ಪ್ರತಿಯೊಬ್ಬರಿಗೂ ಜೀವನದಲ್ಲಿ ಭಯವಿದ್ದೆ ಇರುತ್ತದೆ. ಗಾಳಿಯಿಂದ ಇರಬಹುದು, ಅಂದರೆ ಒಂದು ಚಂಡಮಾರುತ ಬಂದರೆ ಮರಗಳು ಬುಡ ಸಮೇತ ಬಿದ್ದು ಹೋಗುತ್ತದೆ, ಅವುಗಳಿಗೂ ಭಯ ಉಂಟಾಗುತ್ತದೆ. ತಾನು ಎಲ್ಲಿ ಬಿದ್ದು ಹೋಗುತ್ತೇನೋ ಅನ್ನೋ ಅಂತಹ ಭಯ. ಅಂದರೆ ಕಮಲ ಪುಷ್ಪಗಳೂ ಇವುಗಳಿಗೂ ಭಯ. ನಾಗ ಮತ್ತು ಪಾಲ್ಗುಣ ಮಾಸದಲ್ಲಿ ಬಿಳುವಂತಹ ಚಳಿಗೂ ಭಯವಿರುತ್ತದೆ. ಎಷ್ಟು ವಿಶೇಷತೆ ಇದೆ ಎಂದರೆ, ಇದರಿಂದ ಮನುಷ್ಯನಿಗೆ ಏನು ಪರಿಣಾಮ ಉಂಟಾಗುವುದಿಲ್ಲ. ಕಮಲಗಳಿಗೂ ಒಂದು ರೀತಿಯ ಭಯವಿರುತ್ತದೆ. ಪರ್ವತಗಳಿಗೂ ವಜ್ರಗಳಿಂದ ಭಯವಿರುತ್ತದೆ. ಇಂದ್ರನ ಕೈಯಲ್ಲಿರುವ ವಜ್ರಾಯುಧಗಳಿಂದ ಭಯ ಉಂಟಾಗುತ್ತದೆ.
ಸಾಧು ಅಂದರೆ ಸಾದುಕರು ದುಜ್ಜನರು ಅಂದರೆ ಕೆಟ್ಟವರಿಂದ ಅವರಿಗೆ ಭಯವಾಗುತ್ತದೆ, ಕುತ್ಸಿತ ಜನರು ಕುತ್ಸಿತವಾಗಿ ಮಾತನಾಡುವವರು ಇಂಥವರಿಂದ ಭಯ ಉಂಟಾಗುತ್ತದೆ. ಸಾಧುಗಳೆಂದರೆ ತಮ್ಮಷ್ಟಕ್ಕೆ ತಾವು ತಪಸ್ಸನ್ನು ಮಾಡುವವರೇ ಸಾಧುಗಳು. ಲೋಕದ ಉದ್ಧಾರಕ್ಕಾಗಿ ತಪಸ್ಸನ್ನು ಮಾಡುವವರು, ಲೋಕಕಲ್ಯಾಣಕ್ಕಾಗಿ ಸಂಪತ್ತನ್ನು ಮಾಡುವವರು, ಯಾರ ತಂಟೆಗೆ ಹೋಗದೆ ಇರುವಂತಹವರು, ಸಾಧುಗಳಾಗಿರುತ್ತಾರೆ.
ಸಾಧು ಸೌಜನ್ಯರಿಗೆ ಕುತ್ಸಿತ ಮನೋಭಾವದಿಂದ ಭಯ ಉಂಟಾಗುತ್ತದೆ, ದುರ್ಜನರಿಂದ ಭಯ ಉಂಟಾಗುತ್ತದೆ. ಮನುಷ್ಯನಿಗೂ ಭಯವಿದ್ದೆ ಇರುತ್ತದೆ. ಮನುಷ್ಯನಿಗೆ ರೋಗ ಭಯ ಹೆಚ್ಚು, ಚಂಡಮಾರುತ ಬಂದರು ಭಯವಿರುವುದು ಕಮ್ಮಿ, ಆದರೂ ಅವನಿಗೆ ರೋಗ ಭಯವಿದ್ದೆ ಇರುತ್ತದೆ. ಇದಕ್ಕೆ ಸಂಜೀವಿನಿ ಯಂತ್ರವನ್ನು ಧಾರಣೆ ಮಾಡಿಕೊಳ್ಳಬೇಕು. ಈ ಸಂಜೀವಿನಿ ಧಾರಣೆಯಿಂದ ರೋಗದಿಂದ ಮುಕ್ತವಾಗಲು ಸಾಧ್ಯವಿದೆ. ಈ ಭಯದಿಂದ ಹೊರಬರಲು ಸಾಧ್ಯವಿದೆ.