ನಮ್ಮ ಮರೆಯದ ಮಾಣಿಕ್ಯ ಅಪ್ಪು ನಮ್ಮನ್ನೆಲ್ಲಾ ಅಗಲಿ ಒಂದು ವರ್ಷ ಕಳೆದಿದೆ.ಹೀಗಿದ್ದರೂ ಈ ವಿಚಾರ ನಮಗೆ ನೆನಪಾದಾಗ ಮಾತ್ರ ನಮ್ಮ ಅಪ್ಪು ನಮ್ಮೊಟ್ಟಿಗೆ ಇಲ್ಲ ಏನೆಂದೆನಿಸುವುದು.ಆದರೆ ಎಲ್ಲರೂ ಕೊಡ ನಮ್ಮ ಅಪ್ಪು ಎಲ್ಲೂ ಹೋಗಿಲ್ಲ ಇಲ್ಲಿಯೇ ಇದ್ದಾರೆ ಎಂಬ ನಂಬಿಕೆಯೇ ಹೆಚ್ಚು.ಈತನಿಗೆ ಇರುವ ಅಭಿಮಾನಿಗಳ ಬಳಗ ಮಾತ್ರಾ ಅಪಾರ. ನಮ್ಮ ಪುನೀತ್ ಅವರು ಸರಳತೆಗೆ ಇನ್ನೊಂದು ಹೆಸರು ಎಂದರೆ ತಪ್ಪಾಗಲಾರದು. ಅವರು ಅದೆಷ್ಟು ಜನರ ಬಾಳಿಗೆ ಬೆಳಕಾಗಿದ್ದಾರೆ ಎಂದು ಊಹಿಸಲಾಗದು. ಈ ಒಂದು ಅದ್ಭುತ ಜೀವ ನಮ್ಮೆಲ್ಲರನ್ನು ಬಿಟ್ಟು ಹೋಗಿ ತಿಂಗಳುಗಳೇ ಕಳೆದರು ಇಂದಿಗೂ ಅದನ್ನು ಅರಗಿಸಿಕೊಳ್ಲಲು ಸಾಧ್ಯವಾಗುತಿಲ್ಲ. ಇವರು ಹೊದ ದಿನದಿಂದಲೂ ಈಗಿನ ವರೆಗೂ ನೆಡೆಯುವ ಯಾವ ಸಭೆ ಸಮಾರಂಭಗಳಲ್ಲಿ ಇವರ ಫೋಟೋ ಇಟ್ಟು ಪೂಜೆ ಸಲ್ಲಿಸುತ್ತಾರೆ.
ಇನ್ನು ಬಿಡುಗಡೆ ಪಡೆಯುವ ಹಾಡು, ಟ್ರೈಲರ್, ಸಿನೆಮಾ ಯಾವುದೇ ಆದರು ಇವರಿಗೆ ನಮನ ಸಲ್ಲಿಸುತ್ತಾರೆ. ಈಗಂತೂ ಇದು ಅಪ್ಪುವಿನನ್ನು ನೆನೆಯದೆ ಯಾವ ಮಾಡುವಂತಿಲ್ಲ ಎಂಬಂತಾಗಿದೆ.ನಮ್ಮ. ಅವರು ಅದೆಷ್ಟು ಜನರ ಬಾಳಿಗೆ ಬೆಳಕಾಗಿದ್ದಾರೆ ಎಂದು ಊಹಿಸಲಾಗದು.ಇವರು ದಾನ ಧರ್ಮ ಕೆಲಸಗಳಲ್ಲಿ ತೊಡಗಿಸಿಕೊಂಡ ದೇವತಾಮನುಷ್ಯ.ಹಾಗೆಯೇ ಕನ್ನಡ ಸಿನೆಮಾ ಮಾಡಬೇಕು ಎಂದು ಆಸೆಗಳನ್ನು ಹೊತ್ತು ಬರುವ ಹೊಸ ಹೊಸ ಮುಖಗಳಿಗೆ ಪುನೀತ್ ಅವರು ನಿರ್ಮಿಸಿರುವ “ಪಿ ಆರ್ ಕೆ ಪ್ರೊಡಕ್ಷನ್” ಆಸರೆಯಾಗಿ ನಿಂತಿದೆ.ಇವರ ಬ್ಯಾನರ್ ಇಂದ ಅದೆಷ್ಟೋ ಹೊಸ ಪ್ರತಿಬೆಗಳು ಇದೀಗ ನಮ್ಮ ಸ್ಯಾಂಡಲ್ವುಡ್ ನಲ್ಲಿ ಹೆಸರು ಗಳಿಸಿ ಮಿಂಚುತ್ತಿದ್ದಾರೆ.
ಆದರೆ ಇಲ್ಲಿ ಗಮನಿಸುವ ವಿಚಾರ ಕೂಡ ಮತ್ತೊಂದು ಇದೆ ಅದೇನೆಂದರೆ ಇವರ ಬ್ಯಾನರ್ ಅಡಿಯಲ್ಲಿ ಇವರು ನಟಿಸಿದ ಯಾವ ಚಿತ್ರ ಕೂಡ ಬಿಡುಗಡೆ ಪಡೆದಿಲ್ಲ. ಇವರಿಗೆ ದುಡ್ಡು ಮಾಡುವ ಆಸೆ ಇಲ್ಲ ಹಾಗೂ ಮತ್ತೊಬ್ಬರಿಗೆ ಸಹಾಯ ಮಾಡಬೇಕು ಹಂಬಲ ಇವರಲ್ಲಿ ಎಷ್ಟರ ಮಟ್ಟಿಗೆ ಇದೆ ಎಂಬುದು ಇದರಲ್ಲಿಯೇ ತಿಳಿಯುತ್ತದೆ.ಈತ ನಮ್ಮನ್ನು ಅಗಲಿದ ನಂತರ ಇವರಿಗೆ ಡಾಕ್ಟ್ರೇಟ್ ಹಾಗೂ ಸಾಕಷ್ಟು ಪ್ರಶಸ್ತಿಗಳು ಇವರನ್ನು ಅರಸಿ ಬಂತು.ಇದೀಗ ಅದೇ ಸಾಲಿನಲ್ಲಿ ಕರ್ನಾಟಕ ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಿದ್ದರು.
ನೆನ್ನೆ ಕನ್ನಡಿಗರ ಹಬ್ಬ ಎಂದು ಹೇಳಬಹುದು. ಕನ್ನಡಿಗರು ವಿಜೃಂಭಣೆಯಿಂದ ತಿಂಗಳು ಪೂರ್ತಿ ನಡೆಸುವ ಹಬ್ಬ ಎಂದರೆ ಅದು ಕನ್ನಡ ರಾಜ್ಯೋತ್ಸವ.ಇಂತಹ ಒಂದು ಸುದಿನದಲ್ಲಿ ನಮ್ಮ ಹೆಮ್ಮೆಯ ವೀರ ಕನ್ನಡಿಗನಾದ ಶ್ರೀ ಪುನೀತ್ ರಾಜ್ ಕುಮಾರ್ ಅವರಿಗೆ ಮ*ರ*ಣೋತ್ತರ ಕರ್ನಾಟಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.ಈ ಪ್ರಶಸ್ತಿಯನ್ನೂ ರಾಜ್ಯದ ಮುಖ್ಯಮಂತ್ರಿ “ಬಸವರಾಜ್ ಬೊಮ್ಮಾಯಿ” ಅವರು ಈ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕಳೆದ ವರ್ಷದ ನವೆಂಬರ್ ತಿಂಗಳಲ್ಲೇ ಘೋಷಿಸಿದ್ದರು. ಸದ್ಯ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪುನೀತ್ ಅವರಿಗೆ ಈ ಉನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಇನ್ನು ಈ ಪ್ರಶಸ್ತಿಗೆ ಅದರದೇ ಆದ ಗೌರವ ಹಾಗೂ ನಿಯಮಗಳಿವೆ.ಈ ವರೆಗೂ ಕರ್ನಾಟಕ ರತ್ನ ಪ್ರಶಸ್ತಿ ಪಡೆದವರೆಲ್ಲ ಕೆಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಹಾಗೂ ಅವರೆಲ್ಲರಿಗೂ 60ವರ್ಷದ ಮೇಲ್ಪಟ್ಟವರಿಗೆ ಮಾತ್ರ ಈ ಪ್ರಶಸ್ತಿ ನೀಡಲಾಗಿದೆ.ಹಾಗೂ ಇದೇ ಮೊದಲ ಬಾರಿಗೆ ಮ*ರ*ಣೋತ್ತರ ಎಂದು ಸೇರಿಸಲಾಗಿದೆ.ಇನ್ನು ಈ ಪ್ರಶಸ್ತಿ ಅತ್ಯುನ್ನತ ನಾಗರೀಕ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿಯು ಸಂಪೂರ್ಣವಾಗಿ ಬೆಳ್ಳಿಯಿಂದ ಕೂಡಿರಲಿದ್ದು, ಇದರ ಜತೆಗೆ ಐವತ್ತು ಗ್ರಾಂ ಚಿನ್ನದ ಪದಕ ಹಾಗೂ ನೆನಪಿನ ಕಾಣಿಕೆಯನ್ನು ನೀಡಲಾಗುತ್ತದೆ. ಪ್ರಶಸ್ತಿ ಪಡೆಯುವ ಗಣ್ಯರಿಗೆ ರಾಜ್ಯದ ಮುಖ್ಯಮಂತ್ರಿಗಳು ಶಾಲನ್ನು ಹೊದಿಸಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸುತ್ತಾರೆ.ಈ ಪ್ರಶಸ್ತಿಯನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ನಮ್ಮ ಅಪ್ಪು ಪರವಾಗಿ ಸ್ವೀಕರಿಸಿದ್ದಾರೆ.