲಿ ನಟಿಸುವುದು ಸುಲಭದ ವಿಚಾರ ಅಲ್ಲವೇ ಅಲ್ಲ. ವಿಶ್ವದಲ್ಲಿ ಅತಿಹೆಚ್ಚು ಅಭಿಮಾನಿಗಳ ಸಂಘ ಹೊಂದಿರುವ ನಟ ಡಾ. ರಾಜ್ ಕುಮಾರ್ ಅವರೇ ಎಂದು ಸಹ ಹೇಳಲಾಗುತ್ತದೆ. ಕನ್ನಡ, ಕರ್ನಾಟಕ ಎಂದರೆ ರಾಜ್ ಅವರು ಎನ್ನುವ ಹಂತಕ್ಕೆ ಎಲ್ಲರಿಗೂ ಪರಿಚಯ ಆಗಿತ್ತು ಅವರ ಹೆಸರು. ಇಂಥ ಮಹಾನುಭಾವನ ಬಗ್ಗೆ ಎಷ್ಟು ಬರೆದರು ಕೂಡ ಕಡಿಮೆಯೇ.