ಕಷ್ಟ ಅನ್ನೋದು ಎಲ್ಲರಿಗು ಬಂದೆ ಬರುತ್ತದೆ. ಎಲ್ಲರಿಗೂ ಕಷ್ಟ ಅನ್ನೋದು ಒಂದೇ ರೀತಿ ಎಂದು ಹೇಳಿದರೆ ತಪ್ಪಲ್ಲ. ಏಕೆಂದರೆ ಮನುಷ್ಯ ಅಂದಮೇಲೆ ಕಷ್ಟ ಸುಖ ನೋವು ನಲಿವು ಇದೆಲ್ಲವನ್ನು ಅನುಭವಿಸಲೇಬೇಕು. ಎಲ್ಲವನ್ನು ಮೆಟ್ಟಿ, ನಿಂತು ಮುನ್ನುಗ್ಗಿ ಜೀವನವನ್ನು ಮುನ್ನಡೆಸಲೇಬೇಕು. ಆಗಲೇ ಮನುಷ್ಯನ ಜೀವನಕ್ಕೆ ಒಂದು ಅರ್ಥ ಸಿಗುವುದು ಎಂದರೆ ತಪ್ಪಲ್ಲ. ಈ ರೀತಿಯಾಗಿ ಕಷ್ಟ ಎದುರಿಸಿದವರು ನಮಗೆ ಸ್ಫೂರ್ತಿಯಾಗಿ ನಿಲ್ಲುತ್ತಾರೆ. ಅವರ ಕಥೆಗಳನ್ನು ಕೇಳಿ, ಇನ್ನಷ್ಟು ಜನರು ಸಾಧನೆಯತ್ತ ಹೆಜ್ಜೆ ಹಾಕುತ್ತಾರೆ. ಇಂದು ನಾವು ಇದೇ ರೀತಿ ಕಷ್ಟಪಟ್ಟು ಬೆಳೆಯುವ ಪ್ರಯತ್ನ ಮಾಡುತ್ತಿರುವ ಧರ್ಮ ಕೀರ್ತಿರಾಜ್ ಅವರ ಬಗ್ಗೆ ತಿಳಿಸಲಿದ್ದೇವೆ. ಕೋವಿಡ್ ಸಮಯದಲ್ಲಿ ಎಲ್ಲರಿಗೂ ಕಷ್ಟವಿದ್ದ ವೇಳೆ, ಧರ್ಮ ಕೀರ್ತಿರಾಜ್ ಅವರು ಕಾರ್ ಮಾರಿಕೊಳ್ಳುವ ಪರಿಸ್ಥಿತಿಗೆ ಬಂದಿದ್ದರಂತೆ. ಈ ವಿಷಯದ ಬಗ್ಗೆ ತಿಳಿಸಿದ್ದಾರೆ.
ನಟ ಧರ್ಮ ಕೀರ್ತಿರಾಜ್ ಅವರು ಕನ್ನಡದ ಖ್ಯಾತ ಖಳನಟ ಕೀರ್ತಿ ರಾಜ್ ಅವರ ಮಗ. ಕೀರ್ತಿ ರಾಜ್ ಅವರು 90ರ ದಶಕದಲ್ಲಿ ಗುರುತಿಸಿಕೊಂಡು ಹೆಸರು ಮಾಡಿದ್ದ ನಟ. ಇವರು ಹೆಚ್ಚಾಗಿ ಖಳನಟನ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿದ್ದರು. ನೂರಾರು ಸಿನಿಮಾಗಳಲ್ಲಿ ನಟಿಸಿರುವ ಕೀರ್ತಿ ರಾಜ್ ಅವರ ಮಗ ಧರ್ಮ ಕೀರ್ತಿ ರಾಜ್. ಇವರು ಕೂಡ ತಂದೆಯ ಹಾಗೆ ಸಿನಿಮಾ ನಟ ಆಗಬೇಕು ಎಂದು ಕನಸು ಕಟ್ಟಿಕೊಂಡು ಚಿತ್ರರಂಗಕ್ಕೆ ಬಂದವರು. ದರ್ಶನ್ ಅವರು ನಿರ್ಮಾಣ ಮಾಡಿ, ದಿನಕರ್ ತೂಗುದೀಪ್ ಅವರು ನಿರ್ದೇಶನ ಮಾಡಿದ ನವಗ್ರಹ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು ಧರ್ಮ. ಈ ಸಿನಿಮಾ ಮೂಲಕ ಇವರಿಗೆ ಕ್ಯಾಡ್ಬೇರಿಸ್ ಎನ್ನುವ ಹೆಸರು ಕೂಡ ಬಂದಿತ್ತು. ನೋಡಲು ಅಷ್ಟೇ ಹ್ಯಾಂಡ್ಸಮ್ ಆಗಿದ್ದರು ಧರ್ಮ.

ಧರ್ಮ ಅವರು ಕಾಲೇಜು ದಿನಗಳಲ್ಲಿ ನಟಿಸಿದ ಸಿನಿಮಾ ನವಗ್ರಹ. ಈ ಸಿನಿಮಾ ಧರ್ಮ ಅವರಿಗೆ ಯಶಸ್ಸು, ಇನ್ನಷ್ಟು ಅವಕಾಶಗಳು ಎಲ್ಲವನ್ನು ತಂದುಕೊಟ್ಟಿತು. ನವಗ್ರಹ ಸಿನಿಮಾಗಾಗಿ ಧರ್ಮ ಅವರಿಗೆ ನಟ ದರ್ಶನ್ ಅವರು 3 ಲಕ್ಷ ಸಂಭಾವನೆ ಕೊಟ್ಟಿದ್ದರಂತೆ. ಧರ್ಮ ಅವರ ಲಕ್ಕಿ ನಂಬರ್ 3 ಎಂದು, 3 ಲಕ್ಷ ರೂಪಾಯಿಗಳ ಸಂಭಾವನೆಯ ಚೆಕ್ ಅನ್ನು ಧರ್ಮ ಅವರಿಗೆ ಕೊಟ್ಟಿದ್ದರಂತೆ. ಆ ಚೆಕ್ ನೋಡಿ ಧರ್ಮ ಅವರು ತುಂಬಾ ಖುಷಿ ಪಟ್ಟಿದ್ದರಂತೆ. ಆಗಿನಿಂದ ಶುರುವಾದ ಜರ್ನಿ ಇಂದು ಧರ್ಮ ಅವರು ಸುಮಾರು 20 ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಇವತ್ತಿಗೂ ಕೂಡ ಬಿಗ್ ಬ್ರೇಕ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಚಂದನವನದಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಕಾಯುತ್ತಿದ್ದಾರೆ. ಆ ಒಂದು ಅವಕಾಶ ಧರ್ಮ ಅವರಿಗೆ ಸಿಗೆಬೇಕಿದೆ.
ಇನ್ನು ಧರ್ಮ ಅವರು ನವಗ್ರಹ ಸಿನಿಮಾ ನಂತರ ಬೇರೆ ಕೆಲವು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದರು ಸಹ, ಹೇಳಿಕೊಳ್ಳುವಂಥ ಜನಪ್ರಿಯತೆ ಸಿಗಲಿಲ್ಲ. ಭರವಸೆ ಮೂಡಿಸುವಂಥ ಪಾತ್ರಗಳು ಕೂಡ ಸಿಗಲಿಲ್ಲ. ಆದರೆ ಧರ್ಮ ಕೀರ್ತಿರಾಜ್ ಅವರಿಗೆ ಬಿಗ್ ಬಾಸ್ ಇಂದ ಹೆಚ್ಚು ಜನಪ್ರಿಯತೆ ಸಿಕ್ಕಿತು ಎಂದರೆ ತಪ್ಪಲ್ಲ. ಬಿಗ್ ಬಾಸ್ ಶೋನಲ್ಲಿ 50 ದಿವಸಗಳ ಕಾಲ ಧರ್ಮ ಇದ್ದರು. ಹೆಸರಿಗೆ ತಕ್ಕ ಹಾಗೆ ಧರ್ಮರಾಜನ ಹಾಗೆಯೇ ಇದ್ದರೂ ಎಂದರೂ ತಪ್ಪಲ್ಲ. ಇವರ ವ್ಯಕ್ತಿತ್ವ ಎಂಥದ್ದು ಅನ್ನೋದು ಬಿಗ್ ಬಾಸ್ ಇಂದ ಜನರಿಗೆ ಚೆನ್ನಾಗಿ ಅರ್ಥವಾಯಿತು. ಧರ್ಮ ಕೀರ್ತಿರಾಜ್ ಅವರು ಯಾರೊಂದಿಗೂ ಜಗಳ ಆಡೋರಲ್ಲ, ಯಾರ ತಂಟೆಗೂ ಹೋಗೋರಲ್ಲ, ಯಾರನ್ನು ಕೆಣಕುವವರು ಅಲ್ಲ. ತಮ್ಮ ಪಾಡಿಗೆ ತಾವು ಇರುವಂತಹ ವ್ಯಕ್ತಿ.

ಯಾರಾದರೂ ಜಗಳ ಆಡುತ್ತಿದ್ದರು ಅವರ ಮಧ್ಯೆ ಹೋಗುತ್ತಿರಲಿಲ್ಲ. ಇಷ್ಟು ಒಳ್ಳೆಯ ವ್ಯಕ್ತಿತ್ವ ಇರುವವರು ಬಿಗ್ ಬಾಸ್ ಮನೆಯಲ್ಲಿ ಇರೋದಕ್ಕೆ ಹೇಗೆ ಸಾಧ್ಯ? ಬಿಗ್ ಬಾಸ್ ಮನೆಯಲ್ಲಿ ಗಾಸಿಪ್ ಗಳಿಗೆ ಹೆಚ್ಚು ಒತ್ತು ಕೊಡುವುದು, ಜಗಳ ಆಡಿಕೊಂಡು ಡ್ರಾಮ ಮಾಡಿಕೊಂಡು ಇರುವವರೇ ಆ ಮನೆಯಲ್ಲಿ ಹೆಚ್ಚು ದಿವಸಗಳ ಕಾಲ ಇರೋದಕ್ಕೆ ಆಗೋದು. ಈ ಮಾತಂತು ಸತ್ಯ. ಈ ಕಾರಣಕ್ಕೆ ವಿನ್ನರ್ ಆಗುವ ಅರ್ಹತೆ ಇದ್ದರೂ ಕೂಡ ಧರ್ಮ ಅವರು 50 ದಿನಗಳ ಕಾಲ ಮಾತ್ರ ಇದ್ದು, ಎಲಿಮಿನೇಟ್ ಆಗಿ ಹೊರಗಡೆ ಬಂದರು. ಬಿಗ್ ಬಾಸ್ ಇಂದ ಬಂದ ನಂತರ ಜನರಿಗೆ ಧರ್ಮ ಅವರ ಬಗ್ಗೆ ಇರುವ ಪ್ರೀತಿ ಹೆಚ್ಚಾಗಿದೆ. ಅಭಿಮಾನಿ ಬಳಗ ಕೂಡ ಹೆಚ್ಚಾಗಿದೆ. ಹಾಗೆಯೇ ಇವರ ಬಗ್ಗೆ ಅನೇಕ ವಿಚಾರಗಳು ಕೂಡ ಗೊತ್ತಾಗಿದೆ.
ಬಿಗ್ ಬಾಸ್ ನಂತರ ಧರ್ಮ ಕೀರ್ತಿರಾಜ್ ಅವರು ಅನೇಕ ಕಾರ್ಯಕ್ರಮಗಳಲ್ಲಿ ಇಂಟರ್ವ್ಯೂಗಳಲ್ಲಿ ಪಾಲ್ಗೊಂಡಿದ್ದಾರೆ. ಅದರಲ್ಲಿ ಒಂದು ರಾಪಿಡ್ ರಶ್ಮಿ ಶೋ ಆಗಿದೆ. ಈ ಪಾಡ್ ಕ್ಯಾಸ್ಟ್ ಕಾರ್ಯಕ್ರಮದಲ್ಲಿ ಧರ್ಮ ಕೀರ್ತಿರಾಜ್ ಕಾಣಿಸಿಕೊಂಡಿದ್ದು, ಶೋನಲ್ಲಿ ಅನೇಕ ಕಷ್ಟದ ಘಳಿಗೆಯ ಬಗ್ಗೆ ಮಾತನಾಡಿದ್ದಾರೆ. ಕೋವಿಡ್ ಸಮಯದಲ್ಲಿ ಕಷ್ಟಗಳು ಎದುರಾದ ವೇಳೆ, ತಾವು ಬಹಳ ಕಷ್ಟಪಟ್ಟು ಖರೀದಿ ಮಾಡಿದ್ದ ಆಡಿ ಕಾರ್ ಅನ್ನು ಮಾರಿದರಂತೆ ಧರ್ಮ ಅವರು. ಇಎಂಐ ನಲ್ಲಿ ತೆಗೆದುಕೊಂಡು, ಬಹಳ ಇಷ್ಟಪಟ್ಟ ಕಾರ್ ಮಾಡಿದ್ದಕ್ಕೆ ಬಹಳ ಬೇಸರ ಆಗಿತ್ತಂತೆ. ಆದರೆ ಕಷ್ಟ ಕಾಲಕ್ಕೆ ಕಾರ್ ಇಂದ ಸಹಾಯ ಆಯಿತು ಎಂದು ಸಮಾಧಾನ ಕೂಡ ಇತ್ತಂತೆ. ಈಗ ಇವರು ದುಡಿಯುತ್ತಿದ್ದಾರೆ, ಸಿನಿಮಾ ಇಂದ ತಕ್ಕಮಟ್ಟಿಗೆ ದುಡಿದಿದ್ದಾರೆ.

ಈಗ ದುಡಿಯುತ್ತಿರುವುದು ಹೇಗಿದೆ ಎಂದರೆ, ಇಎಂಐ ಕಟ್ಟೋದಕ್ಕೆ, ಅಮ್ಮ ಅಪ್ಪನಿಗೆ ಮನೆಗೆ ಕೊಡೋದಕ್ಕೆ ಮತ್ತು 6 ತಿಂಗಳಿಗೆ ಒಂದು ಸಾರಿ ವಿದೇಶಕ್ಕೆ ಟ್ರಿಪ್ ಗೆ ಹೋಗೋದಕ್ಕೆ ಸಾಕಾಗುತ್ತದೆಯಂತೆ. ಇದನ್ನು ಮೀರಿ ಬೆಳೆಯಬೇಕು, ಪ್ಲಾನ್ ಮಾಡಿ ಖರ್ಚು ಮಾಡುವ ಹಂತವನ್ನು ಮೀರಿ ಬೆಳೆಯಬೇಕು, ಅದೇ ತಮ್ಮ ಕನಸು ಎನ್ನುತ್ತಾರೆ ಧರ್ಮ. ವೃತ್ತಿ ಜೀವನದ ವಿಷಯದಲ್ಲಿ ಇದೇ ರೀತಿಯಲ್ಲಿ ನಡೆಯುತ್ತಿದ್ದಾರೆ. ಇಂಥ ಒಳ್ಳೆಯ ಮನಸ್ಸು ಇರುವ ವ್ಯಕ್ತಿಗೆ, ಎಳ್ಳಬ ಒಳ್ಳೆಯದಾಗಲಿ ಇವರಿಗೆ ಒಳ್ಳೆಯ ಅವಕಾಶಗಳು ಸಿಕ್ಕಿ, ಬದುಕು ಬಂಗಾರವಾಗಲಿ ಎಂದು ನಾವು ಕೂಡ ಹಾರೈಸೋಣ. ಕಷ್ಟಪಡುತ್ತಿರುವವರು ಬೆಳೆದು, ಮುಂದಕ್ಕೆ ಬರಬೇಕು. ಟ್ಯಾಲೆಂಟ್ ಇರೋರಿಗೆ ಒಳ್ಳೆಯ ಅವಕಾಶಗಳು ಸಿಗಬೇಕು.