ಈ ನಾಲ್ಕು ಮ್ಯಾಚ್ ವಿನ್ನರ್ ಗಳಲ್ಲಿ ಇಬ್ಬರು ಇನ್ನೇನು ಟಿ20ಸರಣಿಯನ್ನು ಆಡಲಿದ್ದಾರೆ. ಇನ್ನಿಬ್ಬರು ಎನ್ ಸಿ ಎ ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಅವರು ಎನ್ ಸಿ ಎ ನಲ್ಲಿ ಅಭ್ಯಾಸ ಮಾಡುತ್ತಿರುವ ವೀಡಿಯೋ ಕೂಡ ಹಾಕಿದ್ದಾರೆ. ಆ ನಾಲ್ಕು ಆಟಗಾರರು ಯಾರು ಎಂದು ತಿಳಿಯೋಣ. ಮೊದಲನೆಯದಾಗಿ ಕೆ.ಎಲ್ ರಾಹುಲ್, ಶ್ರೇಯಶ್ ಅಯ್ಯರ್, ಬೂಮ್ರ ಹಾಗೂ ಪ್ರಸಿದ್ಧ ಕೃಷ್ಣ ಈ ನಾಲ್ಕು ಆಟಗಾರರು ಕ್ರಿಕೆಟ್ ಆಡಲು ರೆಡಿಯಾಗಿದ್ದಾರೆ. ಇದರಲ್ಲಿ ಜಸ್ಪ್ರಿತ್ ಬೂಮ್ರ ಹಾಗೂ ಪ್ರಸಿದ್ಧ ಕೃಷ್ಣ ಟಿ20 ಸರಣಿಯನ್ನು ಆಡಲು ಐರ್ಲ್ಯಾಂಡ್ ಗೆ ತೆರಳಿದ್ದಾರೆ.

ಈ ಯುವ ಆಟಗಾರರು ಐರ್ಲ್ಯಾಂಡ್ ಗೆ ಫೈಟ್ ನಲ್ಲಿ ಹೋಗುತ್ತಿರುವ ಫೋಟೋಗಳನ್ನು ಬಿ ಸಿ ಸಿ ಐ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಗಸ್ಟ್ 18 ರಂದು ಶುರುವಾಗುತ್ತಿರುವ ಟಿ20 ಸರಣಿಯಲ್ಲಿ ಜಸ್ಪ್ರಿತ್ ಬೂಮ್ರ ನಾಯಕನಾಗಿದ್ದಾರೆ. ಋತುರಾಜ್ ಗಾಯಕ್ ವಾಡ್ ಉಪನಾಯಕನಾಗಿದ್ದಾರೆ. ಜೊತೆಗೆ ಪ್ರಸಿದ್ಧ ಕೃಷ್ಣ ಕೂಡ ಜಸ್ಪ್ರಿತ್ ಬೂಮ್ರ ಅವರೊಡನೆ ಬೌಲಿಂಗ್ ಆರಂಬಿಸಲಿದ್ದಾರೆ. ಇದು ಟೀಂ ಇಂಡಿಯಾಗೆ ಖುಷಿ ವಿಚಾರ.
ಇನ್ನೊಂದು ಕಡೆ ಕೆ ಎಲ್ ರಾಹುಲ್ ಹಾಗೂ ಶ್ರೇಯಶ್ ಅಯ್ಯರ್. ಕೆ ಎಲ್ ರಾಹುಲ್ ಒಬ್ಬ ದೊಡ್ಡ ಮ್ಯಾಚ್ ವಿನ್ನರ್. ಏಕದಿನ ಫಾರ್ಮ್ಯಾಟ್ ನಲ್ಲಿ ತುಂಬಾ ಮ್ಯಾಚ್ ಗಳನ್ನು ಗೆಲ್ಲಿಸಿದ್ದಾರೆ. ಅವರು ಏಕೆ ಕೀ ಪ್ಲೇಯರ್ ಎಂದು ಹೇಳುವುದಾದರೆ ರಿಷಬ್ ಪಂಥ್ ಕೂಡ ಆಕ್ಸಿಡೆಂಟ್ ನಂತರ ರೆಸ್ಟ್ ನಲ್ಲಿ ಇದ್ದಾರೆ.ಅವರ ಬದಲಾಗಿ ಕೆ ಎಲ್ ರಾಹುಲ್ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಾರೆ ಹಾಗೇ ಐದನೇ ಕ್ರಮಾಂಕದಲ್ಲಿ ಬಂದು ಸಾಲಿಡ್ ಆಗಿ ಬ್ಯಾಟಿಂಗ್ ಮಾಡುತ್ತಾರೆ. ವರ್ಲ್ಡ್ ಕಪ್ ನಂತರ ದೊಡ್ಡ ಟೂರ್ನಿಮೆಂಟ್ ನಲ್ಲಿ ಕೆ ಎಲ್ ರಾಹುಲ್ ನಂತಹ ಸಾಲಿಡ್ ಬ್ಯಾಟ್ಸ್ ಮ್ಯಾನ್ ಬೇಕಾಗಿದ್ದಾರೆ.
ನಂತರ ಶ್ರೇಯಶ್ ಅಯ್ಯರ್ . ಬಹಳ ದಿನಗಳಿಂದ ಭಾರತ ತಂಡದಲ್ಲಿ ನಾಲ್ಕನೆಯ ಕ್ರಮಾಂಕದಲ್ಲಿ ಆಡುವ ಬ್ಯಾಟ್ಸ್ ಮ್ಯಾನ್ ಗಾಗಿ ಹುಡುಕಾಡುತ್ತಿದ್ದಾರೆ. ಯುವರಾಜ್ ನಂತರ ಯಾರೂ ಕೂಡ ಈ ಸ್ಥಾನವನ್ನು ತುಂಬಲು ಆಗಿಲ್ಲ ಎಂದು ಮೊನ್ನೆ ತಾನೇ ರೋಹಿತ್ ಶರ್ಮಾ ಹೇಳಿಕೆ ಕೊಟ್ಟಿದ್ದಾರೆ. ಆದರೆ ಶ್ರೇಯಶ್ ಅಯ್ಯರ್ ಆ ಜಾಗವನ್ನು ತುಂಬುವ ಪ್ರಯತ್ನ ಮಾಡುತ್ತಿದ್ದರು ಅಷ್ಟರಲ್ಲೇ ಅವರು ಇಂಜುರಿಯಾಗಿ ತಂಡದಿಂದ ಹೊರಗುಳಿದ್ದಿದ್ದರು. ಒಂದು ವೇಳೆ ಎನ್ ಸಿ ಎ ನಲ್ಲಿ ಶ್ರೇಯಶ್ ಅಯ್ಯರ್ ತಮ್ಮ ಫಿಟ್ ನೆಸ್ ಅನ್ನು ಪಾಸ್ ಮಾಡಿಕೊಂಡರೆ, ಈ ಭಾರತ ತಂಡದ ನಾಲ್ಕನೆಯ ಕ್ರಮಾಂಕದ ಸಮಸ್ಯೆ ನಿವಾರಣೆಯಾಗಲಿದೆ.
ಕೆ ಎಲ್ ರಾಹುಲ್ ಹಾಗೂ ಶ್ರೇಯಶ್ ಅಯ್ಯರ್ ಇಬ್ಬರೂ ಫಿಟ್ ಆಗಿದ್ದಾರೆ ಎಂಬ ಮಾಹಿತಿ ಬಂದಿದೆ, ಆದರೆ ಅವರು ಅಲ್ಲಿ ಪ್ರಾಕ್ಟೀಸ್ ಮ್ಯಾಚ್ ಆಡಿ ಅವರ ಮ್ಯಾಚ್ ಫಿಟ್ ನೆಸ್ ಅನ್ನು ಪ್ರೂ ಮಾಡಬೇಕಿದೆ. ಈಗ ಪ್ರಾಕ್ಟೀಸ್ ಮ್ಯಾಚ್ ನಡೆಯುತ್ತಿರುವ ವೀಡಿಯೋಗಳನ್ನು ರಿಷಬ್ ಪಂಥ್ ಅವರು ಶೇರ್ ಮಾಡಿಕೊಂಡಿದ್ದಾರೆ. ರಿಷಬ್ ಪಂಥ್ ಕೂಡ ಆಕ್ಸಿಡೆಂಟ್ ನಂತರ ಎನ್ ಸಿ ಎ ನಲ್ಲಿ ಅಭ್ಯಾಸ ಶುರುಮಾಡಿದ್ದಾರೆ.
ಇತ್ತ ಪ್ರಸಿದ್ ಕೃಷ್ಣ ಕೂಡ ಭಾರತ ತಂಡದಲ್ಲಿದ್ದಾಗ ಅದ್ಭುತವಾಗಿ ಸ್ಪಿನ್ ಬೊಲಿಂಗ್ ಮಾಡಿ ವಿಕೆಟ್ ತೆಗೆಯುತ್ತಿದ್ದರು. ನಂತರ ಬೂಮ್ರ ಕೂಡ ಆಕ್ರಮಣಕಾರಿಯಾದ ಯಾರ್ಕರ್ ಗಳನ್ನು ಎಸೆದು ಬ್ಯಾಟ್ಸ್ ಮನ್ ಗಳನ್ನು ಔಟ್ ಮಾಡುತ್ತಿದ್ದರು. ಈಗ ಇವರಿಬ್ಬರು ಐರ್ಲ್ಯಾಂಡ್ ಸರಣಿಯಲ್ಲಿ ತಮ್ಮ ಫಾರ್ಮ್ ಅನ್ನು ಪ್ರೂವ್ ಮಾಡಿದರೆ ಅವರಿಗೆ ಏಷ್ಯಾ ಕಪ್ ಹಾಗು ವರ್ಲ್ಡ್ ಕಪ್ ಸ್ಕ್ವಾಡ್ ನಲ್ಲಿ ಸ್ಥಾನ ಸಿಕ್ಕೇ ಸಿಗುತ್ತದೆ. ಆದರಿಂದ ಈ ನಾಲ್ಕು ಆಟಗಾರರು ಟೀಂಗೆ ಮರಳಿ ಬಂದರೆ , ಭಾರತ ತಂಡ ಬಲಿಷ್ಠವಾಗುವುದಂತೂ ಗ್ಯಾರಂಟಿ , ಜೊತೆಗೆ ಏಷ್ಯಾ ಕಪ್ ಹಾಗೂ ವರ್ಲ್ಡ್ ಕಪ್ ಕೂಡ ಗೆಲ್ಲಬಹುದು.