ದೀಪಾವಳಿ ಹೊತ್ತಲ್ಲೇ ಗ್ರಾಹಕರಿಗೆ ಹೊರೆ ಬಿದ್ದಿದ್ದು ಹಾಲಿನ ದರ ಹೆಚ್ಚಳ ಮಾಡಲಾಗಿದೆ. ದೀಪಾವಳಿ ಹತ್ತಿರ ಬರುತ್ತಿರುವ ಹೊತ್ತಲ್ಲೇ ಅಮುಲ್ ತನ್ನ ಗ್ರಾಹಕರಿಗೆ ಹಾಲಿನ ದರದ ಭಾರ ಹೆಚ್ಚಿಸಿದೆ.
ಅಮುಲ್ ಬ್ರಾಂಡ್ ನಡಿಯಲ್ಲಿ ಹಾಲನ್ನು ಮಾರಾಟ ಮಾಡುವ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ(ಜಿಸಿಎಂಎಂಎಫ್), ಗುಜರಾತ್ ಹೊರತುಪಡಿಸಿ ಎಲ್ಲಾ ಮಾರುಕಟ್ಟೆಗಳಲ್ಲಿ ಅಮುಲ್ ಗೋಲ್ಡ್ ಮತ್ತು ಎಮ್ಮೆಯ ಹಾಲಿನ ಬೆಲೆಯನ್ನು ಪ್ರತಿ ಲೀಟರ್ಗೆ 2 ರೂ. ಹೆಚ್ಚಿಸಿದೆ. ಉಳಿದ ಹಾಲು ಒಕ್ಕೂಟಗಳೂ ಹಾಲಿನ ದರ ಹೆಚ್ಚಿಸುವ ಸಾಧ್ಯತೆ ಇದೆ. ಅಮುಲ್ ಈ ವರ್ಷದಲ್ಲಿ ಇದು ಮೂರನೇ ಬಾರಿಗೆ ಹಾಲಿನ ದರ ಹೆಚ್ಚಿಸುತ್ತಿದೆ. ಮಾರ್ಚ್ ಮತ್ತು ಆಗಸ್ಟ್ ತಿಂಗಳಲ್ಲಿ ಕೂಡ ಲೀಟರ್ಗೆ 2 ರೂಪಾಯಿ ಏರಿಕೆ ಮಾಡಿತ್ತು.
ಅಮುಲ್ ಮಿಲ್ಕ್ ಹಾಲಿನ ದರವನ್ನು ಹೆಚ್ಚಿಸಿದ ಕೆಲವೇ ಗಂಟೆಗಳ ನಂತರ, ಮದರ್ ಡೈರಿ ಶನಿವಾರ ಪೂರ್ಣ ಕೆನೆ ಹಾಲು ಮತ್ತು ಹಸುವಿನ ಹಾಲಿನ ಬೆಲೆಯನ್ನು ಲೀಟರ್ಗೆ 2 ರೂಪಾಯಿಗಳಷ್ಟು ಹೆಚ್ಚಿಸಿದೆ.
ಹಾಲಿನ ದರ ಹೆಚ್ಚಳವು ದೆಹಲಿ-ಎನ್ಸಿಆರ್ ಪ್ರದೇಶದಲ್ಲಿ ಅಕ್ಟೋಬರ್ 16 ರಿಂದ ಜಾರಿಗೆ ಬರಲಿದೆ ಎಂದು ಸಂಸ್ಥೆ ತಿಳಿಸಿದೆ. ಮದರ್ ಡೈರಿಯು ಆಗಸ್ಟ್ 2022 ರಿಂದ ಎರಡನೇ ಬಾರಿಗೆ ಹಾಲಿನ ದರವನ್ನು ಹೆಚ್ಚಿಸಿದೆ.
