ನಗ್ಮಾ ಲವ್ ಲೈಫ್ ಹಲವಾರು ತಿರುವುಗಳನ್ನು ಕಂಡಿದೆ. ದಕ್ಷಿಣ ಭಾರತ ಚಿತ್ರರಂಗದಲ್ಲಿ ಗುರುತಿಸಿಕೊಂಡು, 90ರ ದಶಕದಲ್ಲಿ ಯಶಸ್ವಿಯಾದ ನಟಿಯರಲ್ಲಿ ನಗ್ಮಾ ಅವರು ಸಹ ಒಬ್ಬರು. ಇವರು ಹುಟ್ಟಿ ಬೆಳೆದಿದ್ದು ಬಾಂಬೆಯಲ್ಲಿ, ಹಿಂದಿ ಸಿನಿಮಾಗಳಲ್ಲಿ ಆಸಕ್ತಿ ಹೊಂದಿದ್ದು, ಹಿಂದಿಯಲ್ಲಿ ನಟಿಸಿದ್ದರು ಸಹ. ಆದರೆ ನಗ್ಮಾ ಅವರಿಗೆ ಹೆಚ್ಚು ಜನಪ್ರಿಯತೆ, ಸಕ್ಸಸ್ ಎಲ್ಲವೂ ಸಿಕ್ಕಿದ್ದು ದಕ್ಷಿಣ ಭಾರತದಲ್ಲಿ. ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಅಭಿನಯಿಸಿ, ಸ್ಟಾರ್ ಹೀರೋಯಿನ್ ಆಗಿ ಮೆರೆದವರು ನಗ್ಮಾ. ಕಾದಲನ್ ಸಿನಿಮಾದಲ್ಲಿ ಪ್ರಭುದೇವ ಹಾಗೂ ಇವರ ಕಾಂಬಿನೇಶನ್ ಮರೆಯಲು ಸಾಧ್ಯವೇ! ಆ ಹಾಡುಗಳೆಲ್ಲಾ ಈಗಲೂ ಎವರ್ಗ್ರೀನ್. ವೃತ್ತಿಯಲ್ಲಿ ಸ್ಟಾರ್ ಆದ ನಗ್ಮಾ ಲವ್ ಲೈಫ್ ಮಾತ್ರ ಬಹಳ ಬೇಸರ ತರುವಂಥದ್ದು. ಇಂದಿಗೂ ಮದುವೆಯಾಗದೆ ಸಿಂಗಲ್ ಆಗಿಯೇ ಉಳಿದಿರುವ ಇವರು ನಾಲ್ವರ ಪ್ರೀತಿಯಲ್ಲಿ ಬಿದ್ದಿದ್ದರು ಎನ್ನಲಾಗುತ್ತದೆ. ಆದರೆ ಯಾವುದು ಕೂಡ ಸರಿ ಹೋಗಿಲ್ಲ.

ನಟಿ ನಗ್ಮಾ ಅವರು ತಮಿಳು, ತೆಲುಗು, ಕನ್ನಡ ಹೀಗೆ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಕನ್ನಡದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಜೊತೆಗೆ ರವಿಮಾಮ, ಶಿವಣ್ಣ ಅವರ ಜೊತೆಗೆ ಕುರುಬನ ರಾಣಿ, ವಿಷ್ಣುದಾದ ಅವರ ಜೊತೆಗೆ ಹೃದಯವಂತ. ಹೀಗೆ ಕನ್ನಡದಲ್ಲಿ ನಟಿಸಿದ್ದು ಕೆಲವೇ ಕೆಲವು ಸಿನಿಮಾಗಳಲ್ಲಿ ಆಗಿದ್ದರೂ ಸಹ, ನಗ್ಮಾ ಅವರಿಗೆ ಒಳ್ಳೆಯ ಬೇಡಿಕೆ ಅಂತು ಇತ್ತು. ಈ ಸಿನಿಮಾಗಳನ್ನು, ಈ ಸಿನಿಮಾದ ಹಾಡುಗಳನ್ನು ಕನ್ನಡ ಚಿತ್ರಪ್ರೇಮಿಗಳು ಮರೆತಿಲ್ಲ. ಇವತ್ತಿಗೂ ಎಲ್ಲರ ಫೇವರೆಟ್ ಸಿನಿಮಾಗಳು ಮತ್ತು ಹಾಡುಗಳಿವು. ಹೀಗೆ ಸಕ್ಸಸ್ ಕಂಡ ನಟಿ ನಗ್ಮಾ ಅವರು, ಇಂದು ಸಿನಿಮಾ ಇಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಯಾವುದೇ ಸಿನಿಮಾದಲ್ಲಿ ಇವರು ನಟಿಸಿಲ್ಲ, ನಟಿಸಿ ದಶಕಗಳೇ ಉರುಳಿ ಹೋಗಿದೆ.
90ರ ದಶಕದಲ್ಲಿ ನಾಯಕಿಯಾಗಿ ಕೆರಿಯರ್ ಶುರು ಮಾಡಿದ ನಗ್ಮಾ ಅವರು, 2 ದಶಕಗಳ ಕಾಲ ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಮೆರೆದವರು. ಹೆಸರು ಮಾಡಿದವರು. ನಟಿ ನಗ್ಮಾ ಅವರು ರಜನಿಕಾಂತ್, ಕಮಲ್ ಹಾಸನ್, ಚಿರಂಜೀವಿ ಸೇರಿ ಎಲ್ಲಾ ಸ್ಟಾರ್ ಹೀರೋಗಳಿಗೂ ನಾಯಕಿಯಾಗಿ ನಟಿಸಿದ್ದಾರೆ ನಗ್ಮಾ. ಇಷ್ಟು ಪಾಪ್ಯುಲರ್ ಇದ್ದ ನಟಿ ನಟನೆಯನ್ನೇ ಬಿಟ್ಟು, ಪಾಲಿಟಿಕ್ಸ್ ಗೆ ಹೋದರು. ಈಗ ನಗ್ಮಾ ಅವರು ರಾಜಕೀಯದಲ್ಲೇ ಬ್ಯುಸಿ ಆಗಿದ್ದು, ನಟನೆಯನ್ನು ಬಿಟ್ಟು ಬಿಟ್ಟಿದ್ದಾರೆ. ಚಿತ್ರರಂಗದಿಂದ ಸಂಪೂರ್ಣವಾಗಿ ದೂರವೇ ಉಳಿದುಬಿಟ್ಟಿದ್ದಾರೆ. ಇನ್ನು ನಗ್ಮಾ ಅವರ ಪರ್ಸನಲ್ ಲೈಫ್ ವಿಷಯಕ್ಕೆ ಬಂದರೆ, ಇದರಲ್ಲಿ ಅವರು ಗೆದ್ದಿಲ್ಲ, ನಾಲ್ವರನ್ನು ಪ್ರೀತಿಸಿದರು ಸಹ ನಗ್ಮಾ ಅವರು ಈ ವಿಷಯದಲ್ಲಿ ಸೆಟ್ಲ್ ಆಗುವುದಕ್ಕೆ ಸಾಧ್ಯ ಆಗಲಿಲ್ಲ. ಇವರು ಇನ್ನು ಕೂಡ ಸಿಂಗಲ್ ಆಗಿಯೇ ಉಳಿದಿದ್ದಾರೆ. ಇದು ಒಂದು ರೀತಿ ಬೇಸರ ಅನ್ನಿಸಿದರೂ ಇದೆ ಅಸಲಿ ಸತ್ಯ.

ನಟಿ ನಗ್ಮಾ ಅವರು ಪ್ರೀತಿ ಮಾಡಿದ ನಾಲ್ವರು ಕೂಡ ಮದುವೆ ಆಗಿದ್ದವರೇ ಎನ್ನಲಾಗಿದೆ. ಒಬ್ಬರು ಕ್ರಿಕೆಟರ್ ಹಾಗು ಮೂರು ಸಿನಿಮಾ ನಟರನ್ನು ಪ್ರೀತಿಸುತ್ತಿದ್ದರು ನಟಿ ನಗ್ಮಾ. ಇದು ಯಾವುದು ಕೂಡ ಸರಿ ಹೋಗಲಿಲ್ಲ ಎಂದು ನಗ್ಮಾ ಅವರು ಒಂಟಿಯಾಗಿಯೇ ಉಳಿಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಇವರು ಪ್ರೀತಿಸಿದ ವ್ಯಕ್ತಿಗಳು ಯಾರ್ಯಾರು ಎಂದು ನೋಡುವುದಾದರೆ, ತಮಿಳಿನ ಖ್ಯಾತ ನಟ ಶರತ್ ಕುಮಾರ್, ಭೋಜ್ ಪುರಿ ನಟ ರವಿ ಕಿಶನ್, ಮತ್ತೊಬ್ಬ ಖ್ಯಾತ ನಟ ಮನೋಜ್ ತಿವಾರಿ ಹಾಗು ಖ್ಯಾತ ಕ್ರಿಕೆಟಿಗ ಸೌರವ್ ಗಂಗೂಲಿ. ಇವರೆಲ್ಲರೂ ಸಹ ನಗ್ಮಾ ಅವರ ಪ್ರೀತಿಯಲ್ಲಿ ಬಿದ್ದಿದ್ದರು, ಆದರೆ ಈ ರಿಲೇಶನ್ಷಿಪ್ ಗಳು ಮದುವೆಯಲ್ಲಿ ಕೊನೆಯಗಲಿಲ್ಲ ಎನ್ನುವುದೇ ಬೇಸರದ ವಿಷಯ ಆಗಿದೆ. ನಗ್ಮಾ ಅವರು ಈ ಕಾರಣಕ್ಕೆ ಈಗಲೂ ಕೂಡ ಸಿಂಗಲ್ ಆಗಿಯೇ ಉಳಿದು ಹೋಗಿದ್ದಾರೆ.

ನಟಿ ನಗ್ಮಾ ಅವರು ತಮಿಳು ಸಿನಿಮಾ ಶೂಟಿಂಗ್ ವೇಳೆ ಶರತ್ ಕುಮಾರ್ ಅವರನ್ನು ಪ್ರೀತಿ ಮಾಡುತ್ತಿದ್ದರು. ಆದರೆ ಶರತ್ ಅವರಿಗೆ ಅದಾಗಲೇ ಮದುವೆ ಆಗಿತ್ತು, ಅವರ ಹೆಂಡತಿಗೆ ವಿಷಯ ಗೊತ್ತಾಗಿ, ದೊಡ್ಡ ರಾದ್ಧಾಂತ ಆಗಿ, ಅವರು ಶರತ್ ಅವರಿಗೆ ವಿಚ್ಛೇದನ ಕೊಡುವುದಕ್ಕೆ ಮುಂದಾದರಂತೆ. ಹಾಗೆಯೇ ನಗ್ಮಾ ಅವರಿಗೆ ಕೂಡ ಇದರಿಂದ ತೊಂದರೆ ಆಯ್ತಂತೆ. ಹಾಗಾಗಿ ನಗ್ಮಾ ಅವರು ಈ ರಿಲೇಶನ್ಷಿಪ್ ಇಂದ ಹೊರಗಡೆ ಬರಬೇಕಾಯಿತು. ಇಷ್ಟೆಲ್ಲಾ ಆದ ನಂತರ ಶರತ್ ಕುಮಾರ್ ಅವರು ನಗ್ಮಾ ಅವರಿಗೆ ಬೆದರಿಕೆ ಕೂಡ ಹಾಕಿದ್ದರಂತೆ, ಇದರಿಂದಲೇ ನಗ್ಮಾ ಅವರು ದಕ್ಷಿಣ ಭಾರತ ಚಿತ್ರರಂಗದಲ್ಲಿ ನಟಿಸುವುದನ್ನೇ ಬಿಟ್ಟು ಬಿಟ್ಟರು ಎಂದು ಹೇಳಲಾಗುತ್ತದೆ. ಬಳಿಕ ಭೋಜ್ ಪುರಿ ನಟ ರವಿ ಕಿಶನ್ ಅವರ ಪ್ರೀತಿಯಲ್ಲಿ ಬಿದ್ದರು.

ರವಿ ಕಿಶನ್ ಅವರ ಪತ್ನಿಗೆ ಕೂಡ ವಿಷಯ ಗೊತ್ತಾಗಿತ್ತು, ಆದರೆ ಅವರು ಏನನ್ನು ಹೇಳಲಿಲ್ಲವಂತೆ. ಆಫರ್ ಗೆ ಅಡ್ಡಿ ಮಾಡಲಿಲ್ಲವಂತೆ, ಹಾಗಾಗಿ ಒಂದಷ್ಟು ದಿವಸಗಳ ಕಾಲ ಇವರಿಬ್ಬರ ಲವ್ ನಡೆಯುತ್ತಿತ್ತು, ಆದರೆ ರವಿ ಕಿಶನ್ ಅವರು ಹೆಂಡತಿ ಮತ್ತು ಮಕ್ಕಳನ್ನು ಬಿಟ್ಟು ಬರೋದಿಲ್ಲ ಎಂದು ಗೊತ್ತಾದ ನಂತರ ನಗ್ಮಾ ಅವರು ರವಿ ಕಿಶನ್ ಅವರಿಂದ ದೂರವಾದರಂತೆ. ಇನ್ನು ಮತ್ತೊಬ್ಬ ನಟ ಮನೋಜ್ ತಿವಾರಿ, ಇವರ ಜೊತೆಗೆ ಕೂಡ ನಗ್ಮಾ ಅವರು ರಿಲೇಶನ್ಷಿಪ್ ನಲ್ಲಿ ಇದ್ದರು ಎನ್ನಲಾಗಿದೆ. ಆದರೆ ಈ ವಿಷಯದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ, ಮನೋಜ್ ತಿವಾರಿ ಅವರು ಎಲ್ಲಿಯೂ ಕೂಡ ತಾವು ನಗ್ಮಾ ಅವರ ಜೊತೆಗೆ ರಿಲೇಶನ್ಷಿಪ್ ನಲ್ಲಿ ಇರುವುದಾಗಿ ಒಪ್ಪಿಕೊಂಡಿಲ್ಲ. ಹಾಗಾಗಿ ಈ ಪ್ರೀತಿಯು ಸಹ ಸೋತು ಹೋಯಿತು. ಕ್ರಿಕೆಟರ್ ಸೌರವ್ ಗಂಗೂಲಿ ಅವರೊಡನೆ ಸಹ ರಿಲೇಶನ್ಷಿಪ್ ನಲ್ಲಿ ಇದ್ದರು ನಗ್ಮಾ. ಇವರಿಬ್ಬರ ನಡುವೆ ಗಾಢವಾದ ಪ್ರೀತಿ ಇತ್ತು ಎಂದು ಹೇಳಲಾಗಿತ್ತು.

ಯಾರಿಗೂ ಹೇಳದೇ ಇಬ್ಬರೂ ಗುಟ್ಟಾಗಿ ದೇವಸ್ಥಾನ ಒಂದರಲ್ಲಿ ಮದುವೆ ಆಗಿಬಿಟ್ಟಿದ್ದಾರೆ ಎಂದು ಸಹ ಸುದ್ದಿಗಳು ಕೇಳಿಬಂದಿದ್ದವು. ಅಷ್ಟು ಪ್ರೀತಿ ಮಾಡುತ್ತಿದ್ದರು ಸಹ, ಇಬ್ಬರು ಜೊತೆಯಾಗಿ ಇರಲು ಆಗಲಿಲ್ಲ. ಬೇರೆ ನಟರಿಗಿಂತ ಮೊದಲು ನಗ್ಮಾ ಅವರು ಪ್ರೀತಿ ಮಾಡಿದ್ದು ಸೌರವ್ ಗಂಗೂಲಿ ಅವರನ್ನು ಎನ್ನಲಾಗಿದೆ. ನಾಲ್ವರನ್ನು ಪ್ರೀತಿ ಮಾಡಿದರು ಸಹ, ನಗ್ಮಾ ಅವರು ನಗ್ಮಾ ಅವರು ಪ್ರೀತಿಯಲ್ಲಿ ಗೆಲ್ಲಲಿಲ್ಲ, ಕೊನೆಗೆ ಒಂಟಿಯಾಗೆ ಇರಬೇಕಾಯಿತು. ನಗ್ಮಾ ಅವರು ಇಂದು ಕೂಡ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಇವರ ತಂಗಿಯರು ಮದುವೆಯಾಗಿ, ಸಂತೋಷದ ಜೀವನ ನಡೆಸುತ್ತಿದ್ದಾರೆ. ಆದರೆ ನಗ್ಮಾ ಅವರು ಮಾತ್ರ, ಪ್ರೀತಿ ಅನ್ನೋ ವಿಷಯದಲ್ಲಿ ಸೋತು ಹೋಗಿದ್ದಾರೆ. ಚಿತ್ರರಂಗದಿಂದ ಕೂಡ ದೂರ ಉಳಿದು, ಸಂಪೂರ್ಣ ಸಮಯವನ್ನು ರಾಜಕೀಯಕ್ಕೆ ನೀಡಿದ್ದಾರೆ.