ಕಾಂತಾರ ಸಿನಿಮಾದ ಬ್ಯೂಟಿ ಸಪ್ತಮಿ ಗೌಡ ಅವರಿಗೆ ಆ ಒಂದು ಸಿನಿಮಾ ಭರ್ಜರಿಯಾದ ಯಶಸ್ಸು ತಂದುಕೊಟ್ಟಿದೆ. ಸಪ್ತಮಿ ಗೌಡ ಅವರನ್ನು ಲೀಲಾ ಪಾತ್ರದ ಮೂಲಕ ಕರ್ನಾಟಕ ಮಾತ್ರವಲ್ಲದೆ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಸಪ್ತಮಿ ಗೌಡ ಅವರಿಗೆ ಜನಪ್ರಿಯತೆ ಸಿಕ್ಕಿತು. ಇಂದಿಗೂ ಇವರನ್ನು ಎಲ್ಲರೂ ಲೀಲಾ ಎಂದೇ ಗುರುತಿಸುತ್ತಾರೆ ಎಂದರೆ ತಪ್ಪಲ್ಲ. ಇದೀಗ ಸಪ್ತಮಿ ಗೌಡ ಅವರ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ.


ಕಾಂತಾರ ನಂತರ ಸಪ್ತಮಿ ಗೌಡ ಅವರು ಬಾಲಿವುಡ್ ನಲ್ಲಿಯೂ ಬ್ಯುಸಿ ಆದರೂ, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಕರ ದಿ ವ್ಯಾಕ್ಸಿನ್ ವಾರ್ ಚಿತ್ರದಲ್ಲಿ ಸಪ್ತಮಿ ಗೌಡ ನಟಿಸಿದರು. ಬಳಿಕ ಇವರು ಯುವ ರಾಜ್ ಕುಮಾರ್ ಅವರ ಮೊದಲ ಚಿತ್ರ ಯುವ ದಲ್ಲಿ ನಟಿಸಿದರು. ಈ ಸಿನಿಮಾ ಕೂಡ ಒಳ್ಳೆಯ ರೀಚ್ ಪಡೆದುಕೊಂಡಿತು. ಯುವ ಬಿಡುಗಡೆ ಆಗಿದ್ದು, 2024ರ ಮಾರ್ಚ್ ತಿಂಗಳಿನಲ್ಲಿ, ಈಗಾಗಲೇ ಯುವ ಸಿನಿಮಾ ಬಿಡುಗಡೆ ಆಗಿ 7 ತಿಂಗಳು ಕಳೆದಿದೆ.
ಹೌದು, ಯುಗ ಬಿಡುಗಡೆಯಾಗಿ ಇಷ್ಟು ಸಮಯ ಕಳೆದು ಹೋಗಿದ್ದರು ಸಹ ಸಪ್ತಮಿ ಗೌಡ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಅಪ್ಡೇಟ್ ಸಿಕ್ಕಿರಲಿಲ್ಲ. ಇವರು ತೆಲುಗಿನ ತಮ್ಮುಡು ಎನ್ನುವ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿಯಿದ್ದರು ಸಹ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೆ ಇದೀಗ ಸಪ್ತಮಿ ಗೌಡ ನಟಿಸಲಿರುವ ಕನ್ನಡ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ.
ಸಪ್ತಮಿ ಗೌಡ ಅವರು ಹಲಗಲಿ ಎನ್ನುವ ಸಿನಿಮಾ ಒಪ್ಪಿಕೊಂಡಿದ್ದು, ನವೆಂಬರ್ 11ರಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಈ ಸಿನಿಮಾವನ್ನು ಸುಕೇಶ್ ಡಿ ಕೆ ಎನ್ನುವವರು ನಿರ್ದೇಶನ ಮಾಡಲಿದ್ದಾರೆ. ಹಲಗಲಿ ಸಿನಿಮಾ ಅಪ್ಪಟ ಐತಿಹಾಸಿಕ ಸಿನಿಮಾ ಆಗಿದ್ದು, ನಾಯಕನಾಗಿ ನಟ ಡಾಲಿ ಧನಂಜಯ್ ನಟಿಸಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಸಪ್ತಮಿ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಧನಂಜಯ್ ಅವರ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾ ಮೂಲಕ.
ಇದೀಗ ಹಲಗಲಿ ಸಿನಿಮಾದಲ್ಲಿ ಮತ್ತೊಮ್ಮೆ ಇಬ್ಬರೂ ಜೊತೆಯಾಗಿ ನಟಿಸಲಿದ್ದಾರೆ. ಸಪ್ತಮಿ ಗೌಡ ಅವರಿಗೆ ಇದು ಮೊದಲ ಐತಿಹಾಸಿಕ ಸಿನಿಮಾ ಆಗಿದೆ. ಕಾಂತಾರ ಸಿನಿಮಾ ಇವರಿಗೆ ದೊಡ್ಡ ಮಟ್ಟದಲ್ಲಿ ಬ್ರೇಕ್ ನೀಡಿತ್ತು, ಮತ್ತೊಂದು ಯಶಸ್ಸಿನ ಹುಡುಕಾಟದಲ್ಲಿರುವ ಸಪ್ತಮಿ ಗೌಡ ಅವರಿಗೆ ಹಲಗಲಿ ಸಿನಿಮಾ ಇಂದ ಯಶಸ್ಸು ಸಿಗಲಿ ಎನ್ನುತ್ತಿದ್ದಾರೆ ಫ್ಯಾನ್ಸ್.