ನಟಿ ಶೋಭಾ ಶೆಟ್ಟಿ ಕನ್ನಡದ ಹುಡುಗಿ. ಆದರೆ ಇವರು ಕನ್ನಡ ಮಾತ್ರವಲ್ಲದೇ ತೆಲುಗು ಕಿರುತೆರೆಯಲ್ಲಿ ಕೂಡ ಗುರುತಿಸಿಕೊಂಡಿದ್ದಾರೆ. ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಶೋಭಾ ಶೆಟ್ಟಿ ನಟಿಸಿದರು. ಇದರಲ್ಲಿ ನಾಯಕಿ ಸನ್ನಿಧಿಯ ತಂಗಿಯ ಪಾತ್ರದಲ್ಲಿ ನಟಿಸಿದ್ದರು ಶೋಭಾ, ಇವರ ಪಾತ್ರದ ಹೆಸರು ತನು. ಭಾವನ ತಮ್ಮನನ್ನೇ ಪ್ರೀತಿಸಿ, ಮದುವೆಯಾಗುವ ಪಾತ್ರ ಆಗಿತ್ತು ತನು. ಈ ಪಾತ್ರ ಆರಂಭದಲ್ಲಿ ಚೆನ್ನಾಗಿಯೇ ಇದ್ದರೂ, ಮದುವೆ ನಂತರ ನೆಗಟಿವ್ ಶೇಡ್ ಇದ್ದ ಪಾತ್ರವಾಗಿತ್ತು, ಹಾಗೆಯೇ ಶೋಭಾ ಶೆಟ್ಟಿ ಅವರು ಸಹ ಈ ಪಾತ್ರದಲ್ಲಿ ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. ಒಂದಷ್ಟು ಸಮಯವಾದ ನಂತರ ಅಗ್ನಿಸಾಕ್ಷಿ ಧಾರಾವಾಹಿ ಇಂದ ದೂರ ಸರಿದರು.

ಬಳಿಕ ಇವರು ತೆಲುಗು ಕಿರುತೆರೆಯಲ್ಲಿ ಹೆಚ್ಚು ಗುರುತಿಸಿಕೊಂಡರು. ಕಾರ್ತಿಕ ದೀಪಮ್ ಸೇರಿದಂತೆ ಕೆಲವು ತೆಲುಗು ಧಾರಾವಾಹಿಗಳ ಮೂಲಕ ಶೋಭಾ ಶೆಟ್ಟಿ ಮನೆಮಾತಾದವರು. ಇವರು ಕನ್ನಡದ ಧಾರಾವಾಹಿಯಲ್ಲಿ ನಟಿಸಿ ಕೆಲವು ವರ್ಷಗಳು ಕಳೆದಿವೆ. ಇದೀಗ ಬಿಗ್ ಬಾಸ್ ಮೂಲಕ ಶೋಭಾ ಶೆಟ್ಟಿ ಕನ್ನಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಹೋಗುವ ದಿವಸ ವೇದಿಕೆಯ ಮೇಲೆ, ನಾನು ಯಾವಾಗಲೂ ಕನ್ನಡದವಳು, ಕನ್ನಡಕ್ಕೆ ಕಂಬ್ಯಾಕ್ ಮಾಡಬೇಕು ಅಂತ ಅಂದುಕೊಳ್ಳುತ್ತಿದ್ದೆ, ಸುಮಾರು ಅವಕಾಶಗಳು ಬಂತು, ಆದರೆ ಬಿಗ್ ಬಾಸ್ ಅವಕಾಶ ಬಂದಿದ್ದು ನನ್ನ ಪುಣ್ಯ.. ಬಿಗ್ ಬಾಸ್ ಮೂಲಕ ಕಂಬ್ಯಾಕ್ ಮಾಡುತ್ತಿದ್ದೇನೆ ಎಂದಿದ್ದರು ಶೋಭಾ.
ಕನ್ನಡಕ್ಕೆ ಇದು ಇವರ ಕಂಬ್ಯಾಕ್ ಆಗಿದ್ದು, ಬರುತ್ತಿದ್ದ ಹಾಗೆಯೇ ಶೋಭಾ ಶೆಟ್ಟಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದಾರೆ. ಬಿಗ್ ಬಾಸ್ ವೇದಿಕೆ ಅನ್ನೋದು ಇವರಿಗೆ ಹೊಸದಲ್ಲ, ತೆಲುಗು ಬಿಗ್ ಬಾಸ್ ಸೀಸನ್ 7ರಲ್ಲಿ ಶೋಭಾ ಶೆಟ್ಟಿ ಅವರು ಸ್ಪರ್ಧಿಯಾಗಿ ಹೋಗಿದ್ದರು, ಆಗ ತೆಲುಗಿನಲ್ಲಿ ಸಹ ಇವರ ಆರ್ಭಟ ಜೋರಾಗಿತ್ತು. ಶೋಭಾ ಶೆಟ್ಟಿ ಅವರನ್ನು ತೆಲುಗು ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದರು. ಅಲ್ಲಿಯು ಸಹ ನೇರನುಡಿ, ಜಗಳ ಈ ಕಾರಣಗಳಿಗೆ ಹೆಚ್ಚು ಸುದ್ದಿಯಾಗಿದ್ದರು ಶೋಭಾ. ಇದೀಗ ಕನ್ನಡದಲ್ಲಿ ಸಹ ಅದೇ ರೀತಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಇನ್ನಷ್ಟು ಸದ್ದು ಮಾಡಿ, ವಿನ್ನರ್ ಆಗಲೇಬೇಕು ಎಂದು ಬಂದಿದ್ದಾರೆ.

ವೈಲ್ಡ್ ಕಾರ್ಡ್ ಎಂಟ್ರಿ ಆಗಿ 50 ದಿನಗಳ ಬಳಿಕ ಮನೆಯೊಳಗೆ ಹೋಗಿರೋ ಶೋಭಾ ಅವರಿಗೆ ಮನೆಯೊಳಗೆ ಇರುವವರ ಬಗ್ಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ಪ್ಲಾನ್ ಮಾಡಿ ಆಡುತ್ತಿದ್ದಾರೆ. ಬಿಗ್ ಬಾಸ್ ಮನೆಯೊಳಗೇನೋ ಶೋಭಾ ಶೆಟ್ಟಿ ಭಾರಿ ಸದ್ದು ಮಾಡುತ್ತಿದ್ದಾರೆ. ಇನ್ನು ನಿಜ ಜೀವನದಲ್ಲಿ ಇವರ ಬಾಯ್ ಫ್ರೆಂಡ್ ಅಥವಾ ಫಿಯಾನ್ಸಿ ಬಗ್ಗೆ ತಿಳಿದುಕೊಳ್ಳೋ ಕುತೂಹಲ ಎಲ್ಲರಿಗೂ ಇದೆ. ಇವರ ಬಗ್ಗೆ ಇಂದು ತಿಳಿಯೋಣ.. ಶೋಭಾ ಶೆಟ್ಟಿ ಅವರು ಮದುವೆ ಆಗಲಿರುವ ಹುಡುಗನ ಹೆಸರು ಯಶವಂತ್. ಇವರು ಕೂಡ ಕಿರುತೆರೆಯಲ್ಲಿ ನಟನಾಗಿ ಗುರುತಿಸಿಕೊಂಡಿರುವವರು.
ಹೌದು, ಕಾರ್ತಿಕ ದೀಪಂ ಧಾರಾವಾಹಿಯಲ್ಲಿ ಇಬ್ಬರು ಜೊತೆಯಾಗಿ ಅಭಿನಯಿಸಿದರು. ಆಗಿನಿಂದ ಪ್ರೀತಿ ಶುರುವಾಗಿದೆ, ತೆಲುಗು ಬಿಗ್ ಬಾಸ್ ವೇದಿಕೆಯಲ್ಲಿ ಎಲ್ಲರ ಎದುರು ತಮ್ಮ ಹುಡುಗನ ಪರಿಚಯ ಮಾಡಿಕೊಟ್ಟಿದ್ದರು ಶೋಭಾ. ಇನ್ನು ಇವರಿಬ್ಬರು ಅದ್ಧೂರಿಯಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಮದುವೆ ಕೂಡ ಆಗುತ್ತಾರೆ. ಪ್ರಸ್ತುತ ಶೋಭಾ ಅವರು ಬಿಗ್ ಬಾಸ್ ನಲ್ಲಿ ಬ್ಯುಸಿ ಇದ್ದು, ಯಶವಂತ್ ಅವರು ನಟನೆಯಲ್ಲಿ ಬ್ಯುಸಿ ಆಗಿದ್ದಾರೆ. ಯಶವಂತ್ ಅವರನ್ನು ತುಂಬಾ ಪ್ರೀತಿ ಮಾಡುವ ಶೋಭಾ ಅವರು ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ.