ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 719ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಾಗೆ ರೆಸಾರ್ಟ್ನಲ್ಲಿ ಕೆಲಸ ಸಿಕ್ಕಿದೆ, ಅಲ್ಲಿ ಜೋಕರ್ನಂತೆ ಅಲ್ಲಿಗೆ ಬಂದ ಮಕ್ಕಳನ್ನು ಮನರಂಜಿಸುವ ಕೆಲಸ ಅದಾಗಿದೆ. ಯಾವುದೇ ಕೆಲಸ ಸಿಕ್ಕಿದ್ರೆ ಖುಷಿಯಲ್ಲಿದ್ದಾರೆ ಭಾಗ್ಯಾ. ಆದರೆ, ಅದೇ ರೆಸಾರ್ಟ್ನಲ್ಲಿ ತಾಂಡವ್ ಹಾಗೂ ಶ್ರೇಷ್ಠಾ ಜೊತೆ ಸೇರಿ ತನ್ವಿ ಬರ್ತ್ಡೇ ಆಚರಿಸುವುದನ್ನು ನೋಡಿ, ಭಾಗ್ಯಾ ಕಣ್ಣೀರಿಡುತ್ತಾಳೆ. ಈ ಕ್ಷಣಗಳಲ್ಲಿ ಭಾಗ್ಯಾ ಮತ್ತು ತನ್ವಿಯ ನಡುವಿನ ಸಂಬಂಧ ದ ಸಂಕೀರ್ಣತೆಯನ್ನು ನಾವು ನೋಡಬಹುದು, ಜೊತೆಗೆ ಅವರ ಮಧ್ಯೆ ಇರುವ ಭಾವನೆಗಳು ಮತ್ತು ಸಂಬಂಧವನ್ನು ನಿರ್ವಹಿಸಲು ಕಾರಣಗಳೂ ಕೂಡಿರುವುದನ್ನು ತೋರಿಸುತ್ತದೆ.
ನನ್ನ ಮಗಳ ಬರ್ತ್ಡೇಯನ್ನು ಮನೆಯಲ್ಲಿ ಮಾಡಬೇಕೆಂದುಕೊಂಡಿದ್ದ ಭಾಗ್ಯಾಗೆ ತನ್ವಿಯನ್ನು ಅಲ್ಲಿ ನೋಡಿ ಶಾಕ್ ಆಗುತ್ತದೆ. ಹೇಗೋ ಮಗಳ ಬರ್ತ್ಡೇಯಲ್ಲಿ ಅವಳನ್ನು ಮನರಂಜಿಸುವ ಅದೃಷ್ಟ ಸಿಕ್ಕಿತಲ್ಲ ಎಂದುಕೊಂಡು ಅವಳ ಬಳಿ ಕೇಕ್ ತೆಗೆದುಕೊಂಡು ಹೋಗುತ್ತಾಳೆ. ಟೇಬಲ್ ಮೇಲೆ ಕೇಕ್ ಇಟ್ಟು ಮಗಳನ್ನೇ ನೋಡುತ್ತಿದ್ದ ಭಾಗ್ಯಾಳನ್ನು ಶ್ರೇಷ್ಠಾ ತಳ್ಳುತ್ತಾಳೆ. ಕೆಳಗೆ ಬಿದ್ದವಳು ತನ್ನ ತಾಯಿ ಎಂದು ತಿಳಿಯದೆ ತನ್ವಿ ಅವಳಿಗೆ ಕೈ ನೀಡಿ, ಮೇಲೆ ಎತ್ತಲು ಪ್ರಯತ್ನಿಸುತ್ತಾಳೆ. ಆದರೆ ಶ್ರೇಷ್ಠಾ , ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ.
ಮಗಳ ಜೊತೆ ಡ್ಯಾನ್ಸ್ ಆದ್ರೂ ಮಾಡೋಣ ಎಂದುಕೊಂಡ ಭಾಗ್ಯಾಗೆ ಅದಕ್ಕೂ ಅವಕಾಶ ಸಿಗುವುದಿಲ್ಲ. ಶ್ರೇಷ್ಠಾ ಎಲ್ಲದಕ್ಕೂ ಅಡ್ಡಿಯಾಗಿ ನಿಂತಿದ್ದಾಳೆ. ತನ್ನ ದುರಾದೃಷ್ಟ ನೆನೆದು ಭಾಗ್ಯಾ ಅಳುತ್ತಾಳೆ. ಪಾರ್ಟಿ ಮುಗಿದ ನಂತರ ಅಂದಿನ ಘಟನೆಯನ್ನೇ ನೆನೆದು ಅಳುವ ಭಾಗ್ಯಾ ಬಳಿ ಸಹೋದ್ಯೋಗಿ ಬಂದು ಮಾತನಾಡಿಸುತ್ತಾಳೆ. ನಾನು ಇದುವರೆಗೂ ಎಷ್ಟೋ ಹುಟ್ಟುಹಬ್ಬಗಳಿಗೆ ಡ್ಯಾನ್ಸ್ ಮಾಡಿದ್ದೇನೆ. ಆದರೆ ಈ ರೀತಿಯ ಹುಟ್ಟುಹಬ್ಬವನ್ನು ಎಂದಿಗೂ ನೋಡಿರಲಿಲ್ಲ. ನಮಗಂತೂ ಈ ರೀತಿ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುವುದಿಲ್ಲ, ನೋಡಿ ಖುಷಿ ಪಡಬೇಕು ಅಷ್ಟೇ ಎನ್ನುತ್ತಾಳೆ. ಭಾಗ್ಯಾ ಬಣ್ಣ ತೆಗೆದು ಮನೆಗೆ ಹೊರಡಲು ರೆಡಿ ಆಗುತ್ತಾಳೆ. ಇಷ್ಟೆಲ್ಲಾ ಅದ್ದೂರಿಯಾಗಿ ಅವರು ಬರ್ತ್ಡೇ ಆಚರಿಸುತ್ತಿದ್ದಾರೆ. ಇದರ ಮುಂದೆ ನಾನು ಆಚರಿಸುವ ಹುಟ್ಟುಹಬ್ಬ ಮಗಳಿಗೆ ಇಷ್ಟವಾಗುವುದೋ ಇಲ್ಲವೋ, ಮಗಳು ನನ್ನ ಕೈ ತಪ್ಪಿ ಹೋಗುತ್ತಾಳಾ? ಎಂಬ ಅನೇಕ ಪ್ರಶ್ನೆ ಭಾಗ್ಯಾಗೆ ಕಾಡುತ್ತದೆ. ನನಗೆ ನನ್ನ ಮಗಳು ಖುಷಿಯಾಗಿರುವುದಷ್ಟೇ ಮುಖ್ಯ ಎಂದುಕೊಂಡು ಮತ್ತೆ ರೆಸಾರ್ಟ್ ಓನರ್ ಬಳಿ ಅಡ್ವಾನ್ಸ್ ಹಣಕ್ಕಾಗಿ ಮನವಿ ಮಾಡುತ್ತಾಳೆ.
ಭಾಗ್ಯಾ ಪದೇ ಪದೆ ಮನವಿ ಮಾಡಿದ್ದರಿಂದ ಓನರ್, ಅವಳಿಗೆ ಅಡ್ವಾನ್ಸ್ ಹಣ ಕೊಡುತ್ತಾನೆ. ಹಣ ಪಡೆದು ಕೆಲಸಕ್ಕೆ ಬರದಿದ್ದರೆ ಸಮಸ್ಯೆ ಆಗಬಹುದು ಎಂದುಕೊಂಡು ಭಾಗ್ಯಾ ಆಧಾರ್ ಕಾರ್ಡ್, ಕುಸುಮಾ ಫೋನ್ ನಂಬರ್ ಪಡೆಯುತ್ತಾನೆ. ದಯವಿಟ್ಟು ಆ ನಂಬರ್ಗೆ ಕರೆ ಮಾಡಬೇಡಿ ಎಂದು ಭಾಗ್ಯಾ ಮನವಿ ಮಾಡಿಕೊಳ್ಳುತ್ತಾಳೆ. ನೀನು ನಿಯತ್ತಾಗಿ ಕೆಲಸಕ್ಕೆ ಬಂದರೆ ಸರಿ, ಇಲ್ಲದಿದ್ದರೆ ನಾನು ಈ ನಂಬರ್ಗೆ ಕರೆ ಮಾಡುತ್ತೇನೆ ಎಂದು ರೆಸಾರ್ಟ್ ಓನರ್ ಎಚ್ಚರಿಸುತ್ತಾನೆ. ಇಲ್ಲ ಸರ್ ನಾನು ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇನೆ ಎಂದು ಹೇಳಿ ಭಾಗ್ಯಾ, ಮೊಬೈಲ್ ಖರೀದಿಸಲು ಮೊಬೈಲ್ ಅಂಗಡಿಗೆ ಹೋಗುತ್ತಾಳೆ. ಆದರೆ ಭಾಗ್ಯಾ, ಮೊದಲೇ ನೋಡಿಟ್ಟಿದ್ದ ಮೊಬೈಲನ್ನು ಯಾರೋ ತೆಗೆದುಕೊಂಡು ಹೋಗಿದ್ದಾರೆ, ನೀವು ಒಂದು ಸಾವಿರ ಹೆಚ್ಚಿಗೆ ಕೊಟ್ಟರೆ ಅದಕ್ಕಿಂತ ಚೆನ್ನಾಗಿರುವ ಮೊಬೈಲ್ ದೊರೆಯುತ್ತದೆ ಎಂದು ಹೇಳುತ್ತಾನೆ. ಇರುವ ಹಣವನ್ನೆಲ್ಲಾ ಮೊಬೈಲ್ಗೆ ಕೊಟ್ಟರೆ ತನ್ವಿ ಬಟ್ಟೆಗೆ ಹಣ ಸಾಲುವುದಿಲ್ಲ ಎಂದು ಭಾಗ್ಯಾ ಯೋಚಿಸುತ್ತಾಳೆ. ಮಗಳಿಗೆ ನಾನೇ ಬಟ್ಟೆ ಹೊಲಿಯುವೆ, ಈಗ ಈ ಹಣದಿಂದ ತನ್ವಿಗೆ ಮೊಬೈಲ್ ಖರೀದಿಸಿದರೆ ಅವಳು ಖುಷಿ ಪಡುತ್ತಾಳೆ ಎಂದುಕೊಂಡು ಮೊಬೈಲ್ ಖರೀದಿಸುತ್ತಾಳೆ.
ಬರ್ತ್ಡೇ ಮುಗಿದ ತನ್ವಿಯ ಗೆಳತಿಯರು “ನಮ್ಮ ಕಾಲೇಜಿನಲ್ಲಿ ಈ ರೀತಿ ಬರ್ತ್ಡೇ ಪಾರ್ಟಿ ಯಾರೂ ಮಾಡಿರಲಿಲ್ಲ” ಎಂದು ಕಾಂಪ್ಲಿಮೆಂಟ್ಸ್ ಕೊಟ್ಟು ಮನೆಗೆ ವಾಪಸ್ ಹೊರಡುತ್ತಾರೆ. ತನ್ವಿ ಫ್ರೆಂಡ್ಸ್ ಮಾತು ಕೇಳಿ ಖುಷಿಯಾಗುತ್ತಾಳೆ. ತಾಂಡವ್ ಭಾಗ್ಯಾ ಮತ್ತು ತನ್ವಿಯ ನಡುವಿನ ಸಂಬಂಧ ವನ್ನು ಉಲ್ಲೇಖಿಸುತ್ತಾ, “ನಿನಗೆ ಇನ್ನೂ ಸರ್ಪ್ರೈಸು ಮುಗಿದಿಲ್ಲ, ಇನ್ನೂ ಇದೆ” ಎನ್ನುತ್ತಾನೆ. ಇದನ್ನು ಕೇಳಿ ತನ್ವಿ ಮತ್ತಷ್ಟು ಖುಷಿಯಾಗುತ್ತಾಳೆ. ಇತ್ತ ಮನೆಯಲ್ಲಿ ಪೂಜಾ, ಬರ್ತ್ಡೇಗೆ ಬೇಕಾದ ಎಲ್ಲಾ ವಸ್ತುಗಳನ್ನು ತರುತ್ತಾಳೆ. ತನ್ವಿ ಹುಟ್ಟುಹಬ್ಬಕ್ಕೆ ಸಕಲ ತಯಾರಿ ಮಾಡುತ್ತಿದ್ದಾರೆ, ಮತ್ತು ಎಲ್ಲರೂ ಭಾಗ್ಯಾ ಬರುವುದನ್ನೇ ಕಾಯುತ್ತಿರುತ್ತಾರೆ.
ತನ್ವಿಗೆ ತಾಂಡವ್ ಏನು ಸರ್ಪೈಸ್ ಕೊಡುತ್ತಾನೆ? ಭಾಗ್ಯಾ ಕೊಡುವ ಮೊಬೈಲನ್ನು ತನ್ವಿ ಖುಷಿಯಾಗಿ ಸ್ವೀಕರಿಸುತ್ತಾಳಾ? ಮುಂದಿನ ಎಪಿಸೋಡ್ಗಳಲ್ಲಿ ತಿಳಿಯಲಿದೆ.