ಇಂದು ಮತ್ತು ನಾಳೆ ಹಾಗೂ 14 ರಂದು ಬೆಳಿಗ್ಗೆ 5ರಿಂದ 7 ಗಂಟೆವರೆಗೆ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ ಆಗಲಿದೆ. ಯಾವ್ಯಾವ ಮೆಟ್ರೋ ಸಂಚಾರದಲ್ಲಿ ಹಾಗಾದ್ರೆ ವ್ಯತ್ಯಯ ಆಗಲಿದೆ ಅಂತ ನೋಡೋದಾದ್ರೆ, ಬೈಯಪ್ಪನಹಳ್ಳಿ ಯಿಂದ ವಿವೇಕಾನಂದ ರಸ್ತೆ ಮೆಟ್ರೋ ಹಾಗೂ ಕೆ.ಆರ್ ಪುರ ದಿಂದ ವೈಟ್ ಫೀಲ್ಡ್ ವರೆಗಿನ ಮೆಟ್ರೋ ಸಂಚಾರ ವ್ಯತ್ಯಯ ಆಗಲಿದೆ. ಬೈಯಪ್ಪನಹಳ್ಳಿಯಿಂದ ಕೆ.ಆರ್ ಪುರ ಮೆಟ್ರೋ ನಿಲ್ದಾಣದ ದವರೆಗೆ ನಮ್ಮ ಮೆಟ್ರೋ ವಿಸ್ತರಣೆ ಆಗಿದೆ. ಅಲ್ಲಿ ಟ್ರಯಲ್ ರನ್ ಕೂಡ ಆರಂಭ ಆಗಿತ್ತು. ಈ ಭಾಗದಲ್ಲಿ ಸಿಗ್ನಲಿಂಗ್ ಕಾಮಗಾರಿತನ್ನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.. ಈ ಕಾರಣಕ್ಕೆ ಸ್ವಲ್ಪ ವ್ಯತ್ಯಯ ಉಂಟಾಗಲಿದೆ..

ಅಧಿಕಾರಿಗಳು ಬೆಳಗ್ಗೆ 5 ಗಂಟೆಯಿಂದ 7 ಗಂಟೆಯವರೆಗೆ ನಡೆಯಲಿರುವ ಸಿಗ್ನಲಿಂಗ್ ಪರಿಶೀಲನೆ ನಡೆಸುತ್ತಾರೆ. ಹೀಗಾಗಿ 7 ಗಂಟೆಯ ಬಳಿಕ ಮೆಟ್ರೋ ಸಂಚಾರ ಮತ್ತೆ ಆರಂಭ ಆಗಲಿದೆ. ಇದರಿಂದ ಸಾಕಷ್ಟು ಪ್ರಯಾಣಿಕರಿಗೆ ಕೊಂಚ ತೊಂದರೆ ಆಗಲಿದೆ. ಆದ್ರೆ ಮುಂದಿನ ದಿನಗಳಲ್ಲಿ ಇದ್ರಿಂದ ಅನುಕೂಲವೇ ಜಾಸ್ತಿ. ಹೀಗಾಗಿ ಪ್ರಯಾಣಿಕರು ಸಹಕರಿಸಬೇಕಾಗಿ ಮೆಟ್ರೋ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಇತ್ತ ಕೆಂಗೇರಿ ಟು ಚಲ್ಲಘಟ್ಟ ಪುರಸ ವರೆಗೂ ಮೆಟ್ರೋ ವಿಸ್ತರಣೆ ಆಗಿದ್ದು ಅಲ್ಲಿಯೂ ಕೂಡ ಸಿಗ್ನಲಿಂಗ್ ಕಾಮಗಾರಿ ಪರಿಶೀಲನೆಯನ್ನ ಅಧಿಕಾರಿಗಳು ನಡೆಸ್ತಾ ಇದ್ದಾರೆ.
ಈ ಹಿನ್ನಲೆ ಆಗಸ್ಟ್ 14ರಂದು ಕೆಂಗೇರಿ ಟು ವಿಜನಗರದವರೆಗೆ ಮೆಟ್ರೋ ಸೇವೆಯಲ್ಲಿ ಕೂಡ ವ್ಯತ್ಯಯ ಉಂಟಾಗಲಿದೆ ಅಂತ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ. ಅಧಿಕಾರಿಗಳ ಪರಿಶೀಲನೆ ಹಿನ್ನಲೆ ಬೆಳಗ್ಗೆ 5 ಗಂಟೆಯಿಂದ 7 ಗಂಟೆವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ . ಅದಾದ ಮೇಲೆ 7 ಗಂಟೆ ಬಳಿಕ ಎಂದಿನಂತೆ ಮೆಟ್ರೋ ಸೇವೆ ಇರಲಿದೆ ಎಂದು BMRCL ಅಧಿಕೃತ ಮಾಹಿತಿ ನೀಡಿದೆ.
ಮೆಟ್ರೋವನ್ನೆ ಅವಲಂಬಿಸಿ ನಿತ್ಯ ಲಕ್ಷಾಂತರ ಜನ ಪ್ರಯಾಣ ಮಾಡ್ತಾ ಇದ್ದಾರೆ. ಈ ಟ್ರಾಫಿಕ್ ಜಾಮ್ ಕಿರಿ ಕಿರಿ ತಪ್ಪಿಸಿ ಕೊಳ್ಳೋದಕ್ಕೆ ಸುಲಭ ಪ್ರಯಾಣಕ್ಕೆ ಕ್ವಿಕ್ ಟ್ರಾವೆಲ್ ಮಾಡೋದಕ್ಕೆ ಮೆಟ್ರೋ ಪ್ರಯಾಣ ಅನುಕೂಲಕರ.. ಹೀಗಾಗಿ ಪ್ರಯಾಣಿಕರು ಪರದಾಟ ಅನುಭವಿಸಬಾರದು ಅಂತ BMRCL ಮುಂಚಿತವಾಗಿ ಮಾಹಿತಿ ನೀಡಿದೆ.