ನಾವು ವಿವಾಹದ ನಂತರ ನಮ್ಮ ಬಾಳ ಸಂಗಾತಿಯವರನ್ನು ನಮಗೋಸ್ಕರ ದುಡಿಯಲು ಜೀವನದಲ್ಲಿ ಕರೆದುಕೊಂಡು ಬರುವುದಿಲ್ಲ. ಇಬ್ಬರು ಒಟ್ಟಾಗಿ ಜೀವನ ಸಾಗಿಸುವ ಸಲುವಾಗಿ ಈ ವಿವಾಹವಾಗಿರುತ್ತದೆ. ಅದು ಕಷ್ಟವಾಗಬಾರದು. ಆದರೆ ಜೀವನದಲ್ಲಿ ಯಾವ ರೀತಿಯ ನಿರೀಕ್ಷೆ ಇದೆ, ಅಂದರೆ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು, ಅನ್ಯೋನ್ಯತೆಯಿಂದ ಇರುವುದು ಆಗಿದೆ. ವಿವಾಹಕ್ಕೆ ಸಂಬಂಧಪಟ್ಟಂತೆ ನಮ್ಮ ಕಾನೂನು ಮತ್ತು ವಿದೇಶದ ಕಾನೂನು ಬೇರೆ ಬೇರೆಯಾಗಿದೆ. ಜವಾಬ್ದಾರಿಗಳನ್ನು ಒಟ್ಟಾಗಿ ಹಂಚಿಕೊಳ್ಳುವುದರಿಂದ ದಾಂಪತ್ಯ ಜೀವನ ಸುಖಕರವಾಗಿರುತ್ತದೆ.
ದಾಂಪತ್ಯ ಜೀವನದಲ್ಲಿ ಆಸ್ತಿ, ದುಡ್ಡು ನಿನ್ನ ಪಾಲು, ನನ್ನ ಪಾಲು ಇಂತಹ ಗಳಿಗೆ ಯಾವುದೇ ರೀತಿಯ ಬಿರುಕು ನಡೆಯಬಾರದು. ಗಂಡ ಹೆಂಡತಿಗೆ ,ಹೆಂಡತಿ ಗಂಡನಿಗೆ ಎಲ್ಲ ರೀತಿಯಲ್ಲಿ ಇಬ್ಬರು ಸಮಾನವಾಗಿ ಜವಾಬ್ದಾರಿಗಳನ್ನು ಹೋರುವ ಮೂಲಕ ಅನ್ಯೋನ್ಯತೆಯನ್ನು ಹೊಂದಿರಬೇಕು. ಇಲ್ಲಿ ಹೆಂಡತಿಗೆ ಏನಾದರೂ ಹುಷಾರಿಲ್ಲದ ಸಂದರ್ಭದಲ್ಲಿ ಗಂಡ ಸಹಾಯ ಮಾಡುವ ಮೂಲವಾಗಿರಬಹುದು, ಹಾಗೆ ಗಂಡನ ಜೊತೆ ಹೆಂಡತಿ ಅವರ ಕಷ್ಟಕ್ಕೆ ಸಮಾಧಾನವಾಗಿಸುವುದಾಗಿರಬಹುದು. ಒಂದು ರೀತಿಯ ಅನ್ಯೋನ್ಯತೆ ಬೇಕಾಗುತ್ತದೆ. ಎಲ್ಲಾ ರೀತಿಯಲ್ಲಿ ಕೈಜೋಡಿಸುವುದು ದಾಂಪತ್ಯದಲ್ಲಿ ಮುಖ್ಯ.
ನಿಮ್ಮ ಹೆಂಡತಿ ಅಥವಾ ನಿಮ್ಮ ಗಂಡ ಎಲ್ಲಾ ರೀತಿಯಲ್ಲಿ ಸಹಾಯ ಮಾಡಲು ಮುಂದಾಗಿ ಅವರಿಗೆ ಸಮಾಧಾನವಾಗದಿದ್ದರೆ ಹೇಳಿಕೊಡುವಂತೆ ಕೇಳಿಕೊಳ್ಳಿ, ಈ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುವುದು, ಅಂತ ಅಪ್ರಿಷಿಯೇಷನ್ ಕೊಡುವುದರಿಂದ ದಾಂಪತ್ಯ ಜೀವನದಲ್ಲಿ ಒಂದು ರೀತಿಯಾದಂತಹ ಹೊಂದಾಣಿಕೆ ಬರಲು ಸಾಧ್ಯವಾಗುತ್ತದೆ. ಇನ್ನೊಬ್ಬರ ಮಾತಿಗೆ ತಲೆ ಕೊಡದೆ ತಾವೇ ಮಾತನಾಡಿ ಸರಿ ಸರಿ ಮಾಡಿಕೊಳ್ಳುವುದು ಒಳಿತಾಗಿದೆ.