ಡಿಸಿಎಂ ಡಿ.ಕೆ ಶಿವಕುಮಾರ್ ರಾಮನಗರ ಹೆಸರು ಬದಲು ಬೆಂಗಳೂರು ದಕ್ಷಿಣ ಎಂದು ಬದಲಾವಣೆಗೆ ಮುಂದಾಗಿದ್ದರು. ಯಾವಾಗ ಈ ಸಾಹಸಕ್ಕೆ ಕೈ ಹಾಕಿದ್ರೋ ಅಂದೇ ಅನೇಕರು ಅದರಲ್ಲೂ ಬಿಜೆಪಿ ನಾಯಕರಂತೂ ದೊಡ್ಡ ಮಟ್ಟಿನ ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರ ಸಚಿವ ಕುಮಾರಸ್ವಾಮಿ ಅಂತೂ ನೇರ ನೇರ ವಾಗ್ದಾಳಿ ಮಾಡಿದ್ದರು. ಹೆಸರು ಬದಲಾವಣೆ ಬದಲು ಅಭಿವೃದ್ಧಿ ಮಾಡಿ ತೋರಿಸಿ ಅಂತೆಲ್ಲಾ ಸವಾಲು ಹಾಕಿದ್ದರು. ಆದರೆ ಈಗ ಡಿಕೆ ಶಿವಕುಮಾರ್ ಮಹದಾಸೆಗೆ ಕೇಂದ್ರ ಸರ್ಕಾರ ತಣ್ಣೀರು ಎರಚಿದೆ.
ರಾಮನಗರ ಹೆಸರು ಬದಲಾವಣೆ ಮಾಡಬೇಕು ಅಂದುಕೊಂಡ ಸರ್ಕಾರ ಈ ಪ್ರಸ್ತಾಪವನೆಯನ್ನ ಕೇಂದ್ರದ ಮುಂದೆ ಇಟ್ಟಿತ್ತು. ಡಿಕೆ ಶಿವಕುಮಾರ್ ಅವರ ಈ ಪ್ರಸ್ತಾಪವನ್ನ ಕೇಂದ್ರ ಸರ್ಕಾರ ತಿರಸ್ಕಾರ ಮಾಡಿಬಿಟ್ಟಿದೆ. ರಾಮನಗರ ಹೆಸರನ್ನ ಬದಲಾವಣೆ ಮಾಡೇ ಮಾಡ್ತೀನಿ ಅಂತಾ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ಸೆಡ್ಡು ಹೊಡೆದಿದ್ದ ಡಿ.ಕೆ ಶಿವಕುಮಾರ್ ಗೆ ಈ ವಿಚಾರವಾಗಿ ಭಾರೀ ಹಿನ್ನಡೆ ಆಗಿದೆ.
ಹೌದು, ರಾಮನಗರ ಜಿಲ್ಲೆ ಹೆಸರು ಬದಲಾವಣೆ ಮಾಡಲು ಹೊರಟಿದ್ದ ಡಿಕೆ ಶಿವಕುಮಾರ್ ವೇಗಕ್ಕೆ ಈ ಕೇಂದ್ರ ಬ್ರೇಕ್ ಹಾಕಿದೆ. ಈ ಹೆಸರು ಬದಲಾವಣೆ ಬೇಡ ಎಂದು ರಾಜ್ಯ ಸರ್ಕಾರದ ಪ್ರಸ್ತಾಪವನ್ನ ಕೇಂದ್ರ ಗೃಹ ಸಚಿವಾಲಯ ತಳ್ಳಿಹಾಕಿದೆ. ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಬೇಕು ಅಂತಾ ಡಿ ಕೆ ಶಿವಕುಮಾರ್ ತೀರ್ಮಾನಿಸಿದ್ರು. ಈ ಹಿಂದೆ ಸಚಿವ ಸಂಪುಟ ಸಭೆಯಲ್ಲೂ ವಿಷಯ ಪ್ರಸ್ತಾಪಿಸಿ, ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ರು. ಯಾವಾವ ಅಲ್ಲಿ ಓಕೆ ಅಂದ್ರೋ ಕೂಡಲೇ ಕೇಂದಕ್ಕೆ ಪ್ರಸ್ತಾವನೆ ಕಳಿಸಿಯೇ ಬಿಟ್ರು ಡಿಕೆ. ಆದರೆ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆ ಅದೇ ಕಾರಣ ಕೊಟ್ಟಿದೆ ಕೇಂದ್ರ. ವಿರೋಧದ ನಡುವೆ ಜಿಲ್ಲೆ ಹೆಸರು ಬದಲಾಯಿಸಿದ್ರೆ, ಕಾನೂನು ಸುವ್ಯವಸ್ಥೆ ಹದಗೆಡಲಿದೆ ಅಂತಾ ಸಬೂಬು ನೀಡಿದೆ ಕೇಂದ್ರ ಸರ್ಕಾರ.

ಇದರ ಮಧ್ಯೆ ಮತ್ತೊಂದು ವಿಚಾರ ಎಂಬಂತೆ, ಮರು ನಾಮಕರಣಕ್ಕೆ ಆಗಿಂದಲೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಹೆಚ್ ಡಿ ಕುಮಾರಸ್ವಾಮಿ ಈತ ತಮ್ಮ ಮಂತ್ರಿ ಸ್ಥಾನದ ಪ್ರಭಾವ ಬೀರಿ, ಕೇಂದ್ರದ ಅನುಮತಿಯನ್ನ ತಪ್ಪಿಸಿದ್ದಾರೆ ಅಂತಾ ಹೇಳಲಾಗ್ತಿದೆ. ಆದರೆ ಡಿಕೆ ಶಿವಕುಮಾರ್ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಮತ್ತೆ ಈ ವಿಚಾರವನ್ನ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ಮರು ನಾಮಕರಣ ಮಾಡಲು ಸರ್ಕಾರ ನಿರ್ಧಾರ ಮಾಡಿದ್ದಾರಂತೆ. ಜಿಲ್ಲೆ ಮರುನಾಮಕರಣ ಕೇಂದ್ರದ ವ್ಯಾಪ್ತಿಗೆ ಬರುವುದಿಲ್ಲ. ಕೇಂದ್ರದ ಒಪ್ಪಿಗೆ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ.
ನಗರ ಅಥವಾ ಸ್ಥಳಗಳ ಹೆಸರು ಬದಲಾಯಿಸಲು ಕೇಂದ್ರದ ಅನುಮತಿಬೇಕು. ಕೇಂದ್ರ ಸರ್ಕಾರದಿಂದ ಯಾವುದೇ ಆಕ್ಷೇಪಣೆ ಇಲ್ಲ ಅನ್ನೋ ಪ್ರಮಾಣಪತ್ರವನ್ನು ಪಡೆದುಕೊಳ್ಳಬೇಕು. ಕೇಂದ್ರದ ಅನುಮತಿಯಿಲ್ಲದೆ ರಾಜ್ಯಗಳು ಹೆಸರುಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಸದ್ಯ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಗೃಹ ಸಚಿವಾಲಯ ಕೊಳ್ಳಿ ಇಟ್ಟಿದ್ದು, ಮುಂದೆ ರಾಜಕೀಯ ತಿಕ್ಕಾಟಕ್ಕೂ ಇದು ಕಾರಣವಾಗಬಹುದು.