ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮಿ ಧಾರಾವಾಹಿ ಎಷ್ಟು ದೊಡ್ಡ ಮಟ್ಟಕ್ಕೆ ಹೆಸರು ಮಾಡಿದೆ, ಜನಪ್ರಿಯತೆ ಗಳಿಸಿಕೊಂಡಿದೆ ಎನ್ನುವ ವಿಷಯ ನಮಗೆಲ್ಲಾ ಗೊತ್ತೇ ಇದೆ. ಈ ಧಾರಾವಹಿಯು ಟಿಆರ್ಪಿ ರೇಟಿಂಗ್ ನಲ್ಲಿ ಸಹ ಭಾರಿ ಏರಿಕೆ ಕಂಡಿದೆ. ಈ ವಾರ ಕರ್ನಾಟಕದ ನಂಬರ್1 ಸೀರಿಯಲ್ ಆಗಿ ಹೊರಹೊಮ್ಮಿರುವುದು ಇದೇ ಭಾಗ್ಯ ತಂಗಿಯ ಕಥೆ ಲಕ್ಷ್ಮೀ ಬಾರಮ್ಮ. ಹೀಗೆ ಕಲರ್ಸ್ ಕನ್ನಡ ವಾಹಿನಿ ಒಳ್ಳೆಯ ಕಂಟೆಂಟ್ ಕೊಡುವುದರ ಜೊತೆಗೆ ತಮ್ಮ ವ್ಯುವರ್ಶಿಪ್ ಅನ್ನು ಕೂಡ ಹೆಚ್ಚಿಸಿಕೊಳ್ಳುತ್ತಿದೆ. ಇದರ ನಡುವೆ ಈಗ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ತೆಗೆದುಕೊಂಡಿರುವ ದಿಟ್ಟ ನಿರ್ಧಾರಕ್ಕೆ ವೀಕ್ಷಕರ ಮೆಚ್ಚುಗೆ ಸಿಕ್ಕಿದೆ.

ಭಾಗ್ಯ ಈಗ ತಾಂಡವ್ ಮನೆ ಬಿಟ್ಟು ಬಂದಿದ್ದಾಳೆ. ತಾಂಡವ್ ಶ್ರೇಷ್ಠ ವಿಚಾರ ಗೊತ್ತಾದ ನಂತರ, ತನ್ನ ಮದುವೆ ವಾರ್ಷಿಕೋತ್ಸವದ ದಿವಸ ಎಲ್ಲಾ ವಿಷಯವನ್ನು ಮಾತನಾಡಿದ ಭಾಗ್ಯ, ತಾಂಡವ್ ಬಗ್ಗೆ ಎಲ್ಲಾ ವಿಷಯ ಗೊತ್ತಾಗಿರುವುದನ್ನು ತಿಳಿಸಿ, ಅದರಿಂದ ದೊಡ್ಡ ಡ್ರಾಮ ನಡೆಯಿತು. ಕೊನೆಗೆ ಅತ್ತೆ, ಮಾವ, ಮಕ್ಕಳು ಎಲ್ಲರನ್ನು ಕರೆದುಕೊಂಡು ಭಾಗ್ಯ ತಾಂಡವ್ ಮನೆಬಿಟ್ಟು, ತನ್ನ ಅಪ್ಪ ಅಮ್ಮನ ಮನೆಗೆ ಬಂದಿದ್ದಾಳೆ. ಅಲ್ಲೇ ಇದ್ದುಕೊಂಡು ಎಲ್ಲರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ. ಇದೆಲ್ಲವೂ ನಡೆಯುವ ವೇಳೆ, ಭಾಗ್ಯ ಅಮ್ಮ ಸುನಂದಾಗೆ ಕೋಪ ಬಂದು, ಶ್ರೇಷ್ಠ ಮನೆಗೆ ಹೋಗಿ ಆಕೆಯನ್ನು ಮುಗಿ*ಸುವ ಪ್ರಯತ್ನ ಮಾಡುತ್ತಾಳೆ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಈ ಘಟನೆ ನಡೆಯುವಾಗ ಸಿಕ್ಕಿಹಾಕಿಕೊಂಡು, ತಾಂಡವ್ ಮತ್ತು ಶ್ರೇಷ್ಠ ಬೇಕು ಎಂದೇ ಸುನಂದಾ ಮೇಲೆ ಪೊಲೀಸರಲ್ಲಿ ದೂರು ನೀಡುತ್ತಾರೆ. ಸ್ಟೇಶನ್ ಇಂದ ಭಾಗ್ಯಳಿಗೆ ಕರೆಬಂದು, ತಕ್ಷಣವೇ ಬರಬೇಕು ಎಂದಾಗ, ಎಲ್ಲರೂ ಸ್ಟೇಶನ್ ಗೆ ಬಂದಾಗ ಅವರ ಅಮ್ಮ ಮಾಡಿರೋದೇನು ಎನ್ನುವ ವಿಷಯ ಗೊತ್ತಾಗುತ್ತದೆ. ಇದರಿಂದ ಭಾಗ್ಯ ಪೊಲೀಸರ ಬಳಿ ತಮ್ಮ ತಾಯಿಯನ್ನು ಬಿಟ್ಟುಬಿಡಿ ಎಂದು ಎಷ್ಟು ಕೇಳಿಕೊಂಡರು ಸಹ ಪೊಲೀಸರು ಬಿಡುವುದಿಲ್ಲ. ಕೇಸ್ ರಿಜಿಸ್ಟರ್ ಆಗಿದೆ ಎನ್ನುತ್ತಾರೆ. ನಂತರ ಕುಸುಮಾ ಮತ್ತು ತಾಂಡವ್ ತಂದೆ ಇಬ್ಬರು ಮಗನ ಬಳಿ ಕೇಸ್ ವಾಪಸ್ ತಗೊ ಎಂದು ಎಷ್ಟೇ ಕೇಳಿಕೊಂಡರು ಸಹ, ತಾಂಡವ್ ಒಪ್ಪುವುದಿಲ್ಲ.
ಕೊನೆಗೆ ಕಂಪ್ಲೇಂಟ್ ವಾಪಸ್ ತೆಗೆದುಕೊಳ್ಳುತ್ತೇನೆ ಆದರೆ ಒಂದು ಕಂಡೀಷನ್ ಎಂದು ಹೇಳುತ್ತಾನೆ, ಆದರೆ ಭಾಗ್ಯ ನನ್ನನ್ನ ನಿಮ್ಮ ಮನಸ್ಸಿಗೆ ಬಂದ ಹಾಗೆ ಆಡಿಸಿದ್ದೀರಾ ಇಷ್ಟು ವರ್ಷ, ಇನ್ನುಮುಂದೆ ಅದೆಲ್ಲ ಸಾಧ್ಯ ಇಲ್ಲ ಎಂದು ಹೇಳಿ, ನಿಮ್ಮ ಕಂಡೀಷನ್ ಗೆ ಒಪ್ಪೋದಿರ್ಲಿ ಅದನ್ನ ಕೇಳೋದಕ್ಕೂ ನಾನು ತಯಾರಿಲ್ಲ ಎಂದು ಹೇಳಿ, ತಾಂಡವ್ ಸೂರ್ಯವಂಶಿ ಸಹಾಯ ಇಲ್ಲದೇ ನನ್ನ ತಾಯಿಯನ್ನ ಹೇಗೆ ಬಿಡಿಸಬೇಕು ಅಂತ ನನಗೆ ಗೊತ್ತಿದೆ ಎನ್ನುತ್ತಾಳೆ ಭಾಗ್ಯ. ಇದರಿಂದ ತಾಂಡವ್ ಗೆ ಶಾಕ್ ಆಗುತ್ತದೆ. ಭಾಗ್ಯ ಏನು ಮಾಡುತ್ತಾಳೆ ತಿಳಿಯಬೇಕು ಎಂದು ಒಳಗೆ ಹೋಗುತ್ತಾರೆ. ಅಲ್ಲಿಗೆ ಎಪಿಸೋಡ್ ಮುಗಿದಿದೆ.
ಆದರೆ ಇಂದಿನ ಎಪಿಸೋಡ್ ಪ್ರೊಮೋದಲ್ಲಿ ಭಾಗ್ಯ ತಾಂಡವ್ ವಿಚ್ಛೇದನ ಕೊಡುವ ದೃಶ್ಯವನ್ನ ತೋರಿಸಲಾಗಿದೆ. ನೀನು ನನಗೆ ವಿಚ್ಛೇದನ ಕೊಡ್ತಿದ್ದೀಯಾ ಎಂದು ತಾಂಡವ್ ಕೂಡ ಶಾಕ್ ಆಗಿದ್ದಾನೆ. ಭಾಗ್ಯ ಇಷ್ಟು ದಿನಗಳ ನಂತರ ಇಂಥ ಸ್ಟ್ರಾಂಗ್ ನಿರ್ಧಾರ ತೆಗೆದುಕೊಂಡಿದ್ದು, ಇದರಿಂದ ಜನರಿಗೆ ಬಹಳ ಇಷ್ಟವಾಗಿದೆ.. ಭಾಗ್ಯಕ್ಕನಿಗೆ ಈ ವಾರ ಕಿಚ್ಚನ ಮೆಚ್ಚಿನ ಚಪ್ಪಾಳೆ ಸಿಗಬೇಕು ಎಂದು ಕಾಮೆಂಟ್ಸ್ ಬರೆಯುತ್ತಿದ್ದಾರೆ.. ಹಾಗೆಯೇ ಭಾಗ್ಯ ಸರಿಯಾದ ನಿರ್ಧಾರ ತೆಗದುಕೊಂಡಿದ್ದಾಳೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಧಾರಾವಾಹಿಯಲ್ಲಿ ಬಂದಿರೋ ಈ ಟ್ವಿಸ್ಟ್ ಭಾರಿ ವೈರಲ್ ಆಗಿದೆ.



