ನಟ ದರ್ಶನ್ ಹಾಗೂ ನಟಿ ಪವಿತ್ರಾ ಗೌಡ ಇಬ್ಬರು ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿ ಈಗ ಹೊರಗಡೆ ಬಂದಿರುವ ವಿಚಾರ ಗೊತ್ತೇ ಇದೆ. ಡಿಸೆಂಬರ್ 13ರಂದು ಇವರಿಬ್ಬರಿಗೆ ಹಾಗೂ ಈ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ 17 ಆರೋಪಿಗಳಿಗೆ ಜಾಮೀನು ನೀಡಿತ್ತು. ಇವರೆಲ್ಲರಿಗೂ ಪೂರ್ಣ ಪ್ರಮಾಣದ ಜಾ*ಮೀನು ಸಿಕ್ಕರೂ ಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿತ್ತು. ಎಲ್ಲರೂ ಸಹ ಅನುಮತಿ ಇಲ್ಲದೇ ಬೆಂಗಳೂರಿನಿಂದ ಹೊರಗಡೆ ಹೋಗುವ ಹಾಗಿಲ್ಲ, ಹೋಗುವ ಹಾಗಿದ್ದರೆ ಕೋರ್ಟ್ ಇಂದ ಅನುಮತಿ ಪಡೆಯಬೇಕು ಎಂದು ತಿಳಿಸಲಾಗಿತ್ತು. ಹಾಗೆಯೇ ಪ್ರತಿ ತಿಂಗಳು ಕೋರ್ಟ್ ಗೆ ಬರಬೇಕು ಎಂದು ತಿಳಿಸಲಾಗಿತ್ತು.

ಇಂದು ಹಿಯರಿಂಗ್ ಇದ್ದ ಕಾರಣ, ಕೋರ್ಟ್ ನಲ್ಲಿ ಏನು ನಡೆದಿದೆ ಎಂದು ನೋಡುವುದಾದರೆ, ಬೇರೆ ಎಲ್ಲರು ಸಹ ಮೊದಲೇ ಕೋರ್ಟ್ ಗೆ ಬಂದಿದ್ದು, ದರ್ಶನ್ ಅವರು ತಡವಾಗಿ ಕೋರ್ಟ್ ಗೆ ಬಂದರು. ದರ್ಶನ್ ಅವರನ್ನು ನೋಡುತ್ತಿದ್ದ ಹಾಗೆ ಪವಿತ್ರಾ ಗೌಡ ಕಣ್ಣೀರು ಹಾಕಿದ್ದಾರೆ ಎಂದು ಹೇಳಲಾಗಿದೆ. ದರ್ಶನ್ ಅವರನ್ನು ನೋಡಿ ಆಳುತ್ತಿದ್ದ ಪವಿತ್ರಾ ಅವರನ್ನು ದರ್ಶನ್ ಅವರು ಮಾತನಾಡಿಸಿ ಸಮಾಧಾನ ಪಡಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇನ್ನು ಕೋರ್ಟ್ ನಲ್ಲಿ ದರ್ಶನ್ ಅವರಿಗೆ ಮೈಸೂರಿನಲ್ಲಿ ಇರಲು ಕೋರ್ಟ್ ಇಂದ ಪರ್ಮಿಶನ್ ಸಿಕ್ಕಿದೆ. ಜನವರಿ 12 ರಿಂದ 17ರವರೆಗು ಮೈಸೂರಿನಲ್ಲಿ ಇರಲಿದ್ದಾರೆ.
ದರ್ಶನ್ ಅವರಿಗೆ ಈ ಪರ್ಮಿಶನ್ ಸಿಕ್ಕಿದ್ದು, ದರ್ಶನ್ ಅವರು ಈ ವರ್ಷ ಸಂಕ್ರಾಂತಿ ಹಬ್ಬವನ್ನು ಮೈಸೂರಿನ ಫಾರ್ಮ್ ಹೌಸ್ ನಲ್ಲೇ ಆಚರಿಸಲಿದ್ದಾರೆ. ಇದು ಅವರಿಗೆ ಬಹಳ ಸಂತೋಷ ಕೊಡುವಂಥ ವಿಷಯ ಆಗಿದೆ. ಹಾಗೆಯೇ ಪವಿತ್ರಾ ಗೌಡ ಅವರಿಗೆ ದೆಹಲಿ ಹಾಗೂ ಮುಂಬೈಗೆ ಹೋಗಲು ಕೋರ್ಟ್ ಇಂದ ಪರ್ಮಿಶನ್ ಸಿಕ್ಕಿದೆ. ಹೌದು ಆರ್.ಆರ್ ನಗರದಲ್ಲಿ ಪವಿತ್ರಾ ಗೌಡ ನಡೆಸುತ್ತಿರುವ ರೆಡ್ ಕಾರ್ಪೆಟ್ ಗೆ ಬೇಕಿರುವ ವಸ್ತುಗಳನ್ನು ತರಲು ಅವರು ಮುಂಬೈಗೆ ಹೋಗಬೇಕಿದ್ದು, ಬ್ಯುಸಿನೆಸ್ ಸಲುವಾಗಿ ದೆಹಲಿಗೆ ಸಹ ಹೋಗಬೇಕಿದೆಯಂತೆ. ಇದಕ್ಕಾಗಿ ಪರ್ಮಿಶನ್ ಬೇಕು ಎಂದು ಪವಿತ್ರಾ ಪರ ವಕೀಲರು ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು.

ಈ ಎರಡು ಮನವಿಗಳಿಗೆ ಕೋರ್ಟ್ ನಲ್ಲಿ ಜಡ್ಜ್ ಅನುಮತಿ ನೀಡಿದ್ದು, ಇಬ್ಬರಿಗೂ ಬೇಕಿದ್ದ ವಿಚಾರ ಸಿಕ್ಕಿದೆ. ಇಬ್ಬರು ಬೇರೆ ಬೇರೆ ಊರುಗಳಲ್ಲಿ ಇರಲಿದ್ದಾರೆ. ದರ್ಶನ್ ಅವರು ಮೈಸೂರಿಗೆ ಶಿಫ್ಟ್, ಪವಿತ್ರಾ ಹೊರರಾಜ್ಯಕ್ಕೆ ಶಿಫ್ಟ್. ಇನ್ನು ಈ ಕೇಸ್ ನ ಮುಂದಿನ ಹಿಯರಿಂಗ್ ಫೆಬ್ರವರಿ 25ರಂದು ಮುಂದಕ್ಕೆ ಹೋಗಿದ್ದು, ಇದೆಲ್ಲವೂ ಮುಗಿದ ನಂತರ ದರ್ಶನ್ ಅವರು ಹಾಗೂ ಪವಿತ್ರಾ ಅವರು ಇಬ್ಬರು ಸಹ ಬೇರೆ ಬೇರೆ ಕಾರ್ ನಲ್ಲಿ ಸೆಪರೇಟ್ ಆಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಒಟ್ಟಿನಲ್ಲಿ ಇಬ್ಬರಿಗೂ ಈಗ ಅವರಿಗೆ ಬೇಕಿರುವುದು ಸಿಕ್ಕಿದೆ. ಆದರೆ ಜನರಿಗೆ ಇದರ ಬಗ್ಗೆ ಸ್ವಲ್ಪ ಅಸಮಾಧಾನ ಇರುವುದಂತೂ ಖಂಡಿತ.
ದರ್ಶನ್ ಅವರಿಗೆ ಅನಾರೋಗ್ಯ ಉಂಟಾಗಿದೆ, ಅವರಿಗೆ ಸರ್ಜರಿ ಮಾಡಬೇಕಾಗಬಹುದು ಎಂದು ಕೂಡ ಹೇಳಲಾಗಿತ್ತು. ದರ್ಶನ್ ಅವರಿಗೆ ಮೈಸೂರಿನಲ್ಲಿ ಒಳ್ಳೆಯ ಚಿಕಿತ್ಸೆ ಕೊಡಲಾಗುತ್ತಿದೆ. ಇನ್ನು ಪವಿತ್ರಾ ಗೌಡ ವಿಷಯದಲ್ಲಿ ಮಾತ್ರ ಸಿಕ್ಕಾಪಟ್ಟೆ ಟ್ರೋಲ್ ಸಹ ಆಗುತ್ತಿದೆ. ಆಕೆಯ ಮುಖದಲ್ಲಿ ಸ್ವಲ್ಪ ಕೂಡ ಗಿಲ್ಟ್ ಇಲ್ಲ, ದರ್ಶನ್ ಅವರ ಸಂಸಾರ ಹಾಗೂ ರೇಣುಕಾಸ್ವಾಮಿ ಸಂಸಾರ ಇಡೀ ಕುಟುಂಬಕ್ಕೆ ತೊಂದರೆ ಆಗಿದ್ದು, ಈ ಒಂದು ಹೆಣ್ಣಿನಿಂದ, ಆದರೆ ಆಕೆಗೆ ಸ್ವಲ್ಪ ಕೂಡ ಪಶ್ಚಾತಾಪ ಇಲ್ಲ, ಬಹಳ ಖುಷಿಯಾಗಿದ್ದಾಳೆ ಎನ್ನುತ್ತಿದ್ದಾರೆ ನೆಟ್ಟಿಗರು.