ಆಸ್ಪತ್ರೆಯಿಂದ ಹೊರಡುವಾಗ ಅಭಿಮಾನಿಯೊಬ್ಬನ ಮೇಲೆ ಸಿಟ್ಟಾದ ಡಿಬಾಸ್! ಕಾರಣವಾದರು ಏನು ?
ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪದ ಮೇಲೆ ನಟ ದರ್ಶನ್ ಬಳ್ಳಾರಿ ಜೈಲು ಸೇರಿದ್ದಾರೆ. ಜೈಲು ಸೇರಿದಾಗಿನಿಂದಲೂ ದರ್ಶನ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ಗೆ ಜೈಲಿನಲ್ಲೇ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ನಿನ್ನೆ ಎಂಆರ್ಐ ಸ್ಕ್ಯಾನ್ ಮಾಡಿಸಲು ದರ್ಶನ್ನನ್ನು ಬಳ್ಳಾರಿ ಬಿಮ್ಸ್ಗೆ ಕರೆದುಕೊಂಡು ಹೋಗಿದ್ದರು.
ಸ್ಕ್ಯಾನ್ ಬಳಿಕ ಕೆಲವೇ ಗಂಟೆಗಳಲ್ಲಿ ದರ್ಶನ್ನನ್ನು ವಾಪಸ್ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇನ್ನೂ ನಟ ದರ್ಶನ್ ಜೈಲಿಗೆ ಮರಳುವಾಗ ಏಕಾಏಕಿ ಸಿಟ್ಟಾಗಿದ್ದಾರೆ. ದರ್ಶನ್ ಸಿಟ್ಟಿಗೆ ಕಾರಣ ಆದವರು ಅವರ ಅಭಿಮಾನಿಯೇ. ಅಂಥದ್ದೇನಾಯ್ತು?
ನಟ ದರ್ಶನ್ ಪೊಲೀಸ್ ಜೀಪ್ ಹತ್ತುವ ವೇಳೆ ಅಭಿಮಾನಿಯೊಬ್ಬ ದರ್ಶನ್ ಕೈ ಹಿಡಿದು ಎಳೆದಿದ್ದಾರೆ. ಈ ವೇಳೆ ನಟ ದರ್ಶನ್ ಸಿಟ್ಟಾದ್ರು. ಕೋಪ ಬಂದರೂ ಏನೂ ಮಾಡದೇ ದರ್ಶನ್ ಜೀಪ್ ಹತ್ತಿದ್ದಾರೆ. ಮೊದಲಿನಿಂದಲೂ ದರ್ಶನ್ ಬಲಗೈ ನೋವಿನಿಂದ ಬಳಲುತ್ತಿದ್ದರು. ಈ ಹಿಂದೆ ಹುಟ್ಟುಹಬ್ಬದ ಸಮಯದಲ್ಲಿ ದರ್ಶನ್ ನೋಡಲು ಬಂದಾಗ ಅಭಿಮಾನಿಗಳು ದರ್ಶನ್ ಕೈ ಎಳೆಯುತ್ತಿದ್ದರು. ಆ ವೇಳೆಯೂ ನಟ ದರ್ಶನ್ ಕೋಪ ಮಾಡಿಕೊಂಡಿದ್ದರು.
ದರ್ಶನ್ ಅವರ ಆರೋಗ್ಯ ಸ್ಥಿತಿಯ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ದರ್ಶನ್ ಅವರಿಗೆ ನಿಲ್ಲಲು ಸಹ ಆಗದಷ್ಟು ಬೆನ್ನು ನೋವು ಕಾಡುತ್ತಿದೆ. ಹೊರಗಿದ್ದಾಗ ಫಿಟ್ ಆಗಿದ್ದಾಗ ದಚ್ಚು ಜೈಲಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.