“ಕಲರ್ಸ್ ಕನ್ನಡ”ದಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ “ಲಕ್ಷ್ಮಿ ಬಾರಮ್ಮ” ಧಾರಾವಾಹಿ ಕೂಡ ಒಂದು. ಸಾಕಷ್ಟು ವರ್ಷಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಪಡೆದುಕೊಂಡಿತ್ತು.ಈ ಧಾರಾವಾಹಿ ಎಷ್ಟರ ಮಟ್ಟಿಗೆ ಜನಪ್ರಿಯತೆ ಗಳಿಸಿತ್ತು ಎಂದರೆ ಆ ಧಾರಾವಾಹಿಯ ಪಾತ್ರಧಾರಿಗಳು ಇಂದಿಗೂ ಅದೇ ಹೆಸರುಗಳಿಂದ ಗುರುತಿಸಿಕೊಳ್ಳುತ್ತಾರೆ.ಈ ಪಾತ್ರಧಾರಿಗಳು ಬೇರಾವ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ ಅಂತ ಅಲ್ಲಾ.ಸಾಕಷ್ಟು ಧಾರಾವಾಹಿಗಳಲ್ಲಿ ಸಿನಿಮಾಗಳಲ್ಲಿಯೂ ಕೂಡ ಕಾಣಿಸಿಕೊಂಡಿದ್ದಾರೆ.
ಹೀಗಿದ್ದರೂ ಈ ಧಾರಾವಾಹಿಯ ಹೆಸರು ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿದು ಬಿಟ್ಟಿದೆ.ಅದ್ರಲ್ಲೂ ಈ ಲಕ್ಷ್ಮಿ ಧಾರಾವಾಹಿಯ “ಗೊಂಬೆ” ಎಂದರೆ ನಮ್ಮ ಜನರಿಗೆ ಎಲ್ಲಿಲ್ಲದ ಪ್ರೀತಿ.ಕೇವಲ ಧಾರಾವಾಹಿಯಲ್ಲಿ ಅಲ್ಲಿ ಮಾತ್ರ ಅಲ್ಲ ಹೊರ ಪ್ರಪಂಚದಲ್ಲೂ ಕೂಡ ಈಕೆಯನ್ನು ನೇಹಾ ಎನ್ನುವವರಿಗಿಂತ ಗೊಂಬೆ ಎಂದು ಗುರುತಿಸುವವರೆ ಹೆಚ್ಚು.ಈ ನೇಹಾ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಹೈಪ್ ಪಡೆದುಕೊಂಡಿರುವ ಹೆಸರು.ಅದರೊಟ್ಟಿಗೆ ಗೊಂಬೆಯವರ ಲವ್ ಸ್ಟೋರಿಗೆ ಫಿಧಾ ಆಗಿರುವವರು ಹೆಚ್ಚು.
ನೇಹಾ ಲಕ್ಷ್ಮಿ ಧಾರಾವಾಹಿಯ ಬಳಿಕ ಸದ್ದು ಮಾಡುತ್ತಲೇ ಇದ್ದದು ಎಂದರೆ ಅವರ ಲವ್ ಸ್ಟೋರಿಯ ಮೂಲಕ. ಇವರ ಲವ್ ಸ್ಟೋರಿ ಕೇಳಿದವ್ರು ಇದು ಹೇಗೆ ಸಾಧ್ಯ ಎನ್ನುವಂತೆ ಇದೆ. ಏಕೆಂದರೆ ಅವರಿಬ್ಬರು ಲವ್ ಮಾಡಲು ಶುರು ಮಾಡಿದ್ದು ಎಂದರೆ ಅಚ್ಚರಿ ಆದರೂ ಅದೇ ಸತ್ಯ.ಇವರಿಬ್ಬರ ತನ್ನ 4 ವರ್ಷವಿದ್ದಾಗಲೇ ಲವ್ ಶುರುಮಾಡಿದವರು ಇವರು.ಈ ಜೋಡಿ ತನ್ನ ದೀರ್ಘ ಪ್ರೀತಿಯ ಮೂಲಕ ಎಲ್ಲರನ್ನು ಪ್ರೇರಣೆ ನೀಡುವಂತೆ ಇದೆ. ಅಂದಿನಿಂದ ಇಂದಿನ ವರೆಗೂ ಈ ಜೋಡಿಯ ನಡುವೆ ಬೆಳೆಯುತ್ತಲೇ ಇದೆಯೇ ಹೊರೆತು ಎಂದಿಗೂ ಕುಂದಿಲ್ಲ.
ಈ ಜೋಡಿಯನ್ನು ಕಲರ್ಸ್ ಕನ್ನಡದಲ್ಲಿ ಜೋಡಿಗಳ ರಿಯಾಲಿಟಿ ಶೋ ಆದ “ರಾಜ ರಾಣಿ”ಯ ಕಂಟೆಸ್ಟೆಂಟ್ ಆಗಿ ಬಂದರು.ಇವರ ಅನ್ಯೂನ್ಯತೆ ಇನ್ನಷ್ಟು ಹೆಚ್ಚಿಸಿಕೊಳ್ಳಲು ಸಹಾಯ ಮಾಡಿತು ಎಂದರೆ ತಪ್ಪಾಗಲಾರದು. ಇವರಿಬ್ಬರ ಪ್ರೀತಿಯ ಸಲುವಾಗಿ ಫಿನಾಲೆ ಹಂತವನ್ನು ತಲುಪಿದರು. ಆ ನಂತರ ನೇಹಾ ಅವರಿಗೆ ಸಿಕ್ಕಾ ಮತ್ತೊಂದು ವೇದಿಕೆ ಎಂದರೆ ಅದು ಕನ್ನಡದ ರಿಯಾಲಿಟಿ ಶೋ ಗಳ ಪೈಕಿ ಮೊದಲ ಸ್ಥಾನದಲ್ಲಿ ಕಾಯಂ ಆಗಿರುವ ಬಿಗ್ ಬಾಸ್.ಸೀಸನ್ 9ರ ಸ್ಪರ್ದಿಯಾಗಿ ಆಗಮಿಸಿದ ನೇಹಾ ಗೌಡ ಶುರುವಿನಲ್ಲಿ ತಮ್ಮ ಒಳ್ಳೆತನದ ಮೂಲಕ ಎಲ್ಲರ ಮನಸ್ಸು ಗೆದ್ದರು.
ಆದರೆ ಅತಿಯಾದ ಒಳ್ಳೆತನವನ್ನು ಹೊಂದಿದ್ದ ನೇಹಾ ಗೌಡ ಅವರು ದೊಡ್ಡ ಮನೆಯಲ್ಲಿ ನೆಲೆಯೂರಲು ಕೊಂಚ ಕಷ್ಟವಾಗಿತ್ತು. ದಿನದಿಂದ ದಿನಕ್ಕೆ ಟಾಸ್ಕ್ ನಲ್ಲೂ ಕೂಡ ಅತಿಯಾದ ಪ್ರಯತ್ನ ನೀಡುತ್ತಿದ್ದರು ಅವರ ಲಕ್ ಕೂಡ ಸಂಪೂರ್ಣ ಕೈ ಕೊಟ್ಟಿತು ಎಂದರೆ ತಪ್ಪಾಗಲಾರದು. ದಿನದಿಂದ ದಿನಕ್ಕೆ ಮನೆಯ ವಾತಾವರಣ ಇವರನ್ನು ಕುಗ್ಗಿಸುತ್ತಾ ಬಂದಿತ್ತು.ಇದೀಗ ಐದು ವಾರಗಳ ಪ್ರಯಾಣವನ್ನು ಅತಿ ಕಡಿಮೆ ವೋಟ್ ಪಡೆದುಕೊಂಡ ಕಾರಣದಿಂದ ದೊಡ್ಡ ಮನೆಯಿಂದ ಆರನೇ ವಾರ ಹೊರಬಿದ್ದಿದ್ದಾರೆ.ಈ ವಿಚಾರ ತಿಳಿದು ಗೊಂಬೆಯ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಆದರೆ ತಮ್ಮ ನಟಿ ಮತ್ತೆ ತಮ್ಮನ್ನು ಕಿರುತೆರೆಯಲ್ಲಿ ರಂಜಿಸಲು ಮರಳುತ್ತಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿದೆ.