ಕ್ರಿಕೆಟ್ ವಿಶ್ವಕಪ್ ಅತ್ಯಂತ ನಿರೀಕ್ಷಿತ ಘಟನೆಗಳಲ್ಲಿ ಒಂದಾಗಿದೆ. ಕ್ರಿಕೆಟ್ ಅಭಿಮಾನಿಗಳಂತೂ ವಿಶ್ವಕಪ್ 2023 ನ್ನು ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅದಲ್ಲಲೇ ಈ ಬಾರಿಯ ವಿಶ್ವಕಪ್ ಭಾರತದ ಮಣ್ಣಿನಲ್ಲೇ ನಡೆಯುತ್ತಿದೆ. ಇನ್ನೊಂದು ಖುಷಿಯ ವಿಚಾರವೆಂದರೆ ಇನ್ನು ಮೂರು ವರ್ಷಗಳ ಕಾಲ ಭಾರತ ತಂಡವನ್ನು ಪ್ರಾಯೋಜಿಸಲು ಡ್ರೀಮ್ 11 ಆಯ್ಕೆಯಾಗಿದೆ. ಇದರ ಮೊದಲು ಬೈಜುಸ್ ಕಂಪನಿಯು ಪ್ರಾಯೋಜಕತ್ವ ವವನ್ನು ಹೊಂದಿತ್ತು. ಇದು ಮಾರ್ಚ್ ನಲ್ಲಿ ಕೊನೆಗೊಂಡಿತ್ತು. ಇದೀಗ ಹೊಸ ಪ್ರಾಯೋಜಕತ್ವವನ್ನು ಡ್ರೀಮ್ 11 ತೆಗೆದುಕೊಂಡಿರುವುದಾಗಿ ಬಿಸಿಸಿಐ ತಿಳಿಸಿದೆ. ಡ್ರೀಮ್ 11 ಪ್ರಾಯೋಜಕತ್ವವನ್ನು 358 ಕೋಟಿ ರೂಪಾಯಿಗೆ ಖರೀದಿಸಿದೆ ಹಾಗಾಗಿ ಇನ್ನು ಮುಂದೆ ಟೀಮ್ ಇಂಡಿಯಾ ಜೆರ್ಸಿ ಮೇಲೆ ಡ್ರೀಮ್ 11 ಹೆಸರು ಕಾಣಿಸಲಿದೆ.

ಫ್ಯಾಂಟಸಿ ಗೇಮಿಂಗ್ ಕಂಪನಿ ಡ್ರೀಮ್ 11 ಮೂರು ವರ್ಷಗಳ ಕಾಲ ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡದ ಪ್ರಮುಖ ಪ್ರಾಯೋಜಕರಾಗಿರಲಿದೆ ಎಂದು ದೇಶದ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ ಈ ತಿಂಗಳ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದ ಪ್ರಾರಂಭವಾಗುವ ಭಾರತದ ಜೆರ್ಸಿಯಲ್ಲಿ ಡ್ರೀಮ್ 11 ಲೋಗೋ ಕಾಣಿಸುತ್ತದೆ, ಇದು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023ರಿಂದ 2025 ರ ವರೆಗೆ ಮುಂದುವರೆಯುತ್ತದೆ ಎಂದು ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದೆ.
ಆದ್ದರಿಂದ ಇನ್ನು ಮುಂದೆ ಜೆರ್ಸಿ ಮೇಲೆ ಡ್ರೀಮ್ 11 ನ ಜಾಹಿರಾತು ಕಾಣಿಸಿಕೊಳ್ಳುತ್ತದೆ. “ನಾನು ಡ್ರೀಮ್ 11 ಅನ್ನು ಅಭಿನಂದಿಸುತ್ತೇನೆ ಮತ್ತು ಅವರನ್ನು ಮತ್ತೆ ಮಂಡಳಿಯಲ್ಲಿ ಸ್ವಾಗತಿಸುತ್ತೇನೆ” ಎಂದು ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಹೇಳಿದ್ದಾರೆ. ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಸರಣಿಯು ಜುಲೈ 12 ರಿಂದ ಶುರುವಾಗಲಿದ್ದು ಈ ಸರಣಿಯಲ್ಲಿ ಮೊದಲಿಗೆ 2 ಟೆಸ್ಟ್ ಪಂದ್ಯಗಳನ್ನಾಡಲಾಗುತ್ತದೆ. ಮೊದಲ ಟೆಸ್ಟ್ ಪಂದ್ಯ ಜುಲೈ 12 ರಿಂದ 16 ರವರೆಗೆ ನಡೆದರೆ, 2ನೇ ಪಂದ್ಯ ಜುಲೈ 20 ರಿಂದ 24ರವರೆಗೆ ನಡೆಯಲಿದೆ.ಇದಾದ ಬಳಿಕ ಜುಲೈ 27, 29 ರಂದು ಮೊದಲ ಮತ್ತು 2ನೇ ಏಕದಿನ ಪಂದ್ಯ ನಡೆಯಲಿದೆ.