ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕಿಯಾಗಿ ಗುರುತಿಸಿಕೊಂಡು, ತಮ್ಮದೇ ಆದ ಸಾಮ್ರಾಜ್ಯ ಕಟ್ಟಿದವರು ಪಾರ್ವತಮ್ಮ ರಾಜ್ ಕುಮಾರ್. ತಮ್ಮ ಸಂಸ್ಥೆಯ ಮೂಲಕ ಡಾ. ರಾಜ್ ಕುಮಾರ್ ಅವರ ಸಿನಿಮಾಗಳನ್ನು ನಿರ್ಮಾಣ ಮಾಡಿದರು, ಹಲವು ನಾಯಕಿಯರನ್ನು ಕನ್ನಡಕ್ಕೆ ಪರಿಚಯಿಸಿದರು, ಜೊತೆಗೆ ತಮ್ಮ ಮಕ್ಕಳನ್ನು ಸಹ ತಮ್ಮ ಬ್ಯಾನರ್ ಮೂಲಕವೇ ಪರಿಚಯಿಸಿದರು. ಇವರು ಚಿತ್ರರಂಗಕ್ಕೆ ಕರೆತಂದ ನಾಯಕಿಯರು ಸ್ಟಾರ್ ಆಗಿ ಬೆಳೆದಿದ್ದಾರೆ. ಇನ್ನು ಇವರ ಮೂವರು ಮಕ್ಕಳು ಎಷ್ಟು ಎತ್ತರಕ್ಕೆ ಬೆಳೆದಿದ್ದಾರೆ ಎನ್ನುವ ವಿಷಯ ಸಹ ನಮಗೆ ಗೊತ್ತೇ ಇದೆ. ಪಾರ್ವತಮ್ಮ ಅವರು ಇದ್ದಾಗಲೇ ವಿನಯ್ ರಾಜ್ ಕುಮಾರ್ ಅವರನ್ನು ಪರಿಚಯಿಸಿದರು.

ಆದರೆ ದೊಡ್ಮನೆಯ ಮೂರನೇ ತಲೆಮಾರಿನ ಬೇರೆ ನಾಯಕರು ಚಿತ್ರರಂಗಕ್ಕೆ ಬರುವ ವೇಳೆಗೆ ಪಾರ್ವತಮ್ಮ ರಾಜ್ ಕುಮಾರ್ ಅವರು ಇರಲಿಲ್ಲ. ಹಾಗಾಗಿ ಅವರ ಕೆರಿಯರ್ ಬೇರೆ ರೀತಿಯಲ್ಲೇ ಇದೆ. ಯುವ ರಾಜ್ ಕುಮಾರ್ ಅವರನ್ನು ಪುನೀತ್ ರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಪರಿಚಯಿಸುತ್ತಾರೆ ಎನ್ನಲಾಗಿತ್ತು, ಆದರೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಜೊತೆಗೆ ಇದ್ದ ಬಾಂಧವ್ಯದ ಕಾರಣ ಯುವ ರಾಜ್ ಕುಮಾರ್ ಅವರನ್ನು ಹೊಂಬಾಳೆ ಸಂಸ್ಥೆ ಪರಿಚಯಿಸಿತು, ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಯುವ ರಾಜ್ ಕುಮಾರ್ ಅಭಿನಯದ ಯುವ ಸಿನಿಮಾ ತೆರೆಕಂಡಿತು. ಯುವ ಭರವಸೆಯ ನಟನಾಗಿ ಹೆಸರು ಪಡೆದರು.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಇನ್ನು ನಟ ರಾಮ್ ಕುಮಾರ್ ಹಾಗೂ ಪೂರ್ಣಿಮಾ ಅವರ ಮಕ್ಕಳಾದ ಧನ್ಯಾ ರಾಮ್ ಕುಮಾರ್ ಮತ್ತು ಧೀರೇನ್ ರಾಮ್ ಕುಮಾರ್ ಇವರನ್ನು ಸಹ ಬೇರೆ ಸಂಸ್ಥೆಗಳು ಪರಿಚಯ ಮಾಡಿದರು ಸಹ, ಇದೀಗ ದೊಡ್ಮನೆ ಸೊಸೆಯರು ಇವರ ಬೆನ್ನಿಗೆ ನಿಂತಿದ್ದಾರೆ. ಪಾರ್ವತಮ್ಮನವರು ಮಕ್ಕಳ ಹಿಂದೆ ನಿಂತು, ಅವರ ಕೆರಿಯರ್ ಆರಂಭದಲ್ಲಿ ಸಹಾಯ ಮಾಡಿದ ಹಾಗೆ, ಇದೀಗ ದೊಡ್ಮನೆ ಸೊಸೆಯರು ಮೂರನೇ ತಲೆಮಾರಿನ ಮಕ್ಕಳ ಬೆನ್ನೆಲುಬಾಗಿ ನಿಂತಿದ್ದಾರೆ. ಹೌದು, ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮತ್ತು ಗೀತಾ ಶಿವ ರಾಜ್ ಕುಮಾರ್ ಅವರು ಇಬ್ಬರು ಸಹ ಈಗ ಮಕ್ಕಳ ಜೊತೆಗಿದ್ದಾರೆ.

ಯುವ ರಾಜ್ ಕುಮಾರ್ ಅಭಿನಯಿಸಲಿರುವ ಎರಡನೇ ಸಿನಿಮಾ ಎಕ್ಕ, ಈ ಸಿನಿಮಾವನ್ನು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತಮ್ಮ ಪಿ.ಆರ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಫಸ್ಟ್ ಲುಕ್ ಈಗಾಗಲೇ ಬಿಡುಗಡೆ ಆಗಿದ್ದು, ಮುಹೂರ್ತ ಕೂಡ ಜೋರಾಗಿ ನಡೆಯಿತು. ಯುವನಟಿ ಸಂಪದ ಅವರು ಎಕ್ಕ ಸಿನಿಮಾದ ಹೀರೋಯಿನ್ ಆಗಿದ್ದಾರೆ. ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ನೋಡಿದರೆ ಇದೊಂದು ಪಕ್ಕಾ ಮಾಸ್ ಎಂಟರ್ಟೈನರ್ ಎಂದು ಕ್ಲಿಯರ್ ಆಗಿ ಗೊತ್ತಾಗುತ್ತದೆ. ಈ ಸಿನಿಮಾ ಇಂದ ಯುವ ರಾಜ್ ಕುಮಾರ್ ಅವರಿಗೆ ಇನ್ನಷ್ಟು ಹೆಸರು ಬರಲಿದೆ..
ಇನ್ನು ಧೀರೆನ್ ರಾಮ್ ಕುಮಾರ್ ಅವರ ಮುಂದಿನ ಸಿನಿಮಾವನ್ನು ಗೀತಾ ಪಿಕ್ಚರ್ಸ್ ಮೂಲಕ ಗೀತಾ ಶಿವ ರಾಜ್ ಕುಮಾರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಸಿನಿಮಾ ಅನೌನ್ಸ್ ಆಗಿದ್ದು, ಇನ್ನು ಟೈಟಲ್ ರಿವೀಲ್ ಆಗಿಲ್ಲ. ಗೀತಾ ಅವರ ಪ್ರೊಡಕ್ಷನ್ಸ್ ನ 4ನೇ ಸಿನಿಮಾ ಇದಾಗಿದೆ. ಈ ರೀತಿಯಲ್ಲಿ ಅಶ್ವಿನಿ ಅವರು ಮತ್ತು ಗೀತಾ ಅವರು ಇಬ್ಬರು ಕೂಡ ಮಕ್ಕಳ ಹಿಂದೆ ಪಾರ್ವತಮ್ಮ ರಾಜ್ ಕುಮಾರ್ ಅವರು ಇದ್ದ ಹಾಗೆ ಇವರಿಬ್ಬರು ಕೂಡ ಅವರ ಸಕ್ಸಸ್ ಗೆ ಸಪೋರ್ಟ್ ಮಾಡಲು, ಅವರನ್ನು ಬೆಳೆಸಲು ಇದ್ದಾರೆ. ಚಿತ್ರರಂಗದಲ್ಲಿ ಕಲಾವಿದರಿಯಗೆ ಈ ರೀತಿ ಸಪೋರ್ಟ್ ಸಿಗಬೇಕು.