ಇಂದಿನ ಡಿಜಿಟಲ್ ಯುಗದಲ್ಲಿ ಕಡಿಮೆ ಅವಧಿಯಲ್ಲಿ ಹಣವನ್ನು ಸಾಲ ಪಡೆಯಲು ಬಯಸುವ ಜನರಿಗೆ ಸಣ್ಣ ಪ್ರಮಾಣದ ವೈಯಕ್ತಿಕ ಸಾಲಗಳು ಬಹಳ ಜನಪ್ರಿಯ ಹಣಕಾಸಿನ ಮೂಲವಾಗಿದೆ. ಸರಳ ಆನ್ಲೈನ್ ಪ್ರಕ್ರಿಯೆಗಳು ಹಾಗೂ ಕಡಿಮೆ ದಾಖಲೆಗಳ ಮೂಲಕ ಈ ರೀತಿಯ ಸಾಲಗಳನ್ನು ಸುಲಭವಾಗಿ ಪಡೆಯಬಹುದು. ಸದ್ಯಕ್ಕೀಗ ಬಹುಪಾಲು ಮಂದಿ ಇದೇ ತರಹ ಆನ್ಲೈನ್ ಸಾಲಗಳನ್ನು ಪಡೆದುಕೊಳ್ಳುತ್ತಿರುವುದನ್ನು ಕಾಣಬಹುದು.
ಆದರೆ ಈ ರೀತಿ ಸಾಲ ಪಡೆಯುವ ಮುನ್ನ ಕೂಲಂಕುಷವಾಗಿ ಹಣ ನೀಡುವವರು ಯಾರು…? ಈ ಪ್ರಕ್ರಿಯೆಯಲ್ಲಿ ಯಾವೆಲ್ಲಾ ಅಂಶಗಳು ಒಳಗೊಂಡಿವೆ…? ಅವುಗಳಿಂದ ಮುಂದೆ ಯಾವುದೇ ತೊಂದರೆಯಾಗುವುದಿಲ್ಲವೇ ಎಂಬ ಅಂಶಗಳ ಬಗ್ಗೆ ಗಮನಹರಿಸುವುದು ಸಹ ಅಷ್ಟೇ ಮುಖ್ಯವಾಗಿರುತ್ತದೆ. ಹಾಗಾದ್ರೆ, ಯಾವೆಲ್ಲಾ ಅಂಶಗಳನ್ನು ಪರಿಗಣಿಸಬೇಕು ಎಂಬುದರ ಕಿರು ಮಾಹಿತಿ ಇಲ್ಲಿದೆ….

ಸಣ್ಣ ವೈಯಕ್ತಿಕ ಸಾಲಗಳು ಯಾವುವು…?
ಸಣ್ಣ ವೈಯಕ್ತಿಕ ಸಾಲಗಳೆಂದರೆ ಕನಿಷ್ಠ ದಾಖಲೆಗಳೊಂದಿಗೆ ತ್ವರಿತವಾಗಿ ಅನುಮೋದನೆಗೊಳ್ಳುವ ಸಾಲವೆನ್ನಬಹುದು. ಫ್ಲೆಕ್ಸಿಬಲ್ ಅಮೌಂಟ್, ರೀಪೆಮೆಂಟ್ ಟರ್ಮ್ಸ್ ಹಾಗೂ ಯಾವುದೇ ಮೇಲಾಧಾರವಿಲ್ಲದೆ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಇದರ ಬಡ್ಡಿದರ ಸಾಮಾನ್ಯವಾಗಿ ವರ್ಷಕ್ಕೆ 10% ನಿಂದ 31%ವರೆಗೆ ಇರುತ್ತದೆ. ಅವಧಿಯೂ ಸಹ ವರ್ಷಗಳವರೆಗೂ ವಿಸ್ತರಣೆಗೊಳ್ಳುತ್ತದೆ.
ಯಾವೆಲ್ಲಾ ಸಂಸ್ಥೆಗಳು ಇಂತಹ ಲೋನ್ ನೀಡುತ್ತವೆ?
ಬಜಾಜ್ ಫಿನ್ಸರ್ವ್, ಏರ್ಟೆಲ್ ಫೈನಾನ್ಸ್, ಇಂಡಸ್ಇಂಡ್ ಬ್ಯಾಂಕ್ನಂತಹ ಹಣಕಾಸು ಸಂಸ್ಥೆಗಳು ಸಣ್ಣ ಪ್ರಮಾಣದ ತ್ವರಿತ ಲೋನ್ಗಳನ್ನು ಸ್ಯಾಂಕ್ಷನ್ ಮಾಡುತ್ತವೆ.
ಇಂತಹ ಸಾಲಗಳಿಗೆ ಜನರು ಅರ್ಜಿ ಸಲ್ಲಿಸುವ ಮೊದಲು ಪ್ರಮುಖ ಅಂಶಗಳನ್ನು ಎಚ್ಚರಿಕೆಯಿಂದ ಅರ್ಥಮಾಡಿಕೊಳ್ಳಬೇಕಿದೆ. ಸಾಲವನ್ನು ನೀಡುತ್ತಿರುವ ಹಣಕಾಸು ಸಂಸ್ಥೆಯ ಸಮಗ್ರತೆ, ಬಡ್ಡಿದರ, ರೀಪೆಮೆಂಟ್ ಫ್ಲೆಕ್ಸಿಬಿಲಿಟಿ, ಗುಪ್ತ ಶುಲ್ಕ, ಸಂಸ್ಕರಣಾ ಶುಲ್ಕ ಇತ್ಯಾದಿ ನಿಯಮಗಳನ್ನು ತಿಳಿದುಕೊಂಡು ನಂತರ ಸಾಲ ಪಡೆಯವುದು ಒಳಿತು ಎನ್ನುವುದು ತಜ್ಞರ ಅಭಿಪ್ರಾಯ.

ಇನ್ಸ್ಟ್ಯಾಂಟ್ ಅಪ್ರೋವಲ್ – ಡಿಸ್ಟ್ರಿಬ್ಯೂಷನ್:
ಡಿಜಿಟಲ್ ಯುಗದ ಪರಿಣಾಮವಾಗಿ ವೈಯಕ್ತಿಕ ಸಾಲಗಳು ಹೆಚ್ಚು ರಗಳೆಯಿಲ್ಲದೆ ತ್ವರಿತವಾಗಿ ಅನುಮೋದನೆಗೊಳ್ಳುತ್ತದೆ. ಆನ್ಲೈನ್ ಬ್ಯಾಂಕಿಂಗ್ ಸೌಲಭ್ಯ ಇದರಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. 24 ಗಂಟೆಗಳಲ್ಲಿ ಸಾಲ ಪಡೆಯುವವರ ಖಾತೆಗೆ ಹಣ ಜಮೆಯಾಗುತ್ತದೆ. ಆಸ್ಪತ್ರೆಯ ಬಿಲ್ ಪಾವತಿಗೆ, ತುರ್ತು ವೈದ್ಯಕೀಯ ಖರ್ಚಿಗೆ, ಅನಿರೀಕ್ಷಿತ ಮನೆ ದುರಸ್ಥಿ ಹಾಗೂ ಇನ್ನಿತರ ತುರ್ತು ಸಂದರ್ಭಗಳಲ್ಲಿ ಇಂತಹ ಸಾಲಗಳು ಕೈ ಹಿಡಿಯುತ್ತವೆ ಎಂದರೆ ತಪ್ಪಿಲ್ಲ. ಹಾಗೆಯೇ, ನಿಮ್ಮ ಆನ್ಲೈನ್ ಖಾತೆಯಲ್ಲಿ ಸ್ಥಿರವಾಗಿ ಮೊತ್ತ ಹೊಂದಿರುವುದು ಹಾಗೂ ನಿಮ್ಮ ಕ್ರೆಡಿಟ್ ಅರ್ಹತೆಯೇ ನಿಮಗೆ ಸುಲಭವಾಗಿ ಲೋನ್ ಸಿಗಲು ಕಾರಣ.
ಸಾಲದ ಮೊತ್ತ-ಅವಧಿ ಮೇಲೆ ಯಾವುದೇ ನಿರ್ಬಂಧವಿರುವುದಿಲ್ಲ:
ಹೆಚ್ಚಿನ ಹಣಕಾಸಿನ ಅವಶ್ಯಕತೆಗಳನ್ನು ಪೂರೈಸಲು ಸಣ್ಣ ವೈಯಕ್ತಿಕ ಸಾಲಗಳು ಲಭ್ಯವಿದೆ. 5000ದಿಂದ 10 ಲಕ್ಷದವರೆಗೆ ಇಲ್ಲಿ ಸಾಲ ಪಡೆಯಬಹುದು. ಹಾಗೆಯೇ, ಸಾಲ ಪಡೆದುಕೊಂಡಿರುವವರು ತಮ್ಮ ಅವಶ್ಯಕತೆಗೆ ಅನುಗುಣವಾಗಿ ಮರುಪಾವತಿ ಅವಧಿಯನ್ನು ತಿಂಗಳಿನಿಂದ ವರ್ಷಗಳವರೆಗೆ ಆಯ್ಕೆ ಮಾಡಿಕೊಳ್ಳಬಹುದು. ಇದೆಲ್ಲಾ ನಿರ್ಧರಿಸುವ ಮುನ್ನ ಸಂಬಂಧಿತ ನಿಯಮಗಳು ಹಾಗೂ ಷರತ್ತುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಸಂಸ್ಥೆಯ ಗ್ರಾಹಕ ಬೆಂಬಲ ವಿಭಾಗ ಸಂಪರ್ಕಿಸುವುದು ಒಳಿತು.
ಕನಿಷ್ಠ ದಾಖಲೆಗಳ ಅವಶ್ಯಕತೆ:
ಸಾಂಪ್ರದಾಯಿಕ ಲೋನ್ ಪಡೆಯುವಿಕೆಗೆ ಹೋಲಿಸಿದರೆ ಈ ರೀತಿಯ ಸಣ್ಣ ಆನ್ಲೈನ್ ವೈಯಕ್ತಿಕ ಲೋನ್ ಪ್ರಕ್ರಿಯೆಗೆ ಬಹಳ ಕಡಿಮೆ ದಾಖಲೆಗಳ ಅವಶ್ಯಕತೆ ಬೀಳುತ್ತದೆ. ಕೇವಲ ಐಡಿ ಪರಿಶೀಲನೆ, ವಿಳಾಸ ಪರಿಶೀಲನೆ ಹಾಗೂ ಆದಾಯ ಪುರಾವೆಗಳನ್ನು ಒದಗಿಸಿದರೆ ಸಾಕು ಲೋನ್ ಸ್ಯಾಂಕ್ಷನ್ ಆಗುತ್ತದೆ. ಕೆಲವು ಸಂಸ್ಥೆಗಳು ಒಳ್ಳೆಯ ಕ್ರೆಡಿಟ್ ಸ್ಕೋರ್ ಇಲ್ಲದವರಿಗೂ ಲೋನ್ ನೀಡುತ್ತದೆ ಎಂಬುದು ಎಷ್ಟು ಸತ್ಯವೋ, ಅಂತಹವರಿಗೆ ನೀಡುವ ಬಡ್ಡಿದರದಲ್ಲಿಯೂ ವ್ಯತ್ಯಾಸವಿರುತ್ತದೆ. ಅಂದರೆ ಬಡ್ಡಿದರ ಜಾಸ್ತಿಯೂ ಇರಬಹುದು ಎಂಬುದನ್ನು ಇಲ್ಲಿ ಪರಿಗಣಿಸಬೇಕು.

ಮೇಲಾಧಾರ ರಹಿತ ಲೋನ್:
ಸಣ್ಣ ವೈಯಕ್ತಿಕ ಸಾಲಗಳು ಬಹುತೇಕ ಅಸುರಕ್ಷಿತವಾಗಿರುತ್ತವೆ. ಅಂದರೆ ಸಾಲ ನೀಡುವ ಸಂಸ್ಥೆಯವರು ಯಾವುದೇ ಆಸ್ತಿ ಅಥವಾ ಚಿನ್ನವನ್ನು ಮೇಲಾಧಾರವಾಗಿ ಇಡಲು ಕೋರುವುದಿಲ್ಲ. ಇದರಿಂದ ಇಲ್ಲಿ ಸಾಲ ಪಡೆಯುವುದು ಸುಲಭ. ಆದರೆ, ಮರುಪಾವತಿ ನಿಯಮವನ್ನು ಸ್ಪಷ್ಟವಾಗಿ ಅರ್ಥೈಸಿಕೊಂಡು ಮುಂದಡಿ ಇಡುವುದು ಉತ್ತಮ. ಯಾಕೆಂದರೆ ಸಣ್ಣ ಪ್ರಮಾಣದ ಸಾಲವೇ ಆದರೂ ಸಹ ಯಾರು ಫ್ರಿಯಾಗಿ ಹಣ ನೀಡುವುದಿಲ್ಲ. ಅದಕ್ಕೆ ಸಂಬಂಧಿಸಿದಂತೆ ಇನ್ನಿತರ ಮಾರ್ಗದಲ್ಲಿ ಸಾಲಗಾರರನ್ನು ಹಿಡಿದಿಡಲು ಸಂಸ್ಥೆಯು ನಿಯಮಗಳನ್ನು ರೂಪಿಸಿರುತ್ತದೆ. ಆದ್ದರಿಂದ ನಿಯಮಗಳನ್ನು ಕೂಲಂಕುಷವಾಗಿ ತಿಳಿದುಕೊಳ್ಳಬೇಕು.
ಯಾವುದೇ ಸಂದರ್ಭಕ್ಕೆ ಬೇಕಾದರು ಬಳಸಿಕೊಳ್ಳಬಹುದು:
ಈ ರೀತಿಯ ಸಾಲಗಳನ್ನು ಮದುವೆ, ರಜೆ, ಮನೆ ನವೀಕರಣ ಅಥವಾ ವ್ಯಾಪಾರಗಳಿಗೆ ಬಳಸಿಕೊಳ್ಳಬಹುದು. ವಾರ್ಷಿಕವಾಗಿ 10% ಕಡಿಮೆ ಬಡ್ಡಿ ದರದಲ್ಲಿ ಅಲ್ಪಾವಧಿಯ ಹಣಕಾಸು ಅಗತ್ಯತೆಗೆ ಸಣ್ಣ ವೈಯಕ್ತಿಕ ಸಾಲಗಳು ಲಭ್ಯವಿರುತ್ತವೆ.
ಒಟ್ಟಾರೆ, ಸಾಲಗಳಿಗೆ ಅರ್ಜಿ ಸಲ್ಲಿಸುವ ಮುನ್ನ ಸರಿಯಾದ ಸಂಶೋಧನೆ ಮಾಡಿ, ಸಾಲದಾತರ ಮಾಹಿತಿ, ಬಡ್ಡಿದರ, ಮರುಪಾವತಿ ಅವಧಿ, ಸಾಲ ಮರುಪಾವತಿಯಲ್ಲಿನ ಸಡಿಲತೆ ಹೀಗೆ ಎಲ್ಲಾ ಮಾಹಿತಿಯನ್ನು ಕಲೆ ಹಾಕಬೇಕು. ಇಲ್ಲ ಪ್ರಮಾಣೀಕೃತ ಫೈನ್ಷಿಯಲ್ ಪ್ಲಾನರ್ಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡು ಮುಂದುವರೆಯುವುದು ಒಳ್ಳೆಯದು.