ಸ್ಯಾಂಡಲ್ ವುಡ್ ಕಿಂಗ್ ಡಾ. ಶಿವ ರಾಜ್ ಕುಮಾರ್ ಅವರು ಅಂದಿಗೂ ಹೀರೋ, ಇಂದಿಗೂ ಹೀರೋ, ಎಂದೆಂದಿಗೂ ಹೀರೋ. ಶಿವಣ್ಣ ಅವರಿಗೆ ಈಗ ವಯಸ್ಸು 62 ಆಗಿದ್ದರು ಸಹ ಇಂದಿಗೂ ಅವರ ಎನರ್ಜಿ, ಪವರ್, ಖದರ್ ಕಡಿಮೆ ಆಗಿಲ್ಲ. ಶಿವಣ್ಣ ಅವರು ಬಾಕ್ಸ್ ಆಫೀಸ್ ಕಿಂಗ್ ಆಗಿ ಮರೆಯುತ್ತಿದ್ದಾರೆ. ನವೆಂಬರ್ 15ರಂದು ಶಿವಣ್ಣ ಅಭಿನಯದ ಭೈರತಿ ರಣಗಲ್ ಸಿನಿಮಾ ತೆರೆಕಂಡು, ಅದ್ಭುತವಾದ ಪ್ರದರ್ಶನ ಕಾಣುತ್ತಿರುವ ವಿಷಯ ಗೊತ್ತೇ ಇದೆ. ಈ ಸಿನಿಮಾಗೆ ಅಭಿಮಾನಿಗಳ ಕಡೆಯಿಂದ ಅದ್ಭುತವಾದ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಭೈರತಿ ರಣಗಲ್ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ಗೆ ರೀಚ್ ಆಗಿದೆ.

ಶಿವಣ್ಣ ಅವರು ಭೈರತಿ ರಣಗಲ್ ಸಿನಿಮಾ ಮೂಲಕ ಮತ್ತೊಮ್ಮೆ ಶೈನ್ ಆಗುತ್ತಿದ್ದಾರೆ. ಇಂಡಸ್ಟ್ರಿಗೆ ನಾಯಕನಾಗಿ ಎಂಟ್ರಿ ಕೊಟ್ಟು 38 ವರ್ಷಗಳು ಕಳೆದು ಹೋಗಿದ್ದರು ಸಹ, ಇಂದಿಗೂ ಶಿವಣ್ಣ ಅವರಿಗೆ ಇರುವ ಕ್ರೇಜ್ ಮಾತ್ರ ಕಡಿಮೆ ಆಗಿಲ್ಲ. ಶಿವಣ್ಣ ಲಾಂಗ್ ಹಿಡಿದು ಬರ್ತಾರೆ ಅಂದ್ರೆ ಅಭಿಮಾನಿಗಳು ಹುಚ್ಛೆದ್ದು ಕುಣಿಯುತ್ತಾರೆ. ಭೈರತಿ ರಣಗಲ್ ನಲ್ಲಿ ಸಹ ಶಿವಣ್ಣ ಅದೇ ರೀತಿ ಪಕ್ಕಾ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು Mufti ಸಿನಿಮಾದ ಪ್ರೀಕ್ವೆಲ್ ಆಗಿದೆ. Mufti ಸಿನಿಮಾದ ಭೈರತಿ ರಣಗಲ್ ಪಾತ್ರ ಎಷ್ಟರ ಮಟ್ಟಿಗೆ ಜನರಿಗೆ ಪ್ರಿಯವಾಗಿತ್ತು, ಶಿವಣ್ಣ ಅವರ ಸ್ವಾಗ್ ಸಹ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಭೈರತಿ ರಣಗಲ್ ಸಿನಿಮಾ ಈ ಪಾತ್ರದ ಬ್ಯಾಕ್ ಸ್ಟೋರಿ ಆಗಿದೆ..
ಭೈರತಿ ರಣಗಲ್ ಮೊದಲು ಏನಾಗಿದ್ದರು, ಈ ರೀತಿಯ ಗ್ಯಾಂಗ್ಸ್ಟರ್ ಆಗಿದ್ದು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಭೈರತಿ ರಣಗಲ್ ಸಿನಿಮಾದಲ್ಲಿ ಉತ್ತರ ಸಿಕ್ಕಿದೆ. ಸಿನಿಮಾ ಶಿವಣ್ಣ ಅವರ ಅಭಿಮಾನಿಗಳಿಗೆ ಭರ್ಜರಿ ಬಾಡೂಟದ ಹಾಗಿದೆ ಎಂದರು ತಪ್ಪಲ್ಲ. ಇಂದಿಗೂ ಸಹ ಹೌಸ್ ಫುಲ್ ಪ್ರದರ್ಶನ ಕಾಣುತ್ತಾ ಈ ವರ್ಷದ ಅತಿದೊಡ್ಡ ಬ್ಲಾಕ್ ಬಸ್ಟರ್ ಅನ್ನಿಸಿಕೊಂಡಿದೆ. ಶಿವಣ್ಣ ಅವರು ಕೈಯಲ್ಲಿ ಲಾಂಗ್ ಹಿಡಿದು ಫೈಟ್ ಮಾಡೋ ದೃಶ್ಯಗಳನ್ನ ಅಭಿಮಾನಿಗಳು ಎಂಜಾಯ್ ಮಾಡುತ್ತಿದ್ದಾರೆ. 62ರ ಹರೆಯದಲ್ಲೂ ಶಿವಣ್ಣ ಅವರ ಪರ್ಫಾರ್ಮೆನ್ಸ್ ಇದೆಲ್ಲವೂ ಅಭಿಮಾನಿಗಳಿಗೆ ಹಬ್ಬ ತಂದಿದೆ. ಕನ್ನಡದಲ್ಲಿ ಸಿನಿಮಾ ಸೂಪರ್ ಹಿಟ್ ಆಗಿದೆ. ಶಿವಣ್ಣ ಅವರಿಗೆ ಬೇರೆ ಭಾಷೆಗಳಲ್ಲಿ ಅಭಿಮಾನಿಗಳಲ್ಲಿ ಸಹ ಬಹಳ ದೊಡ್ಡ ಅಭಿಮಾನಿ ಬಳಗ ಇದೆ.

ಜೈಲರ್ ಸಿನಿಮಾ ಶಿವಣ್ಣ ಅವರಿಗೆ ತಮಿಳಿನಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟಿತು. ಒಂದೇ ಒಂದು ದೃಶ್ಯದ ಮೂಲಕ ಶಿವಣ್ಣ ಅವರ ಕ್ರೇಜ್ ದೊಡ್ಡ ಮಟ್ಟಕ್ಕೆ ಏರಿತು ಎಂದರು ತಪ್ಪಲ್ಲ. ಈ ಸಿನಿಮಾ ಇಂದ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಸಹ ಶಿವಣ್ಣ ಅವರಿಗೆ ಅಭಿಮಾನಿ ಬಳಗ ಇದೆ. ಇದೀಗ ಶಿವಣ್ಣ ಅವರ ಭೈರತಿ ರಣಗಲ್ ಸಿನಿಮಾ ಕೂಡ ಮೊದಲಿಗೆ ಬಿಡುಗಡೆ ಆಗಿದ್ದು ಕನ್ನಡದಲ್ಲಿ ಮಾತ್ರ, ಈ ಸಿನಿಮಾಗೆ ಸಿಗುತ್ತಿರೋ ಪ್ರತಿಕ್ರಿಯೆ ನೋಡಿ, ಅಭಿಮಾನಿಗಳ ಒತ್ತಾಯದ ಮೇರೆಗೆ ಇದೀಗ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಹ ಭೈರತಿ ರಣಗಲ್ ತೆರೆ ಕಾಣುವುದಕ್ಕೆ ಸಜ್ಜಾಗಿದೆ. ಇಂದು ಎರಡು ಭಾಷೆಯ ಟ್ರೈಲರ್ ಸಹ ಬಿಡುಗಡೆ ಆಗಿದೆ.

ತೆಲುಗಿನ ಸ್ಟಾರ್ ನಟ ನಾನಿ ಅವರು ತೆಲುಗು ಟ್ರೈಲರ್ ರಿಲೀಸ್ ಮಾಡಿದ್ದರೆ, ತಮಿಳಿನ ಸ್ಟಾರ್ ನಟ ಶಿವ ಕಾರ್ತಿಕೇಯನ್ ತಮಿಳು ಟ್ರೈಲರ್ ರಿಲೀಸ್ ಮಾಡಿದ್ದಾರೆ. ನವೆಂಬರ್ 29ರಂದು ತೆಲುಗು ಮತ್ತು ತಮಿಳು ಭಾಷೆಯಲ್ಲಿ ಭೈರತಿ ರಣಗಲ್ ಸಿನಿಮಾ ತೆರೆಕಾಣಲಿದೆ. ಇನ್ನು ತೆಲುಗು ಮತ್ತು ತಮಿಳು ಭಾಷೆಯಲ್ಲಿ ಇದನ್ನೆಲ್ಲಾ ನೋಡಿ ಅಭಿಮಾನಿಗಳು ಹೇಳ್ತಿರೋದು ಒಂದೇ ಮಾತು, ಪ್ಯಾನ್ ಇಂಡಿಯಾ ಸಿನಿಮಾ ಅಂತ ಬಿಲ್ಡ್ ಅಪ್ ಕೊಟ್ಟು ಮಾಡೋದಲ್ಲ, ನಾವು ಮಾಡೋ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ಗೆ ರೀಚ್ ಆಗ್ಬೇಕು ಎಂದು. ಇದು ನಿಜವು ಹೌದು, ಇನ್ನೊಂದು ವಿಶೇಷ ಏನು ಎಂದರೆ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಶಿವಣ್ಣ ಅವರೇ ಡಬ್ ಸಹ ಮಾಡಿದ್ದಾರೆ.