ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಂದು ನಮ್ಮೆಲ್ಲರ ಜೊತೆಗೆ ದೈಹಿಕವಾಗಿ ಇಲ್ಲದೇ ಇರಬಹುದು. ಆದರೆ ಅವರ ನೆನಪುಗಳು ಸದಾ ನಮ್ಮ ಜೊತೆಗೆ ಇದ್ದೇ ಇರುತ್ತದೆ. ಅಪ್ಪು ಅವರನ್ನು ಕಂಡರೆ ಯಾರಿಗೆ ತಾನೇ ಇಷ್ಟ ಆಗೋದಿಲ್ಲ ಹೇಳಿ. ಇನ್ನೇನು ಅಪ್ಪು ಅಭಿಮಾನಿಗಳು ಸಂಭ್ರಮಿಸುವ ದಿನ ಬಂದೇ ಬಿಟ್ಟಿದೆ. ಸೋಮವಾರ ಅಪ್ಪು ಅವರ ಹುಟ್ಟುಹಬ್ಬ. ಅಪ್ಪು ಅವರು ಇದ್ದಾಗ ಅವರ ಅಭಿಮಾನಿಗಳು ಮಾರ್ಚ್ 17ರಂದು ಅಪ್ಪು ಅವರ ಹುಟ್ಟುಹಬ್ಬವನ್ನು ಎಷ್ಟು ದೊಡ್ಡದಾಗಿ ಆಚರಣೆ ಮಾಡುತ್ತಿದ್ದರು ಎಂದು ನಮಗೆಲ್ಲಾ ಗೊತ್ತೇ ಇದೆ. ಈಗ ನೇರವಾಗಿ ಆಚರಣೆ ಮಾಡುವುದಕ್ಕೆ ಅಪ್ಪು ಅವರು ಇಲ್ಲ. ಆದರೆ ಅಭಿಮಾನಿಗಳು ಅಪ್ಪು ಅವರ ಹುಟ್ಟುಹಬ್ಬದ ಆಚರಣೆ ಮಾಡೋದು ಬಿಟ್ಟಿಲ್ಲ. ಮಾರ್ಚ್ 17ರಂದು ಹಲವು ಒಳ್ಳೆಯ ಕೆಲಸಗಳನ್ನು ಮಾಡುತ್ತಲಿದ್ದಾರೆ.

ಅಪ್ಪು ಅವರು ಇಲ್ಲದೇ ಇದ್ದರು ಅವರ ಹೆಸರಿನಲ್ಲಿ ನಡೆಯುವ ಒಳ್ಳೆಯ ಕಾರ್ಯಗಳು, ಕಾರ್ಯಕ್ರಮಗಳು, ದಾನ ಧರ್ಮಗಳು ಎಲ್ಲವೂ ನಡೆಯುತ್ತಿದೆ. ಅಭಿಮಾನಿಗಳು ಈ ರೀತಿ ಹುಟ್ಟುಹಬ್ಬವನ್ನು ಆಚರಣೆ ಮಾಡಿದರೆ, ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಭಿಮಾನಿಗಳಿಗೆ ಸಂತೋಷ ಆಗುವ ಹಾಗೆ ಸರ್ಪ್ರೈಸ್ ನೀಡುತ್ತಲೇ ಬಂದಿದ್ದಾರೆ. ಕಳೆದ ವರ್ಷ ಅಪ್ಪು ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳೆಲ್ಲರ ಫೇವರೆಟ್ ಆಗಿರುವ ಜಾಕಿ ಸಿನಿಮಾ ತೆರೆಕಂಡಿತ್ತು. ಈ ಸಿನಿಮಾದ ಕ್ರೇಜ್ ಎಷ್ಟರ ಮಟ್ಟಿಗೆ ಇತ್ತು, ಅಭಿಮಾನಿಗಳು ಜಾಕಿ ಸಿನಿಮಾವನ್ನು ಯಾವ ಲೆವೆಲ್ ಗೆ ಎಂಜಾಯ್ ಮಾಡಿದ್ರು ಎಂದು ನಮಗೆಲ್ಲ ಗೊತ್ತೇ ಇದೆ. ಇನ್ನು ಈ ವರ್ಷ ಸಹ ಅದೇ ಸರ್ಪ್ರೈಸ್ ನೀಡಿದ್ದಾರೆ. ಈ ವರ್ಷ ಅಪ್ಪು ಅವರ ಹುಟ್ಟುಹಬ್ಬದ ವೇಳೆಗೆ ಅಪ್ಪು ಸಿನಿಮಾ ಬಿಡುಗಡೆ ಆಗಿದೆ.

ಇದು ಪುನೀತ್ ರಾಜ್ ಕುಮಾರ್ ಅವರು ನಾಯಕನಾಗಿ ನಟಿಸಿದ ಮೊದಲ ಸಿನಿಮಾ. ಡಾ. ರಾಜ್ ಕುಮಾರ್ ಅವರು ಪಾರ್ವತಮ್ಮ ಅವರು ನಿರ್ಮಾಣ ಮಾಡಿ, ಪುರಿ ಜಗನ್ನಾಥ್ ಅವರು ನಿರ್ದೇಶನ ಮಾಡಿದ ಯೂತ್ ಫುಲ್ ಎಂಟರ್ಟೈನರ್. ಅಪ್ಪು ಸಿನಿಮಾ ಇಂದ ಪುನೀತ್ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆಗಿ ನಾಯಕನಾಗಿ ಪರಿಚಯವಾದರು. ಕ್ರೇಜಿ ಕ್ವೀನ್ ರಕ್ಷಿತಾ ಅವರ ಮೊದಲ ಸಿನಿಮಾ ಕೂಡ ಹೌದು. ಈ ಸಿನಿಮಾ ಬರೆದ ರೆಕಾರ್ಡ್ ಒಂದೆರಡಲ್ಲ. ಅಪ್ಪು ಸಿನಿಮಾ ಬಿಡುಗಡೆಯಾಗಿ 200 ದಿನಗಳ ಕಾಲ ರೆಕಾರ್ಡ್ ಬ್ರೇಕಿಂಗ್ ಪ್ರದರ್ಶನ ಕಂಡಿತು. ಪುನೀತ್ ರಾಜ್ ಕುಮಾರ್ ಅವರ ಅಭಿನಯ, ಡ್ಯಾನ್ಸ್ ಎಲ್ಲವೂ ಕೂಡ ಕನ್ನಡ ಚಿತ್ರಪ್ರೇಮಿಗಳಿಗೆ ಬಹಳ ಇಷ್ಟವಾಗಿತ್ತು. ಸಿನಿಮಾದ ನೂರನೇ ದಿನದ ಆಚರಣೆ ದೊಡ್ಡದಾಗಿ ನಡೆದಿತ್ತು..
ಆ ಸಮಾರಂಭಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ಬಂದು, ಅಪ್ಪು ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇಡೀ ಕರ್ನಾಟಕ ಡಾ. ರಾಜ್ ಕುಮಾರ್ ಅವರ ಮಗನನ್ನು ಹೊಗಳಿತ್ತು. ಇಂಥ ಹಿಸ್ಟರಿ ಇರುವ ಅಪ್ಪು ಸಿನಿಮಾ ಈಗ ಮತ್ತೆ ತೆರೆಕಂಡಿದೆ. ಅಭಿಮಾನಿಗಳಲ್ಲಿ ಸಡಗರ ಶುರುಣಗಿದೆ. ಇಂದು ಅಪ್ಪು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬ. ಈ ವಿಶೇಷ ದಿವಸದಂದೇ ಅಪ್ಪು ಸಿನಿಮಾ ತೆರಕಂಡಿದೆ. ಅಭಿಮಾನಿಗಳಿಗೆ ಇದು ಹಬ್ಬದ ದಿವಸ ಎಂದು ಹೇಳಿದರೆ ತಪ್ಪಲ್ಲ. ಎಲ್ಲರೂ ಅಪ್ಪು ಅವರನ್ನು ಕಣ್ತುಂಬಿಕೊಳ್ಳಲು ಕಾದಿದ್ದು ಇಂದಿಗೆ ಸಾರ್ಥಕ ಆಗಿದೆ. ಈ ಸಿನಿಮಾ ಬಂದಾಗ ಈಗಿನ ಯೂತ್ ಗಳು ಪುಟ್ಟ ಮಕ್ಕಳಾಗಿ ಇದ್ದವರು, ಆಗ ಹೆಚ್ಚಿನ ಜನರಿಗೆ ಸಿನಿಮಾ ನೋಡಿರುವ ನೆನಪು ಕೂಡ ಇರುವುದಿಲ್ಲ. ಇದೀಗ 13 ವರ್ಷಗಳ ನಂತರ ಮತ್ತೆ ಅಪ್ಪು ಸಿನಿಮಾ ತೆರೆಕಂಡಿದೆ.

ಎಲ್ಲಾ ಅಭಿಮಾನಿಗಳಿಗೆ ಅಪ್ಪು ಅವರ ಲೋಕಲ್ ಬಾಯ್ ಅವತಾರ ನೋಡೋಕೆ ಇಷ್ಟ ಆಗದೇ ಇರುತ್ತಾ ಹೇಳಿ.. ಇಂದಿನಿಂದ ಅಪ್ಪು ಹವಾ ಜೋರಾಗಿಯೇ ಶುರುವಾಗಿದೆ. ಮಾರ್ಚ್ 17ರಂದು ಥಿಯೇಟರ್ ಗಳಲ್ಲಿ ಹಬ್ಬ ನಡೆಯುವುದಂತೂ ಖಂಡಿತ. ಇನ್ನು ಅಪ್ಪು ಸಿನಿಮಾದ ಇನ್ನಷ್ಟು ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಕನ್ನಡದಲ್ಲಿ ಮೊದಲು ಬಂದ ಅಪ್ಪು ಸಿನಿಮಾ, ನಂತರ ತೆಲುಗು, ತಮಿಳು, ಬೆಂಗಾಲಿ ಹಾಗೂ ಇನ್ನಿತರ ಭಾಷೆಗಳಿಗೆ ರಿಮೇಕ್ ಆಗಿದೆ. ಅನುರಾಗ ಅರಳಿತು ನಂತರ ಕನ್ನಡ ಸಿನಿಮಾ ಒಂದು ಹೆಚ್ಚು ಭಾಷೆಗಳಿಗೆ ರಿಮೇಕ್ ಆಗಿದ್ದು ಇದೇ ಮೊದಲು ಎಂದು ಹೇಳಿದರು ತಪ್ಪಲ್ಲ. ಇನ್ನು ಕನ್ನಡದಲ್ಲಿ ನಾಯಕಿ ಆಗಿದ್ದ ರಕ್ಷಿತಾ ಅವರು, ತೆಲುಗು ಮತ್ತು ತಮಿಳು ಅವತರಣಿಕೆಯಲ್ಲಿ ಸಹ ಹೀರೋಯಿನ್ ಆಗಿದ್ದರು. ರಕ್ಷಿತಾ ಅವರಿಗೆ ಇದು ದೊಡ್ಡ ಬ್ರೇಕ್ ಎಂದರು ತಪ್ಪಲ್ಲ.
ಅಪ್ಪು ಸಿನಿಮಾದ ವಿಶೇಷತೆಗಳು ಹಲವಿದೆ, ಈ ಸಿನಿಮಾವನ್ನು ಪಾರ್ವತಮ್ಮ ರಾಜ್ ಕುಮಾರ್ ಅವರು ನಿರ್ಮಾಣ ಮಾಡಿದ್ದು. ಪುನೀತ್ ರಾಜ್ ಕುಮಾರ್ ಅವರು ಹೋಮ್ ಬ್ಯಾನರ್ ನಲ್ಲಿ ನಾಯಕನಾಗಿ ಎಂಟ್ರಿ ಕೊಟ್ಟಿದ್ದು. ಅಪ್ಪು ಅವರಿಗೆ ಈ ಸಿನಿಮಾಗೆ ನೀಡಿದ ಸಂಭಾವನೆ ಎಷ್ಟು ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಅಪ್ಪು ಸಿನಿಮಾ ತೆರೆಕಂಡು ಸೂಪರ್ ಹಿಟ್ ಆದ ನಂತರ ಪುನೀತ್ ರಾಜ್ ಕುಮಾರ್ ಅವರಿಗೆ ತಾಯಿ ಪಾರ್ವತಮ್ಮ ರಾಜ್ ಕುಮಾರ್ ಅವರು ₹50,000 ರೂಪಾಯಿಗಳ ಸಂಭಾವನೆ ಕೊಟ್ಟರಂತೆ. ಆದರೆ ಅಪ್ಪು ಅವರು ಈ ಸಂಭಾವನೆಯನ್ನು ಪಡೆದುಕೊಳ್ಳಲಿಲ್ಲ. ಮೊದಲ ಸಂಭಾವನೆ ತಾಯಿ ದೇವರಿಗೆ ಎಂದು ಹೇಳಿ, ಪಾರ್ವತಮ್ಮನವರು ಕೊಟ್ಟ ಹಣವನ್ನು ವಾಪಸ್ ಅವರಿಗೆ ಕೊಟ್ಟರಂತೆ. ಎಂಥಾ ದೊಡ್ಡ ಗುಣ ಅಲ್ವಾ ಅಪ್ಪು ಅವರದ್ದು.

ಅಪ್ಪು ಸಿನಿಮಾ ತೆರೆಕಂಡು ಸೂಪರ್ ಹಿಟ್ ಆಯಿತು. ಇದಾದ ಬಳಿಕ ಪುನೀತ್ ರಾಜ್ ಕುಮಾರ್ ಅವರ ಕೆರಿಯರ್ ಯಾವ ಮಟ್ಟಕ್ಕೆ ತಲುಪಿತು ಎಂದು ನಮಗೆಲ್ಲ ಗೊತ್ತೇ ಇದೆ. ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಆಗಿ, ಸೂಪರ್ ಹಿಟ್ ಸಿನಿಮಾಗಳ ಸರದಾರನಾಗಿ ಪುನೀತ್ ರಾಜ್ ಕುಮಾರ್ ಅವರು ಹೆಸರು ಮಾಡಿದರು. ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವವೇ ಆದರು. ಅವರ ಸರಳತೆಯನ್ನು ಯಾರು ಸಹ ಇಂದಿಗೂ ಮರೆತಿಲ್ಲ. ಪುನೀತ್ ಅವರು ಸಮಾಜಕ್ಕೆ ನೀಡಿರುವ ಕೊಡುಗೆಗಳ ಬಗ್ಗೆ ಇಂದಿಗೂ ಜನರು ಮಾತನಾಡುತ್ತಾರೆ. ಈ ಪುಣ್ಯಾತ್ಮದಿಂದ ಸಾವಿರಾರು ಜನರು ಸಹಾಯ ಪಡೆದುಕೊಂಡಿದ್ದಾರೆ. ಇಂಥ ಅಪ್ಪು ಅವರು ಮತ್ತೆ ನಮ್ಮ ನೆಲದಲ್ಲೇ ಹುಟ್ಟಿ ಬರಲಿ ಎನ್ನುವುದೇ ಎಲ್ಲರ ಆಸೆ ಮತ್ತು ಆಶಯ.