ನಟ ದರ್ಶನ್ ಅವರು ಈಗ ಯಾವ ಥರದ ಪರಿಸ್ಥಿತಿಯಲ್ಲಿದ್ದಾರೆ ಎನ್ನುವ ವಿಷಯ ಗೊತ್ತೇ ಇದೆ. ದರ್ಶನ್ ಅವರು ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡು 6 ತಿಂಗಳ ವನವಾಸ ಅನುಭವಿಸಿ, ಈಗಷ್ಟೇ ಮನೆಗೆ ಮರಳಿದ್ದಾರೆ. ಈ ನಡುವೆ ದರ್ಶನ್ ಅವರು ಮನೆಗೆ ಹೋದ ನಂತರ ಪವಿತ್ರಾ ಗೌಡ ಅವರನ್ನು ಭೇಟಿ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು, ಆದರೆ ಯಾಕೋ ಅದು ನಡೆಯುವ ಹಾಗೆ ಕಾಣುತ್ತಿಲ್ಲ. ದರ್ಶನ್ ಅವರು ತಮ್ಮ ಮನೆಯವರನ್ನು ಬಿಟ್ಟು ಬೇರೆ ಯಾರನ್ನು ಭೇಟಿ ಮಾಡುವುದಕ್ಕೆ ಒಪ್ಪಿಲ್ಲ ಎನ್ನಲಾಗುತ್ತಿದೆ. ಅಷ್ಟಕ್ಕೂ ಆಗಿರೋದೇನು? ಈ ರೀತಿಯ ನಿರ್ಧಾರ ಮಾಡಿರೋದು ಯಾಕೆ? ಪೂರ್ತಿ ಮಾಹಿತಿ ಇಲ್ಲಿದೆ ನೋಡಿ..

ನಟ ದರ್ಶನ್ ಅವರು ಇಂದು ಈ ಪರಿಸ್ಥಿತಿಯಲ್ಲಿ ಇರೋದಕ್ಕೆ ಪವಿತ್ರಾ ಗೌಡ ಅವರೇ ಮುಖ್ಯ ಕಾರಣ. ಈ ಬಗ್ಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಕೆಲವು ಸಾರಿ ಸೋಷಿಯಲ್ ಮೀಡಿಯಾದಲ್ಲಿ ರಿಯಾಕ್ಟ್ ಮಾಡಿದ್ದರು ಸಹ, ದರ್ಶನ್ ಅವರು ಆಕೆಯ ಸಹವಾಸ ಬಿಟ್ಟಿರಲಿಲ್ಲ. ಆದರೆ ಇಷ್ಟೆಲ್ಲಾ ಆದ ನಂತರ ದರ್ಶನ್ ಅವರ ಬೆನ್ನಿಗೆ ನಿಂತು, ಅವರನ್ನು ಕಾಪಾಡಿಕೊಂಡಿದ್ದು ಅವರ ಪತ್ನಿ ವಿಜಯಲಕ್ಷ್ಮಿ ಅವರು. ಅತ್ತ ಜೈಲಿನಲ್ಲಿ ದರ್ಶನ್ ಅವರು ನೋವು ಅನುಭವಿಸುತ್ತಿದ್ದರೆ, ಇತ್ತ ವಿಜಯಲಕ್ಷ್ಮಿ ಅವರು ಕೂಡ ಬಹಳ ನೋವಿನಲ್ಲಿದ್ದರು. ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಲು ಹೋದಾಗ..
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇನ್ನುಮುಂದೆ ಪವಿತ್ರಾ ಗೌಡ ಇಂದ ದೂರ ಇರುವುದಾಗಿ ಮಾತು ಕೊಡಬೇಕು, ಆಗ ಮಾತ್ರ ಇದರಿಂದ ಹೊರತರುವ ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದು ವಿಜಯಲಕ್ಷ್ಮಿ ಅವರು ಹೇಳಿದರಂತೆ. ಅದಕ್ಕೆ ದರ್ಶನ್ ಅವರು ಸಹ ಒಪ್ಪಿಕೊಂಡು, ಇನ್ಯಾವತ್ತು ಪವಿತ್ರಾ ಗೌಡ ಸಹವಾಸಕ್ಕೆ ಹೋಗೋದಿಲ್ಲ ಎಂದು ಹೇಳಿದರಂತೆ. ಇದಾದ ನಂತರವೇ ವಿಜಯಲಕ್ಷ್ಮಿ ಅವರು ದರ್ಶನ್ ಅವರ ಪರವಾಗಿ ತಮ್ಮ ಶಕ್ತಿ ಮೀರಿ ಪ್ರಯತ್ನ ಮಾಡಿ, ಕೊನೆಗೂ ಅವರನ್ನು ಹೊರಗಡೆ ಕರೆತಂದಿದ್ದಾರೆ. ಪ್ರಸ್ತುತ ದರ್ಶನ್ ಅವರು ಮೈಸೂರಿನ ಫಾರ್ಮ್ ಹೌಸ್ ನಲ್ಲಿ, ತಮ್ಮ ಫ್ಯಾಮಿಲಿ ಜೊತೆಗಿದ್ದು, ರೆಸ್ಟ್ ಮಾಡುತ್ತಿದ್ದಾರೆ. ಬೇರೆ ಯಾರನ್ನು ಕೂಡ ಅವರು ಭೇಟಿ ಮಾಡುತ್ತಿಲ್ಲ ಎನ್ನಲಾಗಿದೆ.

ದರ್ಶನ ಅವರು ಇಂದು ಬೆಳಗ್ಗೆ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಗೆ ಭೇಟಿ ನೀಡಿ, ಹೆಲ್ತ್ ಚೆಕ್ ಮಾಡಿಸಿದ್ದಾರೆ, ಈ ವೇಳೆ ದರ್ಶನ್ ಅವರ ಜೊತೆಗೆ ನಟ ಧನವೀರ್ ಸಹ ಇದ್ದರು. ಹಾಗೆಯೇ ಸರ್ಜರಿ ಮಾಡಿಸಿಕೊಳ್ಳದೇ, ಬೆನ್ನು ನೋವಿಗೆ ಫೀಸಿಯೋಥೆರಪಿ ಮಾಡಿಸುತ್ತಿದ್ದಾರೆ. ಆರೋಗ್ಯದ ಸಮಸ್ಯೆ ಸಹ ಇರುವಾಗ, ನಟ ದರ್ಶನ್ ಅವರು ತಮಗೆ ಈಗ ನೆಮ್ಮದಿ ಬೇಕಾಗಿದೆ, ಆರೋಗ್ಯ ಕೂಡ ಸುಧಾರಿಸಬೇಕಿದೆ, ಹಾಗಾಗಿ ತಾವು ಈಗ ಯಾರನ್ನು ಭೇಟಿ ಮಾಡಲು ಸಾಧ್ಯವಿಲ್ಲ, ಮನಸ್ಸು ಮತ್ತು ಆರೋಗ್ಯ ಎರಡು ಸರಿಹೋದ ಮೇಲೆ ಎಲ್ಲರನ್ನು ಭೇಟಿ ಮಾಡುವುದಾಗಿ ತಿಳಿಸಿರುವ ದರ್ಶನ್ ಅವರು ಮನವಿ ಮಾಡಿಕೊಂಡಿದ್ದಾರಂತೆ.
ಈ ಎಲ್ಲಾ ಕಾರಣಕ್ಕೆ ದರ್ಶನ್ ಅವರು ಪವಿತ್ರಾ ಅವರ ಸಹವಾಸ ಬಿಟ್ಟು, ಮನೆಯವರ ಜೊತೆಗೆ ಮಾತ್ರ ಸಮಯ ಕಳೆಯುತ್ತಿದ್ದಾರೆ.
ಇತ್ತ ವಿಜಯಲಕ್ಷ್ಮೀ ದರ್ಶನ್ ಅವರು ಮತ್ತು ದರ್ಶನ್ ಅವರ ತಾಯಿ ಮೀನಾ ತೂಗುದೀಪ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿಗೆ ಹರಕೆ ತೀರಿಸಿದ್ದಾರೆ. ಇನ್ನು ಪವಿತ್ರಾ ಗೌಡ, ಇಷ್ಟೆಲ್ಲಾ ಆದ ನಂತರ ತಮ್ಮ ಅಜ್ಜಿ ಮನೆಗೆ ಹೋಗಿದ್ದಾರಂತೆ, ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದು, ಸಧ್ಯಕ್ಕೆ ಇಬ್ಬರು ಸಹ ಭೇಟಿ ಮಾಡುವ ರಿಸ್ಕ್ ತೆಗೆದುಕೊಂಡಿಲ್ಲ. ಮುಂದೆಯೂ ಇವರಿಬ್ಬರು ಕುಟುಂಬದವರು ಹೇಳಿದ ಹಾಗೆ ಕೇಳುತ್ತಾರಾ ಎಂದು ಕಾದು ನೋಡಬೇಕಿದೆ..