ಸದ್ಯದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ನಟಿ ಎಂದರೆ ಅದು “ಆಶಿಕಾ ರಂಗನಾಥ್”.ಈ ನಟಿ ಬಣ್ಣದ ಲೋಕಕ್ಕೆ ಪರಿಚಯ ಆಗಿದ್ದು 2016ರಲ್ಲಿ. “ಕ್ರೇಜಿ ಬಾಯ್” ಎಂಬ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದರು.ನಂತರ “ಶಿವಣ್ಣ” ಅವರ ಸಿನಿಮಾ ‘ಮಾಸ್ ಲೀಡರ್’ ಸಿನಿಮಾದಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ.ಆದರೆ ಇವರ ಸೌಂದರ್ಯಕ್ಕೆ ಬಹಳಷ್ಟು ಪಡ್ಡೆ ಹುಡುಗರ ಕ್ರಶ್ ಎಂದು ಪ್ರಸಿದ್ದಿ ಪಡೆದಿದ್ದರು.ಈ ಪಡ್ಡೆ ಹುಡುಗರ ಬೇಡಿಕೆಯ ಸಲುವಾಗಿ ಇವರ ಬಳಿ “ಶರಣ್” ಅವರ ಸಿನಿಮಾ ಹುಡುಕಿಕೊಂಡು ಬರುತ್ತದೆ. ಆ ಸಿನಿಮಾ ಸಂಪೂರ್ಣ ನಟಿಯಾಗಿ ಗುರುತಿಸಿಕೊಂಡು ಅದರಲ್ಲೂ ಮೊದಲ ಶತಕದ ದಿನದ ಸಂಭ್ರಮವನ್ನು ಕೂಡ ಅನುಭವಿಸುವಂತೆ ಮಾಡಿತ್ತು.
“ರ್ಯಾಂಬೋ 2” ಸಿನಿಮಾ ಯಶಸ್ವಿಯ ಬಳಿಕ ಇವರನ್ನು ಚಿತ್ರ ರಂಗದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿತು.ನಂತರ “ಕೋಟಿಗೊಬ್ಬ 3” ಸಿನಿಮಾದಲ್ಲಿ ಐಟಂ ಡಾನ್ಸ್ ಮಾಡಿದ ನಂತರ ಇವರ ಕ್ರೇಜ್ ಹೆಚ್ಚಾಗ ತೊಡಗಿತು.ಈ ನಟಿ “ಗಣೇಶ್” ಅವರೊಟ್ಟಿಗೆ ‘ಮುಂಗಾರು ಮಳೆ’ ಸಿನಿಮಾದಲ್ಲಿ ಮೂರು ನಟಿಯರ ಪೈಕಿ ಇವರು ಕೊಡ ಒಬ್ಬರಾಗಿದ್ದರು. ಬಹಳ ಸಮಯ ಕಳೆದು “ರೋರಿಂಗ್ ಸ್ಟಾರ್” ಅವರೊಟ್ಟಿಗೆ ‘ಮದಗಜ’ ಸಿನಿಮಾದಲ್ಲಿ ನಾಯಕಿ ಆಗಿ ಕಾಣಿಸಿಕೊಂಡರು.ಈ ಚಿತ್ರದ ಮೂಲಕ ಇವರ ರೋರಿಂಗ್ ಕೂಡ ಹೆಚ್ಚಾಗಿತ್ತು.
ವಿಶೇಷ ವೇನೆಂದರೆ ಈ ಸಿನಿಮಾಗಾಗಿ ಅದ್ಬುತ ನಟಿ ಎಂದು ಗುರುತಿಸಿ ಇವರಿಗೆ ಸೈಮಾ ಅವಾರ್ಡ್ ಕೂಡ ಈ ವರ್ಷ ಪಡೆದುಕೊಂಡರು. ಮದಗಜ ಸಿನಿಮಾ ಆದ ನಂತರ ಯಾವ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ ಎಂದು ಅವರ ಅಭಿಮಾನಿಗಳು ಬಹಳಷ್ಟು ಬೇಸರವನ್ನು ವ್ಯಕ್ತಪಡಿಸಿದ್ದರು.ಆದರೆ ಮೊನ್ನೆಯಷ್ಟೇ ಇವರ ಸಾಮಾಜಿಕ ಜಾಲತಾಣಗಳಲ್ಲಿ ಇವರ ಮುಂದಿನ ಸಿನಿಮಾ ಯಾವುದು ಎಂದು ತಿಳಿಸಿದ್ದಾರೆ.ಈ ಬಾರಿ ಆಶಿಕಾ ಅವರು ತಮಿಳು ಚಿತ್ರ ರಂಗದ ಕಡೆ ಮುಖ ಮಾಡಿದ್ದಾರೆ.
ಕನ್ನಡ ಬಿಟ್ಟು ಬೇರೆ ಭಾಷೆಯ ಕಡೆ ಮುಖ ಮಾಡಿದ್ದನ್ನು ನೋಡಿ ಕನ್ನಡಿಗರೆಲ್ಲ ರಶ್ಮಿಕಾ ಅವರಂತೆ ಸ್ಯಾಂಡಲ್ವುಡ್ ನನ್ನು ಬಿಡುತ್ತೀರಾ ಎಂಬ ಪ್ರಶ್ನೆ ಕೇಳಿದಾಗ ನೋ ವೇ ಚಾನ್ಸ್ ಇಲ್ಲ ಎಂದು ತಿಳಿಸಿದ್ದರು. ಎಷ್ಟೆಲ್ಲಾ ಹೆಸರು ಮಾಡಿ ಚಿತ್ರರಂಗದಲ್ಲಿ ಯಾವ ಕಪ್ಪು ಚುಕ್ಕಿ ಇಲ್ಲದೆ ತನ್ನ ಕೆಲಸದ ಕಡೆ ಗಮನ ಹರಿಸುತ್ತಿದ್ದ ಆಶಿಕಾ ಅವರ ಸಿನಿ ಕೆರಿಯರ್ ನಲ್ಲಿ ಕಪ್ಪು ಚುಕ್ಕಿ ತರುವಂತ ವಿಡಿಯೋ ಕೆಲ ದಿನಗಳ ಹಿಂದೆಯಷ್ಟೇ ವೈರಲ್ ಆಗಿತ್ತು.ಆದರೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡಿತ್ತು ಆದರೆ ಈ ವಿಡಿಯೋ ನ ಸತ್ಯಾಂಶದ ಬಗ್ಗೆ ಯಾರೊಬ್ಬರೂ ಕೂಡ ಯೋಚಿಸುತ್ತಿಲ್ಲ.
ಇಲ್ಲಸಲ್ಲದ ದೂರುಗಳನ್ನು ಈ ನಟಿಯ ಮೇಲೆ ಹೇರುತ್ತಾ ಇದ್ದಾರೆ. ಆದರೆ ಈ ವಿಡಿಯೋ ನಲ್ಲಿ ಆಶಿಕಾ ಅವರೇ ಇರುವುದು ಸ್ಪಷ್ಟವಾಗಿದೆ. ಇನ್ನು ಈ ವಿಡಿಯೋ ನಲ್ಲಿ ಆಶಿಕಾ ಅವರು ಮದ್ಯದ ಬಾಟಲ್ ಹಿಡಿದು ರಸ್ತೆ ಮಧ್ಯದಲ್ಲಿ ಕುಡಿದ ಅಮಲಿನಲ್ಲಿ ತೂರಾಡುತ್ತ ಟ್ರಾಫಿಕ್ ಪೊಲೀಸ್ ಅವರಿಗೆ ಮದ್ಯದ ಬೆರಳು ತೋರಿಸಿರುವುದು. ಇದೀಗ ವಿಡಿಯೋ ಬಗ್ಗೆ ನಿರ್ದೇಶಕ “ಪವನ್ ಕಲ್ಯಾಣ್” ಸ್ಪಷ್ಟತೆ ನೀಡಿದ್ದಾರೆ. ಇವರು ಕೊಟ್ಟ ಹೇಳಿಕೆ ಈ ವಿಡಿಯೋ ಗೆ ದೊಡ್ಡ ತಿರುವನ್ನು ತಂದು ಕೊಟ್ಟಿದೆ.
ಇನ್ನು ಆ ವಿಡಿಯೋ ಬಗ್ಗೆ ಮಾತನಾಡಿದ ಪವನ್ ಈ ವಿಡಿಯೋ ನಲ್ಲಿ ಇರುವುದು ಆಶಿಕಾ ಅವರೇ ಆದರೆ ಇದು ನೈಜ ಘಟನೆ ಅಲ್ಲಾ.ನಾನು ಆಶಿಕಾ ಅವರಿಗೆ ನಿರ್ದೇಶಿಸುತ್ತಿರುವ “ರೇಮೋ” ನಲ್ಲಿ ಈ ದೃಶ್ಯ ಇದ್ದು ಇನ್ನು ಈ ಚಿತ್ರದ ಪ್ರಚಾರಕ್ಕೆಂದು ಈ ವಿಡಿಯೋ ತುಣುಕನ್ನು ಸೇರಿಸಲು ಈ ವೀಡಿಯೋ ಕೊಡಲಾಗಿತ್ತು.ಆದರೆ ಅದು ಈಗ ದುರ್ಭಳಕೆಯಾಗಿದೆ.ನನ್ನಿಂದ ಹಾಗೂ ನನ್ನ ಚಿತ್ರತಂಡದಿಂದ ತಪ್ಪಾಗಿದೆ ಎಂದು ಆಶಿಕಾ ಅವರಿಗೆ ಕ್ಷಮೆ ಕೇಳಿದ್ದಾರೆ.ಇನ್ನು ಆಶಿಕಾ ಅವರ ಮೇಲಿದ್ದ ಕಪ್ಪು ಚುಕ್ಕಿಯನ್ನು ಕೊಡ ಹೋಗಲಾಡಿಸಿದ್ದಾರೆ.