ನಟ ಕಿಚ್ಚ ಸುದೀಪ್ ಅವರು ಈ ವರ್ಷ ತಮ್ಮ ಅಭಿನಯಕ್ಕೆ ನೀಡಿದ ರಾಜ್ಯ ಪ್ರಶಸ್ತಿಯನ್ನು ನಿರಾಕರಿಸಿದರು. ಒಂದು ಸುದೀರ್ಘ ಪತ್ರ ಬರೆದು, ತಾವು ಹಲವು ವರ್ಷಗಳಿಂದ ಪ್ರಶಸ್ತಿಯನ್ನ ಸ್ವೀಕರಿಸಲಿಲ್ಲ. ಪ್ರಶಸ್ತಿ ಸ್ವೀಕರಿಸುವುದನ್ನು ನಿಲ್ಲಿಸಿರುವುದಾಗಿ ತಿಳಿಸಿದ್ದ ಸುದೀಪ್ ಅವರು ತಿಳಿಸಿದ್ದರು. ತಮಗೆ ಪ್ರಶಸ್ತಿ ಕೊಡುವುದಕ್ಕೆ ಆಯ್ಕೆ ಮಾಡಿದ್ದಕ್ಕೆ ಧನ್ಯವಾದಗಳು, ಆದರೆ ಅರ್ಹತೆ ಇರುವ ಇನ್ನೊಬ್ಬ ನಟನಿಗೆ ಕೊಡಬೇಕು ಎಂದು ಸುದೀಪ್ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು. ಇದೆಲ್ಲವೂ ಒಂದು ಕಡೆಯಾದರೆ, ಮತ್ತೊಂದು ಕಡೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಚಾರದಲ್ಲಿ ಡಿಕೆ ಶಿವಕುಮಾರ್ ಅವರು ಮತ್ತು ರವಿ ಗಣಿಗ ಅವರು ಹೇಳಿದ ಮಾತುಗಳು ವೈರಲ್ ಆಗಿದ್ದು, ಸುದೀಪ್ ಅವರ ವಿಚಾರ ಕೂಡ ಪ್ರಸ್ತಾಪವಾಗಿದೆ.
ರಾಜ್ಯದ ಡಿಸಿಎಂ ಆಗಿರುವ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಿತ್ರರಂಗದ ಗಣ್ಯರು ಬರಲಿಲ್ಲ, ದೊಡ್ಡ ದೊಡ್ಡ ನಟರು ಬರಲಿಲ್ಲ ಎನ್ನುವ ಕಾರಣಕ್ಕೆ, ನಟ ನಟಿಯರು ಪರ್ಮಿಶನ್ ಕೇಳೋಕೆ ಬರ್ತಾರೆ, ಇನ್ನೇನೋ ಕಾರಣಕ್ಕೆ ಬರ್ತಾರೆ, ಅವರಿಗಾಗಿ ಕಾರ್ಯಕ್ರಮ ಮಾಡಿದರೆ ಬರೋದಿಲ್ಲ. ಅವರಿಗೆಲ್ಲಾ ಹೇಗೆ ಪಾಠ ಕಲಿಸಬೇಕು ಅಂತ ನನಗೆ ಗೊತ್ತಿದೆ. ನಟನಟಿಯರ ನಟ್ಟು ಬೋಲ್ಟ್ ಟೈಟ್ ಮಾಡೋದು ಗೊತ್ತಿದೆ ಎಂದು ಹೇಳಿಕೆ ನೀಡಿದ್ದರು. ಈ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದೆ. ಡಿಕೆಶಿ ಅವರ ಮಾತಿನ ಬಗ್ಗೆ ಪರ ಹಾಗೂ ವಿರೋಧದ ಚರ್ಚೆ ಕೂಡ ನಡೆಯುತ್ತಿದೆ. ಇನ್ನುಳಿದ ಹಾಗೆ ಕಾಂಗ್ರೆಸ್ ಪಕ್ಷದವರೇ ಆದ ರವಿ ಗಣಿಗ ಅವರು ನೀಡಿರುವ ಒಂದು ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸುದೀಪ್ ಅವರ ಹೆಸರನ್ನು ಬಳಸದೆ, ಸುದೀಪ್ ಅವರ ಬಗ್ಗೆ ಮಾತನಾಡಿದ್ದಾರೆ.

ಹೌದು, ರವಿ ಗಣಿಗ ಅವರು ಸುದೀಪ್ ಅವರ ಹೆಸರನ್ನು ಹೇಳದೆಯೇ, ಕಿಚ್ಚನಿಗೆ ಟಾಂಗ್ ಕೊಟ್ಟಿದ್ದರು. ನಮ್ಮ ಸರ್ಕಾರ ಅವಾರ್ಡ್ ಕೊಟ್ಟರೆ ಅದನ್ನ ತಿರಸ್ಕಾರ ಮಾಡ್ತಾರೆ, ಅದೇ ಹಿಂದಿಯವರು ಅವಾರ್ಡ್ ಕೊಟ್ಟರೆ ಓಡಿ ಹೋಗಿ ತಗೋತಾರೆ ಎಂದಿದ್ದರು. ಇನ್ನು ನಟಿ ರಶ್ಮಿಕಾ ಮಂದಣ್ಣ ಬಗ್ಗೆ ಸಹ ಇದೇ ರೀತಿ ಮಾತನಾಡಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬನ್ನಿ ಅಂತ ಅಷ್ಟು ಸಾರಿ ಭೇಟಿ ಮಾಡಿ, ಕರೆ ಮಾಡಿ ಆಹ್ವಾನ ಕೊಟ್ಟರೆ, ನನ್ನ ಮನೆ ಇರೋದು ಹೈದರಾಬಾದ್ ನಲ್ಲಿ, ನನಗೆ ಕರ್ನಾಟಕ ಎಲ್ಲಿದೆ ಗೊತ್ತಿಲ್ಲ ಅಂತ ಹೇಳಿದರು, ಕೊನೆಗೆ ಶೂಟಿಂಗ್ ಇದೆ, ಬರೋಕೆ ಟೈಮ್ ಇಲ್ಲ ಎಂದರು ಎಂದು ಹೇಳಿಕೆ ನೀಡಿದರು. ಆದರೆ ಈ ಎಲ್ಲಾ ವಿಚಾರಕ್ಕೆ ಈಗ ತಿರುಗೇಟು ಸಿಗುತ್ತಿದೆ. ಒಂದು ಕಡೆ ರಶ್ಮಿಕಾ ಅವರ ಆತ್ಮೀಯರು ಇದು ಸುಳ್ಳು ಸುದ್ದಿ ಎಂದಿದ್ದಾರೆ..

ಮತ್ತೊಂದು ಕಡೆ, ಕಿಚ್ಚ ಸುದೀಪ್ ಅವರ ಪರವಾಗಿ ಚಕ್ರವರ್ತಿ ಚಂದ್ರಚೂಡ್ ಅವರು ಬ್ಯಾಟಿಂಗ್ ಮಾಡಿದ್ದಾರೆ. ಹಾಗೆಯೇ ರಾಜ್ಯ ಸರ್ಕಾರ ಪ್ರಶಸ್ತಿ ವಿಚಾರದಲ್ಲಿ ಮಾಡುತ್ತಿರುವ ಕೆಲವು ಕೆಟ್ಟ ವಿಚಾರಗಳನ್ನು ಸಹ ತಿಳಿಸಿದ್ದಾರೆ. ಚಕ್ರವರ್ತಿ ಚಂದ್ರಚೂಡ್ ಅವರು ಹೇಳಿರುವ ಅನುಸಾರ ಮೊದಲಾಗಿ ಕಿಚ್ಚ ಸುದೀಪ್ ಅವರು ಹಿಂದಿಯಿಂದ ಯಾವುದೇ ಪ್ರಶಸ್ತಿಯನ್ನ ಸ್ವೀಕರಿಸಿಲ್ಲ. ಸುದೀಪ್ ಅವರು ಪ್ರಶಸ್ತಿ ಪಡೆಯುವುದನ್ನು ಬಿಟ್ಟು 21 ವರ್ಷ ಕಳೆದು ಹೋಗಿದೆ ಎಂದು ತಿಳಿಸಿದ್ದಾರೆ. 2004 ರಿಂದ ಸುದೀಪ್ ಅವರು ಯಾವುದೇ ಪ್ರಶಸ್ತಿಯನ್ನು ಸ್ವೀಕರಿಸಿಲ್ಲ. ಅದಕ್ಕೆ ಕಾರಣ ರಾಜ್ಯ ಪ್ರಶಸ್ತಿ ವಿಚಾರದಲ್ಲಿ ನಡೆದ ಘಟನೆ. ಸುದೀಪ್ ಅವರಿಗೆ ಪ್ರಶಸ್ತಿ ಬಂದಿದೆ ಎಂದು ಘೋಷಣೆ ಮಾಡಿ, ಮರುದಿನವೇ ಬೇರೆಯವರಿಗೆ ಪ್ರಶಸ್ತಿ ಕೊಡಲಾಗಿತ್ತು.
ಹೌದು, ನಾವು ಓದುತ್ತಿರುವುದು ಶಾಕ್ ಅನ್ನಿಸಿದರೂ ನಡೆದಿರುವುದು ನಿಜ. 2004 ರಲ್ಲಿ ರಂಗ ಎಸ್.ಎಸ್.ಎಲ್.ಸಿ ಸಿನಿಮಾಗಾಗಿ ಸುದೀಪ್ ಅವರಿಗೆ ಬೆಸ್ಟ್ ಆಕ್ಟರ್ ರಾಜ್ಯ ಪ್ರಶಸ್ತಿ ಸಿಕ್ಕಿದೆ ಎಂದು ಘೋಷಣೆ ಮಾಡಲಾಗಿತ್ತು, ಸುದೀಪ್ ಅವರಿಗೆ ಕೂಡ ತಿಳಿಸಲಾಗಿತ್ತು. ಆದರೆ ಮರುದಿನ ಬೆಳಗ್ಗೆ ಬೇರೆಯವರಿಗೆ ಅದೇ ಅವಾರ್ಡ್ ಅನ್ನು ಕೊಡಲಾಗಿದೆ ಎಂದು ಮಾಹಿತಿ ಸಿಕ್ಕಿತು. ಇದೇ ರೀತಿ 2007-08 ಸಾಲಿನಲ್ಲಿ ಕೂಡ ನಡೆಯಿತು. ಆ ವರ್ಷ ಖುದ್ದಾಗಿ ಸುದೀಪ್ ಅವರಿಗೆ ಕರೆ ಮಾಡಿ ನಿಮಗೆ ಪ್ರಶಸ್ತಿ ಬಂದಿದೆ ಎಂದು ಹೇಳಿ, ನಂತರ ಮತ್ತೊಬ್ಬ ನಟರಿಗೆ ಪ್ರಶಸ್ತಿ ಕೊಟ್ಟಿದ್ದರು. ರಾಜ್ಯ ಪ್ರಶಸ್ತಿಗಳ ವಿಚಾರದಲ್ಲಿ ಈ ರೀತಿಯ ಘಟನೆಗಳು ನಡಿದು, ಮನಸ್ಸಿಗೆ ನೋವಾದ ಕಾರಣ ಸುದೀಪ್ ಅವರು ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನೇ ನಿಲ್ಲಿಸಿಬಿಟ್ಟರು ಎಂದು ಚಕ್ರವರ್ತಿ ಚಂದ್ರಚೂಡ್ ಅವರು ತಿಳಿಸಿದ್ದಾರೆ.

ಇನ್ನು ಆ ವರ್ಷಗಳಲ್ಲಿ ಬೇರೆ ಯಾವ ನಟರಿಗೆ ಅವಾರ್ಡ್ ಕೊಟ್ಟರು ಎಂದು ನೋಡುವುದಾದರೆ, 2004ರಲ್ಲಿ ರಂಗ ಎಸ್.ಎಸ್.ಎಲ್.ಸಿ ಸಿನಿಮಾಗಾಗಿ ಸುದೀಪ್ ಅವರಿಗೆ ಬರಬೇಕಿದ್ದ ಅವಾರ್ಡ್ ಅನ್ನು ಕಂಠಿ ಸಿನಿಮಾದ ಅಭಿನಯಕ್ಕಾಗಿ ನಟ ಶ್ರೀಮುರಳಿ ಅವರಿಗೆ ಕೊಡಲಾಯಿತು. ಇನ್ನು 2007-08 ರ ಸಾಲಿನಲ್ಲಿ ಜಸ್ಟ್ ಮಾತ್ ಮಾತಲ್ಲಿ ಸಿನಿಮಾದ ಅಭಿನಯಕ್ಕಾಗಿ ಕಿಚ್ಚ ಸುದೀಪ್ ಅವರಿಗೆ ರಾಜ್ಯ ಪ್ರಶಸ್ತಿ ಬರುತ್ತದೆ ಎಂದು ತಿಳಿಸಿ, ನಂತರ ಆ ಅವಾರ್ಡ್ ಅನ್ನು ಮಿಲನಾ ಸಿನಿಮಾದ ಅಭಿನಯಕ್ಕಾಗಿ ಪುನೀತ್ ರಾಜ್ ಕುಮಾರ್ ಅವರಿಗೆ ಕೊಡಲಾಗಿತ್ತು. ರಾಜ್ಯ ಸರ್ಕಾರ ಈ ರೀತಿ ಮಾಡಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಹಲವು ಬಾರಿ ಬೇರೆ ಕಲಾವಿದರಿಗೆ ಕೂಡ ನಡೆದಿದೆ. ಇನ್ನಷ್ಟು ವರ್ಷಗಳ ಹಿಂದೆ ಕೂಡ ಈ ರೀತಿ ಆಗಿದೆ.
ರಾಜ್ಯ ಸರ್ಕಾರ ಸಿನಿಮಾ ರಂಗಕ್ಕೆ ಕೊಡುತ್ತಿರುವ ಅವಾರ್ಡ್ ಮತ್ತು ಇದಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಈ ರೀತಿ ತಾರತಮ್ಯ ಮಾಡುತ್ತಲಿದ್ದರೆ, ಯಾವ ಕಲಾವಿದರು ತಾನೇ ಸಂತೋಷದಿಂದ ಕಾರ್ಯಕ್ರಮಕ್ಕೆ ಬರುತ್ತಾರೆ? ಬಹುಶಃ ಎಲ್ಲರಿಗೂ ಇದೇ ರೀತಿ ಅನ್ನಿಸಿರಬಹುದು. ಆದರೆ ಶಿವ ರಾಜ್ ಕುಮಾರ್ ಅವರು, ಹಿರಿಯನಟಿ ಹೇಮಾ ಚೌಧರಿ ಅವರು, ಹಿರಿಯ ನಿರ್ದೇಶಕ ನಾಗಾಭರಣ ಅವರು, ನಟ ಕಿಶೋರ್ ಅವರು ಸೇರಿದಂತೆ ಒಂದಷ್ಟು ಜನರು ಕಾರ್ಯಕ್ರಮಕ್ಕೆ ಬಂದಿದ್ದರು. ಉದ್ಘಾಟನೆಯಲ್ಲಿ ಪಾಲ್ಗೊಂಡರು. ಈಗ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜೋರಾಗಿ, ಅದ್ಧೂರಿಯಾಗಿ ನಡೆಯುತ್ತಿದೆ. ಕಲಾವಿದರ ಬಗ್ಗೆ ಸರ್ಕಾರ ಈ ರೀತಿ ಅದ್ಧೂರಿಯಾಗಿ ಮಾತನಾಡೋದನ್ನ ನಿಲ್ಲಿಸಬೇಕು.



