ಇಂದು 21 ಏಪ್ರಿಲ್ 2025 ಸೋಮವಾರ. ವಿಶ್ವವಸು ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಅಷ್ಟಮಿ. ಬೆಳಗ್ಗೆ 07:45 ರಿಂದ 09:15 ವರೆಗೆ ರಾಹುಕಾಲವಿರುತ್ತದೆ. ಮೇಷ ರಾಶಿಯವರಿಗೆ ವ್ಯವಹಾರದಲ್ಲಿ ನಷ್ಟ ಉಂಟಾಗಬಹುದು. ಮೀನ ರಾಶಿಯವರಿಗೆ ಬಹಳ ದಿನಗಳ ಆಸೆಯೊಂದು ಈ ದಿನ ನೆರವೇರಲಿದೆ.
ಮೇಷ ರಾಶಿ
ಮೇಷ ರಾಶಿಯವರಿಗೆ ಇಂದು ವ್ಯಾಪಾರ ವ್ಯವಹಾರದಲ್ಲಿ ಲಾಭ ಇರುತ್ತದೆ. ಮನಸ್ಸಿನಲ್ಲಿ ಸಮಾಧಾನ ತುಂಬಿರುತ್ತದೆ. ಹೊಸದಾಗಿ ಬಿಸ್ನೆಸ್ ಮಾಡಬೇಕು ಎಂದುಕೊಂಡವರು ಅಥವಾ ಪಾಲುದಾರಿಕೆಯಲ್ಲಿ ಮಾಡುವ ವ್ಯವಹಾರಕ್ಕೆ ಹಣ ನೀಡುವಾಗ ಮತ್ತೊಮ್ಮೆ ಯೋಚಿಸಿ ನಿರ್ಧಾರ ಕೈಗೊಳ್ಳಿ. ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ ಎಚ್ಚರಿಕೆಯಿಂದಿರಿ. ಕುಲದೇವರ ದರ್ಶನ ಪಡೆದು ದಿನದ ಕೆಲಸವನ್ನು ಆರಂಭಿಸಿ.
ವೃಷಭ ರಾಶಿ
ಈ ದಿನ ಕೆಲಸದಲ್ಲಿ ಸಹೋದ್ಯೋಗಿಗಳು ಅಥವಾ ಹಿರಿಯ ಅಧಿಕಾರಿಗಳಿಂದ ಕಿರಿಕಿರಿ ಇರುತ್ತದೆ. ಇದರಿಂದ ನೀವು ಬೇಸರಗೊಳ್ಳಬಹುದು. ವಾಹನಗಳಲ್ಲಿ ಓಡಾಡುವಾಗ ಎಚ್ಚರಿಕೆ ವಹಿಸಿ, ಕೃಷಿಕರಿಗೆ ಇಂದು ಹೆಚ್ಚು ಲಾಭವಾಗಲಿದೆ. ವಿದ್ಯಾರ್ಥಿಗಳಿಗೆ ಇಂದು ಉತ್ತಮ ದಿನವಾಗಿರುತ್ತದೆ.
ಮಿಥುನ ರಾಶಿ
ಈ ದಿನ ಹಳೆಯ ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು, ಜಾಗ್ರತೆಯಿಂದಿರಿ, ಬಹಳ ದಿನಗಳಿಂದ ಕೋರ್ಟ್ ವಿವಾದ ಎದುರಿಸುತ್ತಿರುವವರು ಇಂದು ಮತ್ತೆ ಪ್ರಯತ್ನಿಸಿದಲ್ಲಿ ವ್ಯಾಜ್ಯ ಪರಿಹಾರವಾಗುವ ಸಾಧ್ಯತೆ ಇದೆ. ಕೃಷಿಕರಿಗೆ ಸಣ್ಣ ಪುಟ್ಟ ನಷ್ಟ ಉಂಟಾಗಲಿದೆ. ಕ್ರೀಡಾಪಟುಗಳಿಗೆ ಒಳ್ಳೆಯ ದಿನ.
ಕಟಕ ರಾಶಿ:
ನಿಮ್ಮ ಬಹಳ ದಿನಗಳ ಆಸೆಯೊಂದು ಇಂದು ನೆರವೇರುವ ಸಾಧ್ಯತೆ ಇದೆ. ತರಕಾರಿ, ಹೂವು ಹಣ್ಣು ವ್ಯಾಪಾರ ಮಾಡುವವರಿಗೆ ಉತ್ತಮ ಲಾಭ ದೊರೆಯಲಿದೆ. ಸ್ವಂತ ಬಿಸ್ನೆಸ್ ಮಾಡುತ್ತಿರುವವರು ಆರ್ಥಿಕ ನಷ್ಟ ಅನುಭವಿಸಬಹುದು ಎಚ್ಚರದಿಂದಿರಿ.
ಸಿಂಹ ರಾಶಿ
ಇಂದು ನಿಮ್ಮ ಬಹುತೇಕ ಕೆಲಸಗಳು ಅರ್ಧಕ್ಕೆ ನಿಲ್ಲಲಿದೆ. ಬಂಧುಗಳೊಂದಿಗೆ ಮನಸ್ತಾಪ ಉಂಟಾಗಲಿದೆ. ಆರೋಗ್ಯ ಕ್ಷೀಣಿಸುತ್ತದೆ. ಆದ್ದರಿಂದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಮತ್ತೊಬ್ಬರ ಜೊತೆ ಮಾತನಾಡುವಾಗ ಎಚ್ಚರಿಕೆ ವಹಿಸಿ.
ಕನ್ಯಾ ರಾಶಿ
ಆರೋಗ್ಯ ಸಮಸ್ಯೆ ಕಾಡಲಿದೆ, ಮನಸ್ಸು ಸ್ಥಿಮಿತದಲ್ಲಿರುವುದಿಲ್ಲ. ಏಕಾಗ್ರತೆಯಿಂದ ಕೆಲಸ ಮಾಡಿದರೆ ಲಾಭ ಆಗಲಿದೆ. ಮನಸ್ಸು ಗೊಂದಲದಲ್ಲಿರುತ್ತದೆ. ನೀವು ಮಾಡುವ ಕೆಲಸಗಳಲ್ಲಿ ಏನೇ ಅನುಮಾನಗಳಿದ್ದರೂ ಅದರಲ್ಲಿ ಮುಂದುವರೆಯುವುದು ಬೇಡ. ದೂರದ ಪ್ರಯಾಣ ಮಾಡುವಾಗ ಜಾಗ್ರತೆಯಿಂದಿರಿ, ಅಪಘಾತ ಅಥವಾ ಪ್ರಯಾಣದಲ್ಲಿ ಅಡೆತಡೆ ಉಂಟಾಗಬಹುದು.
ತುಲಾ ರಾಶಿ
ಕೆಲಸದಲ್ಲಿ ಹೆಚ್ಚು ಒತ್ತಡ ಇರುತ್ತದೆ. ಇದರಿಂದ ಮಾನಸಿಕ ಹಿಂಸೆಗೆ ಒಳಗಾಗಬಹುದು, ಕುಟುಂಬದಲ್ಲಿ ಸಣ್ಣ ಪುಟ್ಟ ಘರ್ಷಣೆಗಳು ಇರಬಹುದು. ಮನಸ್ಸಿನಲ್ಲಿ ಗೊಂದಲವಿರುತ್ತದೆ. ಇಷ್ಟದೇವರ ಆರಾಧನೆ ಮಾಡಿ ದಿನವನ್ನು ಆರಂಭಿಸಿದರೆ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ರಿಯಲ್ ಎಸ್ಟೇಟ್ ಮಾಡುವವರಿಗೆ ಇಂದು ಯಥೇಚ್ಛ ಲಾಭ ದೊರೆಯುತ್ತದೆ.
ವೃಶ್ಚಿಕ ರಾಶಿ
ಹೊಸ ಆಭರಣ ಕೊಳ್ಳುವಿರಿ, ವ್ಯಾಪಾರದಲ್ಲಿ ಉತ್ತಮ ಲಾಭವಾಗಲಿದೆ, ಆತ್ಮೀಯ ಸ್ನೇಹಿತರನ್ನು ಭೇಟಿ ಆಗಲಿದ್ದೀರಿ. ಇದು ನಿಮಗೆ ಖುಷಿ ನೀಡುತ್ತದೆ. ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಹಿತಶತ್ರುಗಳಿಂದ ಅಡೆತಡೆ ಉಂಟಾಗಬಹುದು, ಎಚ್ಚರಿಕೆಯಿಂದ ಮುಂದುವರೆಯಿರಿ.
ಧನು ರಾಶಿ
ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಇಲ್ಲದಿದ್ದರೆ ಹಣ ಕಳೆದುಕೊಳ್ಳುವಿರಿ. ಮನಸ್ಸಿನಲ್ಲಿ ಯಾವುದೋ ವಿಚಾರವಾಗಿ ಬೇಸರ ಇರುತ್ತದೆ. ಆದರೆ ಎಚ್ಚರಿಕೆಯಿಂದ ಕೆಲಸ ಮಾಡಿದ್ದಲ್ಲಿ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ಮನಸ್ಸಿಗೆ ಇಷ್ಟವಾದ ಊಟ ಸೇವಿಸುವಿರಿ. ಕಟ್ಟಡ ನಿರ್ಮಾಣ ಕೆಲಸ ಮಾಡುವವರಿಗೆ ಲಾಭ ದೊರೆಯಲಿದೆ.
ಮಕರ ರಾಶಿ
ಬಹಳ ದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ದೊರೆಯುತ್ತದೆ. ವ್ಯಾಪಾರದಲ್ಲಿ ಸ್ವಲ್ಪ ಮಟ್ಟಿಗೆ ಲಾಭ ಇರುತ್ತದೆ. ಗೃಹಿಣಿಯರಿಗೆ ಒತ್ತಡದ ದಿನವಾಗಿರುತ್ತದೆ. ಬ್ಯಾಂಕ್, ಅಂಚೆ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಮಾನಸಿಕ ಒತ್ತಡ ಇರುತ್ತದೆ.
ಕುಂಭ ರಾಶಿ
ಇಂದು ಮಿಶ್ರ ಫಲ ದೊರೆಯಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿರಿ, ಯಾರಿಗೂ ಸಾಲ ನೀಡಬೇಡಿ. ಹೂಡಿಕೆ ಮಾಡುವಾಗಲೂ ಎಚ್ಚರದಿಂದಿರಿ. ಬಂಧುಗಳ ವಿರೋಧ ಎದುರಿಸುವಿರಿ. ಮಾನಸಿಕವಾಗಿ ಗೊಂದಲವಿರುತ್ತದೆ. ಯಾರೊಂದಿಗಾದರೂ ಮಾತನಾಡುವಾಗ ಅಥವಾ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದಿರಿ.
ಮೀನ ರಾಶಿ
ಬಹಳ ದಿನಗಳ ಆಸೆ ನೆರವೇರಲಿದೆ. ಕೆಲಸದಲ್ಲಿ ಒತ್ತಡದ ದಿನವಾಗಿರುತ್ತದೆ, ಪಾಲುದಾರಿಕೆ ವ್ಯಾಪಾರ ಮಾಡುವವರೊಂದಿಗೆ ಜಗಳ ಉಂಟಾಗಿ ಮನಸ್ಸಿಗೆ ಘಾಸಿಯಾಗಬಹುದು. ಅತಿ ಬುದ್ಧಿವಂತಿಕೆ ತೋರಿಸಲು ಹೊಸ ಸಮಸ್ಯೆಗಳಿಗೆ ಸಿಲುಕಬೇಡಿ. ಆದಷ್ಟು ತಾಳ್ಮೆಯಿಂದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಿ.
ಗಮನಿಸಿ: ಇಲ್ಲಿ ತಿಳಿಸಿರುವ ಮಾಹಿತಿಯು ಜ್ಯೋತಿಷ್ಯ ಶಾಸ್ತ್ರವನ್ನು ಆಧರಿಸಿದ್ದು, ನಿಮ್ಮ ನಂಬಿಕೆಗೆ ತಕ್ಕಂತೆ ನಿರ್ಧಾರ ತೆಗೆದುಕೊಳ್ಳಿ. ಹೆಚ್ಚಿನ ಮಾಹಿತಿಗೆ ತಜ್ಞ ಜ್ಯೋತಿಷಿಗಳನ್ನು ಸಂಪರ್ಕಿಸಿ.