ಪ್ರತಿಯೊಬ್ಬರಿಗೂ ತಮ್ಮದೇ ಆದ ಆಸೆ, ಬಯಕೆಗಳಿರುತ್ತವೆ. ಸದ್ಯ, ಬಿಗ್ ಬಾಸ್ ಓಟಿಟಿ 1ರಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದಿದ್ದ ಅಕ್ಷತಾ ಕುಕಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಹಿಂದೊಮ್ಮೆ ದೊಡ್ಮನೆಯಲ್ಲಿ ಅಕ್ಷತಾ ತಮ್ಮ ಕನಸೊಂದನ್ನ ಬಿಚ್ಚಿಟ್ಟಿದ್ದರು. ಪ್ಯಾರಿಸ್ನ ಐಫೆಲ್ ಟವರ್ ಮುಂದೆ ನಿಂತು ‘ಐ ಲವ್ ಯೂ’ ಎಂದು ತಮ್ಮ ಗೆಳೆಯ ಪ್ರಪೋಸ್ ಮಾಡಬೇಕು ಎಂಬುದು ನಟಿಯ ಕನಸಾಗಿತ್ತು. ಆ ಆಸೆ ಈಗ ಈಡೇರಿದ್ದು, ಫೋಟೋಗಳು ವೈರಲ್ ಆಗಿವೆ.


ಬಿಗ್ ಬಾಸ್ ಮಾಜಿ ಸ್ಪರ್ಧಿ ಅಕ್ಷತಾ ಕುಕಿ ತಮ್ಮ ಕನಸಿನಂತೆ ಪತಿ ಜೊತೆ ಪ್ಯಾರಿಸ್ಗೆ ಹಾರಿದ್ದಾರೆ. ಈ ವೇಳೆ ಐಫೆಲ್ ಟವರ್ ಮುಂದೆ ಅಕ್ಷತಾಗೆ ಪ್ರಪೋಸ್ ಮಾಡಿದ್ದಾರೆ. ಈ ಸಂದರ್ಭದ ಸುಂದರ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ. ಐಫೆಲ್ ಟವರ್ ಮತ್ತು ನೀನು, ಇದು ಸರಿಯಾದ ಕಾಂಬಿನೇಷನ್ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. ಸದ್ಯ, ಈ ಸುಂದರ ಫೋಟೋಗಳು ವೈರಲ್ ಆಗಿವೆ.
ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಅವಿನಾಶ್ ಜೊತೆ ಈ ವರ್ಷದ ಆರಂಭದಲ್ಲಿ ಅಕ್ಷತಾ ಕುಕಿ ಮದುವೆಯಾದರು. ಗುರುಹಿರಿಯರು ಸಮ್ಮತಿಸಿ ಮದುವೆಗೆ ನಟಿ ಒಪ್ಪಿಗೆ ಸೂಚಿಸಿದ್ದರು. ಈಗ ಪತಿ ಅವಿನಾಶ್ ಜೊತೆ ಫಾರಿನ್ನಲ್ಲಿ ಸೆಟೆಲ್ ಆಗಿದ್ದಾರೆ. ಈ ನಡುವೆ ಅವಿನಾಶ್ ಹಾಗೂ ಅಕ್ಷತಾ ಐಫೆಲ್ ಟವರ್ ನೋಡಲು ತೆರಳಿದ ವೇಳೆ ಪರಸ್ಪರ ಪ್ರಪೋಸ್ ಮಾಡಿಕೊಂಡು ಫೋಟೋಶೂಟ್ ನಡೆಸಿದ್ದಾರೆ.