ವೀಣಾ ಮಲಿಕ್…ಪಾಕಿಸ್ತಾನದ ಖ್ಯಾತ ನಟಿ, ಬಿಗ್ ಬಾಸ್ 4 ನಲ್ಲಿ ಬಹಳ ಜನಪ್ರಿಯರಾದರು. ಆದರೆ ಈಗ ಅವರು ಮದುವೆಯಾಗಿದ್ದಾರೆ ಎಂಬ ಸುದ್ದಿ ಸಖತ್ ವೈರಲ್ ಆಗುತ್ತಿದೆ. ಹೌದು, ಅವರ ಗೆಳೆಯ, ಉದ್ಯಮಿ ಶರ್ಯಾರ್ ಚೌಧರಿ ಅವರ ಇನ್ಸ್ಟಾ ಪೋಸ್ಟ್ ನೋಡಿದ ನಂತರ ನಟಿಯ ಮದುವೆಯ ವದಂತಿಗಳು ಹರಡಲು ಪ್ರಾರಂಭಿಸಿದವು. ಇಲ್ಲಿ ಮದುವೆ ಬಗ್ಗೆಯೂ ಸುಳಿವು ನೀಡಿದ್ದಾರೆ. ನಿಜ ಹೇಳಬೇಕೆಂದರೆ ವೀಣಾ ಮಲಿಕ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋ ಹಂಚಿಕೊಂಡಿದ್ದು, ಇದರಲ್ಲಿ ಅವರು ಕೆಂಪು ದಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ವೀಣಾ ಮಲಿಕ್ ವಧುವಿನ ಗೆಟಪ್ ನಲ್ಲಿ ಕಾಣಿಸಿಕೊಂಡಿರುವ ಈ ಫೋಟೋವನ್ನು ಶರ್ಯಾರ್ ಚೌಧರಿ ಅವರು ಮರು ಹಂಚಿಕೊಂಡಿದ್ದಾರೆ. ವೀಣಾ ಮಲಿಕ್ ಇದನ್ನು ಹಂಚಿಕೊಳ್ಳುವಾಗ ‘ಹೌದು ಅಂತಿಮವಾಗಿ…’ ಎಂದು ಬರೆದಿದ್ದಾರೆ.

ಬಿಗ್ ಬಾಸ್ನಲ್ಲಿ ಪಾಕಿಸ್ತಾನಿ ಸುಂದರಿಯನ್ನು ನೋಡಿದ ನಂತರ ಶರ್ಯಾರ್ ಚೌಧರಿ ಮಾರುಹೋದರು. ಇನ್ನು ಶರ್ಯಾರ್ ಚೌಧರಿ ಅವರು ಇದೀಗ ಹಂಚಿಕೊಂಡಿರುವ ಫೋಟೋದಲ್ಲಿ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಮುಖವನ್ನು ಮರೆಮಾಚಿದ್ದರು ಮತ್ತು ಈ ಫೋಟೋದಲ್ಲಿ ವೀಣಾ ಮಲಿಕ್ ಅವರನ್ನು ಟ್ಯಾಗ್ ಮಾಡಿದ್ದರು. ಈಗ ಇವರಿಬ್ಬರ ಇಂತಹ ಫೋಟೋಗಳನ್ನು ನೋಡಿ ವೀಣಾ ಮಲಿಕ್ ನಿಜವಾಗಿ ಮದುವೆಯಾಗಿದ್ದಾರಾ ಅಥವಾ ಫೋಟೋಶೂಟ್ ಪಬ್ಲಿಸಿಟಿ ಸ್ಟಂಟ್ ಇರಬೇಕು ಎಂಬ ಗೊಂದಲವೂ ಜನರಲ್ಲಿತ್ತು.
ಆದರೆ ನಂತರ ವೀಣಾ ಮಲಿಕ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಿಂದ ವಧುವಿನ ಗೆಟಪ್ನಲ್ಲಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ‘ತು ಮುಜೆ ಕಾಬೂಲ್’ ಹಾಡು ಪ್ಲೇ ಆಗುತ್ತಿದೆ. ಈ ಸಂದರ್ಭದಲ್ಲಿ, ನಟಿ ಕ್ಯಾಮೆರಾ ಮುಂದೆ ಪೋಸ್ ನೀಡುತ್ತಿರುವುದು ಕಂಡುಬಂದಿದೆ. ಆದರೆ, ಶರ್ಯಾರ್ ಚೌಧರಿ ಇಲ್ಲಿ ಎಲ್ಲಿಯೂ ಕಾಣಿಸಲಿಲ್ಲ ಮತ್ತು ಇದು ಪ್ರೊಫೆಷನಲ್ ಶೂಟ್ ಎಂದು ತೋರುತ್ತದೆ.
ಆದರೆ, ಇದುವರೆಗೂ ವೀಣಾ ಮಲಿಕ್ ಅಥವಾ ಶರ್ಯಾರ್ ಚೌಧರಿ ಮದುವೆ ವದಂತಿಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ವೀಣಾ ಮಲಿಕ್ ಬಗ್ಗೆ ಹೇಳುವುದಾದರೆ, ಅವರು 2013 ರಲ್ಲಿ ದುಬೈನಲ್ಲಿ ಆಶಾದ್ ಬಸೀರ್ ಖಟ್ಟಕ್ ಅವರನ್ನು ವಿವಾಹವಾದರು ಮತ್ತು ಇಬ್ಬರೂ 2018 ರಲ್ಲಿ ವಿಚ್ಛೇದನ ಪಡೆದರು. ವೀಣಾ ಮಲಿಕ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ವಿಚ್ಛೇದನದ ನಂತರ ವೀಣಾ ತನ್ನ ಮೊದಲ ಮದುವೆಯನ್ನು ತನ್ನ ಜೀವನದ ದೊಡ್ಡ ತಪ್ಪು ಎಂದು ಬಣ್ಣಿಸಿದ್ದರು. ಆದರೆ, ಪ್ರಸ್ತುತ ಅವರು ಉದ್ಯಮಿ ಶರ್ಯಾರ್ ಚೌಧರಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಶರ್ಯಾರ್ ಚೌಧರಿ ಇಸ್ಲಾಮಾಬಾದ್ನ ಉದ್ಯಮಿ. ಕಾರು ಮತ್ತು ಪ್ರಾಪರ್ಟಿ ಬ್ಯುಸಿನೆಸ್ ಹೊಂದಿದ್ದಾರೆ.