ದಕ್ಷಿಣ ಭಾರತದ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡಿರುವ ನಟಿಯರ ಪೈಕಿ ಪೂಜಾ ಹೆಗ್ಡೆ ಸಹ ಪ್ರಮುಖರು. ಇವರು ಮೂಲತಃ ಕರ್ನಾಟಕದ ಮಂಗಳೂರಿಗೆ ಸೇರಿದ ವ್ಯಕ್ತಿಯೇ ಆಗಿದ್ದರು ಸಹ, ಇವರು ಓದಿದ್ದು ಬೆಳೆದಿದ್ದು ಎಲ್ಲವೂ ಉತ್ತರ ಭಾರತದಲ್ಲಿ. ಪೂಜಾ ಹೆಗ್ಡೆ ಮೊದಲಿಗೆ ನಟಿಸಿದ್ದು ಹಿಂದಿ ಸಿನಿಮಾದಲ್ಲೇ ಆದರೂ ಅಲ್ಲಿ ಎಲ್ಲಿಯೂ ಸಹ ಇವರಿಗೆ ಯಶಸ್ಸು ಸಿಗಲಿಲ್ಲ. ಹಿಂದಿಯಲ್ಲಿ ನಟಿಸಿದ ಸಿನಿಮಾ ಮಕಾಡೆ ಮಲಗಿದ ಬಳಿಕ ಇವರು ಸೌತ್ ಸಿನಿಮಾ ಲೋಕದ ಕಡೆಗೆ ಎಂಟ್ರಿ ಕೊಟ್ಟರು. ಪೂಜಾ ಹೆಗ್ಡೆ ಅವರು ತೆಲುಗು ಸಿನಿಮಾ ಮೂಲಕ ಸಕ್ಸಸ್ ಕಂಡಿದ್ದು, ಬಳಿಕ ತಮಿಳು ಸಿನಿಮಾದಲ್ಲಿ ಕೂಡ ನಟಿಸಿದರು. ಅಲ್ಲಿ ಕೂಡ ಸಕ್ಸಸ್ ಪಡೆದರು. ಆದರೆ ಇವರಿಗೆ ತೆಲುಗಿನಲ್ಲಿ ಬೇಡಿಕೆ ಹೆಚ್ಚು, ತೆಲುಗಿನ ಬಹುತೇಕ ಸ್ಟಾರ್ ಗಳ ಜೊತೆಗೆ ತೆರೆ ಹಂಚಿಕೊಂಡ ಪೂಜಾ ಹೆಗ್ಡೆ ಇದೀಗ ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ಇವರನ್ನು ಬ್ಯಾನ್ ಮಾಡಿ ಅಂತಿದ್ದಾರೆ ಫ್ಯಾನ್ಸ್.

ಹೌದು, ಪೂಜಾ ಹೆಗ್ಡೆ ಅವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ನೀಡಿರುವ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ತೆಲುಗು ಮತ್ತು ತಮಿಳು ಭಾಷೆಗೆ ವ್ಯತ್ಯಾಸ ಗೊತ್ತಿಲ್ಲದ ಹಾಗೆ ಮಾತನಾಡಿದ್ದಾರೆ ಪೂಜಾ ಹೆಗ್ಡೆ. ಇವರ ಸಿನಿಮಾ ಬಗ್ಗೆ, ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಪೂಜಾ ಹೆಗ್ಡೆ ಅವರಿಗೆ ಪ್ರಶ್ನೆ ಕೇಳಲಾಗಿದೆ, ಅದಕ್ಕೆ ಉತ್ತರ ಕೊಟ್ಟಿರುವ ಪೂಜಾ ಹೆಗ್ಡೆ ಅವರು, ನನ್ನ ಸಿನಿಮಾ ಅಲಾ ವೈಕುಂಠಪುರಮುಲೋ ಮೂಲತಃ ತಮಿಳು ಸಿನಿಮಾ ಆಗಿದೆ, ಹಾಗಿದ್ದರೂ ಹಿಂದಿ ಪ್ರೇಕ್ಷಕರು ಸಿನಿಮಾ ನೋಡಿ ಮೆಚ್ಚಿಕೊಂಡರು. ಸಿನಿಮಾಗೆ ಯಾವುದೇ ಭಾಷೆಯ ಬ್ಯಾರಿಯರ್ ಇಲ್ಲ. ಎಲ್ಲಾ ಭಾಷೆಯ ಸಿನಿಮಾಗಳನ್ನು ವೀಕ್ಷಕರು ನೋಡಿ ಪ್ರೋತ್ಸಾಹಿಸುತ್ತಾರೆ ಎಂದು ಹೇಳಿದ್ದಾರೆ. ಈ ಹೇಳಿಕೆ ನೀಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನಟ ಅಲ್ಲು ಅರ್ಜುನ್ ಅವರ ಅಭಿಮಾನಿಗಳು ಅಸಮಾಧಾನ ಗೊಂಡಿದ್ದಾರೆ..

ಇದು ಪೂಜಾ ಹೆಗ್ಡೆ ಅವರ ಕೆರಿಯರ್ ನ ಪ್ರಮುಖ ಸಿನಿಮಾ. ಈ ಸಿನಿಮಾ ಇಂದಲೇ ಅವರಿಗೆ ಹೆಚ್ಚು ಜನಪ್ರಿಯತೆ ಸಿಕ್ಕಿತು. ಬೇರೆ ಬೇರೆ ಭಾಷೆಯಿಂದ ಆಫರ್ ಗಳು ಬರುವುದಕ್ಕೆ ಶುರುವಾಯಿತು ಎಂದು ಹೇಳಿದರು ಸಹ ತಪ್ಪಲ್ಲ. ಹಾಗಿದ್ದರೂ ಪೂಜಾ ಹೆಗ್ಡೆ ಅವರು ಅಂಥಾ ಮುಖ್ಯವಾದ ಸಿನಿಮಾ ಬಗ್ಗೆಯೇ ಮರೆತು ಬಿಟ್ಟಿದ್ದಾರೆ. ಈ ಸಿನಿಮಾದಲ್ಲಿ ಹೀರೋ ಆಗಿದ್ದವರು ಅಲ್ಲು ಅರ್ಜುನ್. ಅಲ್ಲು ಅರ್ಜುನ್ ಅವರಿಗೂ ಸಹ ಹೆಚ್ಚು ಹೆಸರು ತಂದುಕೊಟ್ಟ ಸಿನಿಮಾ ಇದು, ಇದೊಂದು ಅಪ್ಪಟ ತೆಲುಗು ಸಿನಿಮಾ. ಆದರೆ ಪೂಜಾ ಹೆಗ್ಡೆ ಅವರು ವಿಡಿಯೋದಲ್ಲಿ ಇದು ತಮಿಳು ಸಿನಿಮಾ ಎಂದು ಹೇಳಿದ್ದಾರೆ. ಭಾಷೆಯ ನಡುವಿನ ವ್ಯತ್ಯಾಸ ಇವರಿಗೆ ಗೊತ್ತಿಲ್ಲವಾ ಎಂದು ಅಭಿಮಾನಿಗಳು ಆಶ್ಚರ್ಯ ಪಟ್ಟಿದ್ದಾರೆ. ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಈ ರೀತಿ ತಪ್ಪಾಗಿ ಹೇಳಬಹುದಾ ಎಂದು ಪೂಜಾ ಹೆಗ್ಡೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ..
ಇನ್ನು ಕೆಲವರು, ಇವರು ಆ ಸಿನಿಮಾದಲ್ಲಿ ಏನು ಕೆಲಸ ಮಾಡಿಲ್ಲ, ಹಾಗಾಗಿ ನೆನಪಿರೋದಕ್ಕೆ ಸಾಧ್ಯ ಕೂಡ ಇಲ್ಲ, ಇವರಿಂದ ಇದನ್ನೆಲ್ಲಾ ನಿರೀಕ್ಷೆ ಮಾಡಬಾರದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಪೂಜಾ ಹೆಗ್ಡೆ ಅವರನ್ನು ತೆಲುಗು ಸಿನಿಮಾ ಇಂದ ಬ್ಯಾನ್ ಮಾಡಬೇಕು ಎಂದಿದ್ದಾರೆ. ಒಟ್ಟಿನಲ್ಲಿ ಈಕೆ ನೀಡಿರುವ ಒಂದೇ ಒಂದು ಹೇಳಿಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಬ್ಯಾನ್ ಮಾಡಿ ಎಂದು ಹೇಳುವ ಹಂತಕ್ಕೆ ಹೋಗಿದೆ. ಪೂಜಾ ಹೆಗ್ಡೆ ಅವರೇ ಆಗಲಿ, ಇನ್ಯಾವ ಸೆಲೆಬ್ರಿಟಿ ಆಗಿರಲಿ, ಯಾವುದೇ ಹೇಳಿಕೆ ಕೊಡುವುದಕ್ಕಿಂತ ಯೋಚಿಸಿ ನಂತರ ಉತ್ತರ ಕೊಡಬೇಕು. ಈಗ ನೆಟ್ಟಿಗರು ಎಲ್ಲವನ್ನು ಗಮನಿಸುವ ಕಾರಣ ಸಣ್ಣ ತಪ್ಪುಗಳು ಕೂಡ ದೊಡ್ಡದಾಗುತ್ತದೆ, ಆ ಕಲಾವಿದರ ಬಗ್ಗೆ ಇರುವ ಅಭಿಪ್ರಾಯವನ್ನೇ ಬದಲಾಯಿಸಿ ಬಿಡುತ್ತದೆ.

ಈ ಎಲ್ಲಾ ಕಾರಣದಿಂದಲೇ ಕಲಾವಿದರು ಎಷ್ಟೇ ಹುಷಾರಾಗಿದ್ದರು ಸಾಲದು ಎಂದು ಹೇಳುವುದು. ಇನ್ನು ಪೂಜಾ ಹೆಗ್ಡೆ ಅವರ ವಿಚಾರಕ್ಕೆ ಬರುವುದಾದರೆ ಇವರು ಪ್ರಭಾಸ್ ಅವರ ಜೊತೆಗೆ ರಾಧೆ ಶ್ಯಾಮ್ ಸಿನಿಮಾದಲ್ಲಿ ನಟಿಸಿದ ಬಳಿಕ ಇನ್ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಯಶ್ ಅವರ ಜೊತೆಗೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಟಾಕ್ಸಿಕ್ ಸಿನಿಮಾಗೆ ಬೇರೆ ನಾಯಕಿಯರು ಆಯ್ಕೆಯಾಗಿದ್ದಾರೆ. ಸಿನಿಮಾ ಇಂದ ಸ್ವಲ್ಪ ದೂರವೇ ಉಳಿದಿರುವ ಪೂಜಾ ಹೆಗ್ಡೆ ಅವರು ಈ ರೀತಿ ಹೇಳಿಕೆ ಕೊಟ್ಟು ಇಮೇಜ್ ಡ್ಯಾಮೇಜ್ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಆದರೂ ಇವರು ಹುಷಾರಾಗಿ ಮಾತನಡುವುದು ಒಳ್ಳೆಯದು. ಆಗ ಹೆಚ್ಚು ಅವಕಾಶಗಳು ಸಿಗಬಹುದು.