ಕಲ್ಲೇಟು ಬಿದ್ದರು ಕಣ್ಣೇಟು ಬೀಳಬಾರದು ಅಂತ ದೊಡ್ಡವರು ಹೇಳಿದ್ದಾರೆ. ಈ ಮಾತು ತುಂಬಾ ನಿಜ. ಹೊಟ್ಟೆ ಕಿಚ್ಚು ಇರುವ ಕೆಲವು ಜನರ ದೃಷ್ಟಿ ನಮ್ಮ ಮೇಲೆ ಬಿದ್ದರೆ, ನಮ್ಮ ಜೀವನವೇ ಸಂಪೂರ್ಣವಾಗಿ ಹಾಳಾಗಿ ಹೋಗಬಹುದು. ಇದು ಹಲವರ ಜೀವನದಲ್ಲಿ ನಡೆದಿದೆ, ಯಾವುದೋ ಒಂದು ಕಾರ್ಯಕ್ರಮಕ್ಕೆ ಚೆನ್ನಾಗಿ ರೆಡಿ ಆಗಿ ಹೋಗಿದ್ದು ಬಂದ ನಂತರ ಹುಷಾರು ತಪ್ಪುತ್ತಾರೆ. ತಮ್ಮ ಕೆಲಸದಲ್ಲಿ ಆಗುತ್ತಿರುವ ಅಭಿವೃದ್ಧಿ ಬಗ್ಗೆ ಯಾರ ಜೊತೆಗಾದರು ಹೇಳಿಕೊಂಡರೆ, ಅದರಲ್ಲಿನ ಅಭಿವೃದ್ಧಿ ನಿಂತು ಹೋಗುತ್ತದೆ. ಹೀಗೆ ಅನೇಕ ವಿಚಾರಗಳಿವೆ. ದೃಷ್ಟಿ ಆಗುವುದು ಒಳ್ಳೆಯದಂತೂ ಅಲ್ಲ. ಹಾಗಿದ್ದಲ್ಲಿ ಈ ದೃಷ್ಟಿ ದೋಷ ನಿವಾರಣೆ ಆಗೋದಕ್ಕೆ ಏನು ಮಾಡಬೇಕು?
ಮೊದಲಿಗೆ ದೃಷ್ಟಿ ದೋಷದ ಸಮಸ್ಯೆ ಆಗಬಾರದು ಎಂದರೆ, ನಿಮ್ಮ ಮನಸ್ಸು ಪಾಸಿಟಿವ್ ಆಗಿರಬೇಕು, ದೃಢ ನಿಶ್ಚಲವಾದ ಮನಸ್ಸು ಇರಬೇಕು. ನೀವು ಸ್ಟ್ರಾಂಗ್ ಆಗಿದ್ದು, ಪಾಸಿಟಿವ್ ಆಗಿದ್ದರೆ, ನಿಮಗೆ ದೃಷ್ಟಿ ದೋಷದ ನೆಗಟಿವಿಟಿ ತಾಗುವುದಿಲ್ಲ. ಇದು ಯಾವಾಗಲು ನಿಮಗೆ ತಿಳಿದಿರಲಿ, ಮೊದಲಿಗೆ ನಿಮ್ಮ ಮನಸ್ಸು ಸ್ಟ್ರಾಂಗ್ ಆಗಿರಬೇಕು. ಸ್ಟ್ರಾಂಗ್ ಆಗಿರುವುದಕ್ಕೆ, ಪಾಸಿಟಿವ್ ಆಗಿರುವುದಕ್ಕೆ ದಿನನಿತ್ಯದ ಕೆಲಸಗಳಲ್ಲಿ ನೀವು ಯಾವೆಲ್ಲಾ ಸಣ್ಣ ಪುಟ್ಟ ಬದಲಾವಣೆ ಮಾಡಿಕೊಳ್ಳಬಹುದು ಎಂದು ನೋಡುವುದಾದರೆ, ನೀವು ತಲೆಗೆ ಸ್ನಾನ ಮಾಡುವಾಗ ಒಂದೆರಡು ಹರಳುಪ್ಪು ಹಾಕಿ ಸ್ನಾನ ಮಾಡಿದರೆ, ನಿಮ್ಮಲ್ಲಿ ಯಾವಾಗಲೂ ಪಾಸಿಟಿವಿಟಿ ಇರುತ್ತದೆ. ಹಲವರಿಗೆ ಈ ವಿಷಯದ ಬಗ್ಗೆ ಒಂದು ನಂಬಿಕೆ ಇದೆ.
ಸ್ನಾನ ಮಾಡೋ ನೀರಿಗೆ ಉಪ್ಪು ಹಾಕಿ ಸ್ನಾನ ಮಾಡಿದರೆ, ಕೂದಲು ಬೆಳ್ಳಗಾಗಿ ಬಿಡುತ್ತದೆ ಎಂದು, ಅದೆಲ್ಲವೂ ನಿಜವಲ್ಲ. ಒಂದು ನಾಲ್ಕು ಕಾಳು ಉಪ್ಪನ್ನು ನೀರಿಗೆ ಹಾಕಿಕೊಂಡು, ಸ್ನಾನ ಮಾಡಿದರೆ ಎಲ್ಲಾ ರೀತಿಯ ನೆಗಟಿವ್ ಎನರ್ಜಿ ಇಂದ ದೂರ ಉಳಿಯುತ್ತೀರಿ. ನಿಮ್ಮಲ್ಲಿ ಯಾವಾಗಲೂ ಪಾಸಿಟಿವ್ ಎನರ್ಜಿ ಇರುತ್ತದೆ. ಎರಡನೆಯದು ಕೈಗೆ ಕಪ್ಪು ದಾರ ಕಟ್ಟಿಕೊಳ್ಳಿ. ನಿಮ್ಮ ಕೈಯಲ್ಲಿ ಕಪ್ಪು ದಾರ ಇದ್ದರೆ, ಯಾರದ್ದೇ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬಿದ್ದರು, ಅದು ಮೊದಲು ಆ ದಾರಕ್ಕೆ ತಗುಲಿ ನಂತರ ನಿಮ್ಮ ವರೆಗು ಬರುತ್ತದೆ ಎಂದು ಹೇಳುತ್ತಾರೆ. ಹಾಗಾಗಿ ಕೈಗೆ ಕಪ್ಪು ದಾರ ಕಟ್ಟಿಕೊಂಡರೆ, ದೃಷ್ಟಿ ಬೀಳುವುದು ಕಡಿಮೆ ಆಗುತ್ತದೆ. ಮೂರನೆಯದು ಮನೆಯಿಂದ ಹೊರಗಡೆ ಹೋಗುವಾಗ, ಯಾವುದೇ ಕಾರ್ಯಕ್ರಮ ಅಥವಾ ಕೆಲಸಕ್ಕೆ ಹೋಗುವಾಗ..
ಶಕ್ತಿದೇವರಾದ ಚಾಮುಂಡೇಶ್ವರಿ ಅಥವಾ ದುರ್ಗಾಪರಮೇಶ್ವರಿ ಅಥವಾ ನಿಮ್ಮ ಮನೆಯದೇವರಿಗೆ ಪೂಜೆ ಮಾಡಿಸಿದ ದೇವರ ಕುಂಕುಮವನ್ನು ಹಣೆಗೆ ಇಟ್ಟುಕೊಂಡು ಹೊರಡಿ. ಕುಂಕುಮ ಧಾರಣೆ ಇಂದ ಯಾವುದೇ ನೆಗಟಿವ್ ಎನರ್ಜಿಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಇದು ದೊಡ್ಡವರು ಹೇಳುವ ಮಾತು ಕೂಡ ಹೌದು. ದೇವರಿಗೆ ಅರ್ಚನೆ ಮಾಡಿಸಿದ ಕುಂಕುಮ ಅಥವಾ ಮನೆಯಲ್ಲಿ ನಡೆದ ಹೋಮ, ಪೂಜೆ ಇದರ ಪ್ರಸಾದ ಕುಂಕುಮವನ್ನು ಇಟ್ಟುಕೊಂಡು ಪ್ರತಿದಿನ ಹಚ್ಚಿಕೊಳ್ಳಿ, ದೇವರು ನಿಮಗೆ ರಕ್ಷೆ ನೀಡುತ್ತಾರೆ. ಮತ್ತೊಂದು ಸಮಸ್ಯೆ ದೃಷ್ಟಿ ಸಮಸ್ಯೆ ಆದಾಗ ನಮ್ಮಲ್ಲಿರುವ ಹಣವನ್ನೆಲ್ಲ ಕಳೆದುಕೊಂಡು ಬಿಡುತ್ತೇವೆ ಅನ್ನೋ ಸಮಸ್ಯೆ ಇದೆ.
ಇದಕ್ಕೆ ಪರಿಹಾರ ಏನು ಎಂದರೆ, ಹಸಿರು ಬಣ್ಣದ ಪರ್ಸ್ ನಲ್ಲಿ ಹಣ ಇಟ್ಟುಕೊಳ್ಳಿ, ಈ ಪರ್ಸ್ ಅನ್ನು ನೀವು ಖರೀದಿ ಮಾಡಬಾರದು, ಬೇರೆ ಯಾರಾದರೂ ನಿಮಗೆ ಗಿಫ್ಟ್ ಕೊಡಬೇಕು. ಈ ರೀತಿ ಗಿಫ್ಟ್ ಬಂದ ಹಸಿರು ಬಣ್ಣದ ಪರ್ಸ್ ನಲ್ಲಿ ಹಣ ಇಟ್ಟುಕೊಂಡರೆ, ಲಕ್ಷ್ಮಿ ನಿಮ್ಮ ಜೊತೆಗೆ ಸ್ಥೈರ್ಯವಾಗಿ ಇರುತ್ತಾಳೆ, ನೀವು ಹಣವನ್ನು ಕಳೆದುಕೊಳ್ಳುವುದಿಲ್ಲ. ಹಾಗೆಯೇ ಆ ಪರ್ಸ್ ನ ಒಳಗೆ 5 ಅಥವಾ 7 ಏಲಕ್ಕಿ ಅಥವಾ ಲವಂಗ ಇಟ್ಟುಕೊಳ್ಳಿ. ಪ್ರಮುಖವಾದ ವಿಷಯ ನಿಮಗೆ ದೃಷ್ಟಿ ದೋಷ ಸಮಸ್ಯೆ ಆಗುವುದು ಮಾನಸಿಕವಾಗಿ ನೀವು ವೀಕ್ ಆಗಿದ್ದಾಗ. ಜ್ಯೋತಿಷ್ಯದ ಪ್ರಕಾರ ಬುಧ, ರವಿ ಅಥವಾ ಶುಕ್ರನ ಬಲ ಜಾತಕದಲ್ಲಿ ಕಡಿಮೆ ಆದಾಗ, ದೃಷ್ಟಿ ದೋಷದ ಸಮಸ್ಯೆ ಉಂಟಾಗುತ್ತದೆ ಎಂದು ಹೇಳುತ್ತಾರೆ.
ಮನೆದೇವರ ಆರಾಧನೆಯನ್ನು ಹೆಚ್ಚಾಗಿ ಮಾಡಿ, ವರ್ಷಕ್ಕೆ ಒಂದು ಸಾರಿ ಆದರೂ ಮನೆದೇವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡಿಸಿಕೊಂಡು ಬಂದರೆ ದೃಷ್ಟಿ ದೋಷದ ಸಮಸ್ಯೆ ಉಂಟಾಗುವುದಿಲ್ಲ. ಹಾಗೆಯೇ ಸ್ನಾನ ಮಾಡುವಾಗ ನೀರಿಗೆ ಆಲ್ಕೋಹಾಲ್ ಮಿಕ್ಸ್ ಆಗಿಲ್ಲದ ಪರ್ಫ್ಯುಮ್ ಅನ್ನು ಸ್ವಲ್ಪ ಹಾಕಿ ಸ್ನಾನ ಮಾಡಿದರೆ, ದೃಷ್ಟಿ ದೋಷ ಆಗುವುದಿಲ್ಲ. ಈ ಪರಿಹಾರಗಳನ್ನು ಟ್ರೈ ಮಾಡಬಹುದು.