ತೆಲುಗಿನ ಖ್ಯಾತ ನಟರಲ್ಲಿ ಬಾಲಯ್ಯ ಸಹ ಒಬ್ಬರು. ಇವರಿಗೆ ಈಗ ವಯಸ್ಸು 64 ಆಗಿದೆ, ಆದರೂ ಸಹ ಯಂಗ್ ಹೀರೋಗಳ ರೀತಿ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈಗಲೂ ಹೀರೋ ಆಗಿಯೇ ಸಿನಿಮಾ ಮಾಡುತ್ತಿದ್ದಾರೆ. ಬಾಲಯ್ಯ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಹಾಗೂ ಶೋ ಹೋಸ್ಟ್ ಮಾಡುತ್ತಾ ಬ್ಯುಸಿ ಆಗಿದ್ದಾರೆ. ಇದೀಗ ಸಂಕ್ರಾಂತಿ ಹಬ್ಬಕ್ಕೆ ಬಾಲಯ್ಯ ಅಭಿನಯದ ಡಾಕು ಮಹಾರಾಜ್ ಸಿನಿಮಾ ಬಿಡುಗಡೆ ಆಗುತ್ತಿದ್ದು, ಜನವರಿ 12ರಂದು ಈ ಸಿನಿಮಾ ತೆರೆ ಕಾಣಲಿದೆ. ಸಿನಿಮಾ ಬಿಡುಗಡೆಗಿಂತ ಮೊದಲೇ ಬಾಲಯ್ಯ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ, ಇದು ಹೀರೋಯಿನ್ ಪೋಸ್ಟ್ ಮಾಡಿರುವ ಒಂದು ವಿಡಿಯೋ ಇಂದ..
ತೆಲುಗು ನಟ ಬಾಲಯ್ಯ ಅವರು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತಾರೆ. ಇವರ ಬಗ್ಗೆ ಒಂದಷ್ಟು ಮೀಮ್ಸ್ ಗಳು, ಟ್ರೋಲ್ಸ್ ಗಳು ಬರುವುದನ್ನು ನೋಡುತ್ತಲೇ ಇರುತ್ತೇವೆ. ಬಾಲಯ್ಯ ಅವರು ಇದಕ್ಕೆಲ ತಲೆಕೆಡಿಸಿಕೊಂಡಿಲ್ಲ. ಆದರೆ ಜನರು ಮಾತ್ರ ಒಂದಲ್ಲ ಒಂದು ವಿಚಾರಕ್ಕೆ ಇವರ ಬಗ್ಗೆ ಚರ್ಚೆ ಮಾಡುತ್ತಲೇ ಇರುತ್ತಾರೆ. ಇದೀಗ ಬಾಲಯ್ಯ ಅವರು ಡಾಕು ಮಹಾರಾಜ್ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾದಲ್ಲಿ ಅವರಿಗೆ ಹೀರೋಯಿನ್ ಆಗಿ ಬಾಲಿವುಡ್ ಹೀರೋಯಿನ್ ಊರ್ವಶಿ ರೌಟೇಲ ಅಭಿನಯಿಸಿದ್ದಾರೆ. ಇವರಿಬ್ಬರ ಒಂದು ಹಾಡು ಈಗಾಗಲೇ ಬಿಡುಗಡೆಯಾಗಿ ವೈರಲ್ ಆಗಿದೆ..
ಹಾಗೆಯೇ ಸಿನಿಮಾ ಪ್ರೊಮೋಷನ್ ನಲ್ಲಿ ಕೂಡ ಇಬ್ಬರು ಭಾಗಿಯಾಗಿದ್ದಾರೆ. ಪ್ರೊಮೋಷನ್ ವೇಳೆ ಊರ್ವಶಿ ರೌಟೇಲ ಅವರು ಒಂದು ವಿಡಿಯೋ ಶೇರ್ ಮಾಡಿದ್ದು, ಇದನ್ನು ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ಇವರಿಬ್ಬರು ಪ್ರೆಸ್ ಮೀಟ್ ನಲ್ಲಿ ಫೋಟೋಶೂಟ್ ಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದು, ಬಹಳ ಕ್ಲೋಸ್ ಆಗಿ ನಿಂತು ಫೋಟೋಸ್ ಗಳಿಗೆ ಪೋಸ್ ಕೊಡುತ್ತಿದ್ದಾರೆ. ಇದನ್ನು ನೋಡಿದ ನೆಟ್ಟಿಗರು, ಇವರಿಬ್ಬರ ಕ್ಲೋಸ್ ನೆಸ್ ನೋಡಿ ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಅದರಲ್ಲೂ ಇವರು ಟ್ರೋಲ್ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಇವರ ನಡುವೆ ಇರುವ ವಯಸ್ಸಿನ ವ್ಯತ್ಯಾಸ.
ಹೌದು, ಬಾಲಯ್ಯ ಅವರಿಗೆ ಈಗ 64 ವರ್ಷ, ಇನ್ನು ಊರ್ವಶಿ ಅವರಿಗೆ 34 ವರ್ಷ. 20 ವರ್ಷ ಚಿಕ್ಕ ಹುಡುಗಿ ಬಾಲಯ್ಯ ಅವರಿಗೆ ಹೀರೋಯಿನ್ ಆಗಿ ನಟಿಸಿರುವುದು, ಅವರಿಬ್ಬರು ಈ ರೀತಿ ಫೋಟೋಗಳಿಗೆ ಪೋಸ್ ನೀಡುತ್ತಿರುವುದು ನೆಟ್ಟಿಗರಿಗೆ ಟ್ರೋಲ್ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಇವರಿಬ್ಬರ ಜೋಡಿ ನೋಡಿ ಕೆಲವರು ತಾತ ಮತ್ತು ಮೊಮ್ಮಗಳ ಜೋಡಿ ತುಂಬಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ಬೇರೆ ರೀತಿಯಲ್ಲಿ ಸಹ ಟ್ರೋಲ್ ಮಾಡುತ್ತಿದ್ದಾರೆ. ಇವರಿಬ್ಬರ ಹಾಡಿನಲ್ಲಿ ಕೆಲವು ಸ್ಟೆಪ್ಸ್ ಗಳು ಸಹ ಇದೇ ರೀತಿ ಟ್ರೋಲ್ ಆಗಿತ್ತು.
ಬಾಲಯ್ಯ ಅವರ ಸಿನಿಮಾಗಳು ಎಂದರೆ ಆಗಾಗ ಇದೆಲ್ಲ ನಡೆಯುವುದು ಸಹಜ. ಇದಷ್ಟೇ ಅಲ್ಲದೇ ಬಾಲಯ್ಯ ಅವರು ಆಹಾ ಆಪ್ ನಲ್ಲಿ ಟಾಕ್ ಶೋ ಅನ್ನು ಸಹ ನಿರೂಪಣೆ ಮಾಡುತ್ತಾರೆ. ಈ ಶೋಗೆ ಸೆಲೆಬ್ರಿಟಿಗಳು ಬಂದು, ಅವರ ಜೀವನದ ಬಗ್ಗೆ ಅನೇಕ ವಿಚಾರಗಳು ಚರ್ಚೆ ಆಗುತ್ತದೆ. ಬಹಳ ತಮಾಷೆ ನಗು ಇದೆಲ್ಲವೂ ಇರುತ್ತದೆ. ಒಟ್ಟಿನಲ್ಲಿ 64ರ ಹರೆಯದಲ್ಲೂ ಸಹ ಬಾಲಯ್ಯ ಅವರು ಇಷ್ಟು ಆಕ್ಟಿವ್ ಆಗಿರುವುದು, ಜನರಿಗೆ ಆಶ್ಚರ್ಯ ಅನ್ನಿಸದೇ ಇರದು. ಆದರೆ ಇನ್ನುಮುಂದೆ ಆದರು ಇವರು ವಯಸ್ಸಿಗೆ ತಕ್ಕ ಪಾತ್ರಗಳಲ್ಲಿ ನಟಿಸುವುದು ಒಳ್ಳೆಯದು ಎನ್ನುವುದು ಬಹುತೇಕ ಜನರ ಅಭಿಪ್ರಾಯ.