ಕನ್ನಡ ಚಿತ್ರರಂಗ ಎಂದ ತಕ್ಷಣ ನೆನಪಾಗುವ ಮೊದಲ ಹೆಸರು ಡಾ. ರಾಜ್ ಕುಮಾರ್. ಇವರು ಕರ್ನಾಟಕ ಮತ್ತು ಕನ್ನಡ ಭಾಷೆಯ ಪ್ರತಿನಿಧಿ ಎಂದು ಹೇಳಿದರೆ ಖಂಡಿತ ತಪ್ಪಾಗುವುದಿಲ್ಲ. ಇಂಥ ಡಾ. ರಾಜ್ ಕುಮಾರ್ ಅವರು 50 ವರ್ಷಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಅಪರೂಪದ ಪ್ರತಿಭೆ. ಇವರ ಇಡೀ ಕುಟುಂಬ ಕನ್ನಡ ಚಿತ್ರರಂಗದ ಸೇವೆಯಲ್ಲಿ ತೊಡಗಿದೆ ಎಂದು ಹೇಳಿದರೆ ತಪ್ಪಲ್ಲ. ಡಾ. ರಾಜ್ ಕುಮಾರ್ ಅವರ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಸಹ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಕನ್ನಡ ಸಿನಿಮಾಗಳಲ್ಲಿ ನಟಿಸುತ್ತಾ, ಕನ್ನಡದ ಸೇವೆ ಮಾಡುತ್ತಿದ್ದಾರೆ. ಇವರ ಕುಟುಂಬದ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ.

ಸಾವಿರಾರು ಜನರು ಬದುಕು ಕಟ್ಟಿಕೊಳ್ಳುವುದಕ್ಕೆ ದೊಡ್ಮನೆ ಸಹಾಯ ಮಾಡಿದೆ, ಜನರು ಇವರ ಕುಟುಂಬವನ್ನ ಇವರ ಮನೆಯನ್ನ ಪ್ರೀತಿಯಿಂದ ದೊಡ್ಮನೆ ಎಂದೇ ಕರೆಯುತ್ತಾರೆ. ಪಾರ್ವತಮ್ಮ ರಾಜ್ ಕುಮಾರ್ ಅವರು ಈ ಕುಟುಂಬದಲ್ಲಿ ನಿರ್ಮಾಣ ಸಂಸ್ಥೆ ಶುರು ಮಾಡಿ, ಹಲವು ನಾಯಕಿಯರನ್ನು, ಕಲಾವಿದರನ್ನು, ತಂತ್ರಜ್ಞರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಹಲವಾರು ಜನರಿಗೆ ಇವರ ಸಂಸ್ಥೆಯ ಮೂಲಕ ಕೆಲಸ ಕೊಟ್ಟಿದ್ದಾರೆ. ಅಪ್ಪಾಜಿ ಎಂದೇ ಕರೆಯಲ್ಪಡುವ ಡಾ. ರಾಜ್ ಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರೂ ಕೂಡ ಕಡಿಮೆಯೇ. ಇವರು ಸರಳತೆಗೆ ಹೆಸರುವಾಸಿ ಆದವರು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಕನ್ನಡಕ್ಕಾಗಿ ಹಲವು ಬಾರಿ ಹೋರಾಟ ಮಾಡಿದವರು. ಇವರ ಕುಟುಂಬದಲ್ಲಿ, ಮಕ್ಕಳು ಸ್ಯಾಂಡಲ್ ವುಡ್ ಸ್ಟಾರ್ ಗಳಾಗಿದ್ದಾರೆ. ಶಿವಣ್ಣ ಅವರು, ರಾಘಣ್ಣ ಅವರು ಮತ್ತು ಅಪ್ಪು ಅವರು ಈ ಮೂವರು ಕೂಡ ಸ್ಟಾರ್ ಹೀರೋಸ್. ಇನ್ನು ಮೂರನೇ ತಲೆಮಾರಿನ ವಿನಯ್ ರಾಜ್ ಕುಮಾರ್, ಯುವ ರಾಜ್ ಕುಮಾರ್ ಮತ್ತು ಧನ್ಯಾ ರಾಮ್ ಕುಮಾರ್ ಇವರೆಲ್ಲರೂ ಸಹ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದೊಡ್ಮನೆ ಕುಟುಂಬವೆ ಕನ್ನಡಕ್ಕಾಗಿ ಇರುವಾಗ, ಅವರ ಮನೆಯ ಮಕ್ಕಳಿಗೆ ಆರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಹೌದು, ಮೂವರು ಮಕ್ಕಳು ಕೂಡ ಅನಾ*ರೋಗ್ಯದಿಂದ ಬಳಲಿದ್ದಾರೆ.

ಅಪ್ಪು ಅವರು ಸದಾ ನಗುನಗುತ್ತಾ ಇದ್ದು, ಸಂತೋಷದಿಂದ ಎಲ್ಲರಿಗೂ ಸಹಾಯ ಮಾಡುತ್ತಿದ್ದವರು, ಫಿಟ್ನೆಸ್ ಗೆ ಹೆಸರುವಾಸಿ ಆಗಿದ್ದವರು ಅಪ್ಪು. ಇಂಥ ಅಪ್ಪು ಅವರಿಗೆ ದಿಢೀರ್ ಎಂದು ಹೃದಯಾಘಾತವಾಗಿ ವಿಧಿವಶರಾದರು. ಅಪ್ಪು ಅವರಂಥ ಆರೋಗ್ಯವಂತನಿಗೆ ಈ ರೀತಿ ಆಗುತ್ತದೆ ಎಂದು ಯಾರು ಕೂಡ ಊಹಿಸಿರಲಿಲ್ಲ. ಸರಳತೆ, ಇನ್ನೊಬ್ಬರಿಗೆ ಸಹಾಯ ಮಾಡುವುದೇ ಜೀವನ ಎಂದು ಬದುಕಿದ್ದ ಅಪ್ಪು ಅವರಿಗೆ ಹೃದಯಾಘಾತ ಆಗಿದ್ದು, ಇಡೀ ಕರ್ನಾಟಕಕ್ಕೆ ಶಾಕ್ ನೀಡಿತ್ತು, ಇಂದಿಗೂ ಕೂಡ ಅಭಿಮಾನಿಗಳು ಆ ನೋವಿನಿಂದ ಹೊರಬಂದಿಲ್ಲ, ಅಪ್ಪು ಅವರನ್ನು ಮರೆತಿಲ್ಲ. ಈ ನೋವೇ ಇನ್ನು ಕಡಿಮೆ ಆಗದೇ ಇರುವಾಗ, ಶಿವಣ್ಣ ಅವರಿಗೆ ಆರೋಗ್ಯದ ಸಮಸ್ಯೆ ಎದುರಾಗಿದೆ.
ಕ್ಯಾನ್ಸರ್ ಜೊತೆ ಯುದ್ಧ ಮಾಡುತ್ತಿರುವ ಶಿವಣ್ಣ ಮುಂದಿನ ತಿಂಗಳು ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ವೈದ್ಯರ ಮೇಲೆ ನಂಬಿಕೆ ಇಡಬೇಕು, ಇಡದೇ ಬೇರೆ ದಾರಿ ಇಲ್ಲ ಎನ್ನುವ ಶಿವಣ್ಣ, ನಾನು ಹುಷಾರಾಗಿ ಬರ್ತೀನಿ ಅಭಿಮಾನಿಗಳು ಆತಂಕ ಪಡಬಾರದು ಎಂದು ಧೈರ್ಯ ತುಂಬಿದ್ದಾರೆ. ಶಿವಣ್ಣ ಬೇಗ ಹುಷಾರಾಗಿ ಬರಲಿ ಎನ್ನುವುದು ಅಭಿಮಾನಿಗಳ ಆಸೆ ಕೂಡ ಹೌದು. ಇನ್ನು ರಾಘಣ್ಣ ಅವರು 2013ರಲ್ಲೇ ಅನಾರೋಗ್ಯಕ್ಕೆ ಒಳಗಾಗಿ, ಸಾ*ವನ್ನು ಗೆದ್ದು ಬಂದಿರುವವರು, ಇವತ್ತಿಗೂ ಕೂಡ ರಾಘಣ್ಣ ಅವರು ಸಾಮಾನ್ಯವಾಗಿ ಎಲ್ಲರಂತೆ ನಡೆಯಲು ಆಗುವುದಿಲ್ಲ. ಎಲ್ಲರಿಗೂ ಪ್ರೀತಿ ಕೊಡೋ ದೊಡ್ಮನೆ ಕುಟುಂಬದ ಮಕ್ಕಳಿಗೆ ಈ ರೀತಿ ಆಗಬೇಕೆ?