ಜೀಕನ್ನಡ ವಾಹಿನಿಯ ರಿಯಾಲಿಟಿ ಶೋ ಭರ್ಜರಿ ಬ್ಯಾಚುಲರ್ಸ್ ಶುರುವಾಗಿ ಒಂದೆರಡು ವಾರ ಕಳೆಯುತ್ತಿದೆ. ಇದೊಂದು ವಿಭಿನ್ನ ರೀತಿಯ ಪ್ರಯತ್ನ. ಇನ್ನು ಮದುವೆಯಾಗದೇ ಇರುವ ಬ್ಯಾಚುಲರ್ ಗಳನ್ನು ಶೋಗೆ ಕರೆಸಿ, ಅವರಿಗೆ ಒಬ್ಬರು ಮೆಂಟರ್ ಅನ್ನು ನೀಡಿ, ಪ್ರೀತಿಯ ಪಾಠ ಕಲಿಸಲಾಗುತ್ತಿದೆ. ಈ ಶೋನ ಎರಡನೇ ಸೀಸನ್ ಈಗಷ್ಟೇ ಶುರುವಾಗಿದೆ. ಈ ಬಾರಿ ಶೋಗೆ ಜಡ್ಜ್ ಗಳಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮತ್ತು ರಚಿತಾ ರಾಮ್ ಅವರು ಬಂದಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ಶೋಗೆ ಈ ಬಾರಿ ಒಳ್ಳೊಳ್ಳೆಯ ಸ್ಪರ್ಧಿಗಳೇ ಬಂದಿದ್ದಾರೆ. ಅದರಲ್ಲೂ ಡ್ರೋನ್ ಪ್ರತಾಪ್ ಬಂದು ಎಲ್ಲರ ಗಮನ ಸೆಳೆಯುತ್ತಿದ್ದು, ಇದೀಗ ಗಗನಾ ಗೆ ಸೂಪರ್ ಸರ್ಪ್ರೈಸ್ ನೀಡಿ, ವೈರಲ್ ಆಗಿದ್ದಾರೆ ಪ್ರತಾಪ್. ಯಾರೂ ಊಹಿಸದ ಸರ್ಪ್ರೈಸ್ ಒಂದನ್ನು ಗಗನಾಗೆ ನೀಡಿದ್ದು, ಪ್ರೊಮೋ ಸಿಕ್ಕಾಪಟ್ಟೆ ವೈರಲ್ ಆಗಿದೆ..
ಹೌದು, ಡ್ರೋನ್ ಪ್ರತಾಪ್ ಕೆಲವು ವರ್ಷಗಳ ಹಿಂದೆ ನೆಗಟಿವ್ ಆಗಿ ಎಲ್ಲಾ ಕಡೆ ಸುದ್ದಿಯಾಗಿದ್ದರು. ಈ ವ್ಯಕ್ತಿ ಕರ್ನಾಟಕದ ಜನರಿಗೆ ಮೋಸ ಮಾಡಿದ್ದಾನೆ ಎಂದು ಜನರು ಈತನನ್ನು ಅವಮಾನ ಮಾಡಿದ್ದರು. ಈತನ ಬಗ್ಗೆ ತಪ್ಪಾಗಿ ಮಾತನಾಡಿದ್ದರು. ಹಲವು ವೇದಿಕೆಗಳಲ್ಲಿ ಪ್ರತಾಪ್ ಮೋಸ ಮಾಡಿದ್ದಾನೆ ಎನ್ನುವ ಆರೋ*ಪ ಕೇಳಿಬಂದಿತ್ತು. ಇದೆಲ್ಲವೂ ನಡೆಯುತ್ತಿದ್ದ ವೇಳೆಯಲ್ಲೇ ಪ್ರತಾಪ್ ಕಳೆದ ವರ್ಷ ಬಿಗ್ ಬಾಸ್ ಶೋಗೆ ಬಂದಿದ್ದು. ಬಿಗ್ ಬಾಸ್ ಶೋ ಇವರ ಬಗ್ಗೆ ಜನರಿಗೆ ಇದ್ದ ಅಭಿಪ್ರಾಯವನ್ನೇ ಬದಲಾಯಿಸಿಬಿಟ್ಟಿತು. ಬಿಗ್ ಬಾಸ್ ಶೋನಲ್ಲಿ ಶಾಂತಚಿತ್ತ ಇಂದಲೇ ಪ್ರತಾಪ್ ಎಲ್ಲಾ ಟಾಸ್ಕ್ ಗಳನ್ನು ಗೆದ್ದುಕೊಂಡು ಬಂದರು. ಎಲ್ಲರಿಗೂ ಬಹಳ ಇಷ್ಟವಾದರು ಪ್ರತಾಪ್. ಪ್ರತಾಪ್ ವ್ಯಕ್ತಿತ್ವ ಎಲ್ಲರೂ ಅಂದುಕೊಂಡ ಹಾಗಲ್ಲ ಎಂದು ಎಲ್ಲರಿಗು ಅರ್ಥವಾಯಿತು.
ಬಹಳ ವರ್ಷಗಳಿಂದ ಕುಟುಂಬದಿಂದ ದೂರವಿದ್ದ ಪ್ರತಾಪ್ ಗೆ ಬಿಗ್ ಬಾಸ್ ಶೋ ಇಂದ ಮತ್ತೆ ತಂದೆ ತಾಯಿಯ ಜೊತೆ ಒಂದಾಗುವ ಅವಕಾಶ ಕೂಡ ಸಿಕ್ಕಿತು. ಹೀಗೆ ಬಿಗ್ ಬಾಸ್ ಶೋ ಪ್ರತಾಪ್ ಜೀವನವನ್ನೇ ಬದಲಾಯಿಸಿದೆ. ಅಲ್ಲಿಂದ ರನ್ನರ್ ಅಪ್ ಆಗಿ ಹೊರಗಡೆ ಬಂದ ನಂತರ ಪ್ರತಾಪ್ ತಮ್ಮ ಕೆಲಸಗಳನ್ನು ಮುಂದುವರೆಸಿಕೊಂಡು ಹೋಗುವುದರ ಜೊತೆಗೆ ಸಾಕಷ್ಟು ಸಮಾಜ ಸೇವೆಯನ್ನು ಕೂಡ ಮಾಡುತ್ತಾ ಬಂದಿದ್ದಾರೆ. ಇದರಿಂದ ಸಹ ಜನರಿಗೆ ಹತ್ತಿರವಾಗಿದ್ದಾರೆ. ಇತ್ತೀಚೆಗೆ ಗಾಯಕಿ ಮಂಜಮ್ಮ ಅವರ ತಂಗಿಗೆ ಸಹಾಯ ಮಾಡಿದ್ದರು. ಹೀಗೆ ಹಲವು ವಿಷಯಗಳಿಗೆ ಪ್ರತಾಪ್ ಅವರು ಸುದ್ದಿಯಾಗುತ್ತಿದ್ದು, ಇದೀಗ ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಗಗನಾಗೆ ದೊಡ್ಡ ಸರ್ಪ್ರೈಸ್ ನೀಡಿ ಸುದ್ದಿಯಾಗಿದ್ದಾರೆ..

ಹೆಲಿಕಾಪ್ಟರ್ ನಲ್ಲಿ ಗಗನಾ ಅವರನ್ನು ಕೂರಿಸಿಕೊಂಡು, 100 ಅಡಿ ಎತ್ತರಕ್ಕೆ ಕರೆದುಕೊಂಡು ಹೋಗಿ, ಅಷ್ಟು ಎತ್ತರದಲ್ಲಿ ಅರಿಶಿನ ಕುಂಕುಮ ಕೊಟ್ಟು ಪ್ರೊಪೋಸ್ ಮಾಡಿದ್ದಾರೆ ಪ್ರತಾಪ್. ಪ್ರತಾಪ್ ಅವರ ಈ ಪ್ಲಾನ್, ಐಡಿಯಾ, ಸರ್ಪ್ರೈಸ್ ಇಂದ ಗಗನಾಗೆ ಬಹಳ ಸಂತೋಷ ಆಗಿದ್ದು, ಪ್ರತಾಪ್ ಅವರ ಮೆಂಟರ್ ಆಗಿರೋದು ನನ್ನ ಅದೃಷ್ಟ ಎಂದು ಹೇಳಿದ್ದಾರೆ. ಯಾವುದೇ ಹುಡುಗಿಗೆ ಆದರೂ ಈ ರೀತಿ ಮಾಡಿದರೆ ಸಂತೋಷ ಆಗದೇ ಇರದು. ಆದರೆ ಅದೇ ಶೋನಲ್ಲಿ ಇರುವ ಗಿಲ್ಲಿನಟ ಅವರಿಗೆ ಇದನ್ನೆಲ್ಲ ನೋಡಿ ಬೇಸರ ಆಗಿದೆ. ಜನರು ತಮಾಷೆಯಾಗಿಯೇ ದೇವರು ಗಿಲ್ಲಿ ನಟನಿಗೆ ಇದೆಲ್ಲವನ್ನು ತಡೆದುಕೊಳ್ಳುವ ಶಕ್ತಿ ಕೊಡಲಿ ಎಂದು ಕಾಮೆಂಟ್ಸ್ ನಲ್ಲಿ ಬರೆದಿದ್ದಾರೆ. ಈ ಶೋ ಹೆಸರಿಗೆ ತಕ್ಕ ಹಾಗೆ ಜನರಿಗೆ ಭರ್ಜರಿ ಮನರಂಜನೆಯನ್ನೇ ನೀಡುತ್ತಿದೆ.
ಇನ್ನು ಪ್ರತಾಪ್ ಕೊಟ್ಟ ಸರ್ಪ್ರೈಸ್ ಅನ್ನು ನೋಡಿದ ರಚಿತಾ ರಾಮ್ ಹಾಗು ರವಿಚಂದ್ರನ್ ಅವರು ಸಹ ಮನಸೋತಿದ್ದಾರೆ. ರಚಿತಾ ರಾಮ್ ಅವರು ಹೊಗಳಿಕೆಯ ಮಾತುಗಳನ್ನಾಡಿದ್ದು, ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅರಿಶಿನ ಕುಂಕುಮ ಕೊಟ್ಟಾಗಲೇ ಪ್ರತಾಪ್ ಗೆದ್ದುಬಿಟ್ಟ ಎಂದು ಹೇಳಿದ್ದಾರೆ. ಬಿಗ್ ಬಾಸ್ ನಲ್ಲಿ ಕೂಡ ತನ್ನ ವ್ಯಕ್ತಿತ್ವದಿಂದಲೇ ಪ್ರತಾಪ್ ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದರು, ಅದರ ಜೊತೆಗೆ ಅವರ ಒಳ್ಳೇತನ ಕೂಡ ಇತ್ತು. ಈ ಶೋನಲ್ಲಿ ಸಹ ಅದೇ ರೀತಿ ಆಗಿದೆ. ಒಂದು ಕಾಲದಲ್ಲಿ ಎಲ್ಲರಿಂದ ಅವಮಾನ ಮಾಡಿಸಿಕೊಂಡಿದ್ದ ಹುಡುಗ ಇಂದು ಈ ಎತ್ತರಕ್ಕೆ ಬೆಳೆದು ನಿಂತಿರುವುದು ಒಳ್ಳೆಯ ವಿಚಾರ ಆಗಿದೆ. ಪ್ರತಾಪ್ ನಿಜಕ್ಕೂ ಒಳ್ಳೆಯ ಮನಸ್ಸಿರುವ ವ್ಯಕ್ತಿ ಆಗಿದ್ದು, ಮತ್ತೆ ಮತ್ತೆ ಅದು ಜನರ ಎದುರು ತಿಳಿದು ಬರುತ್ತಿದೆ.
ಪ್ರತಾಪ್ ಈಗ ರಿಯಾಲಿಟಿ ಶೋಗಳಲ್ಲಿ ಬ್ಯುಸಿ ಇರುವುದು ಮಾತ್ರವಲ್ಲ, ಒಂದು ಸಿನಿಮಾದಲ್ಲಿ ಕೂಡ ಹೀರೋ ಆಗಿ ನಟಿಸುತ್ತಿದ್ದಾರೆ. ಸಿನಿಮಾ ಸೈನ್ ಮಾಡಿರುವ ಸಂತೋಷದ ವಿಷಯವನ್ನು ಇತ್ತೀಚೆಗೆ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು. ಅದಾದ ಬಳಿಕ ಸಿನಿಮಾ ಬಗ್ಗೆ ಇನ್ನೂ ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ಆದರೆ ಭರ್ಜರಿ ಬ್ಯಾಚುಲರ್ಸ್ ಶೋ ಮೂಲಕ ಹೆಚ್ಚಾಗಿ ಸುದ್ದಿಯಾಗಿದ್ದಾರೆ. ಒಳ್ಳೆಯ ಕೆಲಸಗಳನ್ನು ಕೂಡ ಮಾಡಿಕೊಂಡು ಬರುತ್ತಿರುವ ಪ್ರತಾಪ್ ಅವರಿಗೆ ಎಲ್ಲವೂ ಒಳ್ಳೆಯದಾಗಲಿ, ಬಿಗ್ ಬಸ್ ಶೋ ನಂತಯೇ ಭರ್ಜರಿ ಬ್ಯಾಚುಲರ್ಸ್ ಶೋ ಮೂಲಕ ಸಹ ಇವರಿಗೆ ಯಶಸ್ಸು, ಕೀರ್ತಿ ಎಲ್ಲವೂ ಸಿಗಲಿ.
ಹೌದು, ಈ ಶೋಗೆ ಬಂದಿರುವುದೇ ಪ್ರೀತಿ ಮಾಡೋದನ್ನ ಕಲಿಯೋದಕ್ಕೆ. ರವಿಚಂದ್ರನ್ ಅವರು ರಚಿತಾ ರಾಮ್ ಅವರು ಇದ್ದಾರೆ, ಇನ್ನು ಪ್ರತಾಪ್ ಅವರಿಗೆ ಮೆಂಟರ್ ಆಗಿ ಸಿಕ್ಕಿರುವುದು ಗಗನಾ. ಇವರಿಗೆ ಕೂಡ ಒಳ್ಳೆಯ ಫ್ಯಾನ್ ಫಾಲೋಯಿಂಗ್ ಇದೆ. ಈ ಎಲ್ಲಾ ಕಾರಣಗಳಿಂದ ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ಪ್ರತಾಪ್ ಅವರು ಮಿಂಚುತ್ತಿದ್ದಾರೆ. ಈ ವಾರ ತಮ್ಮ ಮೆಂಟರ್ ಗಳಿಗೆ ಸರ್ಪ್ರೈಸ್ ನೀಡಬೇಕಿತ್ತು.. ಇದಕ್ಕಾಗಿ ಪ್ರತಾಪ್ ದೊಡ್ಡ ಪ್ಲಾನ್ ಮಾಡಿದ್ದಾರೆ, ನಾನು ಡ್ರೋನ್ ಪ್ರತಾಪ್ ನೀವು ಏನು ಎಂದು ಕೇಳಿದ್ದಕ್ಕೆ, ನಾನು ಹೆಲಿಕಾಪ್ಟರ್ ಗಗನಾ ಎಂದು ಉತ್ತರ ಕೊಟ್ಟಿದ್ದಾರೆ. ಗಗನಾಗಾಗಿ ದೊಡ್ಡ ಸರ್ಪ್ರೈಸ್ ಪ್ಲಾನ್ ಮಾಡಿ, ಆಕೆಗಾಗಿ ಹೆಲಿಕಾಪ್ಟರ್ ಅನ್ನೇ ತಂದಿದ್ದಾರೆ ಪ್ರತಾಪ್. ಹೆಲಿಕಾಪ್ಟರ್ ನೋಡಿ ಗಗನಾ ಫುಲ್ ಎಕ್ಸೈಟ್ ಆಗಿದ್ದಾರೆ.