ನಟ ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಅವರದ್ದು ಲವ್ ಮ್ಯಾರೇಜ್ ಅಂತ ಬಹುತೇಕ ಜನ ಅಂದು ಕೊಂಡಿದ್ದಾರೆ. ಆದ್ರೆ ಅಸಲಿಗೆ ಈ ಬ್ಯೂಟಿಫುಲ್ ಕಪಲ್ ದು ಲವ್ ಮ್ಯಾರೇಜ್ ಅಲ್ಲವೇ ಅಲ್ಲ.. ಇವರದ್ದು ಕಂಪ್ಲೀಟ್ ಅರೇಂಜ್ ಮ್ಯಾರೇಜ್.. ಹಾಗಾದರೆ ಈ ಪ್ರೇಮ್ ಕಹಾನಿ ಆರಂಭ ಆಗಿದ್ದು ಎಲ್ಲಿ ಗೊತ್ತಾ? ಮದುವೆ ಹಂತಕ್ಕೆ ಹೋಗಿದ್ದೂ ಹೇಗೆ ಗೊತ್ತಾ? ಒನ್ ಬೈ ಒನ್ ಹೇಳ್ತಾ ಹೋಗ್ತೀವಿ ಕೇಳಿ..

ಸ್ಯಾಂಡಲ್ ವುಡ್ ನಾ ಮೋಸ್ಟ್ ಆದರ್ಶ ದಂಪತಿ ಅಂತ ಕರೆಸಿ ಕೊಂಡಿರುವ ವಿಜಯ್ ರಾಘವೇಂದ್ರ ಹಾಗೂ ಸೈಲೆಂಟ್ ಸ್ಪಂದನ ಲವ್ ಸ್ಟೋರಿ ಆರಂಭ ಆಗೋದು ಕಾಫೀ ಡೇ ಇಂದ.. ಇವರದ್ದು ಕಾಫಿ ಡೇ ಪ್ರೇಮ್ ಕಹಾನಿ. ಮೊದಲನೆ ಸಲ ವಿಜಯ್ ರಾಘವೇಂದ್ರ ಅವರು ಸ್ಪಂದನ ಅವರನ್ನ ಮಲ್ಲೇಶ್ವರ ಬಳಿಯ ಕಾಫಿ ಡೇ ಅಲ್ಲಿ ನೋಡ್ತಾರೆ.. ಆಗ ಅವರಿಗೆ ಸ್ಪಂದನಾ ಬಹಳ ಇಷ್ಟ ಆಗ್ತಾಳೆ.. ಆದ್ರೆ ಹೇಳುವ ಧೈರ್ಯ ಬಂದಿಲ್ಲ.. ಕಷ್ಟ ಪಟ್ಟು ಮಾತಾಡ್ತಾರೆ, ಇಂಗ್ಲಿಷ್ ಅಲ್ಲೇ ಮಾತನಾಡಿ ತಡವರಿಸ್ತಾರೆ. ಆಮೇಲೆ ಮತ್ತೆ ಇನ್ನೊಂದು ಸಲ ಸ್ಪಂದನ ಅವರನ್ನ ನೋಡ್ತಾರೆ..

ವರ್ಷಗಳ ಬಳಿಕ ಮತ್ತೆ ಶೇಷಾದ್ರಪುರಂ ಅಲ್ಲಿರುವ ಕಾಫೀ ಡೇ ಅಲ್ಲಿ ಸ್ಪಂದನ ನೋಡ್ತಾರೆ.. ಚೆನ್ನಾಗಿ ಮಾತಾಡಿದ್ರು ನಂಬರ್ ತೆಗೆದು ಕೊಳ್ಳೋದು ಮರೆಯುತ್ತಾರೆ. ಆದ್ರೆ ಸ್ಪಂದನ ಮಾತ್ರ ವಿಜಯ್ ರಾಘವೇಂದ್ರ ಮನಸ್ಸಲ್ಲಿ ಪ್ರೀತಿಯ ಮುದ್ರೆ ಒತ್ತಿರುತ್ತಾರೆ. ಅದೇ ಸಮಯಕ್ಕೆ ವಿಜಯ್ ರಾಘವೇಂದ್ರ ಅವರಿಗೆ ಕೂಡ ಮನೆಯಲ್ಲಿ ಹುಡುಗಿ ಹುಡುಕ್ತಾ ಇರ್ತಾರೆ ಆಗ ವಿಜಯ್ ತಂದೆ ಬಳಿ ಗಟ್ಟಿ ದೈರ್ಯ ಮಾಡಿ ಹೇಳ್ತಾರೆ.. ಮತ್ತೆ ವಿಜಯ್ ರಾಘವೇಂದ್ರ ತಂದೆ ಸ್ಪಂದನ ಮನೆಗೆ ಹೋಗಿ ಮಾತು ಕತೆ ಮಾಡ್ತಾರೆ… ಆಮೇಲೆ ಅವರ ತಂದೆ ಗ್ರೀನ್ ಸಿಗ್ನಲ್ ಕೊಟ್ಟ ಮೇಲೆ ಇಬ್ಬರ ಮದುವೆ ಫಿಕ್ಸ್ ಆಗುತ್ತೆ..
ವಿಜಯ್ ರಾಘವೇಂದ್ರ ತಂದೆಯ ಚಿನ್ನೇಗೌಡರ ಬಳಿ ವಿಚಾರ ತಿಳಿಸಿದಂತೆ ಅವರು ಸ್ಪಂದನಾ ಅವರ ತಂದೆ ಬಿ.ಕೆ ಶಿವರಾಂ ಬಳಿ ಈ ವಿಚಾರ ತಿಳಿಸುತ್ತಾರೆ. ಬಳಿಕ 2 ತಿಂಗಳ ಒಳಗೆ ವಿಜಯ್ ಮತ್ತು ಸ್ಪಂದನಾಗೆ ಮದುವೆ ಮಾಡಿಸುತ್ತಾರೆ… ಆದ್ರೆ ಎಷ್ಟೋ ಜನ ಇವರಿಬ್ಬರ ನಡುವಣ ಇರುವ ಅನ್ಯೋನ್ಯತೆ ನೋಡಿ ಇವರಿಬ್ಬರದ್ದು ಲವ್ ಮ್ಯಾರೇಜ್ ಅಂತ ಕನ್ಫ್ಯೂಸ್ ಆಗಿದ್ದಾರೆ. ಆದ್ರೆ ಇವರಿಬ್ಬರ ನಡುವಣ ಇರುವ ಹೊಂದಾಣಿಕೆ ನೋಡಿ ಹೀಗೆ ಅಂದು ಕೊಳ್ಳೋದರಲ್ಲಿ ತಪ್ಪಿಲ್ಲ ಬಿಡಿ.. ಆದ್ರೆ ಈ ಪ್ರೇಮ್ ಕಹಾನಿ ಭಗವಂತನಿಗೆ ಅಸೂಯೆ ತಂತೋ ಏನೋ ಈಗ ಸ್ಪಂದನ ಅಸು ನೀಗಿದ್ದಾರೆ.